ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
Latest – Page 1226 – News Kadaba

ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 08. ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗನ್ನು ಎಗರಿಸಿ ಅದರಲ್ಲಿದ್ದ ಹಣ ಮತ್ತು ದಾಖಲೆಪತ್ರಗಳನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಮುಂಬಯಿ ನಿವಾಸಿ ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿದ್ದ ಎಲಿಜಬೆತ್‌ ಎಂಬವರಿಗೆ ಸೇರಿದ ಬ್ಯಾಗ್‌ ಇದಾಗಿದ್ದು, ಇದರಲ್ಲಿ ಸುಮಾರು 15 ಸಾವಿರ ರೂ., ಎಟಿಎಂ, ಆಧಾರ್‌ ಮತ್ತು ಪಾನ್‌ ಕಾರ್ಡ್‌ ಮತ್ತಿತರ ದಾಖಲೆಗಳಿದ್ದವು. ಆರೋಪಿಗಳು ಅವೆಲ್ಲವನ್ನು ತೆಗೆದು ಬ್ಯಾಗ್‌ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಂಕನಾಡಿಯಲ್ಲಿರುವ […]

ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಲಕಿ ಎದುರೇ ಹಸ್ತಮೈಥುನ- ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 08. ಬಾಲಕಿ ಎದುರೇ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡಿದ್ದ ಆರೋಪದಡಿ ವ್ಯಕ್ತಿಯೋರ್ವರಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 2020ರಲ್ಲಿ ಆರೋಪಿ ಬಾಲಕಿ ಎದುರೇ ಹಸ್ತಮೈಥುನ ಮಾಡಿಕೊಂಡಿರುವ ಕುರಿತು ಭಾರತೀ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ, ಆರೋಪಿಯನ್ನು ಲೈಂಗಿಕ ಕಿರುಕುಳದ ಅಪರಾಧಿ ಎಂದು ಘೋಷಿಸಿ ಮತ್ತು ಆತನಿಗೆ 20,000 ರೂ. ದಂಡ ವಿಧಿಸಿದ್ದಾರೆ.

ಬಾಲಕಿ ಎದುರೇ ಹಸ್ತಮೈಥುನ- ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲೈಂಗಿಕ ದೌರ್ಜನ್ಯ, ಚಿನ್ನಾಭರಣ ಪಡೆದು ವಂಚನೆ – ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 08. ಸ್ನೇಹದ ಹೆಸರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೇ ಆಕೆಯಿಂದ ಸುಮಾರು 30.05 ಪವನ್‌ ಚಿನ್ನಾಭರಣಗಳನ್ನು ಪಡೆದಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 3 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್‌ ನಿವಾಸಿ ರೋಶನ್‌ ಡಿ’ಸೋಜಾ ಆಲಿಯಾಸ್‌ ರೋಶನ್‌ ಫೆರ್ನಾಂಡಿಸ್‌(31) ಶಿಕ್ಷೆಗೊಳಗಾದವನು. ಈತ 2015ರ ನವೆಂಬರ್ 6ರಂದು ನಗರದ

ಲೈಂಗಿಕ ದೌರ್ಜನ್ಯ, ಚಿನ್ನಾಭರಣ ಪಡೆದು ವಂಚನೆ – ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ Read More »

ಕರಾವಳಿ

ಬ್ರಿಡ್ಜ್ ಕಾಮಗಾರಿಗೆ ತಂದಿಡಲಾಗಿದ್ದ ರಾಡ್ ಕಳವು – ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಆ. 08. ಬ್ರಿಡ್ಜ್ ಕೆಲಸಕ್ಕೆಂದು ತಂದಿಡಲಾಗಿದ್ದ ರಾಡ್, ಪ್ಲೇಟ್ಸ್ ಹಾಗೂ ಇತರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಬ್ರಿಡ್ಜ್ ಕೆಲಸಕ್ಕೆಂದು ತಂದಿಡಲಾಗಿದ್ದ ರಾಡುಗಳು, ಪ್ಲೇಟ್ಸ್ ಹಾಗೂ ಇತರ ಸಾಮಾಗ್ರಿಗಳು ಸೋಮವಾರದಂದು ಕಾಣೆಯಾಗಿದ್ದವು. ಅವುಗಳನ್ನು ಹುಡುಕಾಡಿದಾಗ ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ಈಚರ್ ವಾಹನದಲ್ಲಿ ವ್ಯಕ್ತಿಯೋರ್ವ ತುಂಬಿಸಿಕೊಂಡಿರುವುದು ಕಂಡು ಬಂದಿದೆ. ನಂದ ಕುಮಾರ್ ರನ್ನು ನೋಡಿದ ಆರೋಪಿ ವಾಹನವನ್ನು ಅಲ್ಲೇ ಬಿಟ್ಟು

ಬ್ರಿಡ್ಜ್ ಕಾಮಗಾರಿಗೆ ತಂದಿಡಲಾಗಿದ್ದ ರಾಡ್ ಕಳವು – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ನೆರೆಮನೆ ನಿವಾಸಿಗಳ ನಡುವೆ ಜಗಳ – ನಾಲ್ವರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಆ. 08. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿರುವ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಝೈನುಲ್ ಆಬಿದ್ ಎಂಬವರ ಪತ್ನಿ ವಿಟ್ಲ ಪೊಲೀಸರಿಗೆ ನೀಡಿರುವ ದೂರಿನಂತೆ, ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ನಾಲ್ವರ ವಿರುದ್ದ ದೂರ ದಾಖಲಾಗಿದೆ. ದೂರಿನ ಪ್ರಕಾರ, ದೂರುದಾರ ಮಹಿಳೆ ತನ್ನ ತವರು ಮನೆಗೆ ಹೋಗಲೆಂದು ಹೊರಡುತ್ತಿದ್ದ ಸಂದರ್ಭ ನೆರೆಮನೆಯ ಮಹಿಳೆಯೋರ್ವರು ತನ್ನ ಮಗಳಿಗೆ ಬೈಯುತ್ತಿದ್ದರು. ಈ

ನೆರೆಮನೆ ನಿವಾಸಿಗಳ ನಡುವೆ ಜಗಳ – ನಾಲ್ವರ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣ – ಉಡುಪಿಗೆ ಸಿಐಡಿ ತಂಡ ಭೇಟಿ

(ನ್ಯೂಸ್ ಕಡಬ) newskadaba.com ಉಡುಪಿ, ಆ. 08. ಇಲ್ಲಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿಡಿಯೊ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ಮಂಗಳವಾರದಂದು ಉಡುಪಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಉಡುಪಿಗೆ ಧಾವಿಸಿರುವ ಸಿಐಡಿ ವಿಭಾಗದ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತಂಡ, ಎಸ್ಪಿ ಕಚೇರಿಗೆ ಭೇಟಿ ನೀಡಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಹಾಗೂ ಪ್ರಕರಣದ ಈ ಹಿಂದಿನ ತನಿಖಾಧಿಕಾರಿ ಬೆಳ್ಳಿಯಪ್ಪ ಅವರೊಂದಿಗೆ ಮಾತುಕತೆ ನಡೆಸಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ

ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣ – ಉಡುಪಿಗೆ ಸಿಐಡಿ ತಂಡ ಭೇಟಿ Read More »

ಕರಾವಳಿ, ಕರ್ನಾಟಕ

ಬಸ್‌‌ಗೆ ಪಿಕಪ್ ವಾಹನ ಢಿಕ್ಕಿ – ಇಬ್ಬರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮುಲ್ಕಿ, ಆ. 08. ಬಸ್ ಗೆ ಪಿಕಪ್ ಡಿಕ್ಕಿಯಾಗಿ ಪಿಕಪ್ ನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಹೊರವಲಯದ ಮುಲ್ಕಿ ಬಸ್ಸು ನಿಲ್ದಾಣದ ಬಳಿ ನಡೆದಿದೆ. ಕಣ್ಣೂರಿನಿಂದ ಮಲ್ಪೆ ಕಡೆಗೆ ಮೀನು ಲೋಡ್ ಮಾಡಿಕೊಂಡು ಬರುತ್ತಿದ್ದ ಪಿಕಪ್, ಮುಲ್ಕಿ ಬಸ್ಸು ನಿಲ್ದಾಣದ ಜಂಕ್ಷನ್ ತಲುಪುತ್ತಿದ್ದಂತೆ ಕಿನ್ನಿಗೋಳಿ ಕಡೆಗೆ ಹೋಗಲು ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪಿಕಪ್ ಮುಂಭಾಗ ಜಖಂಗೊಂಡಿದ್ದು, ಅದರಲ್ಲಿದ್ದ

ಬಸ್‌‌ಗೆ ಪಿಕಪ್ ವಾಹನ ಢಿಕ್ಕಿ – ಇಬ್ಬರು ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಪತ್ನಿಗೆ ಚೂರಿಯಿರಿತ- ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 08. ತವರು ಮನೆಯಲ್ಲಿದ್ದ ಪತ್ನಿಗೆ ಆಕೆಯ ಪತಿ ಚೂರಿಯಿಂದ ಇರಿತಗೊಳಿಸಿರುವ ಘಟನೆ ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಸಮೀಪದ ಬ್ರಹ್ಮನಗರ ಎಂಬಲ್ಲಿ ನಡೆದಿದೆ. ಇವರಿಗೆ 6 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾಗಿ 2-3 ವರ್ಷಗಳಿಂದ ಆಕೆಯ ಪತಿ ಪ್ರಶಾಂತ್ ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿದ್ದರೂ ಪತಿ ತೊಂದರೆ ನೀಡುವುದನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಇನ್ನು ಆ. 06 ರಂದು ರಾತ್ರಿ ಮಹಿಳೆ ತನ್ನ ತವರು ಮನೆಯಲ್ಲಿ

ಪತ್ನಿಗೆ ಚೂರಿಯಿರಿತ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಸುಕುಧಾರಿಗಳಿಂದ ಬಾಲಕನಿಗೆ ಇಂಜೆಕ್ಷನ್ – ಪೋಷಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಮುದ್ದೇಬಿಹಾಳ, ಆ. 08. ಶಾಲೆಗೆ ತೆರಳುತ್ತಿದ್ದ 12 ವರ್ಷದ ಬಾಲಕನಿಗೆ ಮುಸುಕುಧಾರಿಗಳಿಬ್ಬರು ಇಂಜೆಕ್ಷನ್ ಚುಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಂಜೆಕ್ಷನ್ ಚುಚ್ಚಿರುವ ಕುರಿತು ಶಾಲೆ ಬಿಟ್ಟು ಮನೆಗೆ ಮರಳಿದ ಬಾಲಕ ತಕ್ಷಣ ಮನೆಯವರಿಗೆ ತಿಳಿಸಿದ್ದಾನೆ. ತಕ್ಷಣ ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣದಡಿ ಹೆಸರು ನೋಂದಾಯಿಸಿಕೊಂಡ ವೈದ್ಯರು ಪರಿಶೀಲಿಸಿ, ಬಾಲಕ ಹೇಳುವ ಜಾಗದಲ್ಲಿ ಚುಚ್ಚಿದ ಗುರುತು ಇದೆ.

ಮುಸುಕುಧಾರಿಗಳಿಂದ ಬಾಲಕನಿಗೆ ಇಂಜೆಕ್ಷನ್ – ಪೋಷಕರಲ್ಲಿ ಆತಂಕ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೆಎಸ್ಸಾರ್ಟಿಸಿ ಯಿಂದ ವಿವಿಧೆಡೆ ಟೂರ್ ಪ್ಯಾಕೇಜ್…. ದರ ಮಾಹಿತಿ ಇಲ್ಲಿದೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 08. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಾರಾಂತ್ಯದಲ್ಲಿ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದ್ದು, ಇದರ ವಿವರ ಇಂತಿದೆ. ಜೋಗ ಜಲಪಾತ ಪ್ರವಾಸ: ಬೆಂಗಳೂರಿನಿಂದ ಶುಕ್ರವಾರದಂದು ರಾತ್ರಿ 9:30ಕ್ಕೆ ಹೊರಟು ಶನಿವಾರ ಬೆಳಿಗ್ಗೆ 5 ಗಂಟೆಗೆ ಸಾಗರ ತಲುಪಲಿದ್ದು, ಅಲ್ಲಿ ವಿಶ್ರಾಂತಿ – ಉಪಹಾರದ ಬಳಿಕ ವರದಹಳ್ಳಿಗೆ, ವರದಾಮೂಲ ಇಕ್ಕೇರಿ ಮತ್ತು ಕೆಳದಿ ಪ್ರವಾಸಿ ತಾಣಕ್ಕೆ ಸುತ್ತಾಡಿಕೊಂಡು ಮಧ್ಯಾಹ್ನ ಊಟಕ್ಕೆ ಸಾಗರ ತಲುಪಲಿದೆ. ಊಟದ

ಕೆಎಸ್ಸಾರ್ಟಿಸಿ ಯಿಂದ ವಿವಿಧೆಡೆ ಟೂರ್ ಪ್ಯಾಕೇಜ್…. ದರ ಮಾಹಿತಿ ಇಲ್ಲಿದೆ Read More »

ಕರ್ನಾಟಕ
Scroll to Top