ಮಾಸ್ಕ್, ಕಡ್ಡಾಯ ತಪ್ಪಿದ್ದಲ್ಲಿ ಬೀಳುತ್ತೆ “ಈ” ಮೊತ್ತ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ. 24:  ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.     ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬಂದಿ ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ. ಪ್ರತಿ ಅಂಗಡಿ ಮಾಲಕರು ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ […]

ಮಾಸ್ಕ್, ಕಡ್ಡಾಯ ತಪ್ಪಿದ್ದಲ್ಲಿ ಬೀಳುತ್ತೆ “ಈ” ಮೊತ್ತ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 23. ಪೆರಿಯಡ್ಕ ಸಮೀಪದ ನೆಡ್ಚಿಲ್ ಅಂಗನವಾಡಿ ಕೇಂದ್ರದ ಮೇಲ್ಬಾಗದಲ್ಲಿ ಅಪಾಯಕಾರಿ ವಿದ್ಯುತ್ ತಂತಿ ಹಾದು ಹೋಗಿದ್ದು, ಇದರಿಂದಾಗಿ ಮಕ್ಕಳ ಜೀವಕ್ಕೆ ಅಪಾಯ ಒದಗುವ ಮುನ್ನ ಸ್ಥಳಾಂತರ ಮಾಡಬೇಕೆಂದು ಎಸ್ಡಿಪಿಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಕಛೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರಾದ ಮುಸ್ತಫಾ ಲತೀಫಿ ಮಾತನಾಡಿ, ನೆಡ್ಚಿಲ್ ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ಮುಂಜಾಗ್ರತೆಗಾಗಿ ಸರಕಾರ ಮಕ್ಕಳಿಗೆ ರಜೆ ನೀಡಿದೆ. ಪುಟ್ಟ ಮಕ್ಕಳು ಮುಂದಿನ ದಿನಗಳಲ್ಲಿ ಅಂಗನವಾಡಿ

ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ Read More »

ಕರಾವಳಿ, ಕರ್ನಾಟಕ

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ ➤ ಕೋವಿಡ್ ಗೆ ಬಲಿಯಾದ ಬೆಳಗಾವಿ ಸಂಸದ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.23. ಕೇಂದ್ರ ರೈಲ್ವೇ ಸಚಿವ, ಬೆಳಗಾವಿಯ ಬಿಜೆಪಿ ಸಂಸದ ಸುರೇಶ್ ಅಂಗಡಿ ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಎರಡು ದಶಕಗಳಿಂದ ಬೆಳಗಾವಿ ಸಂಸದರಾಗಿರುವ ಸುರೇಶ್ ಅಂಗಡಿ 1955ರ ಜೂನ್ 1 ರಂದು ಬೆಳಗಾವಿಯ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಜನಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ 2004 ರಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ ➤ ಕೋವಿಡ್ ಗೆ ಬಲಿಯಾದ ಬೆಳಗಾವಿ ಸಂಸದ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಕೆಲಸ ಸಿಗದೇ ಬೇಸತ್ತ ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಎಂ.ಕಾಂ‌. ಪದವೀಧರೆಯಾಗಿಯೂ ಯಾವುದೇ ಸೂಕ್ತ ಉದ್ಯೋಗ ದೊರೆಯದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಬುಧವಾರದಂದು ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಪರಂಗಾಜೆ ನಿವಾಸಿ ಬಾಬು ಗೌಡ ಎಂಬವರ ಪುತ್ರಿ ಭವ್ಯ ಪಿ.ಬಿ.(27) ಎಂದು ಗುರುತಿಸಲಾಗಿದೆ. ಈಕೆ ಎಂ.ಕಾಂ ಪದವೀಧರೆಯಾಗಿದ್ದು, ತನ್ನ ಅರ್ಹತೆಗೆ ತಕ್ಕುದಾದ ಉದ್ಯೋಗ ಇನ್ನೂ ದೊರೆತಿರಲಿಲ್ಲ. ಹಲವೆಡೆ ಉದ್ಯೋಗಕ್ಕೆ ಪ್ರಯತ್ನಿಸಿ ವಿಫಲರಾಗಿದ್ದರು. ಇದೇ ವಿಚಾರದಲ್ಲಿ ಮಾನಸಿಕವಾಗಿ

ಕಡಬ: ಕೆಲಸ ಸಿಗದೇ ಬೇಸತ್ತ ಯುವತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ನಟ ದಿಗಂತ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23:  ಸ್ಯಾಂಡಲ್ ವುಡ್‍ ನಲ್ಲಿ ಮಾದಕ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.   ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ಸಿಸಿಬಿಗೆ ನನ್ನ ಬಳಿಯಿದ್ದ ಅಗತ್ಯ ಮಾಹಿತಿ ನೀಡಿರುವೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ ಎಂದರು.  

ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ನಟ ದಿಗಂತ್ Read More »

ಕರ್ನಾಟಕ

ಪುತ್ತೂರು,ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.23: ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.     ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ 54 ವರ್ಷದ ವ್ಯಕ್ತಿ, ಶಿರಾಡಿಯ 47 ವರ್ಷದ ಮಹಿಳೆ, 22 ವರ್ಷದ ಯುವಕ, ಬಂಟ್ರ ನಿವಾಸಿ 50 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.  

ಪುತ್ತೂರು,ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ

ಮಹಿಳೆಯೋರ್ವರ 4 ಪವನ್‌ ತೂಕದ ಚಿನ್ನದ ಕರಿಮಣಿಸರ ಎಳೆದು ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.23: ದ್ವಿಚಕ್ರ ವಾಹನವೊಂದರಲ್ಲಿ ಬಂದ ವ್ಯಕ್ತಿಯೋರ್ವ ಬೀಡಿ ಬ್ರಾಂಚ್‌ ನಿಂದ ಮರಳುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಬಳಿಯ ಮರುವಾಳ ಎಂಬಲ್ಲಿ ನಡೆದಿದೆ.     ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಮರುವಾಳ ನಿವಾಸಿ ಮಹಿಳೆ ದೂರು ನೀಡಿದ್ದಾರೆ. ಕಳೆದ ದಿನ ಮದ್ಯಾಹ್ನದ ವೇಳೆ ಬೀಡಿಕೊಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಂಡಡ್ಕ ಭಾಗದಿಂದ

ಮಹಿಳೆಯೋರ್ವರ 4 ಪವನ್‌ ತೂಕದ ಚಿನ್ನದ ಕರಿಮಣಿಸರ ಎಳೆದು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಾದೇಶಿಕ ಭಾಷಾ ತರಬೇತಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 23:  ಇಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಾದೇಶಿಕ ಭಾಷೆಯಾದ ತುಳು ತರಬೇತಿಯನ್ನು ಆಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕರು ಹೊರ ಜಿಲ್ಲಾ ಸಿಬ್ಬಂದಿಗಳಿಗೆ ತುಳು ಮತ್ತು ಕೊಂಕಣಿ ಭಾಷೆಯ ತರಬೇತಿಯನ್ನು ನೀಡಲು ಆದೇಶಸಿದ್ದರು. ಅದರಂತೆ ಇಂದು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ದೈಹಿಕ ಶಿಕ್ಷಕ ಶಿವರಾಮ ಏನೆಕಲ್ಲುರವರು ತುಳು ಭಾಷೆ ಬಗ್ಗೆ ತರಬೇತಿ ನೀಡಿದರು .      

ಇಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಾದೇಶಿಕ ಭಾಷಾ ತರಬೇತಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ‘ಮುಲ್ಕಿ ಸುಂದರರಾಮ ಶೆಟ್ಟಿ’ ಎಂದು ಮರುನಾಮಕರಣ ಪಡೆದ ‘ಲೈಟ್ ಹೌಸ್ ಹಿಲ್’ ರಸ್ತೆ*

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಬಾವುಟಗುಡ್ಡೆ ರಸ್ತೆಯೆಂದು ಸ್ಥಳೀಯರಿಂದ ಕರೆಯಲ್ಪಡುವ ಲೈಟ್ ಹೌಸ್ ಹಿಲ್ ರಸ್ತೆಯನ್ನು ಅಧಿಕೃತವಾಗಿ ವಿಜಯ ಬ್ಯಾಂಕ್‌ನ ಮಾರ್ಗದರ್ಶಕರು, ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿನಲ್ಲಿ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು.   ಈ ರಸ್ತೆಯನ್ನು ಮರುನಾಮಕರಣದ ಪ್ರಸ್ತಾಪವನ್ನು ನಗರ ಪಾಲಿಕೆ ಅಂಗೀಕರಿಸಿದ್ದು, ಆಕ್ಷೇಪಗಳು ಕೇಳಿಬಂದ ಹಿನ್ನೆಲೆ, ಹೈಕೋರ್ಟ್ ಮೇ 24, 2017 ರಂದು ತಡೆಯಾಜ್ಞೆ ನೀಡಿತ್ತು.

ಮಂಗಳೂರು: ‘ಮುಲ್ಕಿ ಸುಂದರರಾಮ ಶೆಟ್ಟಿ’ ಎಂದು ಮರುನಾಮಕರಣ ಪಡೆದ ‘ಲೈಟ್ ಹೌಸ್ ಹಿಲ್’ ರಸ್ತೆ* Read More »

ಕರಾವಳಿ, ಕರ್ನಾಟಕ

ಕಾರ್ಕಳ : ಮಾರಿಗುಂಡಿ ದೇವಸ್ಥಾನದಿಂದ 16 ಸಾವಿರ ರೂ, ಡಿವಿಆರ್ ಕಳ್ಳತನ..!!

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 23:  ಕಾರ್ಕಳದ ಮುಂಡ್ಕೂರು ಗ್ರಾಮದ ಕಜೆ ಶ್ರೀ ಮಹಮ್ಮಾಹಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಗೋಡ್ರೆಜ್ ನಲ್ಲಿದ್ದ 16 ಸಾವಿರ ರೂ. ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಸೆ. 21 ರಂದು ಖದೀಮರು ಕಳವುಗೈದಿದ್ದಾರೆ.     ಒಂದು ಗೋಡ್ರೆಜ್ ನಲ್ಲಿದ್ದ 11 ಸಾವಿರ ರೂ. ಹಾಗು ಮತ್ತೂಂದು ಗೋಡ್ರೆಜ್ ನಲ್ಲಿದ್ದ 5 ಸಾವಿರ ರೂ. ಸೇರಿದಂತೆ ಒಟ್ಟು 16 ಸಾವಿರ ಕಳವುಗೈದಿದ್ಧಾರೆ. ದೇವರ ಗರ್ಭಗುಡಿಯ ಬಾಗಿಲನ್ನು ತೆರೆದಿಟ್ಟಿದ್ದಾರೆ. ಇನ್ನು

ಕಾರ್ಕಳ : ಮಾರಿಗುಂಡಿ ದೇವಸ್ಥಾನದಿಂದ 16 ಸಾವಿರ ರೂ, ಡಿವಿಆರ್ ಕಳ್ಳತನ..!! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top