ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 22. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಅಹ್ಮದ್ ಸಹದ್‌ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಪೆದಮಲೆಯ ಸಮದ್ ಹಾಜಿ ಹಾಗೂ ರೇಷ್ಮಾ ದಂಪತಿಯ ಪುತ್ರನಾದ ಈತ 10 ನೇ ತರಗತಿ ಕಲಿಯುತ್ತಿದ್ದು, ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಮೃತನ ಸ್ಮರಣಾರ್ಥ ಆ. 22ರಂದು ಇಂಡಿಯನ್ ಸ್ಕೂಲ್ ಗೆ ರಜೆ ನೀಡಲಾಗಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಬಾಲಕರಿಬ್ಬರು ಪುತ್ತೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 22. ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಎಂದಿನಂತೆ ಶಾಲೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಸಂಜೆ ವಾಪಾಸ್ಸು ಬಂದಿರಲಿಲ್ಲ. ಈ ಬಗ್ಗೆ ಉಳಿದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದಾಗ ಶಾಲೆಗೆ ಹೋಗದೇ ಇರುವ ವಿಚಾರ ತಿಳಿದುಬಂದಿದೆ. ಬಾಲಕರ ಮನೆಯಲ್ಲೂ ವಿಚಾರಿಸಿ, ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ಹಾಸ್ಟೆಲ್ ಮೇಲ್ವಿಚಾರಕಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಬಾಲಕರಿಬ್ಬರು ಪುತ್ತೂರಿನಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

“ಜಗತ್ತಿನಲ್ಲಿ ಸಾಮರಸ್ಯ ಹಾಗೂ ಬಾಂಧವ್ಯ ಪೂರಿತವಾದ ಸುಂದರ ಬದುಕನ್ನು ಕಟ್ಟುವ”- ತಮ್ಮಣ್ಣ ಶೆಟ್ಟಿ ಶಂಭುಗ

(ನ್ಯೂಸ್ ಕಡಬ) newskadaba.com ಮಾಣಿ, ಆ. 22. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ನಾವೆಲ್ಲರೂ ಪರಸ್ಪರ ದ್ವೇಷ ಬಿಟ್ಟು ಸೌಹಾರ್ದಯುತವಾದ ಬದುಕನ್ನು ನಡೆಸಿದರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಅನ್ಯೋನ್ಯತೆಯಿಂದ ಬಾಳಿ ಸಾಮರಸ್ಯ ಹಾಗೂ ಬಾಂಧವ್ಯ ಪೂರಿತವಾದ ಸಂತಸ, ಸುಂದರ ಬದುಕನ್ನು ಜಗತ್ತಿನಲ್ಲಿ ಕಟ್ಟುವ ಎಂದು ಖ್ಯಾತ ಚಿಂತಕರಾದ ತಮ್ಮಣ್ಣ ಶೆಟ್ಟಿ ಶಂಭುಗರವರು ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ವತಿಯಿಂದ ದಾರುಲ್ ಇರ್ಶಾದ್

“ಜಗತ್ತಿನಲ್ಲಿ ಸಾಮರಸ್ಯ ಹಾಗೂ ಬಾಂಧವ್ಯ ಪೂರಿತವಾದ ಸುಂದರ ಬದುಕನ್ನು ಕಟ್ಟುವ”- ತಮ್ಮಣ್ಣ ಶೆಟ್ಟಿ ಶಂಭುಗ Read More »

ಕರಾವಳಿ

ಕೆಮ್ಮಾರ ಸ. ಪ್ರಾ. ಶಾಲೆಗೆ ನೂತನ ಕೊಠಡಿ ನಿರ್ಮಾಣ ಮತ್ತು ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಅನುಮತಿ ಕೋರಿ ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 22. ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ, ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿ ಬದಿಯಲ್ಲಿನ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯು 1954 ರಲ್ಲಿ ಆರಂಭಗೊಂಡಿರುತ್ತದೆ. ಸುಮಾರು 69 ವರ್ಷ ಹಳೇಯದಾಗಿರುವ ಈ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಎಂಟನೇ ತರಗತಿ ವರೆಗೆ 110 ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟರವರೆಗೆ ಯಾವುದೇ ನೂತನ ಕೊಠಡಿ ಅಥವಾ ಕಟ್ಟಡದ ಮಂಜೂರು ಆಗಿರುವುದಿಲ್ಲ. ಹಳೆಯ ಕಟ್ಟಡ ಬಿರುಕು ಬಿಟ್ಟಿದ್ದು, ಮತ್ತು ಮೇಲ್ಛಾವಣಿ

ಕೆಮ್ಮಾರ ಸ. ಪ್ರಾ. ಶಾಲೆಗೆ ನೂತನ ಕೊಠಡಿ ನಿರ್ಮಾಣ ಮತ್ತು ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಅನುಮತಿ ಕೋರಿ ಶಾಸಕರಿಗೆ ಮನವಿ Read More »

ಕರಾವಳಿ

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 22. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿ ದಿನದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು.   ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿ ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ನಮ್ಮ ರಾಷ್ಟ್ರದ

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ Read More »

ಕರಾವಳಿ

ಬ್ಯಾಂಕ್ ಆಫ್ ಬರೋಡಾದಿಂದ ಕುಕ್ಕೇ ಶ್ರೀ ದೇವಳಕ್ಕೆ ಕಂಪ್ಯೂಟರ್ ಕೊಡುಗೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 22. ನಾಗಾರಾಧನೆಯ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡಾದಿಂದ 5 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಶ್ರೀಮತಿ ಗಾಯತ್ರಿ ಆರ್ ಅವರು ಕುಕ್ಕೇ ಶ್ರೀ ದೇವಳಕ್ಕೆ ಸುಮಾರು 1 ಲಕ್ಷದ 25 ಸಾವಿರ ರೂ. ಮೌಲ್ಯದ 5 ಕಂಪ್ಯೂಟರ್‌ಗಳನ್ನು ಮಂಜೂರಾತಿಗೊಳಿಸಿದ್ದರು. ಅದರಂತೆ ಸೋಮವಾರದಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ

ಬ್ಯಾಂಕ್ ಆಫ್ ಬರೋಡಾದಿಂದ ಕುಕ್ಕೇ ಶ್ರೀ ದೇವಳಕ್ಕೆ ಕಂಪ್ಯೂಟರ್ ಕೊಡುಗೆ Read More »

ಕರಾವಳಿ

ತಮಿಳುನಾಡು ಮೂಲದ ದಂಪತಿ ಸುಳ್ಯದಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 22. ತಮಿಳುನಾಡು ಮೂಲದ ದಂಪತಿ ಎಲಿಮಲೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಜನ್ ಎಂದು ಗುರುತಿಸಲಾಗಿದೆ. ಎಲಿಮಲೆಯ ಪರಿಸರದಲ್ಲಿ ಕಳೆದ ಅನೇಕ ವರ್ಷಗಳಿಂದ ಟ್ಯಾಪಿಂಗ್ ಮಾಡುತ್ತಿದ್ದ ರಾಜನ್ ಮತ್ತು ಅವರ ಪತ್ನಿ ಕಳೆದ ಕೆಲ ಸಮಯಗಳಿಂದ ರಬ್ಬರ್ ತೋಟವನ್ನು ಸ್ವತಃ ಖರೀದಿಸಿ ಟ್ಯಾಪಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ. ರಾಜನ್ ರವರು ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೂ ತುತ್ತಾಗಿದ್ದರು. ಮನೆಯಲ್ಲಿ ದಂಪತಿಗಳು ಮಾತ್ರ ಇದ್ದು ಇಂದು

ತಮಿಳುನಾಡು ಮೂಲದ ದಂಪತಿ ಸುಳ್ಯದಲ್ಲಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 22. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ಮಹಿಳೆಯೊಬ್ಬರು ಶಾಲನ್ನು ಕೊರಳಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ದಿವ್ಯಾ ಎಂದು ಗುರುತಿಸಲಾಗಿದೆ. ಆದಿತ್ಯವಾರದಂದು ರಜೆ ಹಿನ್ನೆಲೆ ಪತಿ ಜಯರಾಮ ಮತ್ತು ಮಕ್ಕಳು ಬೆಳಂದೂರಿನಲ್ಲಿರುವ ತಂಗಿಯ ಮನೆಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಮನೆಯಲ್ಲಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಮೃತರ ತಾಯಿ ನೀಡಿದ

ವಿವಾಹಿತ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಶಾಲೆಗೆಂದು ತೆರಳಿದ್ದ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 22. ಬಾಲಕರ ವಿದ್ಯಾರ್ಥಿ ನಿಲಯದಿಂದ ಶಾಲೆಗೆಂದು ತೆರಳಿದ್ದ ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಗಳನ್ನು ದೀಕ್ಷಿತ್(15) ಮತ್ತು ಗಗನ್(14) ಎಂದು ಗುರುತಿಸಲಾಗಿದೆ. ಇವರಿಬ್ಬರು ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ತೆರಳಿದ್ದು, ಸಂಜೆ ವಾಪಾಸ್ಸು ಬಂದಿಲ್ಲ. ಈ ಬಗ್ಗೆ ಉಳಿದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದಾಗ ಶಾಲೆಗೆ ಹೋಗದೇ ಇರುವ ವಿಚಾರ ತಿಳಿದುಬಂದಿದೆ. ಬಾಲಕರ ಮನೆಯಲ್ಲಿ ವಿಚಾರಿಸಿ, ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆ ವಿದ್ಯಾರ್ಥಿ

ಶಾಲೆಗೆಂದು ತೆರಳಿದ್ದ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಗೃಹರಕ್ಷಕ ದಳದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಆ. 22. ತಾಲೂಕಿನ ಗೃಹರಕ್ಷಕ ದಳದ ನೂತನ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮತ್ತು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಬೇಕು ಎಂದು ಶುಭ ಹಾರೈಸಿದರು. ಇನ್ನು ಮುಂದೆ

ಕಡಬ: ಗೃಹರಕ್ಷಕ ದಳದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ Read More »

ಕರಾವಳಿ
Scroll to Top