4 ವರ್ಷದ ಮಕ್ಕಳು ಸೇರಿ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು/ಬೆಂಗಳೂರು ಅ. 20: ರಾಜ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಎಲ್ಲಾ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಧರಿಸದಿದ್ದರೆ ಮೂರು ತಿಂಗಳು ಲೈಸೆನ್ಸ್ ರದ್ದು ಮಾಡಲಾಗುವುದು. ಹಳೆಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ನಿಯಮದ ಪ್ರಕಾರ, ನಾಲ್ಕು ವರ್ಷದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ದ್ವಿಚಕ್ರವಾಹನದಲ್ಲಿ ಸಂಚರಿಸುವ ನಾಲ್ಕು ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಹೆಲ್ಮೆಟ್ ಹಾಕದ ಚಾಲಕನಿಗೆ ದಂಡ ವಿಧಿಸುವ ಜೊತೆಗೆ ಚಾಲನಾ ಪರವಾನಿಗೆಯನ್ನು ಮೂರು […]

4 ವರ್ಷದ ಮಕ್ಕಳು ಸೇರಿ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ Read More »

ಕರ್ನಾಟಕ

ವಿಟ್ಲ: ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ ➤ ಎರಡು ಅಂಗಡಿಗಳು ಭಸ್ಮ

(ನ್ಯೂಸ್ ಕಡಬ) newskadaba.com ವಿಟ್ಲ, ಅ. 20. ಬೆಳ್ಳಂಬೆಳಗ್ಗೆ ಸಂಭವಿಸಿದ ಅಗ್ನಿಅವಘಡದಲ್ಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಇಲ್ಲಿನ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಬಳಿಯ ಕೆ.ಜೆ.ಟವರ್ಸ್ ನಲ್ಲಿರುವ ಎಂ.ಪಿ. ಹಾರ್ಡ್ ವೇರ್ ಮತ್ತು ಪೈಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಅಂಗಡಿಗಳು ಸುಟ್ಟು ಕರಕಲಾಗಿವೆ. ಮೊದಲಿಗೆ ಪೈಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಪಕ್ಕದಲ್ಲಿದ್ದ ಬೇಕರಿಗೂ ಬೆಂಕಿ ವ್ಯಾಪಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದು, ಬೆಂಕಿ

ವಿಟ್ಲ: ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ ➤ ಎರಡು ಅಂಗಡಿಗಳು ಭಸ್ಮ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಪಿಎಫ್ಐ ಹಾಗೂ ಕಮ್ಯೂನಿಟಿ ಡೆವಲಪ್‌ ಮೆಂಟ್ ವಾಟ್ಸಾಪ್ ಗ್ರೂಪ್ ವತಿಯಿಂದ ಮನೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 20. ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ಸೂರಿಲ್ಲದೆ ಬಹಳ ಕಷ್ಟದಿಂದ ವಾಸಿಸುತ್ತಿದ್ದ ಬಡಕುಟುಂಬವೊಂದಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ, ಕಮ್ಯೂನಿಟಿ ಡೆವಲಪ್ಮೆಂಟ್ ವಾಟ್ಸಾಪ್ ಗ್ರೂಪ್ ಹಾಗೂ ಊರ ದಾನಿಗಳ ಸಹಾಯದಿಂದ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮವು ಸುನ್ನತ್ ಕೆರೆಯಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ. ಶರೀಫ್ ಸಾಬ್ ರವರು ನೆರವೇರಿಸಿ ಮನೆಯ ಕೀಲಿ ಕೈಯನ್ನು

ಬೆಳ್ತಂಗಡಿ: ಪಿಎಫ್ಐ ಹಾಗೂ ಕಮ್ಯೂನಿಟಿ ಡೆವಲಪ್‌ ಮೆಂಟ್ ವಾಟ್ಸಾಪ್ ಗ್ರೂಪ್ ವತಿಯಿಂದ ಮನೆ ಹಸ್ತಾಂತರ Read More »

ಕರಾವಳಿ, ಕರ್ನಾಟಕ

ಪಂಜ: ಯಶಸ್ವೀ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ‘ಹೋಟೆಲ್ ಶುಭಲಕ್ಷ್ಮೀ’ ➤ ಇಂದಿನಿಂದ ಶವರ್ಮಾ, ಚಿಕನ್ ಟಿಕ್ಕ, ಅಲ್-ಫಹಾಮ್ ಆರಂಭ

(ನ್ಯೂಸ್ ಕಡಬ) newskadaba.com ಪಂಜ, ಅ.19. ಕಳೆದ‌ ಮೂರು ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ಯಶಸ್ವೀ‌ ಸೇವೆಯನ್ನು ನೀಡಿ ಜನಮನ್ನಣೆ ಗಳಿಸಿರುವ ಪಂಜದ ಶುಭಲಕ್ಷ್ಮೀ ಹೊಟೇಲ್ ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಅರೇಬಿಯನ್ ಡಿಶ್ ನ್ನು ಗ್ರಾಹಕರಿಗೆ ಉಣಬಡಿಸಲು ಮುಂದಾಗಿದೆ. ಪಂಜದ ಹಳೇ ಬಸ್ ನಿಲ್ದಾಣದ ಬಳಿಯಿರುವ ಶುಭಲಕ್ಷ್ಮೀ ಹೊಟೇಲ್ ನಲ್ಲಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಇಂದಿನಿಂದ ಪ್ರತೀದಿನ ಚಿಕನ್ ಶವರ್ಮಾ, ಚಿಕನ್ ಟಿಕ್ಕಾ, ಅಲ್ – ಫಹಾಮ್ ಮೊದಲಾದ ಚೈನೀಸ್ ಹಾಗೂ ಅರೇಬಿಯನ್ ಡಿಶಸ್

ಪಂಜ: ಯಶಸ್ವೀ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ‘ಹೋಟೆಲ್ ಶುಭಲಕ್ಷ್ಮೀ’ ➤ ಇಂದಿನಿಂದ ಶವರ್ಮಾ, ಚಿಕನ್ ಟಿಕ್ಕ, ಅಲ್-ಫಹಾಮ್ ಆರಂಭ Read More »

ಅಡುಗೆ, ಲೈಫ್‍ಸ್ಟೈಲ್

ಬಾಲಿವುಡ್ ನಟಿ ಝರೀನಾ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ ಅ. 19:  ಕುಂಕುಮ್‍ಭಾಗ್ಯ ಧಾರಾವಾಹಿಯಿಂದ ಪ್ರಸಿದ್ಧರಾಗಿದ್ದ ಬಾಲಿವುಡ್ ನ ಕಿರುತೆರೆ ನಟಿ ಜರೀನಾ ರೋಷನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜರೀನಾ (54) ಕಿರುತೆರೆಯಲ್ಲಿ ಬಲು ಪ್ರಸಿದ್ಧರಾಗಿದ್ದು ಅಮ್ಮ, ಅತ್ತೆ ಪಾತ್ರಗಳಿಗೆ ನಿರ್ದೇಶಕರ ಮೊದಲ ಆಯ್ಕೆ ನಟಿಯಾಗಿದ್ದರು. ಕುಂಕುಮಭಾಗ್ಯದಲ್ಲಿ ಇವರು ನಟಿಸಿದ್ದ ಇಂದೂ ದಾಸಿ ಎಂಬ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದರು.      

ಬಾಲಿವುಡ್ ನಟಿ ಝರೀನಾ ನಿಧನ Read More »

ರಾಷ್ಟ್ರೀಯ ನ್ಯೂಸ್

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19: ತರಕಾರಿ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ.     ನಗರದ ಹಲವು ಕಡೆ ಭಾರಿ ಮಳೆಯಾಗಿದೆ. ಈ ಪರಿಣಾಮ ಅನಾಹುತಗಳು ಸಹ ಸಂಭವಿಸುತ್ತಿವೆ. ನೈಸ್ ರಸ್ತೆಯಲ್ಲಿ ಅಪಘಾತ ನಡೆದ ಸಮಯದಲ್ಲಿ ಜೋರಾಗಿ ಮಳೆಯಾಗಿತ್ತು. ರಸ್ತೆ ಪೂರ್ತಿ ನೀರಿನಿಂದ ತೊಯ್ದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೆ ಉರುಳಿದೆ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ಕರಾವಳಿ

ಇನ್ನುಂದೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ 3 ತಿಂಗಳು ರದ್ದಾಗುತ್ತೆ ಲೈಸೆನ್ಸ್.!!

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 19: ಇನ್ನುಂದೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ ಲೈಸೆನ್ಸ್ ರದ್ದು ಮಾಡಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇನ್ನುಮುಂದೆ ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಒಂದು ವೇಳೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ 3 ತಿಂಗಳ ಕಾಲ ವಾಹನ ಪರವಾನಿಗಿ ಅಮಾನತುಗೊಳಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ. ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ.    

ಇನ್ನುಂದೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ 3 ತಿಂಗಳು ರದ್ದಾಗುತ್ತೆ ಲೈಸೆನ್ಸ್.!! Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸುಳ್ಯ :ವಸತಿಗೃಹವೊಂದರಲ್ಲಿ ಯುವಕ-ಯುವತಿ ಆತ್ಯಹತ್ಯೆಗೆ ಶರಣು.!

(ನ್ಯೂಸ್ ಕಡಬ) newskadaba.com ಸುಳ್ಯ  ಅ. 19: ಸುಳ್ಯ ನಗರದ ವಸತಿಗೃಹವೊಂದರಲ್ಲಿ ಯುವಕ ಹಾಗೂ ಯುವತಿಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದು ಬಂದಿದೆ.   ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ .ಇನ್ನು ಆತ್ಮಹತ್ಯೆಗೆ ಶರಣಾಗಿರುವ ಯುವತಿ ಬೆಳ್ತಂಗಡಿ ನಿವಾಸಿ ಎಂದು ತಿಳಿದು ಬಂದಿದೆ. ಆದರೆ ಯುವಕ ಹಾಗೂ ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ

ಸುಳ್ಯ :ವಸತಿಗೃಹವೊಂದರಲ್ಲಿ ಯುವಕ-ಯುವತಿ ಆತ್ಯಹತ್ಯೆಗೆ ಶರಣು.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಡಾಖ್ ಗಡಿಯಲ್ಲಿ ಚೀನಾ ಯೋಧನ ಬಂಧನ

(ನ್ಯೂಸ್ ಕಡಬ) newskadaba.com ಲಡಾಖ್ ಅ. 19: ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎನ್ನಲಾಗಿದ್ದು ವಶಕ್ಕೆ ಪಡೆದ ಸೈನಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಅವನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಮೂಲಗಳು  ವರದಿ ಮಾಡಿದೆ.ಲಡಾಖ್ ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ

ಲಡಾಖ್ ಗಡಿಯಲ್ಲಿ ಚೀನಾ ಯೋಧನ ಬಂಧನ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ➤ ಹವಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ಕರಾವಳಿ ಅ. 19: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಜನರು ಸುಧಾರಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಧ್ಯೆ ಮತ್ತೆ ವಾಯುಭಾರ ಕುಸಿತ ಉಂಟಾಗಿದೆ.   ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ಈ ಕುರಿತು ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಸೋಮವಾರ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಮೂರು ದಿನ ಮಳೆಯಾಗಲಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಮೂರು ದಿನ

ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ➤ ಹವಮಾನ ಇಲಾಖೆ ಮುನ್ಸೂಚನೆ Read More »

ಕರಾವಳಿ, ಕರ್ನಾಟಕ
Scroll to Top