ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆ | ಮಾಣಿ – ಕಲ್ಲಡ್ಕ ಹೆದ್ದಾರಿ ಬ್ಲಾಕ್ ➤ ಪರಿಸರದಲ್ಲಿ ಬೆಂಕಿ ಉರಿಸದಂತೆ ಸೂಚನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.02. ಚಾಲಕನ ನಿಯಂತ್ರಣ ತಪ್ಪಿದ ಬುಲೆಟ್ ಟ್ಯಾಂಕರೊಂದು ರಸ್ತೆಗಡ್ಡವಾಗಿ ಮಗುಚಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಹಳೀರ ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಸೂರಿಕುಮೇರು ಮಸೀದಿಯ ಸಮೀಪದ ತಿರುವಿನಲ್ಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದೆ. ಘಟನೆಯಿಂದ ಹೆದ್ದಾರಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಎಲ್ಲಾ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ‌. ಅನಿಲ ಸೋರಿಕೆ […]

ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆ | ಮಾಣಿ – ಕಲ್ಲಡ್ಕ ಹೆದ್ದಾರಿ ಬ್ಲಾಕ್ ➤ ಪರಿಸರದಲ್ಲಿ ಬೆಂಕಿ ಉರಿಸದಂತೆ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಾಣಿ: ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿದ್ದ ಬುಲೆಟ್ ಟ್ಯಾಂಕರ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.02. ಚಾಲಕನ ನಿಯಂತ್ರಣ ತಪ್ಪಿದ ಬುಲೆಟ್ ಟ್ಯಾಂಕರೊಂದು ರಸ್ತೆಗಡ್ಡವಾಗಿ ಮಗುಚಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಹಳೀರ ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಸೂರಿಕುಮೇರು ಮಸೀದಿಯ ಸಮೀಪದ ತಿರುವಿನಲ್ಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದೆ. ಘಟನೆಯಿಂದ ಹೆದ್ದಾರಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಮಾಣಿ: ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿದ್ದ ಬುಲೆಟ್ ಟ್ಯಾಂಕರ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ರಸ್ತೆ ಬದಿ ನಿಂತಿದ್ದ ವೇಳೆ ಬಸ್ ಢಿಕ್ಕಿ ಪ್ರಕರಣ ➤ ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಫೆ.01. ರಸ್ತೆ ದಾಟುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೈಕಂಬ ಜಂಕ್ಷನ್‌ ನಲ್ಲಿ ಸೋಮವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ ಟೂರಿಸ್ಟ್ ವಾಹನ ಚಾಲಕ ಭೂತೇಶ್ ಪಿ.ಜೆ.(38) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಧರ್ಮಸ್ಥಳ ಮೂಲಕ ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಾಡಿಗೆಗೆಂದು ತೆರಳುತ್ತಿದ್ದ ಸಂದರ್ಭದಲ್ಲಿ ತನ್ನ ವಾಹನವನ್ನು ಕೈಕಂಬ ಜಂಕ್ಷನ್ ನಲ್ಲಿ ನಿಲ್ಲಿಸಿ ರಸ್ತೆಯ ಇನ್ನೊಂದು ಬದಿಯ

ಕಡಬ: ರಸ್ತೆ ಬದಿ ನಿಂತಿದ್ದ ವೇಳೆ ಬಸ್ ಢಿಕ್ಕಿ ಪ್ರಕರಣ ➤ ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದ ಕೃಪಾ ಟ್ರೇಡರ್ಸ್ ಕಳಾರದ ಅನೋಲ್ಡಾ ಕಾಂಪ್ಲೆಕ್ಸ್ ಗೆ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಜ.30. ಇಲ್ಲಿನ ಬಾಬು ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಕೃಪಾ ಟ್ರೇಡರ್ಸ್ ಸಂಸ್ಥೆಯು ಕಳಾರ ಮಾಂಡವಿ ಮೋಟಾರ್ಸ್ ಬಳಿಯ ಅನಾಓಲ್ಡಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ನೂತನ ಸಂಸ್ಥೆಯಲ್ಲಿ ದೈನಂದಿನ ಬಳಕೆಯ ದಿನಸಿ ಸಾಮಾಗ್ರಿಗಳು, ಫ್ಯಾನ್ಸಿ ವಸ್ತುಗಳು, ಗಿಫ್ಟ್ ಐಟಂಗಳು, ಪ್ಲಾಸ್ಟಿಕ್ ಐಟಂಗಳು, ಚಪ್ಪಲಿ, ಶೂ ಸೇರಿದಂತೆ ವಿವಿಧ ರೀತಿಯ ಫೂಟ್ ವೇರ್ ಗಳು, ಅಂತ್ಯಕ್ರಿಯೆಗೆ ಬೇಕಾಗುವಂತಹ ವಸ್ತುಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬದ ಕೃಪಾ ಟ್ರೇಡರ್ಸ್ ಕಳಾರದ ಅನೋಲ್ಡಾ ಕಾಂಪ್ಲೆಕ್ಸ್ ಗೆ ಸ್ಥಳಾಂತರ Read More »

ಕರಾವಳಿ, ಕರ್ನಾಟಕ

ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ದುಬಾರಿ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 01. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗುತ್ತಲೇ ಇದ್ದು, ಇಂದು ಪ್ರತೀ ಲೀಟರ್ ಪೆಟ್ರೋಲ್ ಗೆ 2.50 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ. ಹಾಗೆಯೇ ಡೀಸೆಲ್ ಬೆಲೆಯೂ ಲೀಟರ್ ಗೆ 4ರೂ. ಏರಿಕೆಯಾಗಿದ್ದು, ಎರಡೂ ತೈಲ ಉತ್ಮನ್ನಗಳ ಮೇಲೆ ಕೃಷಿ ಸೆಸ್ ವಿಧಿಸಲಾಗಿದೆ. ಈ ಮೂಲಕ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಕೇಂದ್ರ ಸರಕಾರ ಸಿದ್ದವಾಗಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ದುಬಾರಿ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಗೃಹರಕ್ಷಕದಳ ಘಟಕದ ನೂತನ ಕಛೇರಿ ಉದ್ಘಾಟನೆ ➤ ನಿಮ್ಮೊಂದಿಗೆ ನಾವಿದ್ದೇವೆ- ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 01. ಮಂಗಳೂರಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕಕ್ಕೆ ಮತ್ತು ಜಿಲ್ಲೆಯ ಉಳಿದ 14 ಘಟಕಗಳಿಗೆ ಜಿಲ್ಲೆಯ ಬೇರೆಲ್ಲೂ ಸ್ವಂತ ಕಛೇರಿಯಿಲ್ಲ. ಘಟಕಗಳಿಗೆ ಬಾಡಿಗೆ ಕಟ್ಟಡದಲ್ಲಿ ಇರಲು ಇಲಾಖೆಯಿಂದ ಅನುದಾನ ಇಲ್ಲ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಜನಪ್ರಿಯ ವೈದ್ಯ ಡಾ|| ಎಂ. ಕೆ. ಪ್ರಸಾದ್ ಅವರು ಮುಂದೆ ಬಂದು ಕಟ್ಟಡಕ್ಕೆ ಠೇವಣಿ ಮತ್ತು ಬಾಡಿಗೆಯನ್ನು ನೀಡುವ ಮೂಲಕ ಹಾರಾಡಿಯಲ್ಲಿ ಜನವರಿ 31 ರಂದು ಜಿಲ್ಲಾ ಗೃಹರಕ್ಷಕದಳ

ಪುತ್ತೂರು: ಗೃಹರಕ್ಷಕದಳ ಘಟಕದ ನೂತನ ಕಛೇರಿ ಉದ್ಘಾಟನೆ ➤ ನಿಮ್ಮೊಂದಿಗೆ ನಾವಿದ್ದೇವೆ- ಸಂಜೀವ ಮಠಂದೂರು Read More »

ಕರಾವಳಿ, ಕರ್ನಾಟಕ

ಮಂಗಳೂರು: ಹೋಟೆಲ್ ನಲ್ಲಿ ಯುವತಿಗೆ ಚೂರಿ ಇರಿತ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 01. ಇಲ್ಲಿನ ಹೋಟೆಲೊಂದರಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೊಕ್ಕಪಟ್ಟಣದ ತ್ರಿಶೂಲ್ ಸಾಲಿಯಾನ್, ಕೋಡಿಕಲ್ ನ ಸಂತೋಷ್ ಪೂಜಾರಿ ಹಾಗೂ ಅಶೋಕ್ ನಗರದ ದ್ಯಾನೇಶ್ ಎಂದು ಗುರುತಿಸಲಾಗಿದೆ. ಇಲ್ಲಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಮತ್ತು ಆರೋಪಿ ತ್ರಿಶೂಲ್ ನಡುವೆ ಫೇಸ್ ಬುಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿದ ನಂತರ ವೈಮನಸ್ಸಿನಿಂದಾಗಿ ಆತನಿಂದ ದೂರವಾಗಲು ನಿರ್ಧರಿಸಿದ್ದಾಳೆ.

ಮಂಗಳೂರು: ಹೋಟೆಲ್ ನಲ್ಲಿ ಯುವತಿಗೆ ಚೂರಿ ಇರಿತ ಪ್ರಕರಣ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಭಜನಾ ಮಂದಿರದಲ್ಲಿ ಮಲ-ಮೂತ್ರ ವಿಸರ್ಜನೆ ಆರೋಪ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 01. ಕೊಣಾಜೆ ಬಳಿಯ ಗೋಪಾಕೃಷ್ಣ ಭಜನಾ ಮಂದಿರದಲ್ಲಿ ಮಲಮೂತ್ರ ಮಾಡಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ತಲಪಾಡಿಯ ಕೊಮರಂಗಳ ನಿವಾಸಿ ಮಹಮ್ಮದ್ ಸುಹೈಲ್(19) ಹಾಗೂ ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್(21) ಎಂದು ಗುರುತಿಸಲಾಗಿದೆ. ಪೋಲಿಸರು ವಿವಿಧ ಕಡೆಯ ಸಿಸಿಟಿವಿ ಫೂಟೇಜ್ ಮೂಲಕ ಇವರನ್ನು ಬೆನ್ನತ್ತಿ ಹೋದ ಸಂದರ್ಭ ಸಿಕ್ಕಿಬಿದ್ದಿದ್ದಾರೆ. ಭಜನಾ ಮಂದಿರಕ್ಕೆ ಕಾಣಿಕೆ ಹುಂಡಿಯಿಂದ ಹಣ ಕಳ್ಳತನಕ್ಕೆಂದು ನುಗ್ಗಿದ್ದು, ಅಲ್ಲಿ ಯಾವುದೇ

ಮಂಗಳೂರು: ಭಜನಾ ಮಂದಿರದಲ್ಲಿ ಮಲ-ಮೂತ್ರ ವಿಸರ್ಜನೆ ಆರೋಪ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 01. ಕೊರೋನಾದಿಂದಾಗಿ ಕಂಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತುವ ಸಲುವಾಗಿ 2021 ರ ಬಜೆಟ್ ಇಂದು ಮಂಡಿಸಲಾಗಿದ್ದು, ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ, ಆದಾಯ ತೆರಿಗೆ ಯಥಾ ಸ್ಥಿತಿಯಲ್ಲೇ ಮುಂದುವರೆಯಲಿದೆ. ಇದೇ ವೇಳೆ 75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು, ಪಿಂಚಣಿಯಿಂದ ಬರುವ ಆದಾಯ, ಠೇವಣಿ ಮೇಲಿನ ಬಡ್ಡಿಗೆ ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಸರಪಾಡಿ ಕುಡಿಯುವ ನೀರಿನ ಯೋಜನೆ ವೀಕ್ಷಣೆ ➤ ನೆರೆದಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 01. ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವೀಕ್ಷಣೆಗೆ ಸಂಬಂಧಿಸಿಂತೆ ಬಿಜೆಪಿ- ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಸಮರ ನಡೆದ ಘಟನೆ ವರದಿಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜ. 31ರಂದು ರಾಜ್ಯ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದ್ದಾರೆ. ಇದಕ್ಕೆ ಮುಂಚಿತವಾಗಿ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ನೇತೃತ್ವದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು‌ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಸರಪಾಡಿ ಕುಡಿಯುವ ನೀರಿನ ಯೋಜನೆ ವೀಕ್ಷಣೆ ➤ ನೆರೆದಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ Read More »

ಕರಾವಳಿ, ಕರ್ನಾಟಕ
Scroll to Top