ಫೆ. 21ರಿಂದ ಬಿಗ್ ಬಾಸ್ 8ನೇ ಆವೃತ್ತಿ ಆರಂಭ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 02. ಖ್ಯಾತ ಕನ್ನಡ ನಟ ಕಿಚ್ಚ ಸುದೀಪ್ ನಿರೂಪಣೆಯ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫೆಬ್ರವರಿ 21ರಿಂದ ಪ್ರಾರಂಭವಾಗಲಿದೆ. ಇದೀಗ ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್, ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಫೆ. 21ಕ್ಕೆ ಆರಂಭಿಸಲಿದ್ದು, ರಾತ್ರಿ 9ಗಂಟೆಯಿಂದ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಮೊದಲ ಸೀಸನ್ ನಿಂದಲೇ ನಿರೂಪಕರಾಗಿರುವ ಸುದೀಪ್ ಈ […]

ಫೆ. 21ರಿಂದ ಬಿಗ್ ಬಾಸ್ 8ನೇ ಆವೃತ್ತಿ ಆರಂಭ…! Read More »

ಕರ್ನಾಟಕ

ಬಿಳಿನೆಲೆ: ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟನ ಎಂಬಲ್ಲಿ ವರದಿಯಾಗಿದೆ. ಕಾಣೆಯಾದವರನ್ನು ಚೆಮ್ಮಡ್ಕ್ ಮನೆಯ ನಿವಾಸಿ ಚೆನ್ನಪ್ಪ(75) ಎಂದು ಗುರುತಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಳಿನೆಲೆ: ವ್ಯಕ್ತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 113 ರ ನೆಟ್ಟಣದಲ್ಲಿ ಮಸೀದಿ ಎದುರುಡೆ ಇಂದು ಬೆಳಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಬರುತ್ತಿದ್ದ ಕಡಬದ ಕೆಂಚಪಟ್ರೆ ನಿವಾಸಿ ಸುದರ್ಶನ್ ಬೈಪಡಿತ್ತಾಯ ಎಂಬವರ ಬೈಕಿಗೆ ಹಿಂದಿನಿಂದ ಅತೀ ವೇಗದಲ್ಲಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದಿದ್ದು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸುದರ್ಶನ್ ಬೈಪಡಿತ್ತಾಯ ಅವರ ಕೈಗೆ ತೀವ್ರ

ಸುಬ್ರಹ್ಮಣ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಂತ್ರಸ್ಥೆ ನೀಡುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ➤ ರೋಹಿತ್ ಸಿ.ಜಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಪೋಕ್ಸೋ ಸಂತ್ರಸ್ಥೆಯ ಹೇಳಿಕೆ ಪಡೆಯುವಾಗ ಮಹಿಳಾ ಪೋಲಿಸ್ ಅಧಿಕಾರಿಗಳು ಮರು ಪ್ರಶ್ನೆಯನ್ನು ಕೇಳಬಾರದು ಸಂತ್ರಸ್ಥೆ ನೀಡುತ್ತಿರುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ಎಂದು ಪೋಲಿಸ್ ತರಬೇತಿದಾರರಾದ ರೋಹಿತ್ ಸಿ.ಜಿ,  ಹೇಳಿದರು. ಅವರು ಜನವರಿ 30 ರಂದು ಜಿಲ್ಲಾಧಿಕಾರಿ ಕಛೇರಿಯ 2ನೇ ಮಹಡಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಕಾಯಿದೆಗಳಲ್ಲಿ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಜಿಲ್ಲಾ ಮಟ್ಟದ ತರಬೇತಿಯನ್ನು  ಉದ್ಘಾಟಿಸಿ ಮಾತನಾಡಿದರು.   ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ

ಸಂತ್ರಸ್ಥೆ ನೀಡುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ➤ ರೋಹಿತ್ ಸಿ.ಜಿ Read More »

ಕರಾವಳಿ, ಕರ್ನಾಟಕ

ಫೆ. 06 ರಂದು ಇಂಟರ್ನೆಟ್ ನಿಷೇಧ ವಿರೋಧಿಸಿ ರಸ್ತೆ ಬಂದ್ ಗೆ ರೈತ ಸಂಘಟನೆ ಕರೆ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 02. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಯ ವಿರುದ್ದ ರೈತರು ಪ್ರತಿಭಟನೆಯಲ್ಲಿ ನಿರತರಾಗಿರುವ ಸ್ಥಳೀಯ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಹಾಗೂ ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆಗಳು, ದೇಶಾದ್ಯಂತ ರಸ್ತೆ ಬಂದ್ ಘೋಷಿಸಿವೆ. ಈ ಕುರಿತು ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರುವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ತನಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್

ಫೆ. 06 ರಂದು ಇಂಟರ್ನೆಟ್ ನಿಷೇಧ ವಿರೋಧಿಸಿ ರಸ್ತೆ ಬಂದ್ ಗೆ ರೈತ ಸಂಘಟನೆ ಕರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಎಸಿಬಿ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 02. ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರು, ಮಂಗಳೂರು ಸೇರಿದಂತೆ ಏಳು ಅಧಿಕಾರಿಗಳ ಮನೆ ಹಾಗೂ ಕಛೇರಿ ಮೇಲೆ ದಾಳಿ ನಡೆಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್, ಬೆಂಗಳೂರಿನ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಗರಗ, ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ್ ಕಲ್ಲೇಶ್, ಲೋಕೋಪಯೋಗಿ ಇಲಾಖೆಯ

ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಎಸಿಬಿ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ ➤ ವಶಕ್ಕೆ ಪಡೆದ 4 ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ತೀರ್ಥಹಳ್ಳಿ, ಫೆ. 02. ಕೋಳಿ ಅಂಕದ ಮೇಲೆ ದಾಳಿ ನಡೆಸಿದ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡುವಾಗ ಬೈಕ್ ಗಳು ದಾರಿ ಮಧ್ಯೆಯೇ ಸುಟ್ಟು ಭಸ್ಮವಾದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಬಳಿ ನಡೆದಿದೆ. ಕೋಣಂದೂರಿನ ಕಾಡು ಮಾರ್ಗಗಗಳಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ವಾಹನಗಳನ್ನು ಬಿಟ್ಟು ಸ್ಥಳದಲ್ಲಿದ್ದವರೆಲ್ಲಾ ಪರಾರಿಯಾಗಿದ್ದರು. ಘಟನಾ ಸ್ಥಳದಲ್ಲಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿದ ಪೊಲೀಸರು, ಬೈಕ್

ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ ➤ ವಶಕ್ಕೆ ಪಡೆದ 4 ದ್ವಿಚಕ್ರ ವಾಹನಗಳು ಬೆಂಕಿಗಾಹುತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕಲಾವಿದ ನಾರಾಯಣ ಗಾಣಿಗ ವಿಧಿವಶ

(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ. 02. ಹಿರಿಯ ಯಕ್ಷಗಾನದ ಸ್ತ್ರೀವೇಷಧಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ನಾರಾಯಣ ಗಾಣಿಗ ಎಂಬವರು ಸೋಮವಾರದಂದು ನಿಧನರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದವರಾಗಿದ್ದು, ಸುಮಾರು 28 ವರ್ಷಗಳ ಕಾಲ ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇನ್ನು ಚಿತ್ರಾಂಗದೆ, ದ್ರೌಪದಿ, ಶಶಿಪ್ರಭೆ, ಮಂಡೋದರಿ, ಮೀನಾಕ್ಷಿ, ತಾರೆ ಮುಂತಾದ ಪಾತ್ರಗಳಲ್ಲಿ ಮಿಂಚಿರುವ ಇವರಿಗೆ 2008ನೇ ಸಾಲಿನಲ್ಲಿ ಯಕ್ಷಗಾನ ಅಕಾಡೆಮಿ ಪುರಸ್ಕಾರ, 2013ರಲ್ಲಿ ಮಕ್ಕಳ ಮೇಳದ ಉಡುಪಿ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕಲಾವಿದ ನಾರಾಯಣ ಗಾಣಿಗ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೂರಿಕುಮೇರು: ಟ್ಯಾಂಕರ್ ಪಲ್ಟಿ ➤ 10 ಗಂಟೆಗಳ ಬಳಿಕ ವಾಹನ ಸಂಚಾರ ಮುಕ್ತ

(ನ್ಯೂಸ್ ಕಡಬ) newskadaba.com ಸೂರಿಕುಮೇರು, ಫೆ. 02. ಅನಿಲ ಟ್ಯಾಂಕರೊಂದು ಪಲ್ಟಿಯಾಗಿ ಸಂಚರಾ ಅಸ್ತವ್ಯಸ್ತಗೊಂಡ ಘಟನೆ ಮಂಗಳೂರು- ಬೆಂಗಳೂರು ರಾ.ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ನಡೆದಿದ್ದು, ಇದೀಗ ಸಂಚಾರ ಮುಕ್ತಗೊಳಿಸಲಾಗಿದೆ. ಬೆಳಗ್ಗಿನಿಂದಲೇ ವಿಟ್ಲ, ಅನಂತಾಡಿ, ಕಲ್ಲಡ್ಕ ಮೂಲಕ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೀಗ 10 ಗಂಟೆಯ ಬಳಿಕ ಕಾರ್ಯಾಚರಣೆ ಮುಗಿದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸೂರಿಕುಮೇರು: ಟ್ಯಾಂಕರ್ ಪಲ್ಟಿ ➤ 10 ಗಂಟೆಗಳ ಬಳಿಕ ವಾಹನ ಸಂಚಾರ ಮುಕ್ತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ರಾಜ್ಯದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲ್ಲ..!

(ನ್ಯೂಸ್ ಕಡಬ) newskadaba.com ಗುಜರಾತ್, ಫೆ. 02. ಬಿಜೆಪಿ ಘಟಕ ಸ್ಥಳೀಯ ಹಾಗೂ ನಾಗರಿಕ ಚುನಾವಣೆಯಲ್ಲಿ ಪಕ್ಷದಿಂದ ನೀಡಲಾಗುವ ಟಿಕೆಟ್ ಪಡೆಯಬೇಕೆಂದರೆ ಕೆಲ ಮಾನದಂಡಗಳನ್ನ ವಿಧಿಸಿದ್ದು, ಇದರನ್ವಯ 60 ವರ್ಷಕ್ಕಿಂತ ಮೇಲ್ಪಟ್ಟವರು, ಮೂರು ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು ಹಾಗೂ ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ವತಃ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ. ಮುಂಬರುವ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂಬಂಧ ನಡೆಸಲಾದ ಸಭೆಯಲ್ಲಿ ಬಿಜೆಪಿ ಮುಖಂಡರು

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ರಾಜ್ಯದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲ್ಲ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top