ಕಾಸರಗೋಡು: ಡಿವೈಎಫ್.ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಮಾಹಿತಿ ಕಲೆ ಹಾಕಿದ ತನಿಖಾ ತಂಡ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 02. ಡಿವೈಎಫ್‌.ಐ ಕಾರ್ಯಕರ್ತ ಕಲ್ಲೂರಾವಿ ಅಬ್ದುಲ್‌‌ ರಹಮಾನ್‌ (30)‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕ್ರೈಂ ಬ್ರಾಂಚ್‌ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಇರ್ಷಾದ್‌‌‌ನನ್ನು ಕೃತ್ಯ ನಡೆಸಿದ ಸ್ಥಳಕ್ಕೆ ಕರೆದು ಮಾಹಿತಿ ಕಲೆ ಹಾಕಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಡಿ.23ರಂದು ಈ ಹತ್ಯೆ ನಡೆದಿದ್ದು, ಕಾಞಾಂಗಾಡ್ ಕಲ್ಲೂರಾವಿಯಲ್ಲಿ ತಂಡವೊಂದು ಅಬ್ದುಲ್‌‌‌ ರಹಮಾನ್‌‌ ಅವರನ್ನು ಇರಿದು ಹತ್ಯೆಗೈದಿತ್ತು. ಘಟನೆಗೆ ಸಂಬಂಧಿಸಿದಂತೆ ಇರ್ಷಾದ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಕಾಸರಗೋಡು: ಡಿವೈಎಫ್.ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಮಾಹಿತಿ ಕಲೆ ಹಾಕಿದ ತನಿಖಾ ತಂಡ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ಸುರಿದು ಪ್ರತಿಭಟನೆ ಮಾಡಿದ ರೈತರು

(ನ್ಯೂಸ್ ಕಡಬ) newskadaba.com ಚಂಡೀಗಢ, ಜ. 02. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪೊಂದು ಪಂಜಾಬ್‌ ನ ಹೊಶಿಯಾರ್‌ ಪುರದಲ್ಲಿರುವ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ತಂದು ಸುರಿದಿದ್ದಾರೆ ಎಂದು ಆಪಾದಿಸಲಾಗಿದೆ.   ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, “ಪ್ರತಿಭಟನಾ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡಲು ಅವಕಾಶವಿಲ್ಲ” ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ಸುರಿದು ಪ್ರತಿಭಟನೆ ಮಾಡಿದ ರೈತರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಸ್ಕೂಟರ್- ಲಾರಿ ನಡುವೆ ಡಿಕ್ಕಿ ➤ ಸ್ಕೂಟರ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಜ. 02. ಸ್ಕೂಟರ್‌‌ ಹಾಗೂ ಮೀನಿನ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂ ಎಂಬಲ್ಲಿ ನಡೆದಿದೆ.   ಮೃತಪಟ್ಟವರನ್ನು ಹೂಡೆ ನಿವಾಸಿ ಐಸಾಕ್‌‌ ಎಂದು ಗುರುತಿಸಲಾಗಿದೆ. ಹೂಡೆ ಕಡೆಯಿಂದ ಮಲ್ಪೆ ಕಡೆಗೆ ಬರುತ್ತಿದ್ದ ಸ್ಕೂಟರಿಗೆ ಎದುರಿನಿಂದ ಬಂದ ಮೀನಿನ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡ ಸ್ಕೂಟರ್‌ ಸವಾರ ಐಸಾಕ್‌ ಎಂಬವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಉಡುಪಿ: ಸ್ಕೂಟರ್- ಲಾರಿ ನಡುವೆ ಡಿಕ್ಕಿ ➤ ಸ್ಕೂಟರ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದು ಯಾಕೆ ಗೊತ್ತೇ..⁉️ ➤ ರಾಜೀನಾಮೆಯ ಹಿಂದೆ ಕೆಲಸ ಮಾಡಿದ ಕಾಣದ ಕೈ ಯಾವುದು‌..⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.02. ದಕ್ಷ ಪೊಲೀಸ್ ಅಧಿಕಾರಿಯೆಂಬ ಖ್ಯಾತಿಯನ್ನು ಪಡೆದಿದ್ದ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾಗಿರುವುದಕ್ಕೆ ಕೊನೆಗೂ ಕಾರಣ ಬಹಿರಂಗಗೊಂಡಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ವೇಳೆ ರಾಜೀನಾಮೆ ಕೊಡುವಂತೆ ಪ್ರೇರೇಪಿಸಿದ್ದು ಯಾರು ಎಂಬ ಕುತೂಹಲಕ್ಕೆ ಸ್ವತಃ ಅಣ್ಣಾಮಲೈ ಅವರೇ ತೆರೆ ಎಳೆದಿದ್ದಾರೆ. ಕಾಫಿ ಡೇ ಸಿದ್ದಾರ್ಥ್ ನನ್ನನ್ನು ರಾಜೀನಾಮೆ ಕೊಡಿಸಿದ್ರು ಅಂತ ಖುದ್ದು ಅಣ್ಣಾಮಲೈ ಅವರು ಹೇಳಿದ್ದಾರೆ. ಸುಮಾರು 10 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಎಸ್ಪಿಯಾದ

ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದು ಯಾಕೆ ಗೊತ್ತೇ..⁉️ ➤ ರಾಜೀನಾಮೆಯ ಹಿಂದೆ ಕೆಲಸ ಮಾಡಿದ ಕಾಣದ ಕೈ ಯಾವುದು‌..⁉️ Read More »

ಕರ್ನಾಟಕ

ಕುಮಾರಧಾರ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಪುನರಾರಂಭ

(ನ್ಯೂಸ್ ಕಡಬ) newskadaba.com ಕಾಣಿಯೂರು, ಜ. 01. ಕುಡಿಯುವ ನೀರಿನ ಯೋಜನೆಗಾಗಿ ಕಡಬ ತಾಲೂಕಿನ ಶಾಂತಿಮೊಗರಿನ ಕುಮಾರಾಧಾರ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಕಾಮಗಾರಿಯು ಪುನರಾರಂಭಗೊಂಡಿದೆ. ತಾಲೂಕಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಆಲಂಕಾರು, ಪೆರಾಬೆ ಹಾಗೂ ಕುಂತೂರು ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ಬರುವ ಮೇ ತಿಂಗಳೊಳಗೆ ಕಾಮಗಾರಿಯು ಪೂರ್ಣವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕುಮಾರಧಾರ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಪುನರಾರಂಭ Read More »

ಕರಾವಳಿ, ಕರ್ನಾಟಕ

ಜ. 7ರಂದು ಬಂಟ್ವಾಳ ತಾ. ಪಂ. ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಬಂಟ್ವಾಳ ತಾಲೂಕು ಪಂಚಾಯತ್‍ ನ ಸಾಮಾನ್ಯ ಸಭೆಯು ಜನವರಿ 7 ರಂದು ಬೆಳಿಗ್ಗೆ 10.30ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್‍ ನ  ಎಸ್.ಜಿ.ಎಸ್.ಎಸ್.ವೈ. ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜ. 7ರಂದು ಬಂಟ್ವಾಳ ತಾ. ಪಂ. ಸಾಮಾನ್ಯ ಸಭೆ Read More »

ಕರಾವಳಿ, ಕರ್ನಾಟಕ

ಈಜುಕೊಳಗಳನ್ನು ತೆರೆಯದಂತೆ ಹಾಗೂ ಗ್ರಾಹಕರು ಅಥವಾ ಸಾರ್ವಜನಿಕರು ಬಳಸದಂತೆ ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಜಿಲ್ಲೆಯಲ್ಲಿ  ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ 9 ರಂತೆ ಕಂಟೈನ್ ಮೆಂಟ್ ವಲಯದ ಹೊರಗೆ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶಕ್ಕಾಗಿ ಮಾತ್ರವೇ ಈಜುಕೊಳಗಳನ್ನು ತೆರೆಯಲು ಹಾಗೂ ಬಳಕೆ ಮಾಡಲು ಅವಕಾಶವಿರುತ್ತದೆ. ಇದನ್ನು  ಹೊರತುಪಡಿಸಿ ಯಾವುದೇ ಹೋಟೆಲ್/ ಲಾಡ್ಜ್/ ರೆಸಾರ್ಟ್ ಗಳಲ್ಲಿ ಈಜುಕೊಳಗಳನ್ನು ತೆರೆಯಲು ಹಾಗೂ ಗ್ರಾಹಕರಿಗೆ ಅಥವಾ ಸಾರ್ವಜನಿಕರಿಗೆ ಬಳಸಲು ಅವಕಾಶವಿರುವುದಿಲ್ಲ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಯಾವುದೇ

ಈಜುಕೊಳಗಳನ್ನು ತೆರೆಯದಂತೆ ಹಾಗೂ ಗ್ರಾಹಕರು ಅಥವಾ ಸಾರ್ವಜನಿಕರು ಬಳಸದಂತೆ ಜಿಲ್ಲಾಧಿಕಾರಿ ಆದೇಶ Read More »

ಕರಾವಳಿ

ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ➤ ಟೋಲ್ ಫ್ರೀ ಸಂಖ್ಯೆ 14499 ಕರೆ ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಕರ್ನಾಟಕದಲ್ಲಿ ಆಪ್ತ-ಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ ಉಚಿತ “ಟೆಲಿ-ಕೌನ್ಸ್‍  ಲಿಂಗ್” ಸೌಲಭ್ಯವನ್ನು ನೀಡಲು ಟೋಲ್ ಫ್ರೀ ಸಂಖ್ಯೆ 14499 ಸ್ಥಾಪಿಸಲಾಗಿದೆ. ಆಪ್ತ ಸಮಾಲೋಚನೆ ಬಯಸುವ ರಾಜ್ಯದ ಎಲ್ಲಾ ಮಕ್ಕಳು ಹಾಗೂ ಪೋಷಕರು ಈ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ. ಸಂ: 0824-2440004 ಅಥವಾ E-mail:depu.mnglr@gmail.com ನ್ನು ವೀಕ್ಷಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ➤ ಟೋಲ್ ಫ್ರೀ ಸಂಖ್ಯೆ 14499 ಕರೆ ಮಾಡಿ Read More »

ಕರಾವಳಿ

ಮಂಗಳೂರು: 2021ರ ಬ್ಯಾರಿ ಕ್ಯಾಲೆಂಡರ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಿಡುಗಡೆಗೊಳಿಸಿದ ನೂತನ ಬ್ಯಾರಿ ಲಿಪಿ ಹಾಗೂ ಬ್ಯಾರಿ ಸಂಖ್ಯೆಯನ್ನು ಬಳಸಿಕೊಂಡು 2021ರ ಹೊಸ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್) ಗುರುವಾರ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಂತರ ಅವರು ಮಾತನಾಡಿ, ಪ್ರತಿ ಬ್ಯಾರಿ ಭಾಷಿಕರು ಸುಲಭವಾಗಿ ಮತ್ತು ಸರಳವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ನೆನಪಿನಲ್ಲಿಟ್ಟುಕೊಳ್ಳಲು  ಈ ಕ್ಯಾಲೆಂಡರ್ ಸಹಕಾರಿಯಾಗಿದೆ. ನೂತನ

ಮಂಗಳೂರು: 2021ರ ಬ್ಯಾರಿ ಕ್ಯಾಲೆಂಡರ್ ಬಿಡುಗಡೆ Read More »

ಕರಾವಳಿ, ಕರ್ನಾಟಕ

ಅಡ್ವಾನ್ಸ್ಡ್ ಸಿದ್ಧ ಉಡುಪು ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಪ್ರಸ್ತುತ ಸಾಲಿಗೆ ಅಡ್ವಾನ್ಸ್ಡ್ ಎಸ್.ಎಂ.ಒ (ಸಿದ್ಧ ಉಡುಪು ತಯಾರಿಕಾ ತರಬೇತಿ) ಪಡೆದು ಉದ್ಯೋಗವಂತರಾಗಲು ದಕ್ಷಿಣ ಕನ್ನಡ ಜಿಲ್ಲೆಯ ಸಾಮಾನ್ಯ/ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ಅರ್ಹ ಪುರುಷ/ ಮಹಿಳಾ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಯೆಯ್ಯಾಡಿ, ಮಂಗಳೂರು  ದೂರವಾಣಿ ಸಂಖ್ಯೆ: 0824-2225056/ 9481628584 ಹಾಗೂ ಹತ್ತಿರದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸಂಪರ್ಕಿಸಲು

ಅಡ್ವಾನ್ಸ್ಡ್ ಸಿದ್ಧ ಉಡುಪು ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ
Scroll to Top