ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
Latest – Page 1231 – News Kadaba

ಹಳಿ ತಪ್ಪಿದ ರೈಲು – 15 ಮಂದಿ ಮೃತ್ಯು, 40ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ರಾವಲ್ಪಿಂಡಿ, ಆ. 07. ಹಜಾರಾ ಎಕ್ಸ್‌ ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಶೆಹಜಾದ್ ಪುರ ಮತ್ತು ನವಾಬ್ ಶಾ ನಡುವಿನ ಸರ್ಹರಿ ರೈಲು ನಿಲ್ದಾಣದ ಬಳಿ ನಡೆದಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹಲವು ಪ್ರಯಾಣಿಕರು ಬೋಗಿಗಳಲ್ಲಿ ಸಿಲುಕಿದ್ದಾರೆ. ಅಪಘಾತವಾದ ರೈಲು ಕರಾಚಿಯಿಂದ ಪಾಕಿಸ್ತಾನದ ಪಂಜಾಬ್‌ ಗೆ ಹೊರಟಿತ್ತು. ಗಾಯಗೊಂಡವರನ್ನು ಕೂಡಲೇ ನವಾಬ್ ಶಾದಲ್ಲಿರುವ ಮೆಡಿಕಲ್ […]

ಹಳಿ ತಪ್ಪಿದ ರೈಲು – 15 ಮಂದಿ ಮೃತ್ಯು, 40ಕ್ಕೂ ಅಧಿಕ ಮಂದಿಗೆ ಗಾಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 07. ಚಂದ್ರನ ಕಕ್ಷೆ ಪ್ರವೇಶಿಸಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಸೆರೆ ಹಿಡಿದಿರುವ ಚಂದ್ರನ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿದೆ. ಇಸ್ರೋ ಸಂಸ್ಥೆಯು ಚಂದ್ರನ ಫೋಟೋವನ್ನು ತನ್ನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಿದೆ. ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ -3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ ಎಂದು ಮಿಷನ್‌ನ

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

‘ಸರ್ಕಾರಿ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿಯರಿಗೆ AIDS ಸೋಂಕು..!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಆ. 07. ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 16 ತಿಂಗಳಲ್ಲಿ 60ಕ್ಕೂ ಹೆಚ್ಚು ಗರ್ಭಿಣಿಯರಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಮೀರತ್ ನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನ ಎ.ಆರ್.ಟಿ. ಕೇಂದ್ರದ ವರದಿಯ ನಂತರ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ಹೆರಿಗೆಗಾಗಿ ಬಂದ 81 ಗರ್ಭಿಣಿ ಮಹಿಳೆಯರಲ್ಲಿ ಎಚ್‌ಐವಿ ದೃಢಪಟ್ಟಿದ್ದು,

‘ಸರ್ಕಾರಿ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿಯರಿಗೆ AIDS ಸೋಂಕು..! Read More »

ರಾಷ್ಟ್ರೀಯ ನ್ಯೂಸ್

ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.07. ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಓರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಲ್ಡರ್ ಮೋಹನ್ ಅಮೀನ್ (66) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. 17 ಮಹಡಿಯಲ್ಲಿ ವಾಸವಿದ್ದ ಅವರು ಅಪಾರ್ಟ್‌ಮೆಂಟ್ ನ ಟೆರೆಸ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೋಹನ್ ಅಮೀನ್ ಅವರ ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಬಹುಮಹಡಿ ಕಟ್ಟಡದಿಂದ ಹಾರಿ ಬಿಲ್ಡರ್ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳ ಮೇಲೆ ವಕ್ರದೃಷ್ಟಿ – ತಳ್ಳುಗಾಡಿ ವ್ಯಾಪಾರಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದ ದೂರಿನ ಪ್ರಕಾರ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಡಿ ಇಬ್ಬರು ತಳ್ಳುಗಾಡಿ ವ್ಯಾಪಾರಿಗಳನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಅಮರ್‌ ಮತ್ತು ಸೂರಜ್‌ ಎಂದು ಗುರುತಿಸಲಾಗಿದೆ. ಇವರು ನಡೆದುಕೊಂಡು ಹೋಗುವ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದುದಲ್ಲದೇ ಮಕ್ಕಳು ಹೋಗುವಾಗ ಅವರನ್ನು ಹಿಂಬಾಲಿಸಿ, ಕೆಟ್ಟ ದೃಷ್ಠಿಯಿಂದ ನೋಡುವ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್‌ ಕುಲದೀಪ್‌

ಮಕ್ಕಳ ಮೇಲೆ ವಕ್ರದೃಷ್ಟಿ – ತಳ್ಳುಗಾಡಿ ವ್ಯಾಪಾರಿಗಳಿಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..!

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕರವರು ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲತಃ ತುಮಕೂರಿನ ಗುಬ್ಬಿಯವರಾದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ಪತಿಯೊಂದಿಗೆ ಸೇರಿ ಮರಗಳನ್ನು ನೆಟ್ಟು ಬೆಳೆಸಿದ್ದು, ದಂಪತಿಗಳು ಮೊದಲ ವರ್ಷದಲ್ಲಿ 4 ಕಿ.ಮೀ ರಸ್ತೆಯ ಎರಡು ಬದಿಗಳಲ್ಲಿ 10 ಆಲದ ಸಸಿಗಳನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇಲ್ಲಿಯವರೆಗೂ ತಿಮ್ಮಕ್ಕರವರು 8 ಸಾವಿರಕ್ಕೂ

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..! Read More »

ಕರ್ನಾಟಕ

ಕೊಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿ ಮರದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಆ.07. ಮರದ ಕೊಂಬೆ ಕಡಿಯಲು ಹೋಗಿದ್ದ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಲೋಕಪ್ಪ ಗೌಡ (56) ಎಂದು ಗುರುತಿಸಲಾಗಿದೆ. ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದು, ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲುತ್ತಿದೆ ಎಂದು ಮರ ಕಡಿಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ

ಕೊಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿ ಮರದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ವಿಧಿವಶ…!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 07. ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಬೆಳ್ತಂಗಡಿ ಹೇರಾಜೆ ಮನೆತನದವರಾಗಿದ್ದು ರಕ್ಷಿತ್ ಶಿವರಾಂರವರ ಸಹೋದರಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ವಿಧಿವಶ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಸಿನಿಮಾ

ಮರದಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು

(ನ್ಯೂಸ್ ಕಡಬ) newskadaba.com ಕೊಡಗು, ಆ. 07. ಮರದಿಂದ ಬಿದ್ದು ಪೊಲೀಸ್​ ಸಿಬ್ಬಂದಿಯೋರ್ವರು ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ಕಾನ್​ ಬೈಲ್​ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಸಿಬ್ಬಂದಿಯನ್ನು ಲೋಕೇಶ್ (40)  ಎಂದು ಗುರುತಿಸಲಾಗಿದೆ. ಲೋಕೇಶ್​ ಅವರು ಮಾವಿನ ಮರ ಕಸಿ ಮಾಡಲು ಮರ ಏರಿದ್ದ ಸಮಯದಲ್ಲಿ ಬಿಪಿ ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್​ಗೆ ಬಿದ್ದ ಪರಿಣಾಮ​ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಲೋಕೇಶ್​ ಅವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ 10 ವಷ೯ಗಳಿಂದ

ಮರದಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಿಷೇಧಿತ ಎಂಡಿಎಂಎ ಮಾರಾಟ- ರಿಕ್ಷಾ ಚಾಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ 07. ಪೊಲೀಸ್ ಠಾಣಾ ವ್ಯಾಪ್ತಿಯ ಇಲ್ಲಿನ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ  ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.   ಬಂಧಿತ ಆರೋಪಿಯನ್ನು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 12 ಗ್ರಾಂ. ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ

ನಿಷೇಧಿತ ಎಂಡಿಎಂಎ ಮಾರಾಟ- ರಿಕ್ಷಾ ಚಾಲಕ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top