ಕನ್ನಡ ಬಿಗ್ ಬಾಸ್ ಸೀಸನ್- 10 ಪ್ರಸಾರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್..! – ಯಾವಾಗ ಅಂತೀರಾ…? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ದೇಶದಲ್ಲಿ ಯಶಸ್ಸನ್ನು ಸಾಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಬಹುಬಾಷೆಯಲ್ಲಿಯೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕಿರುತೆರೆ ಪ್ರೇಕ್ಷಕರು ಕಳೆದ 9 ಸೀಸನ್‌ಗಳಿಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಇದೇ ಭರವಸೆಯೊಂದಿಗೆ ಮತ್ತೊಂದು ಸೀಸನ್‌ ಪ್ರಾರಂಭವಾಗುತ್ತಿದ್ದು, ಅಕ್ಟೋಬರ್ 8 ರಿಂದ ಭರ್ಜರಿಯಾಗಿ “ಬಿಗ್ ಬಾಸ್ ಕನ್ನಡ ಸೀಸನ್ 10” ಆಂಭವಾಗಲಿದೆ. ಸದ್ಯಕ್ಕೆ ಸೀಸನ್ 10ರ ಪ್ರೋಮೊ ಪ್ರಸಾರವಾಗುತ್ತಿದ್ದು, ರಿಯಾಲಿಟಿ ಶೋ ಆರಂಭವಾಗುವ ದಿನವನ್ನು ರಿವೀಲ್‌ ಮಾಡಲಾಗಿದೆ. ಇನ್ನು ಎಂದಿನಂತೆ […]

ಕನ್ನಡ ಬಿಗ್ ಬಾಸ್ ಸೀಸನ್- 10 ಪ್ರಸಾರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್..! – ಯಾವಾಗ ಅಂತೀರಾ…? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ Read More »

ಕರ್ನಾಟಕ

ಚೈತ್ರಾ ಹೆಸರಿನ ಜೊತೆ ‘ಕುಂದಾಪುರ’ ಬಳಸದಂತೆ ಕೋರ್ಟ್ ಮೊರೆ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ಎಂಬವರು ದಾವೆ ಹೂಡಿದ್ದಾರೆ. ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದ್ದು, ಕದಂಬರು, ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಅರಸರು ಈ ಪಟ್ಟಣದ ಸಾಂಸ್ಕೃತಿಕ ಮತ್ತು

ಚೈತ್ರಾ ಹೆಸರಿನ ಜೊತೆ ‘ಕುಂದಾಪುರ’ ಬಳಸದಂತೆ ಕೋರ್ಟ್ ಮೊರೆ…! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚೈತ್ರಾ ಕುಂದಾಪುರ ಪೊಲೀಸ್ ಕಸ್ಟಡಿ ಇಂದು ಅಂತ್ಯ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಉದ್ಯಮಿಗೆ ಕೋಟ್ಯಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳ ಪೊಲೀಸ್‌ ಕಸ್ಟಡಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆ ಎಲ್ಲ ಆರೋಪಿಗಳನ್ನು ಸಿಸಿಬಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚೈತ್ರಾ ಜತೆಗೆ ಗಗನ್‌ ಕಡೂರು, ರಮೇಶ್‌, ಚೆನ್ನನಾಯ್ಕ್‌, ಧನರಾಜ್‌ ಹಾಗೂ ಶ್ರೀಕಾಂತ್‌ನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಭಿನವ ಹಾಲಶ್ರೀ ಹೊರತುಪಡಿಸಿ ಎಲ್ಲಾ ಬಂಧಿತ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.

ಚೈತ್ರಾ ಕುಂದಾಪುರ ಪೊಲೀಸ್ ಕಸ್ಟಡಿ ಇಂದು ಅಂತ್ಯ..! Read More »

ಕರಾವಳಿ

NABARD ನಲ್ಲಿ ಹಲವು ಉದ್ಯೋಗಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 23. ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಟರ್ ಆಂಡ್ ರೂರಲ್ ಡೆವಲಪ್‌ಮೆಂಟ್ (NABARD) ನಲ್ಲಿ ಖಾಲಿ ಇರುವ 150 ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆ. 23ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹೊಂದಿರಬೇಕು. ಮಾಸಿಕ 744,500 ದಿಂದ 789,150 ವೇತನ ಸಿಗಲಿದೆ. ಹುದ್ದೆಗೆ ಸಂಬಂಧಿಸಿ, ವಯಸ್ಸು, ಆಯ್ಕೆಯ ಪ್ರಕ್ರಿಯೆ ಹೆಚ್ಚಿನ ಮಾಹಿತಿಗೆ NABARD ವೆಬ್ ಗೆ ಲಾಗೀನ್

NABARD ನಲ್ಲಿ ಹಲವು ಉದ್ಯೋಗಗಳು- ಅರ್ಜಿ ಆಹ್ವಾನ Read More »

ಉದ್ಯೋಗ, ರಾಷ್ಟ್ರೀಯ ನ್ಯೂಸ್

ಲ್ಯಾಂಡರ್, ರೋವರ್ ಜೊತೆ ಸಂಪರ್ಕ ವಿಫಲ- ಇಸ್ರೋ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಚಂದ್ರಯಾನ 3ರ ಲ್ಯಾಂಡರ್ ನೌಕೆ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಇಸ್ರೋದಿಂದ ಮಾಡಲಾಗಿದ್ದು, ಆದರೆ ಅವುಗಳಿಂದ ಇನ್ನೂ ಯಾವುದೇ ಸಂಕೇತ (ಸಿಗ್ನಲ್)ಗಳು ಬಂದಿಲ್ಲವೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ವಿಕ್ರಮ್ ಹಾಗೂ ಪ್ರಜ್ಞಾನ್ ನೌಕೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಕಾರಣಾಂತರಗಳಿಂದ ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಹೇಳಿದೆ. ಈ ಬಗ್ಗೆ ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ಸ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ ಅವರು, ಈ ಮೊದಲು

ಲ್ಯಾಂಡರ್, ರೋವರ್ ಜೊತೆ ಸಂಪರ್ಕ ವಿಫಲ- ಇಸ್ರೋ Read More »

ಕರ್ನಾಟಕ, ತಂತ್ರಜ್ಞಾನ

ಮಂಗಳೂರು: ಟೆಂಪೋ ಟ್ರಾವೆಲರ್ ಕಳವು ಪ್ರಕರಣ- ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತ ಆರೊಪಿಗಳನ್ನು ಹೊರ ರಾಜ್ಯದವರಾದ ಅರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಹಾಗೂ ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲ್ಲೆರ್‌ ನ್ನು ವಶಪಡಿಸಿಕೊಳ್ಳಲಾಗಿದೆ. ಸೆ. 14ರಂದು ರಾತ್ರಿ 8:30ಕ್ಕೆ ನಗರದ ಕುಂಟಿಕಾನ

ಮಂಗಳೂರು: ಟೆಂಪೋ ಟ್ರಾವೆಲರ್ ಕಳವು ಪ್ರಕರಣ- ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಟ್ರಕ್ ನಲ್ಲಿ 12 ಕೋ.ರೂ. ಮೌಲ್ಯದ ಮಾದಕ ವಸ್ತು ಸಾಗಾಟ – ಬಿಎಸ್‌ಎಫ್‌ನಿಂದ ಭರ್ಜರಿ ಬೇಟೆ

(ನ್ಯೂಸ್ ಕಡಬ) newskadaba.com ಕೋಲ್ಕತಾ, ಸೆ. 22. ಪಶ್ಚಿಮಬಂಗಾಳದ ದಕ್ಷಿಣ ದಿನಜ್‌ಪುರ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ಅಧಿಕಾರಿಗಳು ಟ್ರಕ್ ನಲ್ಲಿದ್ದ 12 ಕೋ. ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಕುರಿತು ವರದಿಯಾಗಿದೆ. ಖಚಿತ ಮಾಹಿತಿ ದೊರೆತ ಹಿನ್ನೆಲೆ ಗಡಿ ಭದ್ರತಾ ಪಡೆಯ ಬೆಟಾಲಿಯನ್‌ಗಳು ಹಾಗೂ ಕಸ್ಟಮ್ ಅಧಿಕಾರಿಗಳು ಜಂಟಿಯಾಗಿ, ನಿಲ್ಲಿಸಿದ್ದ ಟ್ರಕ್‌ ನಲ್ಲಿ ಕಾರ್ಯಾಚರಣೆ ನಡೆಸಿದವು. ಕಾರ್ಯಾಚರಣೆಯ ವೇಳೆ ಟ್ರಕ್ ಚಾಲಕನ ಕ್ಯಾಬಿನ್‌ನಲ್ಲಿ ಪ್ಲಾಸ್ಟಿಕ್ ನ ಕಪ್ಪು ಕೈ ಚೀಲವೊಂದು ಪತ್ತೆಯಾಗಿದ್ದು, ಈ

ಟ್ರಕ್ ನಲ್ಲಿ 12 ಕೋ.ರೂ. ಮೌಲ್ಯದ ಮಾದಕ ವಸ್ತು ಸಾಗಾಟ – ಬಿಎಸ್‌ಎಫ್‌ನಿಂದ ಭರ್ಜರಿ ಬೇಟೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆ; ಸಚಿವ ಮಧು ಬಂಗಾರಪ್ಪಗೆ ಅಭಿಪ್ರಾಯ ಸಂಗ್ರಹ ಹೊಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಉಸ್ತುವಾರಿ ಹೊಣೆ ವಹಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ‘ತಮ್ಮನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವೀಕ್ಷಕರನ್ನಾಗಿ ನೇಮಿಸಲಾಗಿದೆ. ತಾವು ಆ ಕ್ಷೇತ್ರಕ್ಕೆ ಭೇಟಿ ನೀಡಿ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ವಿಧಾನಸಭಾ ಕ್ಷೇತ್ರವಾರು ಮುಖಂಡರ ಕಾರ್ಯಕರ್ತರ ಸಭೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆ; ಸಚಿವ ಮಧು ಬಂಗಾರಪ್ಪಗೆ ಅಭಿಪ್ರಾಯ ಸಂಗ್ರಹ ಹೊಣೆ Read More »

ಕರಾವಳಿ, ಕರ್ನಾಟಕ

ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್-ಪ್ರೆಸ್ ರೈಲು ಸಂಚಾರ ಆರಂಭ – ಸಂಸದರ ಮನವಿಗೆ ರೈಲ್ವೇ ಸಚಿವರ ಭರವಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಅಕ್ಟೋಬರ್ ತಿಂಗಳ ಅಂತ್ಯದೊಳಗೆ ನಗರದಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲು ಸೇವೆ ಆರಂಭಿಸುವುದಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರದಂದು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಈ ಭರವಸೆ ಲಭಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿನ್‌ ವರೆಗೆ ವಿಸ್ತರಿಸುವಂತೆ ಸಲ್ಲಿಸಲಾಗಿರುವ ಕೇರಳಿಗರ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದಂತೆ ಒತ್ತಾಯಿಸಿರುವೆ. ಇದಕ್ಕೂ ಸಚಿವರು ಸ್ಪಂದಿಸಿದ್ದು,

ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್-ಪ್ರೆಸ್ ರೈಲು ಸಂಚಾರ ಆರಂಭ – ಸಂಸದರ ಮನವಿಗೆ ರೈಲ್ವೇ ಸಚಿವರ ಭರವಸೆ Read More »

ಕರಾವಳಿ, ಕರ್ನಾಟಕ

ಎನ್‌ಡಿಎಗೆ ಜೆಡಿಎಸ್ ಸೇರ್ಪಡೆ – ಪಕ್ಷದ ವಕ್ತಾರೆ ಹುದ್ದೆಗೆ ಯು.ಟಿ. ಆಯಿಶ ಫರ್ಝಾನ ರಾಜೀನಾಮೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22. ಎನ್.ಡಿಎ ಗೆ ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಜಾತ್ಯಾತೀತ ಜನತಾದಳದ (JDS) ರಾಜ್ಯ ವಕ್ತಾರೆ ಹುದ್ದೆಗೆ ಯು.ಟಿ.ಆಯಿಶ ಫರ್ಝಾನ ಅವರು ಶುಕ್ರವಾರದಂದು ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಜೆಡಿಎಸ್‌ ನ ಮಾಧ್ಯಮ ಮುಖ್ಯಸ್ಥರಾಗಿರುವ ಶ್ರೀಕಂಠೇಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಅವರು, “ಕನ್ನಡ ನಾಡಿನ ಸಮೃದ್ಧಿ ಮತ್ತು ಜಾತ್ಯಾತೀತ ನಿಲುವುಗಳು ನನ್ನ ಜೀವನದ ಪ್ರಧಾನ ಆಶಯಗಳಾಗಿದ್ದು ಆ ನಿಟ್ಟಿನಲ್ಲಿ ಶ್ರಮಿಸುವ ಸಲುವಾಗಿ ನಾನು ತಮ್ಮ ಪಕ್ಷವನ್ನು ಸೇರಿದ್ದೆ. ಆದರೆ ಬದಲಾದ

ಎನ್‌ಡಿಎಗೆ ಜೆಡಿಎಸ್ ಸೇರ್ಪಡೆ – ಪಕ್ಷದ ವಕ್ತಾರೆ ಹುದ್ದೆಗೆ ಯು.ಟಿ. ಆಯಿಶ ಫರ್ಝಾನ ರಾಜೀನಾಮೆ Read More »

ಕರ್ನಾಟಕ
Scroll to Top