ದಿಲ್ಲಿಯಲ್ಲಿ ದಟ್ಟ ಮಂಜು – 118 ವಿಮಾನಗಳ ಹಾರಾಟ ರದ್ದು

(ನ್ಯೂಸ್‌ ಕಡಬ) newskadaba.com,ಡಿ.29:  ಉತ್ತರ ಭಾರತದಾದ್ಯಂತ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ಮಂಜು ಮತ್ತು ಕಡಿಮೆ ಗೋಚರತೆಯ ಮಧ್ಯೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರ ಸೌಲಭ್ಯ ಮಾನದಂಡಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ. ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ 118 ವಿಮಾನಗಳ ಸಂಚಾರ ರದ್ದಾದ ನಂತರ, 16 ವಿಮಾನಗಳ ಸಂಚಾರ ಮಾರ್ಗ ಬದಲಾವಣೆ ಮತ್ತು 130 ಸೇವೆಗಳ ಸಂಚಾರ ವಿಳಂಬವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ 60 ಆಗಮನ ಮತ್ತು 58 […]

ದಿಲ್ಲಿಯಲ್ಲಿ ದಟ್ಟ ಮಂಜು – 118 ವಿಮಾನಗಳ ಹಾರಾಟ ರದ್ದು Read More »

ಕರಾವಳಿ

ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

(ನ್ಯೂಸ್‌ ಕಡಬ) newskadaba.com,ಡಿ.29:  2026ರ ನವೆಂಬರ್‌ನಲ್ಲಿ ನಡೆಯುವ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಶಿ ಹುಲಿಕುಂಟೆಮಠ್‌, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರ್, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ಹೈಕಮಾಂಡ್‌ ನಾಯಕರಿಗೆ ಎಂಎಲ್‌ಸಿ ಪುಟ್ಟಣ್ಣ ಧನ್ಯವಾದ

ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಂಚೆ ಇಲಾಖೆಯ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,ಡಿ.29: ಭಾರತೀಯ ಅಂಚೆ ಇಲಾಖೆ (India Postal Department)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದೆ. ಒಟ್ಟು 30,000 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ  ಭರ್ತಿಗೆ ನೇಮಕಾತಿ ನೋಟಿಫಿಕೇಶನ್‌ ಹೊರಡಿಸಿದೆ. ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಇದೊಂದು ಸುವರ್ಣವಕಾಶ ಇದಾಗಿದೆ. ಗ್ರಾಮೀಣ ಡಾಕ್ ಸೇವಕ್ ಅಡಿಯಲ್ಲಿ ಬರುವ ಬಿಪಿಎಂ (BPM)-ಬ್ರಾಂಚ್ ಪೋಸ್ಟ್ ಮಾಸ್ಟರ್, ಎಬಿಪಿಎಂ (ABPM)-ಅಸಿಸ್ಟೆಂಟ್ ಬ್ರ್ಯಾಂಚ್‌ ಪೋಸ್ಟ್ ಮಾಸ್ಟರ್ ಹಾಗೂ ಪೋಸ್ಟ್ ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10 ಮತ್ತು 12ನೇ

ಅಂಚೆ ಇಲಾಖೆಯ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ, ರಾಷ್ಟ್ರೀಯ ನ್ಯೂಸ್

ದೇಶದಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿ.

(ನ್ಯೂಸ್‌ ಕಡಬ) newskadaba.com,ಡಿ.30 ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೊರಡಿಸಿರುವ ಮಹತ್ವದ ಆದೇಶವೊಂದು ಚಿನ್ನದ ಸಾಲದ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಚಿನ್ನದ ಸಾಲದ ನಿಯಮಗಳು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಬೇರೆ ಬೇರೆಯಾಗಿರುತ್ತಿದ್ದವು. ಆದರೆ, ಈ ಗೊಂದಲಗಳನ್ನು ನಿವಾರಿಸಲು ಮತ್ತು ಗ್ರಾಹಕರ ಹಿತರಕ್ಷಣೆಗೆ ಆರ್‌ಬಿಐ ಒಂದು ಕಠಿಣ ಹೆಜ್ಜೆ ಇಟ್ಟಿದೆ. ಆರ್‌ಬಿಐ ‘ಮಾಸ್ಟರ್ ಡೈರೆಕ್ಷನ್ ಆನ್ ಗೋಲ್ಡ್ ಲೋನ್’ ಎಂಬ ಹೊಸ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳನ್ನು ಜಾರಿಗೆ ತರಲು

ದೇಶದಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳು ಗುರು ಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಯಶಸ್ಸು ಸಾಧ್ಯ : ಅನ್ಸಾರ್ ಬೆಳ್ಳಾರೆ ಜ್ಞಾನದೀಪದಲ್ಲಿ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ

(ನ್ಯೂಸ್‌ ಕಡಬ) newskadaba.com,ಡಿ.29: ಮಕ್ಕಳ ವರ್ತನೆಗಳನ್ನು ಬದಲಾಯಿಸಿ ಉತ್ತಮ ಶಿಕ್ಷಣ ನೀಡುವುದು ಜವಾಬ್ದಾರಿಯುತ ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು ತನ್ನ ಹೆತ್ತವರ ಹಾಗೂ ಗುರುಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೌನ್ಸಿಲಿಂಗ್ ತಜ್ಞ, ಮನೋವಿಶ್ಲೇಷಕ ಅನ್ಸರ್ ಮುಡಿಪು ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತರಬೇತಿ ನೀಡಿದರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಹೊಟ್ಟೆಯ

ವಿದ್ಯಾರ್ಥಿಗಳು ಗುರು ಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಯಶಸ್ಸು ಸಾಧ್ಯ : ಅನ್ಸಾರ್ ಬೆಳ್ಳಾರೆ ಜ್ಞಾನದೀಪದಲ್ಲಿ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ Read More »

ಬ್ರೇಕಿಂಗ್ ನ್ಯೂಸ್

ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ನಿಶ್ಚಿತಾರ್ಥ

(ನ್ಯೂಸ್‌ ಕಡಬ) newskadaba.com,ಡಿ.29: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ, ಏಳು ವರ್ಷಗಳ ದೀರ್ಘಕಾಲದ ಗೆಳತಿ ಅವಿವಾ ಬೇಗ್(Aviva Baig) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರೈಹಾನ್ ತನ್ನ ಗೆಳತಿ ಅವಿವಾ ಬೇಗ್ ಗೆ ಪ್ರಪೋಸ್ ಮಾಡಿದ್ದಾಗಿ ಹೇಳಲಾಗಿದ್ದು, ನಿಶ್ಚಿತಾರ್ಥಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ಸಿಕ್ಕಿದೆ ಎಂದು ವರದಿಯಾಗಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ನಿಶ್ಚಿತಾರ್ಥ Read More »

ಸಿನಿಮಾ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ….!

(ನ್ಯೂಸ್‌ ಕಡಬ) newskadaba.com,ಡಿ.30 ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜನಪ್ರಿಯಗೊಂಡಿರುವುದರೊಂದಿಗೆ, ಆಹಾರ ಧಾನ್ಯ ಸಬ್ಸಿಡಿ, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯದಂತಹ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದೆ. ಆದರೆ, ಅನರ್ಹ ಕಾರ್ಡ್‌ಗಳ ರದ್ದತಿ ಅಭಿಯಾನದಿಂದ ಹೊಸ ಅರ್ಜಿಗಳು ನಿಲ್ಲಿಸಲ್ಪಟ್ಟಿದ್ದವು. ಇದೀಗ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿಶೇಷ ವರ್ಗಗಳಿಗೆ ಮಾತ್ರ ಹೊಸ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳಿಗೆ ಅವಕಾಶ ನೀಡಿದೆ.ಈ ಯೋಜನೆಯ ಮೂಲಕ, ಅಸಂಘಟಿತ ಕಾರ್ಮಿಕರು, ಬುಡಕಟ್ಟು ಸಮುದಾಯಗಳು ಮತ್ತು ತುರ್ತು ವೈದ್ಯಕೀಯ ಅಗತ್ಯರಿಗಳು ಸಬ್ಸಿಡಿ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ….! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟೆಂಪೋ ಡಿಕ್ಕಿ, ಕಾಸರಗೋಡು ಮೂಲದ ಶಿಕ್ಷಕ ಮೃತ್ಯು

(ನ್ಯೂಸ್‌ ಕಡಬ) newskadaba.com,ಡಿ.30  ಕಡಬ-ಡಿಸೆಂಬರ್ ೨೯ ರಂದು ಮಧ್ಯಾಹ್ನ ಅತ್ತೂರಿನಲ್ಲಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಡಬದ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ (೫೩) ಎಂದು ಗುರುತಿಸಲಾಗಿದ್ದು, ಕಾಸರಗೋಡಿನ ಧಾರ್ಮಿಕ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಬಂಧಿಕರೊಬ್ಬರ ಮದರಂಗಿ ಸಮಾರಂಭದಲ್ಲಿ ಭಾಗವಹಿಸಲು ಅವರು ತಮ್ಮ ಕುಟುಂಬದೊಂದಿಗೆ ಬಂದಿದ್ದರು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅತೂರಿನಲ್ಲಿ ಬಸ್ಸಿನಿಂದ ಇಳಿದ ನಂತರ, ಅವರು ತಮ್ಮ ಕುಟುಂಬವನ್ನು ಆಟೋರಿಕ್ಷಾದಲ್ಲಿ ಮುಂದೆ ಕಳುಹಿಸಿ ಸ್ಥಳದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ

ಟೆಂಪೋ ಡಿಕ್ಕಿ, ಕಾಸರಗೋಡು ಮೂಲದ ಶಿಕ್ಷಕ ಮೃತ್ಯು Read More »

ಕರಾವಳಿ

ಸೈನಿಕ್ ಶಾಲೆ ನೇಮಕಾತಿ 2026: ಟೀಚರ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,ಡಿ.30:  ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವ ಪದವೀಧರರು ಅಥವಾ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿದ್ದಾರೆಯೇ? ಪ್ರತಿಷ್ಠಿತ ಸೈನಿಕ್ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಕನಸೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ವಿಜಯಪುರ ಸೈನಿಕ್ ಶಾಲೆಯು ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಕೇವಲ ಶಿಕ್ಷಕರಿಗೆ ಮಾತ್ರವಲ್ಲದೆ, ಇತರೆ ಸೇವಾ ವಿಭಾಗಗಳಿಗೂ ಆದ್ಯತೆ ನೀಡಲಾಗಿದೆ. PGT ಮತ್ತು TGT ಶಿಕ್ಷಕರು,

ಸೈನಿಕ್ ಶಾಲೆ ನೇಮಕಾತಿ 2026: ಟೀಚರ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಿರುತೆರೆ ನಟಿ ನಂದಿನಿ ಸಿಎಂ ದುರಂತ ಅಂತ್ಯ

(ನ್ಯೂಸ್‌ ಕಡಬ) newskadaba.com,ಡಿ.29:  ಕನ್ನಡ ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ನಟಿ ನಂದಿನಿ ಸಿಎಂ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಸಾವಿನ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರ ಅಕಾಲಿಕ ನಿಧನ ಕಿರುತೆರೆ ವಲಯದಲ್ಲಿ ಆಘಾತ ಮೂಡಿಸಿದೆ. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’

ಕಿರುತೆರೆ ನಟಿ ನಂದಿನಿ ಸಿಎಂ ದುರಂತ ಅಂತ್ಯ Read More »

ಸಿನಿಮಾ
Scroll to Top