ಕರ್ನಾಟಕ ಸೇರಿ ದೇಶದ 9 ರಾಜ್ಯಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ – ಪ್ರಧಾನಿಯಿಂದ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ ಹನ್ನೊಂದು ರಾಜ್ಯಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ 9 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿದರು. ದೇಶದಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಕ್ರೇಝ್ ಹೆಚ್ಚುತ್ತಿದೆ ಮತ್ತು ಹೊಸ ರೈಲುಗಳು ದೇಶದ ಪ್ರತಿಯೊಂದು ಭಾಗವನ್ನು ಸಂಪರ್ಕಿಸುವ ಸಮಯದ ವಿಷಯವಾಗಿದೆ ಎಂದು […]

ಕರ್ನಾಟಕ ಸೇರಿ ದೇಶದ 9 ರಾಜ್ಯಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ – ಪ್ರಧಾನಿಯಿಂದ ಗ್ರೀನ್ ಸಿಗ್ನಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮರದಿಂದ ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಇರ್ದೆ, ಸೆ. 24. ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇರ್ದೆ ಗ್ರಾಮದ ಪದರಂಜ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಾಮಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ರಾಮಣ್ಣ ಪೂಜಾರಿಯವರು ಸೆ. 23ರಂದು ಮನೆ ಬಳಿಯ ತೆಂಗಿನ ಮರ ಹತ್ತುವ ಸಂದರ್ಭ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮರದಿಂದ ಬಿದ್ದು ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಸೇವನೆ – ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಇಡ್ಕಿದು, ಸೆ. 24. ನಿರ್ಜನ ಪ್ರದೇಶದಲ್ಲಿ ಯುವಕರ ತಂಡವೊಂದು ಗಾಂಜಾ ಮತ್ತು ಮಾದಕ ವಸ್ತು ಸೇವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಕಾದು ಕುಳಿತು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಡ್ಕಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ನಡೆದಿದೆ. ಬಂಧಿತ ಯುವಕರಿಬ್ಬರು ಮಾದಕ ವಸ್ತು ಸೇವಿಸಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇವರಿಂದ 1 ಬೈಕ್‌ ಹಾಗೂ ಸ್ಕೂಟರ್‌ ನ್ನು ವಶಕ್ಕೆ

ಮಾದಕ ವಸ್ತು ಸೇವನೆ – ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು Read More »

ಕರಾವಳಿ, ಕ್ರೈಮ್ ನ್ಯೂಸ್

ಸುಧಾಮೂರ್ತಿ ಹೆಸರಿನಲ್ಲಿ ವಂಚನೆ – ಇಬ್ಬರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹೆಸರನ್ನು ಬಳಸಿ, ವಂಚನೆ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಸುಧಾಮೂರ್ತಿ ಅವರ ಆಪ್ತ ಸಹಾಯಕಿ ಮಮತಾ ಸಂಜಯ್ ಎಂಬವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ ದೂರಿನಂತೆ ಶೃತಿ ಹಾಗೂ ಲಾವಣ್ಯ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ದೂರಿನ ಪ್ರಕಾರ, ಕನ್ನಡ ಕೂಟ ಆಫ್ ನಾರ್ಥ್ ಕ್ಯಾಲಿಪೋರ್ನಿಯಾ ಎಂಬ ಸಂಘಟನೆಯಿಂದ 50ನೇ ವರ್ಷದ

ಸುಧಾಮೂರ್ತಿ ಹೆಸರಿನಲ್ಲಿ ವಂಚನೆ – ಇಬ್ಬರ ವಿರುದ್ದ ದೂರು ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಯಾಣಿಕರ ಗಮನಕ್ಕೆ- ಬೆಂಗಳೂರು-ಮುರುಡೇಶ್ವರ ರೈಲು ವೇಳಾಪಟ್ಟಿ ಬದಲಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಬೆಂಗಳೂರು ಮತ್ತು ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುವ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಇಂದಿನಿಂದ (ಸೆ. 24) ಜಾರಿಗೆ ಬರುವಂತೆ 35 ನಿಮಿಷ ಮುಂಚಿತವಾಗಿ ರೈಲು ಮುರುಡೇಶ್ವರ ತಲುಪಲಿದೆ. ಈ ಕುರಿತು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆಯು ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ

ಪ್ರಯಾಣಿಕರ ಗಮನಕ್ಕೆ- ಬೆಂಗಳೂರು-ಮುರುಡೇಶ್ವರ ರೈಲು ವೇಳಾಪಟ್ಟಿ ಬದಲಾವಣೆ Read More »

ಕರಾವಳಿ, ಕರ್ನಾಟಕ

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು; ಸೆ. 26ರಂದು ಬೆಂಗಳೂರಿನಲ್ಲಿ ಸಂದರ್ಶನ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ (NIANP) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತರು ಸೆಪ್ಟಂಬರ್ 26 ರೊಳಗೆ ಅರ್ಜಿ ಸಲ್ಲಿಸಬೇಕು. ಅಂದರೆ ಸೆಪ್ಟಂಬರ್ 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಸಂದರ್ಶನದಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು; ಸೆ. 26ರಂದು ಬೆಂಗಳೂರಿನಲ್ಲಿ ಸಂದರ್ಶನ- ಅರ್ಜಿ ಆಹ್ವಾನ Read More »

ಉದ್ಯೋಗ, ಕರ್ನಾಟಕ

ಹೃದಯಾಘಾತ- ಎಎಸ್ಐ ವಿಧಿವಶ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 24. ಹೃದಯಘಾತದಿಂದ ಪೊಲೀಸ್‌ ಅಧಿಕಾರಿಯೋರ್ವರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಎಂದು ಗುರುತಿಸಲಾಗಿದೆ. ಜಿ.ಕೆ ಮುರಳೀಧರ್ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದು, ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಳಸದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿ.ಕೆ ಮುರಳೀಧರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೃದಯಾಘಾತ- ಎಎಸ್ಐ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗೋಮಾಂಸ ಸಾಗಾಟದ ವಾಹನಕ್ಕೆ ಬೆಂಕಿಯಿಟ್ಟು ಕಾರ್ಯಕರ್ತರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ದೊಡ್ಡ ಬಳ್ಳಾಪುರ, ಸೆ. 24. ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಡೆದ ಶ್ರೀರಾಮಸೇನೆ ಕಾರ್ಯಕರ್ತರು ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ವೀಕೆಂಡ್ ದಿನಗಳಲ್ಲಿ ಆಂಧ್ರದ ಹಿಂದೂಪುರದಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವುದು ಮಾಮೂಲು. ಇದನ್ನು ಬೆನ್ನಟ್ಟಿದ ಶ್ರೀರಾಮಸೇನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಬಳಿ ಗೋಮಾಂಸ ಸಾಗಾಟದ ವಾಹನಗಳನ್ನ ತಡೆದು ಪರಿಶೀಲನೆ ನಡೆಸಿದಾಗ ಐದು ವಾಹನಗಳಲ್ಲಿ ಗೋಮಾಂಸ ಪತ್ತೆಯಾಗಿದೆ. ಇದರಿಂದ

ಗೋಮಾಂಸ ಸಾಗಾಟದ ವಾಹನಕ್ಕೆ ಬೆಂಕಿಯಿಟ್ಟು ಕಾರ್ಯಕರ್ತರಿಂದ ಆಕ್ರೋಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆನ್ ಲೈನ್ ವಂಚನೆ- ಸುಮಾರು 99 ಲಕ್ಷ ರೂ.ಕಳೆದುಕೊಂಡ ಇಂಜಿನಿಯರ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಸೆ. 24. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡುವ ಮೂಲಕ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರು ಬರೋಬ್ಬರಿ 99 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಶಿವಮೊಗ್ಗದಿಂದ ವರದಿಯಾಗಿದೆ. ಶಿವಮೊಗ್ಗದ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ ನಲ್ಲಿ ಸ್ವಪ್ನಾ ಎಂಬ ಹೆಸರಿನ ಯುವತಿಯ ಪರಿಚಯವಾಗಿದ್ದು, ಇಬ್ಬರು ವಾಟ್ಸಪ್ ಮೂಲಕ ಚಾಟಿಂಗ್ ಮಾಡಿದ್ದಾರೆ. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ ಸ್ಟ್ರೀಟ್‌ನಲ್ಲಿ ಮಾರ್ಕೆಟ್

ಆನ್ ಲೈನ್ ವಂಚನೆ- ಸುಮಾರು 99 ಲಕ್ಷ ರೂ.ಕಳೆದುಕೊಂಡ ಇಂಜಿನಿಯರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ವಿಮಾನ ನಿಲ್ದಾಣದಲ್ಲಿ ದೇಶ, ವಿದೇಶ ಪ್ರಯಾಣಿಕರ ಸಂಖ್ಯೆ ಹೆಚ್ಚಳ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 24. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಇಂಡಿಗೊ ಮತ್ತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗಳು ನೇರವಾಗಿ ಸಂಪರ್ಕಿಸುವ ದೇಶೀಯ ತಾಣಗಳಲ್ಲಿ ಶೇ. 87.5 ಪ್ರಯಾಣಿಕರ ಹೆಚ್ಚಳ ಹಾಗೂ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಸಂಚರಿಸುವ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಶೇ. 81.7 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಮಂಗಳೂರು: ವಿಮಾನ ನಿಲ್ದಾಣದಲ್ಲಿ ದೇಶ, ವಿದೇಶ ಪ್ರಯಾಣಿಕರ ಸಂಖ್ಯೆ ಹೆಚ್ಚಳ Read More »

ಕರಾವಳಿ
Scroll to Top