ಬೆಂಗಳೂರು: ಅನಧಿಕೃತ ಕಟ್ಟಡಗಳ ನೆಲಸಮಕ್ಕೆ ನಿರ್ಧರಿಸಿದ ಬಿಬಿಎಂಪಿ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 26. ಭಾರೀ ಮಳೆಯಿಂದಾಗಿ ದಕ್ಷಿಣ ಬೆಂಗಳೂರಿನಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ (ಬಿಬಿಎಂಪಿ)ಯು ಸುಮಾರು ನೂರಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ಧ್ವಂಸ ಮಾಡಲು ನಿರ್ಧಾರ ಮಾಡಿದೆ. . ಬಿಬಿಎಂಪಿಯ ಕಮಿಷನರ್ ಎನ್. ಮಂಜುನಾಥ್ ಪ್ರಸಾದ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ದಕ್ಷಿಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕೃತಕ ನೆರೆಯುಂಟಾಗಿತ್ತು. ನೆರೆಯಿಂದಾಗಿ ಅನಧಿಕೃತ ಕಟ್ಟಡಗಳಿಗೆ ಭಾರೀ ಹಾನಿಯುಂಟಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ತಲಾ 25 ಸಾವಿರ ರೂಪಾಯಿಯನ್ನು […]

ಬೆಂಗಳೂರು: ಅನಧಿಕೃತ ಕಟ್ಟಡಗಳ ನೆಲಸಮಕ್ಕೆ ನಿರ್ಧರಿಸಿದ ಬಿಬಿಎಂಪಿ Read More »

ಕರ್ನಾಟಕ

ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ…!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಅ. 26. ದುರಂತಮಯ ಪ್ರಸಿದ್ಧ ಪ್ರೇಮ ಕಥೆಗಳು ಇದಾಗಲೇ ಸಾಕಷ್ಟು ಪ್ರಚಾರದಲ್ಲಿ ಇವೆ. ಅಂಥದ್ದೇ ಒಂದು ನೋವಿನ ಪ್ರೀತಿಯ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರೇಯಸಿ ಸಾವನ್ನಪ್ಪಿದ ಕಾರಣಕ್ಕೆ ಮನನೊಂದ ಯುವಕನೊಬ್ಬ ಆಕೆಯ ಸಮಾಧಿಯ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಮಹಾದೇವಾಪುರ್ ಮಂಡಲದ ಕುದುರುಪಲ್ಲಿ ಎಂಬ ಗ್ರಾಮದಲ್ಲಿ ನಡೆದಿದೆ.     ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮಹೇಶ್(24) ಎಂದು ಗುರುತಿಸಲಾಗಿದ್ದು, ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್

ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಡಿಕೇರಿ ದಸರಾ ಉತ್ಸವಕ್ಕೆ ಕೊರೊನಾ ಸೂತಕದ ಛಾಯೆ ➤ ಇಂದು ರಾತ್ರಿ ಸಾಂಪ್ರದಾಯಿಕ ಮೆರವಣಿಗೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಅ.26. ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ಇಂದು ರಾತ್ರಿ ದಶದೇವಾಲಯಗಳ ಕಿರು ಮಂಟಪಗಳ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ.     ಶಕ್ತಿದೇವತೆಗಳೂ ಸೇರಿದಂತೆ ಮಡಿಕೇರಿಯ ದಶದೇವಾಲಯಗಳಲ್ಲಿ ಮೆರವಣಿಗೆಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ನಾಡಹಬ್ಬದ ಆಚರಣೆಯಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು

ಮಡಿಕೇರಿ ದಸರಾ ಉತ್ಸವಕ್ಕೆ ಕೊರೊನಾ ಸೂತಕದ ಛಾಯೆ ➤ ಇಂದು ರಾತ್ರಿ ಸಾಂಪ್ರದಾಯಿಕ ಮೆರವಣಿಗೆ Read More »

ಕರ್ನಾಟಕ

ಕಲ್ಲಿದ್ದಲು ಹಗರಣ : ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು

(ನ್ಯೂಸ್ ಕಡಬ) newskadaba.com ನವದೆಹಲಿ ಅ. 26: 1999ರ ಜಾರ್ಖಂಡ್​ನಲ್ಲಿ ನಡೆದಿದ್ದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್​ ಇವರನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ. ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಅಟಲ್

ಕಲ್ಲಿದ್ದಲು ಹಗರಣ : ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಮನೆ

(ನ್ಯೂಸ್ ಕಡಬ) newskadaba.com ಧಾರವಾಡ, ಅ. 26. ಆಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಸುಟ್ಟು ಕರಕಲಾದ ಘಟನೆ ಧಾರವಾಡದ ಮಾಳಮಡ್ಡಿ ಎಂಬಲ್ಲಿ ನಡೆದಿದೆ. ಮಹಿಷಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಅವರು ಮಧ್ಯಾಹ್ನ ರಾಯರ ಮಠಕ್ಕೆ ಊಟಕ್ಕೆ ಹೋದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮನೆಯಲ್ಲೆಡೆ ಬೆಂಕಿ ಆವರಿಸಿಕೊಂಡಿದೆ ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿಗಳು ವಿದ್ಯಾಗಿರಿ ಪೊಲೀಸರಿಗೆ ಹಾಗೂ

ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಮನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಕ್ಲಬ್ ಗೆ ದಾಳಿ

 (ನ್ಯೂಸ್ ಕಡಬ) newskadaba.com ಪುತ್ತೂರು, ಅ. 26. ಕೊರೋನಾ ನಿಯಮ ಉಲ್ಲಂಘಿಸಿ ಜೂಜಾಟ ಆಡುತ್ತಿದ್ದ ಆರೋಪದ ಮೇರೆಗೆ ಕ್ಲಬ್ ಗೆ ಪೊಲೀಸರು ದಾಳಿ ನಡೆಸಿ ಹದನೈದು ಮಂದಿಯನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಯೂನಿಯನ್ ಕ್ಲಬ್ ನೋಂದಾಯಿತ ಕ್ಲಬ್ ಆಗಿದ್ದರೂ ಅಲ್ಲಿ ಹಣವನ್ನು ಪಣವಿಟ್ಟುಕೊಂಡು ಕಾನೂನಿಗೆ ವಿರುದ್ದವಾಗಿ ಹದಿನೈದು ಮಂದಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿಸಿದ್ದ ಸುಮಾರು 1.5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಪುತ್ತೂರು: ಕ್ಲಬ್ ಗೆ ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡ್ರಗ್ಸ್ ಖರೀದಿಸಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈ ಅ. 26: ಡ್ರಗ್ಸ್ ಖರೀದಿಸುವಾಗ ಬಾಲಿವುಡ್ ಕಿರುತೆರೆ ನಟಿಯೊಬ್ಬಳು ರೆಡ್‍ಹ್ಯಾಡ್ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನು ಎನ್‍ಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಇಡೀ ಭಾರತದ ಚಿತ್ರರಂಗಕ್ಕೆ ಡ್ರಗ್ ಕಳಂಕ ಅಂಟಿಕೊಂಡಿದೆ. ಈಗಾಗಲೇ ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಡ್ರಗ್ ವಿಚಾರದಲ್ಲಿ ಆರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೊತೆಗೆ ಸ್ಯಾಂಡಲ್‍ವುಡ್‍ನಲ್ಲಿ ನಟಿಮಣಿಯರಾದ ರಾಗಿಣಿ ಮತ್ತು ಸಂಜಾನ ಗಲ್ರಾನಿ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಈಗ ಬಾಲಿವುಡ್‍ನಲ್ಲಿ ಸವ್ಧಾನ್ ಇಂಡಿಯಾ ಮತ್ತು ದೇವೋ ಕೆ ದೇವ್ ಮಹಾದೇವ್ ನಂತಹ ಟಿವಿ

ಡ್ರಗ್ಸ್ ಖರೀದಿಸಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಉಳ್ಳಾಲ, ಅ. 26. ನ್ಯೂ ಟೌನ್ ಮೆಡಿಕಲ್ ಮಾಸ್ತಿಕಟ್ಟೆ ಉಳ್ಳಾಲ ಇದರ ಉದ್ಘಾಟನಾ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಹಾಗೂ ಕೆ.ಎಂ.ಸಿ ರಕ್ತ ನಿಧಿ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ 73ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ಮಾಸ್ತಿಕಟ್ಟೆ ಉಳ್ಳಾಲ ಜಂಕ್ಷನ್ ನಲ್ಲಿ ನಡೆಯಿತು. ಶಿಬಿರದಲ್ಲಿ ಹೆಚ್ಚಿನ ದಾನಿಗಳು ಬಾಗವಹಿಸಿ ರಕ್ತ ದಾನ ಮಾಡುವ ಮೂಲಕ ಜೀವ ದಾನಿಗಳಾದರು. ಈ ಕಾರ್ಯಕ್ರಮದಲ್ಲಿ ನ್ಯೂ ಟೌನ್ ಮೆಡಿಕಲ್ಸ್ ಮಾಲಕರಾದ 

ಉಳ್ಳಾಲ: ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ

ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ವಿಜಯಪುರ ಅ. 26: ಯುವತಿಯೊಬ್ಬಳು ಹೆತ್ತವರ ಕಣ್ಣೆದ್ದುರಲ್ಲೇ ಭೀಮಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರದಲ್ಲಿ ಭಾನುವಾರ (ಅ.25) ನಡೆದಿದೆ. ಐಶ್ವರ್ಯ ಶ್ರೀಪಾಲ ಕಬ್ಬಿನ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಧಾರವಾಡದ ನವಲಗುಂದ ಪಟ್ಟಣದ ನಿವಾಸಿ. ಕುಟುಂಬಸ್ಥರೊಂದಿಗೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮಾರ್ಗ ಮಧ್ಯೆ ವಿಜಯಪುರದ ಆಲಮೇಲ ಮತ್ತು ಕಲಬುರಗಿ ಜಿಲ್ಲೆಯ  ಅಫಜಲಪುರ ತಾಲೂಕು ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಬಳಿ ವಾಹನ

ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ! Read More »

ಕರ್ನಾಟಕ

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬೆಳಗಾವಿ, ಅ. 26. ಗುಂಪು ಕಟ್ಟಿಕೊಂಡು ಯುವಕನ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ  ಗ್ಯಾಂಗ್ ವಾಡಿ ರಸ್ತೆಯಲ್ಲಿ ಕಳೆದ ದಿನ ರಾತ್ರಿ ನಡೆದಿದೆ. ಮೃತನನ್ನು ಅಜಂ ನಗರದ ನಿವಾಸಿ ಶಹಬಾಜ್ (24) ಎಂದು ಗುರುತಿಸಲಾಗಿದೆ.     ಮೃತ ವ್ಯಕ್ತಿ ರೌಡಿಶೀಟರ್ ಎಂಬುದಾಗಿ ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top