ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಕೊಲ್ಲಮೊಗ್ರದ ಅಶ್ವತ್ಥ ಮರದ ಬಳಿ ಇರುವ ಸೇತುವೆ ಮೇಲೆ ನೀರು ಬಂದಿದ್ದು, ಮರವೊಂದು ಬುಡಸಮೇತ ಹಳ್ಳಕ್ಕೆ ಬಿದ್ದಿದೆ.     ಇದರಂದಾಗಿ ನೀರು ಹರಿಯಲು ಸಾಧ್ಯವಾಗದ ಕಾರಣ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು. ಶಶಿಕುಮಾರ್‌ ಬೊಳ್ಳಾಜೆ, ಮಹಾಲಿಂಗ ಪಾಟಾಳಿ, ಶಂಕರ ಪಾಟಾಳಿ, ರಘುನಾಥ ಪಾಟಾಳಿ ಮತ್ತಿತರರ ಮನೆಗಳಿಗೆ ನೀರು ನುಗ್ಗಿ ಹಾನಿಗಳಾಗಿವೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು Read More »

ಕರಾವಳಿ

ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ

(ನ್ಯೂಸ್ ಕಡಬ) newskadaba.com ಕನಕಮಜಲು , ಅ. 09: ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರದ ಅಂಗವಾಗಿ ಸಚಿವರೊಂದಿಗೆ ಸಂವಾದ ಕಾರ್ಯಕ್ರಮ ಇಂದು ನಡೆಯಿತು. ಸಂವಾದದಲ್ಲಿ ಉಸ್ತುವರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜತೆ ಗ್ರಾಮಸ್ಥರು ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಕರ್ನಾಟಕ ದಕ್ಷಿಣ ಭಾರತ ಸಹ ಸೇವಾ ಪ್ರಮುಖ್ ನ

ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ Read More »

ಕರಾವಳಿ, ಕರ್ನಾಟಕ

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ

(ನ್ಯೂಸ್ ಕಡಬ) newskadaba.com ಸಂಪಾಜೆ, ಅ.09: ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯು ಕಳೆದ ದಿನ ರಾತ್ರಿ ಸುರಿದ ಭಾರಿ ಮಳೆಗೆ ಚರಂಡಿ ಕುಸಿದಿದ್ದು, ಇದೀಗ ಅಪಾಯಕಾರಿ ಉಂಟುಮಾಡಿದೆ.     ದಿನಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಅಪಾಯ ತಪ್ಪಿದ್ದಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಾಗಿ ಸಂಪಾಜೆ ಎಸ್.ಡಿ.ಪಿ.ಐ ಪ್ರಮುಖರಾದ ಮಹಮ್ಮದ್‌ ಕುಂಞೆ ಮತ್ತು ಆಶ್ರಫ್‌ ರವರು ಈ ಮೂಲಕ ತಿಳಿಸಿದ್ದಾರೆ.

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ Read More »

ಕರಾವಳಿ

ಮಂಡ್ಯ: ಅನ್ನಭಾಗ್ಯ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ.!

(ನ್ಯೂಸ್ ಕಡಬ) newskadaba.com ಮಂಡ್ಯ, ಅ.09: ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲಾದ ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಸೊಸೈಟಿಯಲ್ಲಿ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಹೇಳಲಾಗುತ್ತಿದೆ.     ಗುರುದೇವರಹಳ್ಳಿ ಕಾಲೋನಿ ನಿವಾಸಿ ಪುಟ್ಟೇಗೌಡ, ಸತ್ಯಮ್ಮ, ಮಧು ಮೊದಲಾದವರಿಗೆ ಅಕ್ಕಿ ವಿತರಿಸಿದ್ದು, ಗ್ರಾಮಸ್ಥರು ಆಹಾರ ಇಲಾಖೆ ಅಧಿಕಾರಿಗಳಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಪರಿಶೀಲನೆ ನಡೆಸಿ ಅಕ್ಕಿಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ ಎನ್ನಲಾಗಿದೆ.  

ಮಂಡ್ಯ: ಅನ್ನಭಾಗ್ಯ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ.! Read More »

ಕರ್ನಾಟಕ

ಅಕ್ಟೋಬರ್ 16ರ ವರೆಗೆ ಶಾಲಾ ದಾಖಲಾತಿ ವಿಸ್ತರಿಸಿ ಆದೇಶ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅಕ್ಟೋಬರ್ 16 ರವರೆಗೆ ದಾಖಲಾತಿಗೆ ಅವಕಾಶ ನೀಡಲಾಗಿದೆ.   ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಅವಧಿಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದ್ದವು. ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು 2020-21 ನೇ ಶೈಕ್ಷಣಿಕ ಸಾಲಿನಲ್ಲಿ

ಅಕ್ಟೋಬರ್ 16ರ ವರೆಗೆ ಶಾಲಾ ದಾಖಲಾತಿ ವಿಸ್ತರಿಸಿ ಆದೇಶ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ➤ ಸಹಾಯಕ್ಕಾಗಿ ಗೂಗಲ್ ಸರ್ಚ್.?!

 (ನ್ಯೂಸ್ ಕಡಬ) newskadaba.com ಅಮೆರಿಕ, ಅ. 09: ಪಾಪಿ ತಂದೆಯೊಬ್ಬ ತನ್ನ 10 ತಿಂಗಳ ಹೆಣ್ಣು ಶಿಶುವಿನ ಮೇಲೆ ಅತ್ಯಾಚಾರವೆಸಗಿ ಬಳಿಕ ಗೂಗಲ್ ಸರ್ಚ್ ಮಾಡಿರುವ ಆಘಾತಕಾರಿ ಘಟನೆಯೊಂದು ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ. 29 ವರ್ಷದ ವ್ಯಕ್ತಿ ತನ್ನ ಮಗುವನ್ನು ಆರೈಕೆ ಮಾಡುತ್ತಿದ್ದ ವೇಳೆ ಶಿಶುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪರಿಣಾಮ ಮಗುವಿನ ಖಾಸಗಿ ಅಂಗದಲ್ಲಿ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಅಲ್ಲದೆ ಶಿಶು ಉಸಿರಾಟವನ್ನೂ ನಿಲ್ಲಿದೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಕೂಡಲೇ ಗೂಗಲ್ ಮೊರೆ ಹೋಗಿದ್ದಾನೆ. ಮಗು ಉಸಿರಾಟ

10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ➤ ಸಹಾಯಕ್ಕಾಗಿ ಗೂಗಲ್ ಸರ್ಚ್.?! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ➤ ಇಬ್ಬರು ಉಗ್ರರ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ಸಿಲಿಕಾನ್​ ಸಿಟಿ ಉಗ್ರರ ಅಡಗುದಾಣ ಆಗಿರೋದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಅಡಗಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು NIA ಅಂದರ್ ಮಾಡಿದೆ.   ಬೆಂಗಳೂರಿನಲ್ಲಿ ಕೊರೊನಾ ಆತಂಕದ ಮಧ್ಯೆ ಉಗ್ರರು ಸದ್ದಿಲ್ಲದೇ ಸಂಚು ರೂಪಿಸಿದ್ದರು. ಸಿಲಿಕಾನ್ ಸಿಟಿಯನ್ನ ಉಗ್ರರು ಅಡಗುದಾಣವಾಗಿ ಮಾಡಿಕೊಂಡು ವಿಧ್ವಂಸಕ ಕೃತ್ಯವೆಸಗಲು ಖತರ್​ನಾಕ್ ಪ್ಲ್ಯಾನ್ ಮಾಡಿಟ್ಟುಕೊಂಡಿದ್ದರು. ಆದ್ರೆ ರಾಷ್ಟ್ರೀಯ ತನಿಖಾ ದಳ ಶಂಕಿತ ಉಗ್ರರ ಹೆಡೆಮುರಿ ಕಟ್ಟಿದೆ.ಕೆಲ ತಿಂಗಳ ಹಿಂದೆ ನಗರದ ಬಸವನಗುಡಿಯ

ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ➤ ಇಬ್ಬರು ಉಗ್ರರ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಸೂರು ದಸರಾಗೆ ಸಿದ್ಧತೆ ➤ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು

(ನ್ಯೂಸ್ ಕಡಬ) newskadaba.com ಮೈಸೂರು, ಅ. 09: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವಾರವೇ ಅರಮನೆಗೆ ಗಜಪಡೆ ಆಗಮಿಸಿದ್ದು, ಇಂದಿನಿಂದ ಗಜಪಡೆಗಳಿಗೆ ಮರಳಿನ ಮೂಟೆ ಹೊರುವ ತಾಲೀಮು ಶುರುವಾಗಲಿದೆ.   ಅಭಿಮನ್ಯು ನೇತೃತ್ವದ 5 ಆನೆಗಳಿಂದ ಮರಳು ಮೂಟೆ ಹೊರುವ ತಾಲೀಮು ನಡೆದಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾತ್ರ ಗಜಪಡೆಗಳ ತಾಲೀಮು ನಡೆಯಲಿದೆ. ಇಂದು ಬೆಳಗ್ಗೆ ಅರಮನೆಯ ಸುತ್ತ ಒಂದು ಸುತ್ತು ಹಾಕಿದ

ಮೈಸೂರು ದಸರಾಗೆ ಸಿದ್ಧತೆ ➤ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು Read More »

ಕರ್ನಾಟಕ

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಲೂರು ಕೆಮ್ರಾಜೆ, ಅ.09: ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ರಾಮಚಂದ್ರ ಮಣಿಯಾಣಿಯವರ ಮನೆಗೆ ಕಳೆದ ರಾತ್ರಿ ಸುರಿದ ಸಿಡಿಲು ಮಿಂಚು ಸಹಿತ ಭಾರಿ ಮಳೆಗೆ ಹಿಂಬದಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯುಂಟಾಗಿದೆ.         ಪರಿಣಾಮವಾಗಿ ಶೌಚಾಲಯ ಹಾಗೂ ತೆಂಗಿನ ಮರ ಮತ್ತು ಮನೆಯ ವಿದ್ಯುತ್‌ ಉಪಕರಣಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.    

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ Read More »

ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09: ಅಂ.ರಾ.ವಿಮಾನ ನಿಲ್ದಾಣದಲ್ಲಿ 25,45,920 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ.ಕಾಸರಗೋಡು ನಿವಾಸಿ ಸುಮೇಶ್ ಬಂಧಿತ ಆರೋಪಿ. ಈತ ಎಲೆಕ್ನಿಕ್ ಕುಕ್ಕರ್ ಒಳಗೆ ಚಿನ್ನ ಇಟ್ಟು ಸಾಗಾಟ ಮಾಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಆರೋಪಿಯಿಂದಬರೋಬ್ಬರಿ 25,45,920 ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.    

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top