ಮಂಗಳೂರು: ಲಾರಿ ಹಾಗೂ ಸಿಟಿ ಬಸ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 17. ಸಿಟಿ ಬಸ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬಸ್‌ ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ಬೆಳ್ಳಂಬೆಳಗ್ಗೆ ಕಂಕನಾಡಿ ಜಂಕ್ಷನ್ ನಲ್ಲಿ ನಡೆದಿದೆ. 15 ನಂಬರಿನ ಬಸ್ ಕಂಕನಾಡಿಯಿಂದ ಮಂಗಳಾದೇವಿ ಕಡೆಗೆ ಹೋಗುತ್ತಿದ್ದು, ಕಂಕನಾಡಿ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗುವಾಗ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದ ಲಾರಿಯು ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಸ್ವಲ್ಪ ಸಮಯ ಸಂಚಾರ ಅಡಚಣೆ ಉಂಟಾಗಿತ್ತು. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ […]

ಮಂಗಳೂರು: ಲಾರಿ ಹಾಗೂ ಸಿಟಿ ಬಸ್ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.17. ಮಂಗಳೂರು – ತಿರುವನಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಢ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯು ಪಾರ್ಸೆಲ್ ವಿಭಾಗದಲ್ಲಾಗಿದ್ದು, ಹೊಗೆಯನ್ನು ಗಮನಿಸಿದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಹತ್ತಿಕೊಂಡ ಭಾಗವನ್ನು ಬೇರ್ಪಡಿಸಲು ಸಾಧ್ಯವಾದುದರಿಂದ ಇತರ ಕಡೆಗಳಿಗೆ ಬೆಂಕಿ ಹರಡದಂತೆ ತಡೆಗಟ್ಟಲಾಯಿತು.

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೆಇಬಿ ನೌಕರನ ಗುಂಡಿಟ್ಟು ಹತ್ಯೆ ➤ ಸ್ಥಳದಲ್ಲೇ ಪಾರ್ಟಿ ಮಾಡಿದ ಹಂತಕರು

(ನ್ಯೂಸ್ ಕಡಬ) newskadaba.com ಹಾಸನ, ಜ. 17. ಕೆಇಬಿ ನೌಕರನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹಾಸನದ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ. ಮೃತರನ್ನು ಸಂತೋಷ್(36) ಎಂದು ಗುರುತಿಸಲಾಗಿದೆ. ಇವರ ಮೃತದೇಹವು ಜಮೀನೊಂದರಲ್ಲಿ ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಊಟದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಕೊಲೆಗೂ ಮೊದಲು ಹಂತಕರು ಈ ಪ್ರದೇಶದಲ್ಲಿ ಪಾರ್ಟಿ ಮಾಡಿರಬಹುದು ಅಥವಾ ಸಂತೋಷ್ ಜೊತೆಗೆ ಹಂತಕರು ಪಾರ್ಟಿ ನಡೆಸಿ ಆ ಬಳಿಕ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ

ಕೆಇಬಿ ನೌಕರನ ಗುಂಡಿಟ್ಟು ಹತ್ಯೆ ➤ ಸ್ಥಳದಲ್ಲೇ ಪಾರ್ಟಿ ಮಾಡಿದ ಹಂತಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಕ್ರಮ ಮದ್ಯ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 17. ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಟೊಯೊಟಾ ಇಟಿಯೋಸ್ ಕಾರಿನಲ್ಲಿದ್ದ 50 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಮೊಡಂಕಾಪಿನ ಸಂದೀಪ್ ಎಂದು ಗುರುತಿಸಲಾಗಿದೆ. ಆರೋಪಿಯ ಬಂಧನದ ಬಳಿಕ ಪೊಲೀಸರು ಆರೋಪಿಗೆ ಸಂಬಂಧಿಸಿದ ಕಟ್ಟಡಕ್ಕೆ ದಾಳಿ ನಡೆಸಿದ್ದು, 107 ಲೀಟರ್ ಮದ್ಯ ಮತ್ತು 34 ಲೀಟರ್ ಬಿಯರ್ ಹಾಗೂ ಆತನಲ್ಲಿದ್ದ ಇಟಿಯೋಸ್ ಕಾರು ಮತ್ತು ಅಶೋಕ್

ಬಂಟ್ವಾಳ: ಅಕ್ರಮ ಮದ್ಯ ಸಾಗಾಟ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.17. ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಶಾ ಅವರು ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಶನಿವಾರದಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು. ಬಳಿಕ ಅವರು ಶಿವಮೊಗ್ಗದ ಭದ್ರಾವತಿ ತಾಲೂಕಿನ ಬುಳ್ಳಾಪುರದ ಕ್ಷಿಪ್ರ ಕಾರ್ಯಾಚರಣೆ ಪಡೆಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ

ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

Breaking News ➤ ವಿವಾದಿತ ಗೋಹತ್ಯಾ ನಿಷೇಧ ನಾಳೆ (ಜ.18)ಯಿಂದ ಜಾರಿ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 17. ವಿವಾದಿಯ ಗೋಹತ್ಯಾ ನಿಷೇಧ ಕಾನೂನು ಜನವರಿ 18 ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಗೋವುಗಳ ಸಂರಕ್ಷಣೆಗೆ ಬೇಕಾಗುವ ಗೋಶಾಲೆ ಹಾಗೂ ಇನ್ನಿತರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಹಂತ ಹಂತವಾಗಿ ಗೋಶಾಲೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಆಗುತ್ತಿರುವುದು

Breaking News ➤ ವಿವಾದಿತ ಗೋಹತ್ಯಾ ನಿಷೇಧ ನಾಳೆ (ಜ.18)ಯಿಂದ ಜಾರಿ…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತನ್ನಿಬ್ಬರು ಮಕ್ಕಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ…!

(ನ್ಯೂಸ್ ಕಡಬ) newskadaba.com ಮುಂಬೈ, ಜ. 16. ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಸ್ವತಃ ತಂದೆಯೇ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬರಳಕಿಗೆ ಬಂದಿದೆ. ತನ್ನ ಅವಳಿ ಮಕ್ಕಳ ಮೇಲೆ ನಾಲ್ಕು ವರ್ಷಗಳಿಂದಲೂ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆದರೆ, ತಮ್ಮ ತಂದೆಯ ಕೃತ್ಯವನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಮಕ್ಕಳು ಆತನ ಕೃತ್ಯಗಳನ್ನು ಸಹಿಸಿಕೊಂಡಿದ್ದರು. ಒಂದು ದಿನ ತಾಯಿಯು ಹೊರಗೆ ಹಾಲ್ ನಲ್ಲಿ ಮಲಗಿದ್ದ ವೇಳೆ ರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಮಗಳು

ತನ್ನಿಬ್ಬರು ಮಕ್ಕಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ…! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಸ್ತೆ ಬದಿ ನಿಂತಿದ್ದ ಬೈಕ್ ಗೆ ಬಸ್ ಢಿಕ್ಕಿ ➤ ಶಿಕ್ಷಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 17. ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ಸಂಭಾಷಣೆಯಲ್ಲಿದ್ದ ವ್ಯಕ್ತಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಿಟ್ಟೆ ಗ್ರಾಮದ ಫಾರೆವರ್ ಎಂಬಲ್ಲಿ ನಡೆದಿದೆ. ಮೃತರನ್ನು ನಿಟ್ಟೆ ಗ್ರಾಮದ ವಸಂತ ದೇವಾಡಿಗ (45) ಎಂದು ಗುರುತಿಸಲಾಗಿದೆ. ಇವರು ಶನಿವಾರದಂದು ನಿಟ್ಟೆ ಗ್ರಾಮದ ಫಾರೆವರ್ ಸಮೀಪ ರಸ್ತೆ ಬದಿ ಬೈಕ್ ನಿಲ್ಲಿಸಿ ಫೋನ್‌ ನಲ್ಲಿ ಮಾತನಾಡುತ್ತಿದ್ದ ವೇಳೆ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆಯ ಎಡ

ರಸ್ತೆ ಬದಿ ನಿಂತಿದ್ದ ಬೈಕ್ ಗೆ ಬಸ್ ಢಿಕ್ಕಿ ➤ ಶಿಕ್ಷಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ನಿಯಂತ್ರಣ ತಪ್ಪಿ ತಡೆಬೇಲಿಗೆ ಢಿಕ್ಕಿ ಹೊಡೆದು ಕಾರು ಜಖಂ

(ನ್ಯೂಸ್ ಕಡಬ) newskadaba.com ಗಾಂಧಿನಗರ, ಜ. 17. ಇಲ್ಲಿನ ಮಸೀದಿಯ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಘಟನೆ ರಾತ್ರಿ 3 ಗಂಟೆಗೆ ನಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಸುಳ್ಯ: ನಿಯಂತ್ರಣ ತಪ್ಪಿ ತಡೆಬೇಲಿಗೆ ಢಿಕ್ಕಿ ಹೊಡೆದು ಕಾರು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅರಂತೋಡು: ಬಿಯರ್ ತುಂಬಿದ್ದ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಅರಂತೋಡು, ಜ. 17. ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಿಯರ್ ತುಂಬಿದ ಲಾರಿಯೊಂದು ಅರಂತೋಡು ಸಮೀಪ ಕೊಡಂಕೇರಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾತ್ರಿ ನಡೆದಿದೆ. ಘಟನೆಯಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ರೂ 45 ಲಕ್ಷ ಮೌಲ್ಯದ ಬಿಯರ್ ಇತ್ತೆಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಅರಂತೋಡು: ಬಿಯರ್ ತುಂಬಿದ್ದ ಲಾರಿ ಪಲ್ಟಿ ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top