ಸೆಪ್ಟೆಂಬರ್ 5 ರಂದು ಜಮಾ ಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಹರೇಕಳ ಗ್ರಾಮ ಪಂಚಾಯತ್‍ನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ 2022-23ನೇ ಸಾಲಿನ ಜಮಾಬಂದಿ ಸೆ. 05ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 5 ರಂದು ಜಮಾ ಬಂದಿ Read More »

ಕರಾವಳಿ

ನಾಳೆ ನಡೆಯಬೇಕಿದ್ದ ಜಿಲ್ಲಾಧಿಕಾರಿಯವರ ಅಹವಾಲು ಸ್ವೀಕಾರ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಉಳ್ಳಾಲ ತಾಲೂಕಿನ ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿಯವರು ಆ. 25ರ ಶುಕ್ರವಾರದಂದು ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಉಳ್ಳಾಲ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ನಡೆಯಬೇಕಿದ್ದ ಜಿಲ್ಲಾಧಿಕಾರಿಯವರ ಅಹವಾಲು ಸ್ವೀಕಾರ ಮುಂದೂಡಿಕೆ Read More »

ಕರಾವಳಿ

ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.24. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2000 ರೂ. ಜಮೆ ಮಾಡಲಾಗುತ್ತಿದ್ದು, ಯೋಜನೆಗಾಗಿ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಯ ಫಲ ಪಡೆಯಬಹುದು. ಸಿಎಂ ಸಿದ್ದರಾಮಯ್ಯ ಕೂಡ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಯಿದ್ದು, ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಫಲಾನುಭವಿಗಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ

ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ Read More »

ಕರ್ನಾಟಕ

ಆಯನೂರು ಮಂಜುನಾಥ್ ಸಹಿತ ಹಲವರು ಇಂದು ಕಾಂಗ್ರೆಸ್ ಸೇರ್ಪಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 24. ಮಾಜಿ ಸಂಸದ ಆಯನೂರು ಮಂಜುನಾಥ್ ಸೇರಿದಂತೆ ಹಲವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕಳೆದ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ಪ್ರಯತ್ನಿಸಿ ವಿಫಲರಾಗಿದ್ದ ಆಯನೂರು ಮಂಜುನಾಥ್ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಹೀಗೆ ನಾಲ್ಕು ಸದನಗಳನ್ನು ಪ್ರತಿನಿಧಿಸಿರುವ ಆಯನೂರು ಮಂಜುನಾಥ್ ಇಂದು ಕಾಂಗ್ರೆಸ್ ಸೇರಲಿದ್ದಾರೆ. ಶಿಕಾರಿಪುರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗರಾಜ

ಆಯನೂರು ಮಂಜುನಾಥ್ ಸಹಿತ ಹಲವರು ಇಂದು ಕಾಂಗ್ರೆಸ್ ಸೇರ್ಪಡೆ Read More »

ಕರ್ನಾಟಕ

2023 ರ ಏಷ್ಯಾಕಪ್‌- ತಂಡದ ಲಿಸ್ಟ್ ಪ್ರಕಟಿಸಿದ ಭಾರತ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 23.  2023ರ ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ರೋಹಿತ್‌ ಶರ್ಮಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಟೀಮ್‌ ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿಧ್‌ ಕೃಷ್ಣ ರಿಸರ್ವ್‌ ಆಟಗಾರ:

2023 ರ ಏಷ್ಯಾಕಪ್‌- ತಂಡದ ಲಿಸ್ಟ್ ಪ್ರಕಟಿಸಿದ ಭಾರತ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಆ. 23. ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಿಂದ ವರದಿಯಾಗಿದೆ. ಮೃತಪಟ್ಟ ಯುವಕನನ್ನು ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಜನೀಶ್ (18) ಎಂದು ಗುರುತಿಸಲಾಗಿದೆ. ರಜನೀಶ ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, 3 ವಾರದ ಹಿಂದೆ ಉಡುಪಿಯ ಸರಕಾರಿ ಆಸ್ವತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಇದಾದ 10 ದಿನಗಳ ನಂತರ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಿಸಿ, ವಾಂತಿ ಹಾಗೂ ಜ್ವರಕ್ಕೆ

ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಸ ಎಸೆತ – ಎಂಸಿಸಿಯಿಂದ ದಂಡ ವಸೂಲು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವವರ ಮೇಲೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ 4,000 ರೂ.ಗಳ ದಂಡ ವಿಧಿಸಿ, ಮೊತ್ತ ವಸೂಲಿ ಮಾಡಲಾಗಿರುವ ಕುರಿತು ವರದಿಯಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿ ಎಲ್ಲೆಂದರಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿರುವುದರಿಂದ ನಗರದ ವಿವಿಧ ಸ್ಥಳಗಳಲ್ಲಿ ತ್ಯಾಜ್ಯಗಳ ಬ್ಲಾಕ್ ಉಂಟಾಗಿ ನಗರದ ಸೌಂದರ್ಯಕ್ಕೆ ಹಾಗೂ ಸ್ವಚ್ಚತೆಗೆ ದಕ್ಕೆ ಉಂಟುಮಾಡುತ್ತಿದು, ಈ ರೀತಿಯ ಅನಧಿಕೃತ ಕಾನೂನು ಬಾಹಿರ

ಕಸ ಎಸೆತ – ಎಂಸಿಸಿಯಿಂದ ದಂಡ ವಸೂಲು Read More »

ಕರಾವಳಿ

ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ

(ನ್ಯೂಸ್ ಕಡಬ) newskadaba.com ಬಾಕು, ಆ. 23. ಆರ್​. ಪ್ರಜ್ಞಾನಂದ  ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್ ​ಬೈಜಾನ್​ನಲ್ಲಿ ನಡೆದ ಚೆಸ್ ವಿಶ್ವಕಪ್​ ಫೈನಲ್​ನ 2ನೇ ಗೇಮ್ ಕೂಡಾ ಡ್ರಾ’ನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದ ಮೊದಲ ಗೇಮ್​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡಾ ಸಮಬಲದೊಂದಿಗೆ ಅಂತ್ಯವಾಗಿದ್ದು, ಹೀಗಾಗಿ ಮುಂದೆ ನಡೆಯಲಿರುವ ಟೈ ಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ

ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ದ್ವಿಚಕ್ರ ವಾಹನ ಕಳವು- ಆರೋಪಿ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಪೊಲೀಸರು ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ಮತ್ತು ಬೆಂದೂರ್ ವೆಲ್ ಪ್ರದೇಶಗಳಲ್ಲಿ ಕಳವಾಗಿದ್ದ ದ್ವಿಚಕ್ರ ವಾಹನಗಳ ಪತ್ತೆ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆರೋಪಿ ತಾನು ಕಳವು ಮಾಡಿದ್ದ ಸ್ಕೂಟರ್ನಲ್ಲಿ ನಂಬರ್ ಪ್ಲೇಟ್ ಇಲ್ಲದೆ ತಿರುಗಾಡುತ್ತಿದ್ದನು. ಈ ಸಂದರ್ಭ ನಗರದ ಪಂಪ್ ವೆಲ್ ಬ್ರಿಡ್ಜ್ ಬಳಿ ಆತನನ್ನು ದಸ್ತಗಿರಿ ಮಾಡಿ ಆತನ

ದ್ವಿಚಕ್ರ ವಾಹನ ಕಳವು- ಆರೋಪಿ ಯುವಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ವಯಂ ಉದ್ಯೋಗ ಯೋಜನೆಯಡಿ ಆನ್-ಲೈನ್ ಮೂಲಕ ಸಾಲ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. 2023-24ನೇ ಸಾಲಿನ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ, ನೇರ ಸಾಲ ಯೋಜನೆ, ಆರ್ಯವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲ ಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ- ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದ ವರಿಗೆ 3 ಲಕ್ಷ ರೂ.ಗಳ ಮಿತಿಯೊಳಗಿರಬೇಕು, 18 ರಿಂದ 45 ವರ್ಷದೊಳಗಿರಬೇಕು.

ಸ್ವಯಂ ಉದ್ಯೋಗ ಯೋಜನೆಯಡಿ ಆನ್-ಲೈನ್ ಮೂಲಕ ಸಾಲ ಪಡೆಯಲು ಅರ್ಜಿ ಆಹ್ವಾನ Read More »

ಕರಾವಳಿ
Scroll to Top