ವಿಹಾರಕ್ಕೆಂದು ಬಂದಿದ್ದ ಯುವಕ ಸಮುದ್ರ ಪಾಲು- ಇಬ್ಬರ ರಕ್ಷಣೆ

(ನ್ಯೂಸ್ ಕಡಬ) newskadaba.com ಸುರತ್ಕಲ್‌, ಸೆ. 18. ಇಲ್ಲಿನ ಮಲ್ಲಮಾರ್‌ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದ ಮೂವರ ಪೈಕಿ ಒರ್ವ ಸಮುದ್ರಪಾಲಾಗಿದ್ದು ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರದಂದು ಸಂಜೆ ನಡೆದಿದೆ. ಸಮುದ್ರಪಾಲಾದ ವ್ಯಕ್ತಿಯನ್ನು ಬಾಗಲಕೋಟೆ ನಿವಾಸಿ ಮಹಂತೇಶ್‌(29) ಎಂದು ಗುರುತಿಸಲಾಗಿದೆ. ಈತ ಅಕ್ಕ ಸಾವಿತ್ರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಸ್ನೇಹಿತರ ಜೊತೆಗೆ ವಿಹಾರಕ್ಕೆ ಬಂದಿದ್ದ ಎನ್ನಲಾಗಿದೆ. ಮಹಂತೇಶ್‌ ನನ್ನು ರಕ್ಷಿಸಿ ಹಿಂದೆ ಎಳೆದು ತರುತ್ತಿದ್ದಾಗ ಮತ್ತೆ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದಾನೆ. ಈ ಕುರಿತು […]

ವಿಹಾರಕ್ಕೆಂದು ಬಂದಿದ್ದ ಯುವಕ ಸಮುದ್ರ ಪಾಲು- ಇಬ್ಬರ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಕಡಬ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಪ್ರಕರಣದ ಆರೋಪಿ ಕಡಬ ತಾಲೂಕು ಕೊಣಾಜೆ ಗ್ರಾಮದ ಗುಜ್ಜಟ್ಟೆ ಕದ್ಯ ಭುವನೇಶ್ವರ ಚಂದ್ರ ಎಂಬಾತನನ್ನು ಮೇಲಾಧಿಕಾರಿಗಳ ಆದೇಶದಂತೆ ಕಡಬ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್ಐ ಅಭಿನಂದನ್‌ ಮತ್ತು ತನಿಖಾ ಪಿ.ಎಸ್ಐ ಅಕ್ಷಯ್‌ ಡವಗಿ ಅವರ ಮಾರ್ಗದರ್ಶನದಂತೆ ಕಡಬ ಪೊಲೀಸ್‌ ಠಾಣಾ ಸಿಬ್ಬಂದಿಗಳಾದ ಭವಿತ್‌ ಹಾಗೂ ವಿನೋದ್‌ ಅವರು ಮಂಗಳೂರಿನ

ಕಡಬ: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ವಿದೇಶದಲ್ಲಿರುವ ಪತಿಯಿಂದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ಸಂದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 18. ವಿದೇಶದಲ್ಲಿರುವ ಪತಿಯೋರ್ವ ಸುಳ್ಯದಲ್ಲಿರುವ ತನ್ನ ಪತ್ನಿಗೆ ವಾಟ್ಸಪ್‌ ಸಂದೇಶದ ಮೂಲಕ ತ್ರಿವಳಿ ತಲಾಖ್‌ ನೀಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಮಹಿಳೆ ಪತಿ ವಿರುದ್ದ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೇರಳ ತ್ರಿಶೂರ್‌ ಮೂಲದ ಅಬ್ದುಲ್‌ ರಾಶಿದ್‌ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಆಕೆಯನ್ನು ಚೆನ್ನಾಗಿ ನೋಡಿಕೊಂಡಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದಾರೆ. ಎರಡು ವರ್ಷಗಳ ಮೊದಲು

ಸುಳ್ಯ: ವಿದೇಶದಲ್ಲಿರುವ ಪತಿಯಿಂದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ಸಂದೇಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೋಳಿ ಅಂಕಕ್ಕೆ ಪೊಲೀಸ್ ದಾಳಿ- 8 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 18. ಹಣವಾಗಿಟ್ಟು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ವಲಸರಿ ಎಂಬಲ್ಲಿ ನಡೆದಿದೆ. ಸ್ಥಳದಿಂದ ಎಂಟು ಮಂದಿಯ ಸಹಿತ ಒಟ್ಟು 2,350 ರೂ. ನಗದು, 4 ಕೋಳಿ, 2 ಕೋಳಿ ಬಾಲುಗಳು, ಒಂದು ಓಮ್ನಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕೋಳಿ ಅಂಕಕ್ಕೆ ಪೊಲೀಸ್ ದಾಳಿ- 8 ಮಂದಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

SBI ನಲ್ಲಿ 442 ಹುದ್ದೆಗಳು – ಕೂಡಲೇ ಅರ್ಜಿ ಸಲ್ಲಿಸಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು SBI ಅಧಿಸೂಚನೆಯನ್ನು ಹೊರಡಿಸಿದೆ. ಈ ಪೈಕಿ 442 ಮ್ಯಾನೇಜರ್ ಮತ್ತು ಸ್ಪೆಷಲಿಸ್ಟ್ ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು BTech/BE ಅಥವಾ MCA ವಿದ್ಯಾಭ್ಯಾಸ ಹೊಂದಿರಬೇಕು. ಅರ್ಜಿ ಶುಲ್ಕ 7750. SC, ST, PwBD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಸಂಪೂರ್ಣ ವಿವರಗಳಿಗಾಗಿ https://sbi.co.in/ ನ್ನು ಕ್ಲಿಕ್ ಮಾಡಿ.

SBI ನಲ್ಲಿ 442 ಹುದ್ದೆಗಳು – ಕೂಡಲೇ ಅರ್ಜಿ ಸಲ್ಲಿಸಿ Read More »

ಉದ್ಯೋಗ, ಕರ್ನಾಟಕ

ವಿದ್ಯುತ್ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ – ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಜಪೆ, ಸೆ. 18. ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಎಂದು ಗುರುತಿಸಲಾಗಿದೆ. ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ(37), ಶೋಭಾ ಅವರ ಪುತ್ರ ಭವಿಷ್‌ (9) ಹಾಗೂ ಆಟೋ ಚಾಲಕ ಪದ್ಮನಾಭ

ವಿದ್ಯುತ್ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ – ಯುವತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ದಾಟಲು ನಿಂತಿದ್ದ ಬೈಕ್ ಗೆ ಬಸ್ ಢಿಕ್ಕಿ – ಯುವಕರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಸುರತ್ಕಲ್‌, ಸೆ. 18. ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಇಲ್ಲಿನ ಹೊಸಬೆಟ್ಟು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಹಳೆಯಂಗಡಿ ನಿವಾಸಿ ಮೊಹಮ್ಮದ್ ಶಾಹೀಲ್(20) ಮತ್ತು ಪಕ್ಷಿಕೆರೆಯ ಅರಾಫತ್(19) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಬಸ್, ಡಿವೈಡರ್ ಬಳಿ ರಸ್ತೆ ದಾಟಲು ಕಾಯುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ

ರಸ್ತೆ ದಾಟಲು ನಿಂತಿದ್ದ ಬೈಕ್ ಗೆ ಬಸ್ ಢಿಕ್ಕಿ – ಯುವಕರಿಬ್ಬರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 17.ನಿಂತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕುಕ್ಕೆ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ಯಾಗ ಶಾಲೆ ಬಳಿ ನಡೆದಿದೆ. ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕೆಂದು ಬಂದಿದ್ದ ಕುಟುಂಬವೊಂದು ಯಾಗಶಾಲೆಯ ಮುಂದೆ ಕಾರು ನಿಲ್ಲಿಸಿತ್ತು. ಸ್ವಲ್ಪ ಸಮಯದ ಬಳಿಕ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅದನ್ನು ನಂದಿಸಿ 30ಕ್ಕೂ ಹೆಚ್ಚು ವಾಹನಗಳು ಪಕ್ಕದಲ್ಲೇ ನಿಂತಿದ್ದರಿಂದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಸುಳ್ಯ: ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಕ್ರೈಮ್ ನ್ಯೂಸ್

ನೀವು ತೂಕ ಇಳಿಸಿಕೊಳ್ಳಲು ಚಿಂತಿಸುತ್ತಿದ್ದೀರಾ..? – ಹಾಗಾದರೆ ಅನ್ನ’ದಿಂದ ದೂರವಿರಿ

(ನ್ಯೂಸ್ ಕಡಬ) newskadaba.com ಸೆ. 17. ರಾತ್ರಿಯಲ್ಲಿ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ಭಾರತೀಯ ಸಂಸ್ಕೃತಿಯ ಪಾಕಪದ್ಧತಿಯಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಾವಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅನ್ನ ತಿನ್ನುವುದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ. ಹಾಗಾದರೆ ರಾತ್ರಿ ಅನ್ನವನ್ನು ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. ರಾತ್ರಿ ಅನ್ನ ತಿನ್ನುವುದರಿಂದ ಪ್ರಯೋಜನಗಳು:- ರಾತ್ರಿಯಲ್ಲಿ ಅನ್ನ ಸೇವಿಸುವುದರಿಂದ, ಜೀರ್ಣಕ್ರಿಯೆ ಆರೋಗ್ಯಕರವಾಗುವುದು ಮಾತ್ರವಲ್ಲದೇ, ಹೊಟ್ಟೆಗೆ

ನೀವು ತೂಕ ಇಳಿಸಿಕೊಳ್ಳಲು ಚಿಂತಿಸುತ್ತಿದ್ದೀರಾ..? – ಹಾಗಾದರೆ ಅನ್ನ’ದಿಂದ ದೂರವಿರಿ Read More »

ಆರೋಗ್ಯ ಮಾಹಿತಿ

ಬಾರ್ಲಿ ಸೇವಿಸಿ- ಹೃದಯಾಘಾತ ಸಮಸ್ಯೆಯಿಂದ ದೂರವಿರಿ..!

(ನ್ಯೂಸ್ ಕಡಬ) newskadaba.com ಸೆ. 17. ಬಾರ್ಲಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಹಾಗಾಗಿ ಬಾರ್ಲಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದರೆ ಬಾರ್ಲಿ ಸೇವನೆಯಿಂದ ನಮಗೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯೋಣ. ಬಾರ್ಲಿ ಸೇವಿಸುವುದರಿಂದ ದೀರ್ಘಕಾಲ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಬಾರ್ಲಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಬಾರ್ಲಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಗ್ಯಾಸ್, ಆಮ್ಲೀಯತೆ, ಮಲಬದ್ಧತೆ ಹಾಗೂ ಹೊಟ್ಟೆಯುಬ್ಬರ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಇದು ಅತಿಸಾರ, ವಾಂತಿ ಸಮಸ್ಯೆಯನ್ನೂ ನಿವಾರಿಸುತ್ತದೆ. ರಕ್ತ ಶುದ್ಧೀಕರಣದ ಸಾಮರ್ಥ್ಯ ಹೊಂದಿರುವ

ಬಾರ್ಲಿ ಸೇವಿಸಿ- ಹೃದಯಾಘಾತ ಸಮಸ್ಯೆಯಿಂದ ದೂರವಿರಿ..! Read More »

ಆರೋಗ್ಯ ಮಾಹಿತಿ
Scroll to Top