ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ

(ನ್ಯೂಸ್‌ ಕಡಬ) newskadaba.com,ಮಾ.19: . ಕಡಬ ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಸೈಂಟ್ ಜೋಕಿಮ್ಸ್  ಕಾಲೇಜು ಮುಂಭಾಗದ ಪಿಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಜೋಮ್ಸ್ ಅಕಾಡೆಮಿ’ ಸಂಸ್ಥೆಯಲ್ಲಿ ಅಲ್ಪಾವಧಿಯ ವೇಗವರ್ಧಿತ ಕೋರ್ಸ್ (Crash Course) ಮತ್ತು 2026ನೇ ಸಾಲಿನ CET/ NEET ಕೋಚಿಂಗ್ ಪ್ರವೇಶಾತಿ ಆರಂಭಗೊಂಡಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಬೆಂಗಳೂರು ಮತ್ತು ಮೈಸೂರಿನ 21ಕ್ಕೂ ಹೆಚ್ಚು ವರ್ಷಗಳ ಅನುಭವಿ ಪರಿಣಿತರಿಂದ ತರಬೇತಿ ನೀಡಲಾಗುವುದು. CET ಕೋರ್ಸ್‌ ಗಳು ಮಾರ್ಚ್ 23ರಿಂದ ಎಪ್ರಿಲ್ 22ರ ವರೆಗೆ, NEET […]

ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ವಿಶೇಷ ಲೇಖನಗಳು

ಹಬ್ಬದ ದಿನವೇ ಬಾರದ ಲೋಕಕ್ಕೆ ಪಯಣ ಬೈಕ್-ಟಿಪ್ಪರ್ ನಡುವೆ ಅಪಘಾತ, ಸ್ಥಳದಲ್ಲೇ ದಂಪತಿ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.19 ಯುಗಾದಿ ಹಬ್ಬದಂದೇ ಬೀದರ್‌ನಲ್ಲಿ  ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್​ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ

ಹಬ್ಬದ ದಿನವೇ ಬಾರದ ಲೋಕಕ್ಕೆ ಪಯಣ ಬೈಕ್-ಟಿಪ್ಪರ್ ನಡುವೆ ಅಪಘಾತ, ಸ್ಥಳದಲ್ಲೇ ದಂಪತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ.

(ನ್ಯೂಸ್‌ ಕಡಬ) newskadaba.com,ಮಾ.19 ಉಪ್ಪಿನಂಗಡಿ: ಕ್ಷೇತ್ರದ ಶಾಸಕರ ನಿರ್ದೇಶನದನ್ವಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ರಥ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದರೆ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ತೆರವುಗೊಳಿಸಿರುವುದು ಅತೀವ ಬೇಸರ ತಂದಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ ತಿಳಿಸಿದ್ದಾರೆ. ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಾತನಾಡಿದ ಅವರು, ದೇವಾಲಯದ ಜಾತ್ರೋತ್ಸವಕ್ಕೆ ಊರಿನ ಎಲ್ಲಾ ಧರ್ಮಿಯರೂ

ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೂಪಾಡಿಕಟ್ಟೆ: ಮುಂಜಾನೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಮೊಸಳೆ; ನಿವಾಸಿಗಳಲ್ಲಿ ಆತಂಕ

(ನ್ಯೂಸ್‌ ಕಡಬ) newskadaba.com,ಮಾ.19 ಬಂಟ್ವಾಳ:  ನೇತ್ರಾವತಿ ನದಿ ತೀರದ ನಿವಾಸಿಯೊಬ್ಬರ ಮನೆಯ ಅಂಗಳಕ್ಕೆ ಸುಮಾರು 7 ಅಡಿ ಉದ್ದದ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.ಬಂಟ್ವಾಳದ ಪೂಪಾಡಿಕಟ್ಟೆ ನೆಕ್ಕಿಲಾರು ನಿವಾಸಿ ರಾಜೇಶ್ ನಾಯಕ್ ಎಂಬುವವರ ಮನೆಯ ಅಂಗಳಕ್ಕೆ ಈ ಮೊಸಳೆ ಬಂದಿದೆ. ಇವರ ಮನೆ ನೇತ್ರಾವತಿ ನದಿಯಿಂದ ಸುಮಾರು 200 ಮೀಟರ್ ದೂರದಲ್ಲಿದೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮನೆಯ ಹೊರಗೆ ಅಸಾಮಾನ್ಯ ಶಬ್ದ ಕೇಳಿಬಂದಿದೆ.ಶಬ್ದ ಕೇಳಿ ಮನೆಯವರು ಹೊರಬಂದು

ಪೂಪಾಡಿಕಟ್ಟೆ: ಮುಂಜಾನೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಮೊಸಳೆ; ನಿವಾಸಿಗಳಲ್ಲಿ ಆತಂಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೋಳಗಳ ಸಂತತಿ ವೃದ್ಧಿ: ಪಿಲಿಕುಳ ಉದ್ಯಾನವನಕ್ಕೆ ಏಳು ಹೊಸ ಅತಿಥಿಗಳ ಆಗಮನ

(ನ್ಯೂಸ್‌ ಕಡಬ) newskadaba.com,ಮಾ.19 :  ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ‘ಗೀತಾ’ ಎಂಬ ಭಾರತೀಯ ತೋಳವು ಏಳು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಲ್ಲಿ ನಾಲ್ಕು ಗಂಡು ಹಾಗೂ ಮೂರು ಹೆಣ್ಣು ತೋಳಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಭಾರತೀಯ ತೋಳಗಳನ್ನು ಉದ್ಯಾನವನದಲ್ಲಿ ಇರಿಸಲಾಗಿದ್ದು, ಈ ಸೌಲಭ್ಯದಲ್ಲಿ ಈ ಜಾತಿಯ ಮೊದಲ ಯಶಸ್ವಿ ಸಂತಾನೋತ್ಪತ್ತಿ ಇದಾಗಿದೆ. ಅಧಿಕಾರಿಗಳು ಇದನ್ನು ಉದ್ಯಾನವನದ ಸೆರೆಯಲ್ಲಿರುವ ಸಂತಾನೋತ್ಪತ್ತಿ ಮತ್ತು ಸಂರಕ್ಷಣಾ ಉಪಕ್ರಮಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ತಾಯಿ

ತೋಳಗಳ ಸಂತತಿ ವೃದ್ಧಿ: ಪಿಲಿಕುಳ ಉದ್ಯಾನವನಕ್ಕೆ ಏಳು ಹೊಸ ಅತಿಥಿಗಳ ಆಗಮನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ ಪ್ರಾಧಿಕಾರ ರಚನೆ ವಿರೋಧಿಸಿ ಮಾ. 19ಕ್ಕೆ ನಿರ್ಣಾಯಕ ಸಭೆ: ಹೋರಾಟ ತೀವ್ರಗೊಳಿಸಲು ನಿರ್ಧಾರ

(ನ್ಯೂಸ್‌ ಕಡಬ) newskadaba.com,ಮಾ.19   ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪಕ್ಕೆ ಸುಬ್ರಹ್ಮಣ್ಯದಲ್ಲಿ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಲು ಸಭೆಗಳನ್ನು ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಸುಬ್ರಹ್ಮಣ್ಯದ ಪ್ರಮುಖರು ಮಂಗಳವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಭವನದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಪಾರಸ್ಥರು, ವಸತಿಗ್ರಗಳ ಮಾಲಕರು, ಸಂಘ-ಸಂಘ ಸಂಸ್ಥೆ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಸ್ಟರ್ ಪ್ಲಾನ್ ಸಮಿತಿ ಅಡಿಯಲ್ಲಿ ಕೋಟಿ ವೆಚ್ಚದ

ಸುಬ್ರಹ್ಮಣ್ಯ ಪ್ರಾಧಿಕಾರ ರಚನೆ ವಿರೋಧಿಸಿ ಮಾ. 19ಕ್ಕೆ ನಿರ್ಣಾಯಕ ಸಭೆ: ಹೋರಾಟ ತೀವ್ರಗೊಳಿಸಲು ನಿರ್ಧಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದಲ್ಲಿ ಇಂದು ಕೂಡ ಗುಡುಗು ಸಹಿತ ಮಳೆ ಸಾಧ್ಯತೆ

(ನ್ಯೂಸ್‌ ಕಡಬ) newskadaba.com,ಮಾ.19 : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲ ಶಾಖದ ನಡುವೆ ವರುಣ ತಂಪೆರೆದಿದ್ದು, ಧಾರವಾಡ ಸೇರಿ ಹಲವು ಕಡೆ ಆಲಿಕಲ್ಲು ಮಳೆಯ ರಭಸ ಹೆಚ್ಚಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದ್ದು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು ಕೂಡಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಯುಗಾದಿ ಹಬ್ಬದ ತಯಾರಿ ನಡುವೆ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಇಂದು ಕೂಡಾ ಮಳೆರಾಯ ತಂಪೆರೆಯಲಿದ್ದಾನೆ. ಕರ್ನಾಟಕದ 9 ಜಿಲ್ಲೆಗಳಲ್ಲಿ

ಕರ್ನಾಟಕದಲ್ಲಿ ಇಂದು ಕೂಡ ಗುಡುಗು ಸಹಿತ ಮಳೆ ಸಾಧ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೋಟೆಲ್ ಗಳಿಗೆ ಸದ್ಯಕ್ಕೆ ಗ್ಯಾಸ್ ಇಲ್ಲ, ಎಲೆಕ್ಟ್ರಿಕ್ ಸ್ಟೌವ್ ಬಳಸಿ – ಸಚಿವ ಮುನಿಯಪ್ಪ

(ನ್ಯೂಸ್‌ ಕಡಬ) newskadaba.com ಮಾ. 17. ಹೋಟೆಲ್‌ ಗಳಿಗೆ ಸದ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸಾಧ್ಯವಿಲ್ಲ, ವಿದ್ಯುತ್‌ ಸ್ಟೌವ್‌ ಗಳನ್ನು ಬಳಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ. ತೈಲ ಪೂರೈಕೆ ಕಂಪನಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ಆದ್ದರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಗಳ ವಿತರಣೆಯಲ್ಲಿ ಅಡಚಣೆಯಾಗಲಿದೆ. ಇದನ್ನು ಸರಿದೂಗಿಸಲು ಎಲೆಕ್ಟ್ರಿಕ್‌ ಸ್ಟೌವ್‌ ಗಳನ್ನು ಬಳಬೇಕೆಂದು ಸಚಿವರು

ಹೋಟೆಲ್ ಗಳಿಗೆ ಸದ್ಯಕ್ಕೆ ಗ್ಯಾಸ್ ಇಲ್ಲ, ಎಲೆಕ್ಟ್ರಿಕ್ ಸ್ಟೌವ್ ಬಳಸಿ – ಸಚಿವ ಮುನಿಯಪ್ಪ Read More »

ಕರ್ನಾಟಕ

ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಸಿಲಿಂಡರ್ ಗಳು ವಶ

(ನ್ಯೂಸ್‌ ಕಡಬ) newskadaba.com ಮಾ. 17. ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌‍ ಸಹಕಾರದೊಂದಿಗೆ ತಡರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಅನಿಲ ತುಂಬಿದ 25 ಸಿಲಿಂಡರ್‌ಗಳನ್ನು ಪತ್ತೆ ಹಚ್ಚಿ ವಿದ್ಯಾನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್‌ ಸಹ ಮಾಲೀಕರ ವಿರುದ್ಧ ಆಹಾರ ನಿರೀಕ್ಷಕ ವಿಜಯಕುಮಾರ ಪತ್ತಾರ ದೂರು ನೀಡಿದ್ದಾರೆ.   ಗೋ ಗ್ಯಾಸ್‌‍ ಕಂಪನಿಯಿಂದ ಪೂರೈಕೆಯಾಗುವ ಅನಿಲದ

ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಸಿಲಿಂಡರ್ ಗಳು ವಶ Read More »

ಕರ್ನಾಟಕ

ಟ್ರೇಡಿಂಗ್ ಹೆಸರಿನಲ್ಲಿ ವಂಚನೆ- ದೂರು ದಾಖಲು

(ನ್ಯೂಸ್‌ ಕಡಬ) newskadaba.com ಮಾ. 17. ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಲು ಆಮಿಷವೊಡ್ಡಿ 25.85 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ನಿವೃತ್ತಿ ಜೀವನ ನಡೆಸುತ್ತಿದ್ದ ವ್ಯಕ್ತಿಯೋರ್ವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಬಂದ ಟ್ರೇಡಿಂಗ್ ಮಾಹಿತಿಯ ಸಂದೇಶವನ್ನು ಪರಿಶೀಲಿಸಿ, ಸಂದೇಶ ಕಳುಹಿಸಿದವರೊಂದಿಗೆ ವಾಟ್ಸ್‌ ಆ್ಯಪ್‌ ನಲ್ಲಿ ಚಾಟಿಂಗ್ ನಡೆಸಿದ್ದರು. ಬಳಿಕ ಆರೋಪಿಗಳು ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಅವರನ್ನು ಸೇರಿಸಿ ಶೇ.25 ಲಾಭಾಂಶ ನೀಡಲಾಗುವುದು ಎಂದು ತಿಳಿಸಿ ಜ.21ರಿಂದ

ಟ್ರೇಡಿಂಗ್ ಹೆಸರಿನಲ್ಲಿ ವಂಚನೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top