ಹಿಂದೂ ದೇವತೆಗಳ ಅವಮಾನದ ಆರೋಪ ➤ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.03. ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ, ಮಾಜಿ ಸಚಿವ ಮುರಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾರಂಭವೊಂದರಲ್ಲಿ ಶಾಸಕ ಮುರುಗೇಶ್ ನಿರಾಣಿ ಅವರು ಹಿಂದೂ ದೇವತೆಗಳನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ರಾಮಾಯಣದ ಕಥೆಗಳನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಹಿಂದ ಸಂಘಟನೆಯ ಮುಖಂಡರು ನೀಡಿದ ದೂರಿನಂತೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ […]

ಹಿಂದೂ ದೇವತೆಗಳ ಅವಮಾನದ ಆರೋಪ ➤ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಕೇಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೃಷಿ ಉತ್ಪನ್ನ ಮಾರುಕಟ್ಟೆ – ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಕಲ್ಲಪುತ್ತಿಗೆ, ರುಕ್ಮಯ ನಾಯ್ಕ ಎಡಪದವು, ವೇದಾವತಿ ಗಟ್ಟಿ ಕೊಣಾಜೆ ಉಳ್ಳಾಲ, ಪ್ರವೀಣ್ ಕುಮಾರ್ ಎಸ್. ಶಿರ್ತಾಡಿ ಹಾಗೂ ಚಂದ್ರಹಾಸ ಸನಿಲ್ ಅವರನ್ನು ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅಭಿನಂದಿಸಿದರು.        ಸಮಿತಿಯ ಉಪಾಧ್ಯಕ್ಷೆ ರಜನಿ

ಕೃಷಿ ಉತ್ಪನ್ನ ಮಾರುಕಟ್ಟೆ – ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಇಂದಿನಿಂದ ತನ್ನೆಲ್ಲಾ ಗಡಿಗಳನ್ನು ತೆರೆದು ಸೇವೆಯನ್ನು ಆರಂಭಿಸಲಿರುವ ಸೌದಿ ಅರೇಬಿಯಾ

(ನ್ಯೂಸ್ ಕಡಬ) newskadaba.com ಜಿದ್ದಾ, ಜ. 03.  ಹೊಸ ಪ್ರಬೇಧದ ಕೊರೋನಾ ವೈರಸ್ ಹರಡಿದ್ದರಿಂದ ಬಂದ್ ಮಾಡಲಾಗಿದ್ದ ಎಲ್ಲಾ ಗಡಿಗಳನ್ನು ಸೌದಿ ಅರೇಬಿಯಾವು ಇಂದು ತೆರೆಯಲಿದ್ದು, ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಹೊರ ದೇಶಗಳಿಂದ ವಿಮಾನಗಳು ಆಗಮಿಸಬಹುದು ಎಂದು ಪ್ರಕಟಣೆ ತಿಳಿಸಿದೆ.   ಜೊತೆಗೆ ಹೊಸ ರೂಪಾಂತರಿತ ವೈರಸ್ ಹರಡಿದ ದೇಶಗಳಿಂದ ಬರುವ ಜನರು ಸೌದಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.

ಇಂದಿನಿಂದ ತನ್ನೆಲ್ಲಾ ಗಡಿಗಳನ್ನು ತೆರೆದು ಸೇವೆಯನ್ನು ಆರಂಭಿಸಲಿರುವ ಸೌದಿ ಅರೇಬಿಯಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜ.8 ರಿಂದ 29 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ➤ ಕಡಬದಲ್ಲಿ ಯಾವಾಗ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸ್ತುತ ಸಾಲಿನ  ಜನವರಿ ತಿಂಗಳಲ್ಲಿ ನಡೆಯುವ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರಗಳ ವಿವರ  ಇಂತಿವೆ: ಜನವರಿ 8 ರಂದು ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಜನವರಿ 12 ರಂದು ತಾಲೂಕು ಆಸ್ಪತ್ರೆ ಬಂಟ್ವಾಳ, 15 ರಂದು ಸಾರ್ವಜನಿಕ ಆಸ್ಪತ್ರೆ ಪುತ್ತೂರು, 22 ರಂದು ಸಾರ್ವಜನಿಕ ಆಸ್ಪತ್ರೆ ಸುಳ್ಯ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, 25 ರಂದು ನಗರ

ಜ.8 ರಿಂದ 29 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ➤ ಕಡಬದಲ್ಲಿ ಯಾವಾಗ ಗೊತ್ತೇ..? Read More »

ಕರಾವಳಿ, ಕರ್ನಾಟಕ

ಜನಸಾಮಾನ್ಯರಿಗೆ ಮತ್ತೆ ಹೊರೆಯಾಗಲಿದೆ ವಿದ್ಯುತ್ ⁉️ ➤ ದರ ಹೆಚ್ಚಿಸುವಂತೆ ಮೆಸ್ಕಾಂನಿಂದ ಪ್ರಸ್ತಾವನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯು ವಿದ್ಯುತ್ cವನ್ನು ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದೆ. ಪ್ರಸ್ತುತ ಇರುವ ದರಗಳಿಂದ ಮೆಸ್ಕಾಂನ ಅಗತ್ಯತೆಗಳನ್ನು ಪೂರೈಸಲು ಅಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ವರ್ಗಗಳ ವಿದ್ಯುತ್‌ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಪ್ರತೀ ಯೂನಿಟ್‌ಗೆ ಸರಾಸರಿ 1.67 ರೂ. ವಿದ್ಯುತ್‌ ದರ ಏರಿಕೆ ಮಾಡುವಂತೆ ಮೆಸ್ಕಾಂ

ಜನಸಾಮಾನ್ಯರಿಗೆ ಮತ್ತೆ ಹೊರೆಯಾಗಲಿದೆ ವಿದ್ಯುತ್ ⁉️ ➤ ದರ ಹೆಚ್ಚಿಸುವಂತೆ ಮೆಸ್ಕಾಂನಿಂದ ಪ್ರಸ್ತಾವನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಂತರ್ಜಾತಿ ವಿವಾಹವಾದ ಯುವಕನ ಕೊಲೆ

(ನ್ಯೂಸ್ ಕಡಬ) newskadaba.com ಚಂಡೀಗಢ, ಜ. 03. ಅಂತರ್ ಜಾತಿ ವಿವಾಹವಾದ ಯುವಕನೋರ್ವನನ್ನು, ಉಗ್ರರು ಇರಿದು ಹತ್ಯೆ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ. ಹತ್ಯೆಯಾದವನನ್ನು ನೀರಜ್ ಎಂದು ಗುರುತಿಸಲಾಗಿದೆ. ನೀರಜ್ ಮದುವೆಯಾದ ಹುಡುಗಿಯ ಸಹೋದರರೇ ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳು ಯುವಕನಿಗೆ ಇರಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಂತರ್ಜಾತಿ ವಿವಾಹವಾದ ಯುವಕನ ಕೊಲೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್

(ನ್ಯೂಸ್ ಕಡಬ) newskadaba.com ವಿಟ್ಲ, ಜ. 03. ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ನಡೆದಿದೆ. ಮನೆಯಲ್ಲಿ ಯುವತಿ ಹಾಗೂ ಆಕೆಯ ತಾಯಿ ಇಬ್ಬರೇ ಇದ್ದ ಸಂದರ್ಭದಲ್ಲಿ ಬಶೀರ್ ಅವರ ಮನೆಗೆ ತೆರಳಿ ಅತ್ತೆಯನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿ, ಬಲವಂತದಿಂದ ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಕುರಿತು ಯುವತಿಯು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಬಾವನಿಂದಲೇ ನಾದಿನಿಯ ಅತ್ಯಾಚಾರ…! ➤ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರ್ತವ್ಯ ನಿರತ ಕುಟ್ರುಪ್ಪಾಡಿ ಪಿಡಿಓ ಮೇಲೆ ಹಲ್ಲೆ ಪ್ರಕರಣ ➤ ಸ್ಟೇಟಸ್ ಪ್ರಕರಣದಲ್ಲಿ ಬಂಧಿತನ ಮೇಲೆ ಮತ್ತೊಂದು ಕೇಸ್

(ನ್ಯೂಸ್ ಕಡಬ) newskadaba.com ಕಡಬ, ಜ.03. ಕರ್ತವ್ಯ ನಿರತ ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಐವರ ವಿರುದ್ಧ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಕರ್ತವ್ಯದ ಮೇರೆಗೆ ತೆರಳಿದ್ದ ಸಂದರ್ಭದಲ್ಲಿ ಹೊಸ್ಮಠ ದೇರಾಜೆ ಕ್ರಾಸ್ ಬಳಿಯ ನಿವಾಸಿ ಯಾಕೂಬ್ ಸೇರಿದಂತೆ ಐವರು ಕಾರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್ ಫೋನ್ ಕಸಿದು ದಾಖಲೆಗಳನ್ನು ಡಿಲೀಟ್ ಮಾಡಿದ್ದಾರೆ

ಕರ್ತವ್ಯ ನಿರತ ಕುಟ್ರುಪ್ಪಾಡಿ ಪಿಡಿಓ ಮೇಲೆ ಹಲ್ಲೆ ಪ್ರಕರಣ ➤ ಸ್ಟೇಟಸ್ ಪ್ರಕರಣದಲ್ಲಿ ಬಂಧಿತನ ಮೇಲೆ ಮತ್ತೊಂದು ಕೇಸ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 03. ಕಾಪು ಬೀಚ್ ನಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ನಡೆದಿದೆ. ಬೀಚ್ ಗೆ ತೆರಳಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಇವರನ್ನು ಸ್ಥಳೀಯರು ಸಮುದ್ರಕ್ಕೆ ಇಳಿಯುವುದನ್ನು ವಿರೋಧಿಸಿದರೂ, ನಿರ್ಲಕ್ಷ್ಯ ಮಾಡಿ ಆಟವಾಡಲು ಇಳಿದಿದ್ದರು. ನಂತರ ಈ ತಂಡವು ಏಕಾಏಕಿ ನೀರಿನಲ್ಲಿ ಮುಳುಗಿದ್ದು, ಇದನ್ನು ಕಂಡ ಸ್ಥಳೀಯರಾದ ಪ್ರಶಾಂತ್ ಕರ್ಕೇರ, ಪ್ರದೀಪ್ ಹಾಗೂ ಜೇಕ್ಸನ್ ಎಂಬವರು ಸಮುದ್ರಕ್ಕೆ ಇಳಿದು ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

ಉಡುಪಿ: ಸಮುದ್ರದಲ್ಲಿ ಮುಳುಗಿದ ನಾಲ್ವರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಮಹಿಳೆಗೆ ಬೈಕ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 03. ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗಾಯಾಳು ಮಹಿಳೆಯನ್ನು ಮೊಟ್ಟೆತ್ತಡ್ಕ ನಿವಾಸಿ ಐರಿನ್ ಡಿಸೋಜಾ ಎನ್ನಲಾಗಿದೆ. ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು: ಮಹಿಳೆಗೆ ಬೈಕ್ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top