ಅದಿತ್ಯನಾಥ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ➤ ಮಾಜಿ ಶಾಸಕ ವಸಂತ ಬಂಗೇರ ಒತ್ತಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 22: ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ನಾಡಿನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಕೃತ್ಯ ನಡೆದಿದ್ದು ದೇಶವೇ ತಲೆತಗ್ಗಿಸುವ ಕೆಲಸ ಆಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಮೃತ ಯುವತಿಯ ಮನೆಯವರಿಗೆ ಮೃತದೇಹದ ಮುಖದರ್ಶನಕ್ಕೂ ಅವಕಾಶ ನೀಡದೆ ದುರಹಂಕಾರ ಮೆರೆಯಲಾಗಿದೆ. ಅಂತಹಾ ನೀಚ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದರು. ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ […]

ಅದಿತ್ಯನಾಥ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ➤ ಮಾಜಿ ಶಾಸಕ ವಸಂತ ಬಂಗೇರ ಒತ್ತಾಯ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ – ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 22. ಪ್ರಸಕ್ತ ಸಾಲಿನಲ್ಲಿ ಮಂಗಳೂರು  ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೊಂದೇಲ್ ಸಂಸ್ಥೆಯಲ್ಲಿರುವ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ ಹಾಗೂ ಲೈಬ್ರೆರಿ ಆ್ಯಂಡ್ ಇನ್‍ ಫಾರ್ಮೇಶನ್  ಸೈನ್ಸ್ ಕೋರ್ಸ್‍ಗಳ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ https;//dtek.karnataka.gov.in ವೆಬ್‍ ಸೈಟ್ ಹಾಗೂ ದೂ. ಸಂ.0824-2482334 ಸಂಪರ್ಕಿಸಲು

ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ – ದಿನಾಂಕ ವಿಸ್ತರಣೆ Read More »

ಕರಾವಳಿ, ಕರ್ನಾಟಕ

ಸರಳ ರೀತಿ ದೀಪಾವಳಿ ಆಚರಿಸಲು ದಕ್ಷಿಣ ಕನ್ನಡ ಡಿಸಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌-19 ಹಿನ್ನೆಲೆಯಲ್ಲಿ ಈ ವರ್ಷ ದೀಪಾವಳಿ ಹಬ್ಬವನ್ನು ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಮತ್ತು ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಆಚರಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ನ.14ರಿಂದ 17ರ ವರೆಗೆ ಜಿಲ್ಲಾದ್ಯಂತ ದೀಪಾವಳಿ ಹಬ್ಬ ಆಚರಿಸುವಾಗ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅವರು ಆದೆಶದಲ್ಲಿ ತಿಳಿಸಿದ್ದಾರೆ. ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಸಿಡಿಮದ್ದುಗಳನ್ನು ಮಾರಾಟ ಮಾಡಬೇಕು. ಪಟಾಕಿ ಮಾರಾಟದ

ಸರಳ ರೀತಿ ದೀಪಾವಳಿ ಆಚರಿಸಲು ದಕ್ಷಿಣ ಕನ್ನಡ ಡಿಸಿ ಆದೇಶ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನಂಬಿಕೆಯಿಂದ ನಾವು ಕಾರ್ಯ ಸಿದ್ದಿಸಿಕೊಳ್ಳಬಹುದು ➤ ಪ್ರೋ. ಜ್ಞಾನೇಶ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.22: ಯಾವುದೇ ವಿಷಯದಲ್ಲಿ ನಂಬಿಕೆ ಮುಖ್ಯವಾಗಿದ್ದು ನಂಬಿಕೆಯಿಂದ ಕಾರ್ಯಸಿದ್ದಿಸಿಕೊಳ್ಳಬಹುದು ಎಂದು ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ. ಜ್ಞಾನೇಶ್ ಹೇಳಿದರು. ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಗಳ ಕೃತಿ ನಂದಿಸದಿರಿ ನಂದಾದೀಪವನ್ನು ಉದ್ಘಾಟಿಸಿ ಮಾತನಾಡಿದರು.     ದೇವರಲ್ಲಿಯೂ ನಂಬಿಕೆ ಇದ್ದರೆ ಮಾತ್ರ ದೇವರು ಒಲಿಯುತ್ತಾನೆ. ಆಶ್ರಮದ ಸ್ವಾಮಿಗಳ ತ್ಯಾಗಮಯ ಜೀವನ ಎಲ್ಲಾರಿಗೆ ಆದರ್ಶ ಎಂದು ಹೇಳಿದರು. ಶ್ರೀ ಯೋಗೇಶ್ವರಾನಂದ ಸ್ವಾಮಿ

ನಂಬಿಕೆಯಿಂದ ನಾವು ಕಾರ್ಯ ಸಿದ್ದಿಸಿಕೊಳ್ಳಬಹುದು ➤ ಪ್ರೋ. ಜ್ಞಾನೇಶ್ Read More »

ಕರಾವಳಿ

ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22: ಬಂಟ್ವಾಳ ತಾಲೂಕಿನ ಧರ್ಮ ದೈವ ಕಾರಣಿಕದ ಕಲ್ಲುರ್ಟಿ ದೈವಸ್ಥಾನ ಪಣೋಲಿಬೈಲ್ ಇದರ ನೂತನ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.     ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಗಡಿ ಬಂದ್ ಆದಂತಹ ಸಂದರ್ಭದಲ್ಲಿ ಗಡಿ ಪ್ರದೇಶಗಳ ಜನತೆಯನ್ನು ಮನವರಿಕೆ ಮಾಡಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮ ಹೀಗೆ ಹತ್ತು ಹಲವು ರೀತಿಯಲ್ಲಿ ದಕ್ಷ ಅಧಿಕಾರಿ

ಮಂಗಳೂರು: ಪಣೋಲಿಬೈಲ್ ದೈವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ರಶ್ಮಿ.ಎಸ್.ಆರ್ ನೇಮಕ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.22: ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅವರ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶವೊಂದು ಹರಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು. ಯಾರೂ ಮೋಸ ಹೋಗಕೂಡದು ಎಂದು ಅವರು ತಿಳಿಸಿದ್ದಾರೆ.     ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್‌ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬ ರೀತಿಯ ಸಂದೇಶ ಇಲ್ಲಿ ರವಾನೆಗೊಂಡಿದೆ.ತಲಾ 5 ಸಾವಿರ ರೂ.ಮೌಲ್ಯದ 4 ಅಮೆಝೋನ್ ಈ-ಕಾರ್ಡ್ ಖರೀದಿಸಿ jamsteh08@gmail.com ಎಂಬ ಈ-ಮೇಲ್‌ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ ರವಾನಿಸುವಂತೆ

ಕಾಸರಗೋಡು: ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶ ರವಾನೆ Read More »

ಕರ್ನಾಟಕ

ಶೀಘ್ರದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಕಾಮಗಾರಿ ➤ ಶಾಸಕ ಡಾ. ವೈ ಭರತ್ ಶೆಟ್ಟಿ

(ನ್ಯೂಸ್ ಕಡಬ) ಮಂಗಳೂರು, ಅ. 22. ಪ್ರಾಸ್ತಾವಿಕ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಲಾವಿದರ ಸಮಲೋಚನೆ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉತ್ತರ ವಲಯ ಡಾ. ವೈ ಶಾಸಕ ಭರತ್ ಶೆಟ್ಟಿ, ಕಲಾವಿದರ ಸೂಚನೆ ಸಹಕಾರದೊಂದಿಗೆ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಈ ಸಂಬಂಧ ಸಂಪೂರ್ಣ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಬಜೆಟ್ ಅನ್ನು ತಯಾರಿಸಲು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಶೀಘ್ರದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಕಾಮಗಾರಿ ➤ ಶಾಸಕ ಡಾ. ವೈ ಭರತ್ ಶೆಟ್ಟಿ Read More »

ಕರಾವಳಿ, ಕರ್ನಾಟಕ

ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ದತೆ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 22: ಕೋವಿಡ್ 19 ಮಾರ್ಗ ಸೂಚಿಗಳ ನಡುವೆ ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳನ್ನು ನಡೆಸಲು ಈಗಾಗಲೇ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾ.ಪಂ ಗಳಿಗೆ ಶೀಘ್ರವೇ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ವಿಧಾನಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ ಎಸ್ ಓಕ್ ನೇತೈತ್ವದ ವಿಭಾಗೀಯ

ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ದತೆ Read More »

ಕರ್ನಾಟಕ

ಕಾಸರಗೋಡು: 2 ದಿನಗಳ ಹಿಂದೆ ಕಳವಾಗಿದ್ದ ಶ್ರೀಗಂಧದ ಕೊರಡುಗಳು ಮತ್ತೆ ಅದೇ ಸ್ಥಳದಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 22. ಮಸೀದಿ ಆವರಣದಲ್ಲಿದ್ದ ಶ್ರೀಗಂಧ ಮರದ ಕೊರಡುಗಳನ್ನು ಯಾರೋ ಕಳವುಗೈದಿದ್ದು, ಇದೀಗ ಎರಡು ದಿನಗಳ ಬಳಿಕ  ಅದೇ ಸ್ಥಳದಲ್ಲಿ ಪತ್ತೆಯಾದ ಘಟನೆ ಮುಳಿಯಾರಿನ ಬಾವಿಕ್ಕರೆ ಎಂಬಲ್ಲಿ ನಡೆದಿದೆ. ಶ್ರೀಗಂಧದ ಕೊರಡನ್ನು ಕಳವುಗೈದ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆಯೇ ಕಳ್ಳರು ಕೊರಡುಗಳನ್ನು ಮಸೀದಿ ಆವರಣದಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಬಾವಿಕ್ಕರೆ ಜುಮಾ ಮಸೀದಿ ಆವರಣದಲ್ಲಿದ್ದ ಸುಮಾರು 16 ವರ್ಷ ಹಳೆಯ ಮರವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿತ್ತು. ಆದಿತ್ಯವಾರದಂದು ಮಸೀದಿಯ ಪರಿಸರವನ್ನು

ಕಾಸರಗೋಡು: 2 ದಿನಗಳ ಹಿಂದೆ ಕಳವಾಗಿದ್ದ ಶ್ರೀಗಂಧದ ಕೊರಡುಗಳು ಮತ್ತೆ ಅದೇ ಸ್ಥಳದಲ್ಲಿ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ದೇಗುಲದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷ…!

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.22: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಎಂಬ ಮೊಸಳೆ ಇಂದು ದೇಗುಲದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಈ ದೇವಸ್ಥಾನ ಕೆರೆಯ ಮಧ್ಯದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿದೆ.     ನದಿಯ ಮಧ್ಯಭಾಗದಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದ್ದು, ಬಬಿಯಾ ಹೆಸರಿನ ಮೊಸಳೆ ಅದೇ ನದಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ದೇಗುಲದ

ಕಾಸರಗೋಡು: ದೇಗುಲದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷ…! Read More »

ಕರ್ನಾಟಕ
Scroll to Top