ಕುಮಾರಸ್ವಾಮಿ ನಿವಾಸಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಬುಧವಾರದಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಉಪಸ್ಥಿತರಿದ್ದರು.

ಕುಮಾರಸ್ವಾಮಿ ನಿವಾಸಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ Read More »

ಕರ್ನಾಟಕ

ಶೀಘ್ರದಲ್ಲೇ ಡೀಸೆಲ್ ವಾಹನಗಳಿಗೆ ವಿದಾಯ ಹೇಳಿ – ಕಾರು ತಯಾರಕರಿಗೆ ನಿತಿನ್ ಗಡ್ಕರಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ. 13. ಭಾರತೀಯ ಕಾರು ಉತ್ಪಾದಕರಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, “ಡೀಸೆಲ್ ಗೆ ವಿದಾಯ ಹೇಳಿ… ದಯವಿಟ್ಟು ಅವುಗಳನ್ನು ತಯಾರಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲು ಕಷ್ಟವಾಗುವಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ” ಎಂದು ಹೊಸದಿಲ್ಲಿಯಲ್ಲಿ ನಡೆದ 63 ನೇ ವಾರ್ಷಿಕ SIAM ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು. 2070 ರ ವೇಳೆಗೆ ಕಾರ್ಬನ್ ನೆಟ್ ಝೀರೊ ಸಾಧಿಸುವುದು ಹಾಗೂ ಡೀಸೆಲ್ ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ

ಶೀಘ್ರದಲ್ಲೇ ಡೀಸೆಲ್ ವಾಹನಗಳಿಗೆ ವಿದಾಯ ಹೇಳಿ – ಕಾರು ತಯಾರಕರಿಗೆ ನಿತಿನ್ ಗಡ್ಕರಿ ಎಚ್ಚರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಟೋ ರಿಕ್ಷಾಗೆ ಲಾರಿ ಢಿಕ್ಕಿ- ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 13. ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ರಿಕ್ಷಾವೊಂದು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕನ ಸಹಿತ ಮೂವರು ಗಾಯಗೊಂಡ ಘಟನೆ ಉಜಿರೆಯ ಟಿ.ಬಿ ಕ್ರಾಸ್ ಸಮೀಪ ಬುಧವಾರದಂದು ಸಂಭವಿಸಿದೆ. ಆಟೋ ರಿಕ್ಷಾವೊಂದು ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ವೇಳೆ ಮುಂದಿನಿಂದ ತೆರಳುತ್ತಿದ್ದ ಲಾರಿಯೊಂದು ಹಠಾತ್ ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ರಿಕ್ಷಾವನ್ನೂ ನಿಲ್ಲಿಸಬೇಕಾಯಿತು. ಆದರೆ ದುರದೃಷ್ಟವಷಾತ್ ಹಿಂದಿನಿಂದ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಢಿಕ್ಕಿ ಹೊಡಿದಿದೆ. ಎರಡೂ

ಆಟೋ ರಿಕ್ಷಾಗೆ ಲಾರಿ ಢಿಕ್ಕಿ- ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಏಷ್ಯಾಕಪ್ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ

(ನ್ಯೂಸ್ ಕಡಬ) newskadaba.com ಕೊಲಂಬೊ, ಸೆ. 13. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಸೂಪರ್ 4 ಸುತ್ತಿನ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಒಟ್ಟಿಗೆ ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಏಕದಿನ ಸ್ವರೂಪದಲ್ಲಿ ಜೋಡಿಯಾಗಿ 5,000 ರನ್‌ಗಳನ್ನು ಪೂರ್ಣಗೊಳಿಸಿ, 5 ಸಾವಿರ ರನ್​ಗಳ ಜೊತೆಯಾಟ ನಡೆಸಿದ 8 ನೇ ಜೋಡಿ ಎನಿಸಿಕೊಂಡಿದ್ದಾರೆ. ಭಾರತ ತಂಡದಲ್ಲಿ ಸಚಿನ್

ಏಷ್ಯಾಕಪ್ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ Read More »

ಕ್ರೀಡಾ ನ್ಯೂಸ್

ಇನ್ನುಮುಂದೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳಿಗೆ ಬೂತಲ್ಲೇ ಅಂಚೆ ಮತದಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 13. ಇನ್ನುಮುಂದೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಗದಿಪಡಿಸಿದ ಚುನಾವಣಾ ಕೇಂದ್ರದಲ್ಲಿ ನಿರ್ದಿಷ್ಟ ಮಾದರಿಯಲ್ಲೇ ಅಂಚೆ ಮತ ಚಲಾವಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ ಆದೇಶಿಸಿದೆ. ಅಂಚೆ ಮತದಾನದ ದುರ್ಬಳಕೆಯನ್ನು ತಡೆಯಲು ಕೇಂದ್ರ ಚುನಾವಣಾ ಆಯೋಗವು ಪ್ರಸ್ತಾಪ ಸಲ್ಲಿಸಿದ್ದ ಹಿನ್ನಲೆ ಶಿಫಾರಸ್ಸನ್ನು ಅಂಗೀಕರಿಸಿದ ಕೇಂದ್ರ ಕಾನೂನು ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆ. ನಿಯೋಜಿಸಲಾದ ಅಧಿಕಾರಿಗಳಿಗೆ ಚುನಾವಣೆಯ ದಿನ ರಾತ್ರಿ 8ರ ವರೆಗೆ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನುಮುಂದೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳಿಗೆ ಬೂತಲ್ಲೇ ಅಂಚೆ ಮತದಾನ Read More »

ರಾಷ್ಟ್ರೀಯ ನ್ಯೂಸ್

‘ಬೀರಬಲ್’ ಖ್ಯಾತಿಯ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ವಿಧಿವಶ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 13. ‘ಬೀರಬಲ್’ ಖ್ಯಾತಿಯ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ(84) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1938ರಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ ಸತೀಂದರ್ ಕುಮಾರ್ ಖೋಸ್ಲಾ ಅವರು, 1967ರಲ್ಲಿ ಉಪ್ಕಾರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆಗೈದು ಹಿಂದಿ ಚಿತ್ರರಂಗದ ಜೊತೆಗೆ ಪಂಜಾಬಿ, ಭೋಜ್‌ಪುರಿ ಮತ್ತು ಮರಾಠಿ ಸಿನಿಮಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಹಾಸ್ಯನಟನ ಸಾವಿಗೆ ಚಿತ್ರರಂಗ ಸೇರಿದಂತೆ ವಿವಿಧ ಗಣ್ಯರು ಸಂತಾಪ

‘ಬೀರಬಲ್’ ಖ್ಯಾತಿಯ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ವಿಧಿವಶ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

ಬೈಕ್ ಮತ್ತು ಬಸ್ ನಡುವೆ ಅಪಘಾತ – ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಸೆ. 13. ಬೈಕ್‌ ಮತ್ತು ಬಸ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ‌ ವಾಹನ ಸವಾರ ಮೃತಪಟ್ಟ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಬುಧವಾರದಂದು ಮುಂಜಾನೆ ನಡೆದಿದೆ. ಮೃತ ಸವಾರನನ್ನು ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(24) ಎಂದು ಗುರುತಿಸಲಾಗಿದೆ. ಯೂಟ್ಯೂಬ್ ವ್ಲಾಗರ್ ಹಾಗೂ ಅಜೆಕಾರಿನ ಟೆಂಪೋ ಚಾಲಕ ಮಾಲಕರೂ ಆಗಿದ್ದ ಅಶ್ವಿತ್ ಶೆಟ್ಟಿ ಇಂದು ಅಜೆಕಾರಿನಿಂದ ಬೈಕ್ ಸರ್ವೀಸ್ ಗೆಂದು ಹೋಗುತ್ತಿದ್ದರು ಎನ್ನಲಾಗಿದೆ. ಅವಿವಾಹಿತರಾಗಿದ್ದ ಮೃತ ಅಶ್ವಿತ್ ತಾಯಿ,

ಬೈಕ್ ಮತ್ತು ಬಸ್ ನಡುವೆ ಅಪಘಾತ – ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ನಿಂತಿದ್ದ ಬಸ್ ಗೆ ಟ್ರಕ್ ಢಿಕ್ಕಿ – 11 ಮಂದಿ ದುರ್ಮರಣ

(ನ್ಯೂಸ್ ಕಡಬ) newskadaba.com ಜೈಪುರ, ಸೆ. 13. ಡೀಸೆಲ್ ಖಾಲಿಯಾಗಿ ನಿಂತಿದ್ದ ಬಸ್‍ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 11 ಜನ ಮೃತಪಟ್ಟ ಘಟನೆ ರಾಜಸ್ಥಾನದ ಭರತ್‍ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ರಾಜಸ್ಥಾನದ ಪುಷ್ಕರ್‌ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದ ವೇಳೆ ಡೀಸೆಲ್ ಖಾಲಿಯಾಗಿ ಲಖನ್‍ಪುರದ ಅಂಟ್ರಾ ಫ್ಲೈಓವರ್‌ ಮಧ್ಯದಲ್ಲಿ ನಿಂತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಬಸ್‍ಗೆ ಡಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ 11 ಮಂದಿ ಮೃತಪಟ್ಟಿದ್ದು, 12 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು

ನಿಂತಿದ್ದ ಬಸ್ ಗೆ ಟ್ರಕ್ ಢಿಕ್ಕಿ – 11 ಮಂದಿ ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಕ್ಯಾಲಿಫೋರ್ನಿಯ, ಸೆ. 13. ಆ್ಯಪಲ್ ಕಂಪೆನಿಯು ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಹೊಚ್ಚ ಹೊಸ ಐಫೋನ್​ 15 ಪ್ರೊ ಮತ್ತು ಐಫೋನ್​ 15 ಪ್ರೊ ಮ್ಯಾಕ್ಸ್​ ನ್ನು ಬಿಡುಗಡೆ ಮಾಡಿದ್ದು, ಇದು ಅತ್ಯಂತ ಹಗುರ ಮತ್ತು ತೆಳುವಾದ ವಿನ್ಯಾಸವನ್ನು ಹೊಂದಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕಳೆದ ವರ್ಷದ ಮಾದರಿಗಳ ಹೊಳೆಯುವ, ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್‌ಗಿಂತ ಭಿನ್ನವಾಗಿ, ಪ್ರೊ ಮಾದರಿಯ ಫ್ರೇಮ್ ಬ್ರಷ್‌ನಂತೆ ಹೊಸ ಮೊಬೈಲ್‌ಗಳು ಕಾಣುತ್ತಿವೆ.

ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! – ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಪೈಕಿ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (ಕಲಾ/ ವಾಣಿಜ್ಯ/ ವಿಜ್ಞಾನ ವಿಭಾಗ) ಉಚಿತ ಲ್ಯಾಪ್‍ ಟಾಪ್‍ಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ, ಅರ್ಜಿ ನಮೂನೆಯನ್ನು ಕಾರ್ಮಿಕ ಅಧಿಕಾರಿ ಕಚೇರಿ ಅಥವಾ ಆಯಾ ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ

ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! – ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಆಹ್ವಾನ Read More »

ಕರ್ನಾಟಕ
Scroll to Top