ಮಂಜೇಶ್ವರ ಶಾಸಕ ಕಮರುದ್ದೀನ್ ಗೆ ಮೂರು ಪ್ರಕರಣಗಳ ಜಾಮೀನು ನೀಡಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಕೊಚ್ಚಿ, ಜ.04. ಹೂಡಿಕೆದಾರರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಶಾಸಕ ಕಮರುದ್ದೀನ್ ಅವರಿಗೆ ಕೇರಳ ಹೈಕೋರ್ಟ್ ಮೂರು ಪ್ರಕರಣಗಳಲ್ಲಿ ಮಾತ್ರ ಜಾಮೀನು ನೀಡಿದೆ. ಶಾಸಕ ಕಮರುದ್ದೀನ್ ವಿರುದ್ದ ಫ್ಯಾಷನ್ ಗೋಲ್ಡ್ ಸಂಸ್ಥೆಯು ಗ್ರಾಹಕರಿಂದ ಹಣ ಪಡೆದು ಚಿನ್ನ ನೀಡಿಲ್ಲ ಎಂಬುವುದಾಗಿ ಆರೋಪಿಸಿತ್ತು. ಇವರ ವಿರುದ್ದ ಈಗಾಗಲೇ 100ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

ಮಂಜೇಶ್ವರ ಶಾಸಕ ಕಮರುದ್ದೀನ್ ಗೆ ಮೂರು ಪ್ರಕರಣಗಳ ಜಾಮೀನು ನೀಡಿದ ಹೈಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 04. ಉದ್ಯಪಿಯೋರ್ವರ ಮೃತದೇಹವು ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಉಮಾಶಂಕರ್ (45) ಎಂದು ಗುರುತಿಸಲಾಗಿದೆ. ಇವರ ಜೊತೆ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಮೃತದೇಹದ ಬಳಿಯಲ್ಲಿ ಇನ್ಸುಲಿನ್ ಹಾಗೂ ಔಷಧಿಗಳ ಬಾಟಲ್ ಹಾಗೂ ಡೆತ್ ನೋಟ್ ಲಭ್ಯವಾಗಿದೆ. ಸಾಲ ಹಿಂತಿರುಗಿಸುವಂತೆ ಸಾಲಗಾರರು ಪೀಡಿಸುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ. ಕಾಣೆಯಾಗಿರುವ ಇವರ ಪತ್ನಿಯ ಹುಡುಕಾಟ ಮುಂದುವರೆದಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಅಪ್ರಾಪ್ತ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ಅಪ್ರಾಪ್ತ ಬಾಲಕನೋರ್ವ ಕಾಣೆಯಾದ ಘಟನೆ ಕರೋಪಾಡಿಯಿಂದ ವರದಿಯಾಗಿದೆ. ಬಾಲಕನನ್ನು ಹನುಮಂತ ಎಂಬವರ ಮಗ ಗಣೇಶ್ (15) ಎಂದು ಗುರುತಿಸಲಾಗಿದೆ. ಕೊರೋನಾ ಕಾರಣದಿಂದ ಶಾಲೆಗೆ ರಜೆ ಇದ್ದ ವೇಳೆ ಆನ್-ಲೈನ್ ಕ್ಲಾಸಿಗೆಂದು ಮೊಬೈಲ್ ತಗೊಂಡು ಪಬ್ ಜೀ ಆಟ ಆಡುತ್ತಿದ್ದುದ್ದನ್ನು ಗಮನಿಸಿದ ತಂದೆಯು ಬುದ್ದಿವಾದ ಹೇಳಿದ್ದರು. ಇದನ್ನು ಲೆಕ್ಕಿಸದೇ ಇದ್ದ ಕಾರಣ ಶಾಲಾ ಶಿಕ್ಷಕರಿಗೆ ವಿಷಯ ತಿಳಿಸಿ ಗಣೇಶನಿಗೆ ಬುದ್ದಿವಾದ ಹೇಳಿದ ಶಿಕ್ಷಕರು ಸೋಮವಾರ ಶಾಲೆಗೆ ಬರುವಂತೆ ಹೇಳಿದ್ದರು. ಮಧ್ಯಾಹ್ನ

ವಿಟ್ಲ: ಅಪ್ರಾಪ್ತ ಬಾಲಕ ನಾಪತ್ತೆ Read More »

ಕರಾವಳಿ, ಕರ್ನಾಟಕ

ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ➤ ಆರೋಪಿ ಬಶೀರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ನಾದಿನಿಯ ಮೇಲೆ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಶೀರ್ ಎಂದು ಗುರುತಿಸಲಾಗಿದೆ. ಈತನ ವಿಚಾರಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಆಕೆಯನ್ನು ಬಾವನೇ ಅತ್ಯಾಚಾರಗೈದಿದ್ದಲ್ಲದೇ ಆಕೆಯ ನಗ್ನ ಫೋಟೊಗಳನ್ನು ಸೆರೆಹಿಡಿದು ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಯ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ➤ ಆರೋಪಿ ಬಶೀರ್ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಜೆಪಿ ಕಾರ್ಯಕರ್ತರ ಪಾಕಿಸ್ತಾನ ಝಿಂದಾಬಾದ್ ಘೋಷಣೆಯನ್ನು ಖಂಡಿಸಿ ಸಿ.ಎಫ್.ಐ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 04. ಉಜಿರೆಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ನಡುವೆ  ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿರುವ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಜ್ಯೋತಿ ವೃತ್ತದ ಬಳಿ  ಪ್ರತಿಭಟಿಸಲಾಯಿತು. ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಅಧ್ಯಕ್ಷ ಹಸನ್ ಸಿರಾಜ್ ಮಾತನಾಡಿ, ಉಜಿರೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಬಿಜೆಪಿ ಕಾರ್ಯಕರ್ತ ಪವನ್ ಧರ್ಮಸ್ಥಳ ಈತನನ್ನು ಶೀಘ್ರವೇ ಬಂಧಿಸಬೇಕೆಂದು

ಬಿಜೆಪಿ ಕಾರ್ಯಕರ್ತರ ಪಾಕಿಸ್ತಾನ ಝಿಂದಾಬಾದ್ ಘೋಷಣೆಯನ್ನು ಖಂಡಿಸಿ ಸಿ.ಎಫ್.ಐ ವತಿಯಿಂದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ತಯಾರಿಸುತ್ತಿದ್ದ ತಂಡ ಸಿಸಿಬಿ ಬಲೆಗೆ ➤ 10 ಆರೋಪಿಗಳು ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 04. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೋಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್.ಸಿ. ಕಾರ್ಡ್ ಗಳನ್ನು ತಯಾರಿಸುತ್ತಿದ್ದ ಖದೀಮರ ಗುಂಪೊಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಕಮಲೇಶ್ ಕುಮಾರ್, ಎಸ್.ಲೋಕೇಶ್, ಸುದರ್ಶನ್, ನಿರ್ಮಲ್ ಕುಮಾರ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಶ್, ತೇಜಸ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾವಿರಾರು ನಕಲಿ ಕಾರ್ಡುಗಳು, ಲ್ಯಾಪ್ ಟಾಪ್ ಮತ್ತು

ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ತಯಾರಿಸುತ್ತಿದ್ದ ತಂಡ ಸಿಸಿಬಿ ಬಲೆಗೆ ➤ 10 ಆರೋಪಿಗಳು ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಠ್ಮಂಡು, ಜ. 04. ಅಕ್ರಮವಾಗಿ ನೇಪಾಳದ ಕರೆನ್ಸಿ ಆರೋಪದಡಿಯಲ್ಲಿ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ (30) ಹಾಗೂ ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದೆ. ಪ್ರತಿನಿತ್ಯದಂತೆ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಇದನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮೈಸೂರು, ಜ. 04.  ಲಂಚ ಪಡೆಯುತ್ತಿದ್ದಾಗ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಮೈಸೂರು ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.   ಜಮೀನು ಸರ್ವೇ ಮಾಡಿಕೊಡಲು 8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಭೂಮಾಪನಾ ಇಲಾಖೆಯ ಸರ್ವೆಯರ್‌ ಹನುಮಂತರಾಯಪ್ಪ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್‌.ಪಿ ಡಾ.ಸುಮ್ ಡಿ ಪನೇಕರ್ ಮಾರ್ಗದರ್ಶನದಂತೆ ಡಿಎಸ್‌.ಪಿ ಎಚ್. ಪರಶುರಾಮಪ್ಪ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ Read More »

ಕರ್ನಾಟಕ

ಹೊಟೇಲ್ ನಲ್ಲಿ ಮರೆತು ಹೋದ ಬ್ಯಾಗನ್ನು ಕೊರಿಯರ್ ಮಾಡಿ ಪ್ರಾಮಾಣಿಕತೆ ➤ ಮರ್ಧಾಳದ ಭಗವತೀ ಹೊಟೇಲ್ ನ ಗೋಪಾಲರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಜ.04. ಉಪಾಹಾರ ಸೇವಿಸಲು ಬಂದಿದ್ದ ಯಾತ್ರಾರ್ಥಿಗಳ ತಂಡವೊಂದು ಬ್ಯಾಗನ್ನು ಹೊಟೇಲಿನಲ್ಲೇ ಮರೆತು ಹೋಗಿರುವುದನ್ನು ಮನಗಂಡ ಹೊಟೇಲ್ ಮಾಲಕ ಬ್ಯಾಗ್ ನ ವಾರಸುದಾರರನ್ನು ಸಂಪರ್ಕಿಸಿ ಬ್ಯಾಗನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ. ಮರ್ಧಾಳದ ಭಗವತೀ ಹೋಟೆಲ್ ಗೆ ಉಡುಪಿಯ ಯಾತ್ರಾರ್ಥಿಗಳ ತಂಡವೊಂದು ಉಪಾಹಾರ ಸೇವಿಸಲೆಂದು ಆಗಮಿಸಿತ್ತು. ಅವರು ಹಿಂತಿರುಗಿದ ಮೇಲೆ ಬ್ಯಾಗೊಂದು ಬಾಕಿಯಾಗಿರುವುದನ್ನು ಗಮನಿಸಿದ ಹೊಟೇಲ್ ಮಾಲಕ ಗೋಪಾಲಕೃಷ್ಣ ಎಂಬವರು ಅದರಲ್ಲಿದ್ದ ವಿಳಾಸವನ್ನು ಪತ್ತೆಹಚ್ಚಿ, ಮೊಬೈಲ್ ಸಂಖ್ಯೆ ಸಂಗ್ರಹಿಸಿ ಬ್ಯಾಗ್ ನ

ಹೊಟೇಲ್ ನಲ್ಲಿ ಮರೆತು ಹೋದ ಬ್ಯಾಗನ್ನು ಕೊರಿಯರ್ ಮಾಡಿ ಪ್ರಾಮಾಣಿಕತೆ ➤ ಮರ್ಧಾಳದ ಭಗವತೀ ಹೊಟೇಲ್ ನ ಗೋಪಾಲರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಜ. 08ರವರೆಗೆ ಕಡಬ ತಾಲೂಕು ಭೂಮಿ ಕೇಂದ್ರದಲ್ಲಿ ಆರ್.ಟಿ.ಸಿ. ವಿತರಣೆ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಜ. 04. ಇಲ್ಲಿನ ತಾಲೂಕು ಕಛೇರಿಯ ಭೂಮಿ ಕೇಂದ್ರದಲ್ಲಿ ಜನವರಿ 8ರ ವರೆಗೆ ಪಹಣಿ (ಆರ್‌ಟಿಸಿ)ಗಳ ಡಿಜಿಟಲ್ ಸಹಿ ಪ್ರಕ್ರಿಯೆ ನಡೆಯಲಿದ್ದು, ಭೂಮಿ ಕೇಂದ್ರದ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಈ ಬಗ್ಗೆ ಸಹಕರಿಸಿ ಆರ್.ಟಿ.ಸಿಗಳನ್ನು ಆನ್‌-ಲೈನ್ ಸೆಂಟರ್‌ಗಳಲ್ಲಿ ಪಡೆದುಕೊಳ್ಳಬಹುದು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 08ರವರೆಗೆ ಕಡಬ ತಾಲೂಕು ಭೂಮಿ ಕೇಂದ್ರದಲ್ಲಿ ಆರ್.ಟಿ.ಸಿ. ವಿತರಣೆ ಸ್ಥಗಿತ Read More »

ಕರಾವಳಿ, ಕರ್ನಾಟಕ
Scroll to Top