ಶಾಸಕ ಯು.ಟಿ.ಖಾದರ್ ಹತ್ಯೆಗೆ ನಡೆಯಿತಾ ಸ್ಕೆಚ್..⁉️ ➤ ಶಾಸಕರ ಕಾರನ್ನು ಹಿಂಬಾಲಿಸಿದ ಅಪರಿಚಿತರು..‼️

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23. ಶಾಸಕ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತ ಬೈಕೊಂದು ಹಿಂಬಾಲಿಸಿದ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಯು.ಟಿ.ಖಾದರ್ ರವರು ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ಬುಧವಾರ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ನಡುವೆ ದೇರಳಕಟ್ಟೆಯಿಂದ ಬೈಕೊಂದರಲ್ಲಿ ಇಬ್ಬರು ಅಪರಿಚಿತರು ಶಾಸಕರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ನಂತೂರು ತಲುಪುವ ವೇಳೆ ಶಾಸಕರ ಎಸ್ಕಾರ್ಟ್ ವಾಹನವು ಬೈಕ್ ಸವಾರರನ್ನು ತಡೆದಿದ್ದು, ಈ […]

ಶಾಸಕ ಯು.ಟಿ.ಖಾದರ್ ಹತ್ಯೆಗೆ ನಡೆಯಿತಾ ಸ್ಕೆಚ್..⁉️ ➤ ಶಾಸಕರ ಕಾರನ್ನು ಹಿಂಬಾಲಿಸಿದ ಅಪರಿಚಿತರು..‼️ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮಣಿಪಾಲ, ಡಿ.23: ಸೊಸೈಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಪೃಥ್ವಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿ ಕೆಲಸ ಮಾಡುತ್ತಿದ್ದ ಪೃಥ್ವಿ ಇಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು Read More »

ಕರಾವಳಿ

ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ.?!

(ನ್ಯೂಸ್ ಕಡಬ) newskadaba.com ಹಾವೇರಿ, ಡಿ.23: ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದ ತಾಯಿ ತನ್ನ ಮಗಳ ಜತೆಸೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ. ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ ತಾಇ ಶಿವಕ್ಕ (40) ಮತ್ತು ಆಕೆಯ ಪುತ್ರಿ ಸಂಗೀತಾ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರೂ ರಟ್ಟೇಹಳ್ಳಿ ತಾಕೂಕಿನ ಹಳ್ಯಾಳ ತಾಂಡ ನಿವಾಸಿಗಳೆಂದು ಗುರುತಿಸಲಾಗಿದೆ. ಮಗಳನ್ನು ಕಟ್ಟಿಕೊಂಡು ತಾಯಿ ಕೆರೆಗೆ ಹಾರಿದ್ದು ಸ್ಥಳೀಯರ ನೆರವಿನೊಡನೆ ಪೋಲೀಸರು ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಹಿರೇಕೆರೂರು

ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ.?! Read More »

ಕರ್ನಾಟಕ

ಮಂಗಳೂರು : ಉದ್ಯಮಿ ನಾಪತ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರ, ಉದ್ಯಮಿಯೊಬ್ಬರು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದೆ ಎನ್ನಲಾಗಿದೆ.   ಮಾರ್ನಮಿಕಟ್ಟೆ ನಿವಾಸಿ ಸಲೀಂ ಅಹ್ಮದ್ (35) ನಾಪತ್ತೆಯಾದ ಉದ್ಯಮಿ. ಇವರು ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ವಾಪಸಾಗಿಲ್ಲ. ಮೊಬೈಲ್ ಸ್ವಿಚ್ ‌ಆಫ್ ಆಗಿದ್ದು, ನೆರೆಕರೆಯವರಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ

ಮಂಗಳೂರು : ಉದ್ಯಮಿ ನಾಪತ್ತೆ.! Read More »

ಕರಾವಳಿ

ಕರ್ನಾಟಕ ಹಾಲು ಮಹಾ ಮಂಡಳಿಯ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ “ಸಿಹಿ ಉತ್ಸವ” ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 24. ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ “ಸಿಹಿ ಉತ್ಸವ” ಯೋಜನೆಯನ್ನು ಕರ್ನಾಟಕ ರಾಜ್ಯಾದಂತ ದಿನಾಂಕ 24.12.2020ರಿಂದ 07.01.2021ರವರೆಗೆ ಆಚರಿಸುತ್ತಿದೆ.   ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ ಮಾರಾಟ ದರದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ನಂದಿನಿ ವಿವಿಧ ಶ್ರೇಣಿಯ ಸಿಹಿ ಉತ್ಪನ್ನಗಳು ರಾಜ್ಯಾದಂತ ಇರುವ ನಂದಿನಿ

ಕರ್ನಾಟಕ ಹಾಲು ಮಹಾ ಮಂಡಳಿಯ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ “ಸಿಹಿ ಉತ್ಸವ” ಯೋಜನೆ Read More »

ಕರಾವಳಿ, ಕರ್ನಾಟಕ
Nandini

ಹೊಸ ವರ್ಷದ ಪ್ರಯುಕ್ತ ‘ನಂದಿನಿ’ ವತಿಯಿಂದ ‘ಸಿಹಿ ಉತ್ಸವ’ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ “ಸಿಹಿ ಉತ್ಸವ” ಯೋಜನೆಯನ್ನು ಕರ್ನಾಟಕ ರಾಜ್ಯಾದಂತ ದಿನಾಂಕ 24.12.2020ರಿಂದ 07.01.2021ರವರೆಗೆ ಆಚರಿಸುತ್ತಿದೆ. ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ ಮಾರಾಟ ದರದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ನಂದಿನಿ ವಿವಿಧ ಶ್ರೇಣಿಯ ಸಿಹಿ ಉತ್ಪನ್ನಗಳು ರಾಜ್ಯಾದಂತ ಇರುವ ನಂದಿನಿ ಡೀಲರ್ ಕೇಂದ್ರಗಳಲ್ಲಿ,

ಹೊಸ ವರ್ಷದ ಪ್ರಯುಕ್ತ ‘ನಂದಿನಿ’ ವತಿಯಿಂದ ‘ಸಿಹಿ ಉತ್ಸವ’ ಆಚರಣೆ Read More »

ಕರಾವಳಿ

ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಚಿಂತನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ರಾಜ್ಯದ ಜನತೆಗೆ ಆರ್ಥಿಕ ಪ್ರಯೋಜನಗಳ ಲಾಭ ಒದಗಿಸುವ ಉದ್ದೇಶ ರಾಜ್ಯ ಸರ್ಕಾರ ಪರಿಚಯಿಸಿರುವ ಹೊಸ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2020-25’ ಬೆಂಬಲಿಸಲಿರುವ ಓಯೊ ಹೋಟೆಲ್ಸ್ ಆಂಡ್ ಹೋಮ್ಸ್, ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಎಂ.ಲಕ್ಷ್ಮೀನಾರಾಯಣ ಅವರ ಜತೆಗೆ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ತನ್ನ ಸೇವೆ ಮತ್ತು ವಹಿವಾಟು ವಿಸ್ತರಿಸುವುದರ ರೂಪುರೇಷೆಯನ್ನು ಕಂಪನಿಯು ವಿವರಿಸಿದೆ. ಸಮಾಲೋಚನೆಯ ಸಂದರ್ಭದಲ್ಲಿ

ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಚಿಂತನೆ Read More »

ಕರಾವಳಿ, ಕರ್ನಾಟಕ

ನಾಳೆ (ಡಿ.23) ಕಡಬದಲ್ಲಿ ನ್ಯಾಷನಲ್ ಇಲೆಕ್ಟ್ರಿಕಲ್ಸ್ & ಹಾರ್ಡ್‌ವೇರ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.22. ಇಲ್ಲಿನ ತಾಲೂಕು ಕಛೇರಿಯ ಬಳಿಯ ಶ್ರೀದೇವಿ ಸಂಕೀರ್ಣದಲ್ಲಿ ನ್ಯಾಷನಲ್ ಇಲೆಕ್ಟ್ರಿಕಲ್ಸ್ & ಹಾರ್ಡ್‌ವೇರ್ ಸಂಸ್ಥೆಯು ನಾಳೆ (ಡಿ.24) ಬೆಳಿಗ್ಗೆ 10.45 ಕ್ಕೆ ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ಸ್ ಹಾಗೂ ಪ್ಲಂಬಿಂಗ್ ಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ಲಭ್ಯವಿದ್ದು, ಪ್ರತಿ ಖರೀದಿಗೂ ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ ಎಂದು ಮಾಲಕರಾದ ದಿನೇಶ್ ಡಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9606854863, 6366075783 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ನಾಳೆ (ಡಿ.23) ಕಡಬದಲ್ಲಿ ನ್ಯಾಷನಲ್ ಇಲೆಕ್ಟ್ರಿಕಲ್ಸ್ & ಹಾರ್ಡ್‌ವೇರ್ ಶುಭಾರಂಭ Read More »

ಕರ್ನಾಟಕ

ಮಂಗಳೂರು :ನದಿಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಿರೆ ಸಮೀಪದ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನದಿಯಲ್ಲಿ ಶವ ಕಂಡು ಕೂಡಲೇ ಸ್ಥಳೀಯರಾದ ಕರ್ನಿರೆಬೈಲು ಪ್ರದೇಶದ ರೋಷನ್ ಡಿಸೋಜ ಅವರು ಕಾರ್ನಾಡು ಆಪತ್ಬಾಂಧವ ಆಸಿಫ್ ಅವರಿಗೆ ಕರೆ ಮಾಡಿ ದಾಗ ತಕ್ಷಣ ಧಾವಿಸಿ ಬಂದ ಅವರು, ದೋಣಿಯ ಮೂಲಕ ಸಾಗಿ ಶವವನ್ನು ದಡ ಸೇರಿಸಿ ಮುಲ್ಕಿ ಪೊಲೀಸರ ನೆರವಿನಿಂದ ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ

ಮಂಗಳೂರು :ನದಿಯಲ್ಲಿ ಅಪರಿಚಿತ ಶವ ಪತ್ತೆ Read More »

ಕರಾವಳಿ

ಉಗ್ರ ಪರ ಗೋಡೆ ಬರಹ ಪ್ರಕರಣ ➤ N.I.A ತನಿಖೆಗೆ ಒತ್ತಾಯಿಸಿ ವಿಎಚ್ ಪಿ ಕಾರ್ಯಕರ್ತರ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಉಗ್ರರ ಪರವಾದ ಗೋಡೆ ಬರಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲು ಒತ್ತಾಯಿಸಿ ಹಾಗೂ ಮಂಗಳೂರಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಖಂಡಿಸಿ ವಿಎಚ್ ಪಿ ಕಾರ್ಯಕರ್ತರು ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೇರೂರಿದ ಭಯೋತ್ಪಾದನೆ ಚಟುವಟಿಕೆ ಕರಾವಳಿ ಜಿಲ್ಲೆಗಳಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದು, ಈ ನಿಲುವು ಮಂಗಳೂರಿನಲ್ಲಿ ಉಗ್ರರ ಪರ ಗೋಡೆಬರಹಗಳ ಮುಖಾಂತರ ಕಂಡುಬರುತ್ತಿದೆ. ಇದೊಂದು ಅತಂಕಕಾರಿ ಘಟನೆಯಾಗಿದ್ದು, ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ

ಉಗ್ರ ಪರ ಗೋಡೆ ಬರಹ ಪ್ರಕರಣ ➤ N.I.A ತನಿಖೆಗೆ ಒತ್ತಾಯಿಸಿ ವಿಎಚ್ ಪಿ ಕಾರ್ಯಕರ್ತರ ಪ್ರತಿಭಟನೆ Read More »

ಕರಾವಳಿ
Scroll to Top