ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ

(ನ್ಯೂಸ್ ಕಡಬ) newskadaba.comಬೆಂಗಳೂರು, ಅ. 24.  ಲಾಕ್‌ ಡೌನ್‌ ಸಮಯದಲ್ಲಿ ಗಗನಕ್ಕೇರಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದ್ದು, ಸದ್ಯ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿದ್ದು,ಗ್ರಾಹಕರನ್ನ ಸಂತುಷ್ಠರನ್ನಾಗಿಸಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ. ಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಬೆಲೆ 47,000 ರೂಪಾಯಿಯಾಗಿದೆ. ಇನ್ನು, 24 ಕ್ಯಾರೆಟ್​ ನ 10 ಗ್ರಾಂ. ಚಿನ್ನದ ದರವೂ 130 ರೂಪಾಯಿ ಇಳಿಕೆ ಕಂಡು, 51,270 ರೂಪಾಯಿ ಆಗಿದೆ. ಇನ್ನು […]

ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಕೊರೋನಾ

(ನ್ಯೂಸ್ ಕಡಬ) newskadaba.com ಮುಂಬೈ, ಅ.24:ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಐಸೋಲೇಷನ್ ನಲ್ಲಿದ್ದಾರೆ. ಟ್ವೀಟರ್ ನಲ್ಲಿ ಈ ಬಗ್ಗೆ ಸ್ವತ: ಫಢ್ನವೀಸ್ ಅವರೇ ಹೇಳಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.     ಲಾಕ್ ಡೌನ್ ಆದಾಗಿನಿಂದಲೂ ಪ್ರತಿದಿನವೂ ಕೆಲಸ ಮಾಡುತ್ತಿದ್ದೇನೆ ಆದರೆ, ಈಗ ನಾನು ಸಲ್ಪ ಸಮಯದವರೆಗೂ ವಿರಾಮ ತೆಗೆದುಕೊಳ್ಳಲು ದೇವರು ಬಯಸಿದ್ದು, ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಕೊರೋನಾ Read More »

ಕರಾವಳಿ

ಮಂಗಳೂರು: ಶ್ರೀನಿವಾಸ್ ವಿವಿ ಫಿಸಿಯೋಥೆರಪಿ ಕಾಲೇಜಿಗೆ ಎರಡು ನೂತನ ಯಂತ್ರಗಳ ಅಳವಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‍ವಿಶ್ವವಿದ್ಯಾಲಯದ ಕಾಲೇಜ್‍ ಆಫ್ ಫಿಸಿಯೋಥೆರಪಿಯ ಹೊರ ರೋಗಿ ವಿಭಾಗದಲ್ಲಿ ನೂತನವಾದ ಹೊಸ ಆವಿಷ್ಕಾರದ ತಂತ್ರಜ್ಞಾನವನ್ನು ಒಳಗೊಂಡ ಟೆಕ್‍ ಲೇಸರ್‍ ಎಸ್ಸ್ 2000 ಮತ್ತು ವೇವ್‍ ಸ್ಟಾರ್ ಎಂಬ ಎರಡು ಯಂತ್ರಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಉಡುಪಿಯ ಪಲಿಮಾರು ಮಠದ ಶ್ರೀಶ್ರೀಶ್ರೀ ವಿದ್ಯಾಧೀಶತೀರ್ಥ ಸ್ವಾಮಿಜಿಯವರು ಉದ್ಘಾಟಿಸಿದರು. ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ  ಶ್ರೀ ಸಿಎ ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್‍ ರಾವ್,

ಮಂಗಳೂರು: ಶ್ರೀನಿವಾಸ್ ವಿವಿ ಫಿಸಿಯೋಥೆರಪಿ ಕಾಲೇಜಿಗೆ ಎರಡು ನೂತನ ಯಂತ್ರಗಳ ಅಳವಡಿಕೆ Read More »

ಕರಾವಳಿ, ಕರ್ನಾಟಕ

ಎರಡನೇ ಮದುವೆ ಮಾಡ್ಕೊಳ್ಳೋರಿಗೆ ಬ್ಯಾಂಕ್ ನೀಡಲಿದೆ 6 ಲಕ್ಷ…!

(ನ್ಯೂಸ್ ಕಡಬ) newskadaba.com ಅ. 24. ಮನೆ ಕಟ್ಟುವವರಿಗೆ, ವಾಹನ ಖರೀದಿ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಕ್ಕೆ ಬ್ಯಾಂಕುಗಳು ಸಾಲ ನೀಡುತ್ತವೆ. ಆದರೆ ಮದುವೆಗೆ ಸಾಲ ನೀಡೋದಕ್ಕೆ ಮಾತ್ರ ಬಹುತೇಕ ಬ್ಯಾಂಕ್ ಗಳು ಹಿಂದೇಟು ಹಾಕುತ್ತದೆ. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ ವೊಂದು ಎರಡನೇ ಮದುವೆ ಆಗುವವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡುವ ಯೋಜನೆಯೊಂದನ್ನು ಘೋಷಿಸಿದೆ.     ಈ ಬ್ಯಾಂಕ್‌ ಎರಡನೇ ಮದುವೆಗೆಂದು 8389 ಡಾಲರ್‌ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ. ಆದರೆ

ಎರಡನೇ ಮದುವೆ ಮಾಡ್ಕೊಳ್ಳೋರಿಗೆ ಬ್ಯಾಂಕ್ ನೀಡಲಿದೆ 6 ಲಕ್ಷ…! Read More »

ರಾಷ್ಟ್ರೀಯ ನ್ಯೂಸ್

ಶಾಲೆಗೆ ನುಗ್ಗಿ ಕಳ್ಳತನ ➤ಮೂವರ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 24: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸರ್ಕಾರಿ ಶಾಲೆಯಲ್ಲಿ ಅ. 20ರಂದು ನಡೆದ ಕಳವು ಪ್ರಕರಣ ಸಂಬಂಧ ಮೂವರು ಆರೋಪಿ ಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಕ್ಕಡ ನಿವಾಸಿಗಳಾದ ಕೃಷ್ಣಾನಂದ ಯಾನೆ ಕಿಣಿ, ಸಿದ್ದೀಕ್, ಇಚಿಲಂಪಾಡಿಯ ವಿನೋದ್ ಎಂದು ಗುರುತಿಸಲಾಗಿದೆ. ಅ. 20ರಂದು ಶಾಲೆಯ ಕಂಪ್ಯೂಟರ್‌ ಕೋಣೆ, ಬಿಸಿ ಊಟದ ಕೊಠಡಿ ಹಾಗೂ ತರಗತಿಗಳ ಕೊಠಡಿಯ ಬೀಗ ಮುರಿದು 2 ಕಂಪ್ಯೂಟರ್‌ ಹಾಗೂ ಗ್ಯಾಸ್‌ ಸಿಲಿಂಡರ್ ಕಳವು ಮಾಡಿರುವ ಬಗ್ಗೆ

ಶಾಲೆಗೆ ನುಗ್ಗಿ ಕಳ್ಳತನ ➤ಮೂವರ ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 24: ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ನಿನ್ನೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಪಿಲ್ ದೇವ್ ಗೆ ಹೃದಯಾಘಾತಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೇ ವಿರಾಟ್ ಕೊಹ್ಲಿ ಸೇರಿದಂತೆ ಹಾಲಿ-ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಚಿಕಿತ್ಸೆ ಬಳಿಕ ಸ್ವತಃ ಕಪಿಲ್ ತಮಗೆ ಶುಭ ಹಾರೈಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ತಾವೀಗ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.ತಮ್ಮ ಮಗಳ ಜೊತೆಗೆ ಕಪಿಲ್ ದೇವ್ ಖುಷಿಯಿಂದ

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.24: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳೂರು ನಾರ್ಲಗುಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಕೃಷಿಕರೋರ್ವರು ಮೃತಪಟ್ಟ ಘಟನೆ ನಡೆದಿದೆ.   ಮೃತಪಟ್ಟ ವ್ಯಕ್ತಿಯನ್ನು ರಫಾಯಲ್ ಡಿ ಸೋಜ ( 49) ಎಂದು ಗುರುತಿಸಲಾಗಿದೆ. ರಫಾಯಲ್ ರವರ ಕೃಷಿ ಸ್ಥಳಕ್ಕೆ ಕಾಡು ಹಂದಿಗಳು ನಿರಂತರ ದಾಳಿ ನಡೆಸುತ್ತಿದ್ದು, ಭಾರೀ ಪ್ರಮಾಣದ ಬೆಳೆಗಳು ಹಾನಿಗೊಂಡಿದ್ದವು. ಇದರಿಂದ ಭತ್ತ ಕೃಷಿಗೆ ಕಾಡು ಹಂದಿಗಳ ಉಪಟಳ ತಡೆಯಲು ತಂತಿಯ ಬೇಲಿ ಅಳವಡಿಸಿ ವಿದ್ಯುತ್ ಪ್ರವಹಿಸಲಾಗಿತ್ತು. ರಾತ್ರಿ ಹಂದಿಯ ಶಬ್ದ

ಕಾಸರಗೋಡು: ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 24: ಬೆಂಗಳೂರು ನಗರದಾದ್ಯಂತ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಮಠ ಕಳೆದುಕೊಂಡು ಪರದಾಡುತ್ತಿದ್ದಾರೆ.ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ನಗರವೇ ನಲುಗಿ ಹೋಗಿದೆ.   ಅಲ್ಲದೇ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಕಮಿಷನರ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಕರೆ ಮಾಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಸೂಚಸಿದ್ದಾರೆ. ಅಲ್ಲದೇ

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ Read More »

ಕರ್ನಾಟಕ

ಕೇಂದ್ರದಿಂದ ಉಚಿತ ಕೊರೋನಾ ಲಸಿಕೆಗೆ ಯೋಜನೆ ➤ ಆಧಾರ್ ಕಾರ್ಡ್ ಕಡ್ಡಾಯ..!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24. ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆ ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಿಸಲು ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತದೆ. ಕೇಂದ್ರ ಸರ್ಕಾರವೇ ನೇರವಾಗಿ ಲಸಿಕೆ ಖರೀದಿಸಿ ಆದ್ಯತಾ ವಲಯಗಳಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು. ರಾಜ್ಯ, ಜಿಲ್ಲೆಗಳಲ್ಲಿರುವ ವ್ಯವಸ್ಥೆಗಳ ಮೂಲಕ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.     ಕೊರೋನಾ ಲಸಿಕೆ ವಿತರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುತ್ತಿದ್ದು, ಪ್ರತ್ಯೇಕ ಯೋಜನೆ ರೂಪಿಸಬಾರದೆಂದು ರಾಜ್ಯಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ.

ಕೇಂದ್ರದಿಂದ ಉಚಿತ ಕೊರೋನಾ ಲಸಿಕೆಗೆ ಯೋಜನೆ ➤ ಆಧಾರ್ ಕಾರ್ಡ್ ಕಡ್ಡಾಯ..! Read More »

ರಾಷ್ಟ್ರೀಯ ನ್ಯೂಸ್

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ..!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24: ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ರಿಲಯನ್ಸ್ ಜಿಯೋ ವತಿಯಿಂದ ಮೇಡ್ ಇನ್ ಇಂಡಿಯಾ ಎಂಬ ವಿಶೇಷತೆಯನ್ನು ಬ್ರೌಸರ್ ಹೊಂದಿದ್ದು ವೆಬ್ ಸುರಕ್ಷತೆ, ಡೇಟಾ, ಗೌಪ್ಯತೆಗೆ ಒತ್ತು ನೀಡಲು ಹೊಸ ಜಿಯೋ ಪೇಜಸ್ ಎನ್ನುವ ಬ್ರೌಸರ್ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.   ಗುಣಮಟ್ಟ ವರ್ಧಿತ ಬ್ರೌಸಿಂಗ್ ಅನುಭವವನ್ನು ಜಿಯೋ ಬ್ರೌಸಿಂಗ್ ಬಳಕೆದಾರರಿಗೆ ಒದಗಿಸುತ್ತದೆ. ಭಾರತ ನಿರ್ಮಿತ ಬ್ರೌಸರ್ ಇರಲಿಲ್ಲ ಎನ್ನುವ ಕೊರತೆಯನ್ನು ಇದು ನೀಗಿಸಿದೆ. ವೇಗವಾದ ಸರ್ಚ್ ಇಂಜಿನ್,

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ..! Read More »

ರಾಷ್ಟ್ರೀಯ ನ್ಯೂಸ್
Scroll to Top