ಶಾಸಕಿ ಭಾಗೀರಥಿ ಮುರುಳ್ಯರಿಂದ ಸುಳ್ಯದಲ್ಲಿ ಅಹವಾಲು ಸ್ವೀಕಾರ

(ನ್ಯೂಸ್‌ ಕಡಬ) newskadaba.com ಫೆ.19 ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ತಾಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅರಂತೋಡು ಗ್ರಾಮದ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿ, ಅಡ್ತಲೆ ಪ್ರದೇಶದಲ್ಲಿ ನಿರಂತರವಾಗಿ ಆಗುತ್ತಿರುವ ಆನೆ ಹಾವಳಿಯಿಂದ ಅಡ್ತಲೆ ಭಾಗದಲ್ಲಿ ಕೃಷಿಕರು, ಗ್ರಾಮಸ್ಥರು ಬದುಕು ನಡೆಸಲು ಆತಂಕಪಡುವಂತಾಗಿದೆ. ಸಂಜೆಯಾಗುತ್ತಲೆ ಕಾಡಾನೆಗಳು ರಸ್ತೆಗೆ ಇಳಿದು, ಜನವಸತಿ ಪ್ರದೇಶಕ್ಕೆ ಬರುತ್ತಿವೆ, ಇತ್ತೀಚೆಗೆ ನಾವು ಸಮಾಲೋಚನಾ ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ […]

ಶಾಸಕಿ ಭಾಗೀರಥಿ ಮುರುಳ್ಯರಿಂದ ಸುಳ್ಯದಲ್ಲಿ ಅಹವಾಲು ಸ್ವೀಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟೆಕ್ಕಿ ಮಾಜಿ ಹೆಂಡತಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ

(ನ್ಯೂಸ್‌ ಕಡಬ) newskadaba.com ಫೆ.19: ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ… ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ ಕಾರಣ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಮಹಿಳೆಯ 2ನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 30 ರ ಹರೆಯದ ಕೊಲೆ ಆರೋಪಿ 2022 ರಲ್ಲಿ ಆ ಮಹಿಳೆಯನ್ನು

ಟೆಕ್ಕಿ ಮಾಜಿ ಹೆಂಡತಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರ್ಟೂನ್ ಪಾತ್ರಗಳ ಗೆಟಪ್‌ನಲ್ಲಿ ಕಳ್ಳತನ ಖದೀಮರ ಆಟ ಮುಗಿಸಿದ ಖಾಕಿ ಪಡೆ

(ನ್ಯೂಸ್‌ ಕಡಬ) newskadaba.com ಫೆ.19: ಕಾರ್ಟೂನ್ ಪಾತ್ರಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟ, ಅದರಲ್ಲೂ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರಗಳು ಜನಪ್ರಿಯತೆಯ ಶಿಖರದಲ್ಲಿವೆ. ಆದರೆ ಈ ಪಾತ್ರಧಾರಿಗಳ ವೇಷ ಧರಿಸಿ ಕಳ್ಳರು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಘಟನೆ ತೀವ್ರ ಆತಂಕ ಮೂಡಿಸಿದೆ. ಅಂಡರ್ ಕವರ್ ಪೊಲೀಸರ ತಂಡ ಈ ಕಳ್ಳರ ಮೇಲೆ ನಿಗಾ ಇರಿಸಿಕೊಂಡಿದ್ದು, ಸದ್ಯಕ್ಕೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರನ್ನು ಬಂಧಿಸಲಾಗಿದೆ. ಬಂಧಿತರ ಒಬ್ಬೊಬ್ಬರ ಬಳಿ ಕನಿಷ್ಠ

ಕಾರ್ಟೂನ್ ಪಾತ್ರಗಳ ಗೆಟಪ್‌ನಲ್ಲಿ ಕಳ್ಳತನ ಖದೀಮರ ಆಟ ಮುಗಿಸಿದ ಖಾಕಿ ಪಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com ಫೆ.19: ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ. ಮಲೆನಾಡಲ್ಲಿಯೂ 2-3 ದಿನಗಳಲ್ಲಿ ಮಳೆಯಾಗಿವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ಬಸ್ ಚಕ್ರದಡಿ ಸಿಲುಕಿ LKG ಬಾಲಕ ದಾರುಣ ಮರಣ

(ನ್ಯೂಸ್‌ ಕಡಬ) newskadaba.com,  ಫೆ.18: ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಲ್‍ಕೆಜಿ ವಿದ್ಯಾರ್ಥಿಯೊಬ್ಬನು ಶಾಲಾ ಬಸ್ ಚಕ್ರದಡಿ ಸಿಲುಕಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಖಾಸಗಿ ಶಾಲೆಯ ಬಸ್ ನಿತ್ಯದಂತೆ ಮಕ್ಕಳನ್ನು ಶಾಲೆಯಿಂದ ಮನೆಗೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.ವಿದ್ಯಾರ್ಥಿಗಳನ್ನು ಕೆಳಗಿಳಿಸಿದ ನಂತರ ಚಾಲಕನು ಹಿಂಭಾಗ ಗಮನಿಸದೇ ಬಸ್ ಅನ್ನು ರಿವರ್ಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂಭಾಗಕ್ಕೆ ಬಂದಿದ್ದ ಬಾಲಕ ಚಾಲಕರ ಗಮನಕ್ಕೆ ಬಾರದೆ ಬಸ್ ಹಿಂಬದಿ

ಶಾಲಾ ಬಸ್ ಚಕ್ರದಡಿ ಸಿಲುಕಿ LKG ಬಾಲಕ ದಾರುಣ ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,  ಫೆ.18: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಇಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಕೋಲಾರ ತಾಲೂಕಿನ ವೇಮಗಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​, ಫ್ರಾನ್ಸ್ ರಕ್ಷಣಾ ಸಚಿವೆ

ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಯಲಕ್ಷ್ಮಿ ಸಿಲ್ಕ್ಸ್‌ ಭಾರಿ ಅಗ್ನಿ ಅವಘಡ – ಇಬ್ಬರು ಮಹಿಳೆಯರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಫೆ.18: ನಗರದ ಪಲಾಯಂ ಪ್ರದೇಶದ ಜಯಲಕ್ಷ್ಮಿ ಸಿಲ್ಕ್ಸ್‌ನಲ್ಲಿ ಮಂಗಳವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಕಟ್ಟಡದ ಹಿಂಭಾಗದಿಂದ ಆರಂಭವಾದ ಬೆಂಕಿ, ಜವಳಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ಬಟ್ಟೆಗಳಿಗೂ ಹೊತ್ತಿಕೊಂಡು, 2ನೇ ಮತ್ತು 3ನೇ ಮಹಡಿಗೆ ಹರಡಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸುಟ್ಟು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.   ಅಗ್ನಿಶಾಮಕ ದಳದ ನೇತೃತ್ವದಲ್ಲಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಅಂಗಡಿಗೆ ಬಂದಿದ್ದ ನೌಕರರು ಹಾಗೂ ಇತರರನ್ನು ತಕ್ಷಣ ಸ್ಥಳಾಂತರಿಸಲಾಗಿದೆ. ಘಟನೆ ನಿನ್ನೆ ಸಂಜೆ

ಜಯಲಕ್ಷ್ಮಿ ಸಿಲ್ಕ್ಸ್‌ ಭಾರಿ ಅಗ್ನಿ ಅವಘಡ – ಇಬ್ಬರು ಮಹಿಳೆಯರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

(ನ್ಯೂಸ್‌ ಕಡಬ) newskadaba.com,  ಫೆ.18: ವ್ಯಕ್ತಿ ಒಬ್ಬ ಮಾದಕ ದ್ರವ್ಯ ಸೇವಿಸಿ  ಅಸಭ್ಯವಾಗಿ ವರ್ತಿಸುತ್ತಿದ್ದವವನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದ ಘಟನೆ  ಫೆ.17 ರಂದು ಬಜತ್ತೂರು ಗ್ರಾಮದ ಕಾಂಚನ ಮುಕ್ವೆ ಎಂಬಲ್ಲಿ ನಡೆದಿದೆ. ವಶಕ್ಕೆ ಪಡೆದವನು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಮಹಮ್ಮದ್‌ ಮೋಹಾದ್‌ ಎಸ್‌(33) ಎಂದು ಗುರುತಿಸಲಾಗಿದೆ. ಮಹಮ್ಮದ್‌ ಸಿಗರೇಟ್‌ ಸೇದುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸ್ ಉಪ ನಿರೀಕ್ಷಕರಾದ ಸುರೇಶ್ ಸಿ.ಟಿ

ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಫೆ.18: : ಚಿನ್ನಾಭರಣ ಪ್ರಿಯರಿಗೆ ಫೆಬ್ರವರಿ 3ನೇ ವಾರ ಶುಭವಾಗಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗದೆ ಮಂಗಳವಾರದ ಬೆಲೆಯೇ ಮುಂದುವರಿದಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಫೆಬ್ರವರಿ 18 2026, ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ತಟಸ್ಥವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಬೆಲೆ 15,420 ರೂ ದಾಖಲಾಗಿದೆ. 10 ಗ್ರಾಂ ಬೆಲೆ 1,54,200 ರೂಪಾಯಿ ಆಗಿದೆ. 22 ಕ್ಯಾರೆಟ್

ಇಂದು ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಖ್ಯಾತ ಶಿಕ್ಷಣ ತಜ್ಞ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ

(ನ್ಯೂಸ್‌ ಕಡಬ) newskadaba.com,  ಫೆ.18: ಖ್ಯಾತ ಶಿಕ್ಷಣ ತಜ್ಞ ಮತ್ತು ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ ಫೆ. 17, ಮಂಗಳವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.ಶಿಕ್ಷಣ ಕ್ಷೇತ್ರದ ಜೊತೆಗೆ ಆತಿಥ್ಯ ವಲಯದಲ್ಲಿಯೂ ಅವರು ಗುರುತಿಸಿಕೊಂಡರು. 1980ರಲ್ಲಿ ತ್ರಿ-ಸ್ಟಾರ್ ಸಸ್ಯಾಹಾರಿ ಹೋಟೆಲ್ ‘ಶ್ರೀನಿವಾಸ್’ ಅನ್ನು ಸ್ಥಾಪಿಸಿದರು. ಬಳಿಕ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ತ್ರಿ-ಸ್ಟಾರ್ ಶುದ್ಧ ಸಸ್ಯಾಹಾರಿ ಹೋಟೆಲ್ ಎಂದು ವರ್ಗೀಕರಿಸಲ್ಪಟ್ಟ ಇದು, ಕರ್ನಾಟಕದಲ್ಲಿ ಈ ರೀತಿಯ ಮೊದಲ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಶಿಕ್ಷಣ

ಮಂಗಳೂರು : ಖ್ಯಾತ ಶಿಕ್ಷಣ ತಜ್ಞ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top