10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಪು, ಅ. 14. ಹತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ, ಕರೆ ತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಉದ್ಯಾವರ ಅಂಕುದ್ರು ನಿವಾಸಿ ಗಣೇಶ್‌ ಪೂಜಾರಿ (44) ಎಂದು ಗುರುತಿಸಲಾಗಿದೆ. ಆರೋಪಿಯು 2013 ಮತ್ತು 2014ರಲ್ಲಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ವಾರಂಟ್‌ […]

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅತಿಯಾದ ಮೊಬೈಲ್ ಬಳಕೆ – ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 14. ಅತಿಯಾದ ಮೊಬೈಲ್‌ ಬಳಕೆ ಮಾಡುತ್ತಿದ್ದ ಮಗನನ್ನು ಪ್ರಶ್ನಿಸಿದ ತಾಯಿಗೆ ಮಗನೇ ಭೀಕರವಾಗಿ ಹಲ್ಲೆ ನಡೆಸಿದ್ದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮೃತ‍‍ಪಟ್ಟ ಘಟನೆ ಕಾಸರಗೋಡಿನಿಂದ ವರದಿಯಾಗಿದೆ. ಮೃತರನ್ನು ಜಿಲ್ಲೆಯ ಕಣಿಚಿರ ಪ್ರದೇಶದ ರುಕ್ಮಿಣಿ ಎಂದು ಗುರುತಿಸಲಾಗಿದೆ. ಇವರು ಮಗನಿಂದ ಹಲ್ಲೆಗೆ ಒಳಗಾಗಿದ್ದ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೊಬೈಲ್ ನ ಅತಿಯಾದ ಬಳಕೆಯನ್ನು ಪ್ರಶ್ನಿಸಿದಕ್ಕೆ ಮಗ

ಅತಿಯಾದ ಮೊಬೈಲ್ ಬಳಕೆ – ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಖದ ಸೌಂದರ್ಯ ಹೆಚ್ಚಿಸಬೇಕೇ..?- ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ ನೋಡಿ

(ನ್ಯೂಸ್ ಕಡಬ) newskadaba.com ಅ. 14. ಈಗಿನ ಕಾಲದಲ್ಲಿ ಯುವತಿಯರು ಮುಖದ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡಕ್ಟ್ಸ್ ಗಳನ್ನು ಯುವತಿಯರು ಬಳಸುತ್ತಾರೆ. ಹೀಗೆ ಮಾಡುವುದರಿಂದ ಉಪಯೋಗಕ್ಕಿಂತ ಸಮಸ್ಯೆಗಳುಂಟಾಗುವುದೇ ಹೆಚ್ಚು, ಆದ್ದರಿಂದ ಹೀಗೆ ಮಾಡುವ ಬದಲು ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ಹಾಗೂ ಫೇಸ್ ಮಾಸ್ಕ್ ಗಳನ್ನು ತಯಾರಿಸಿ ಉಪಯೋಗಿಸುವುದು ಒಳಿತು. ಜೊತೆಗೆ ಇದು ಸೇಫ್ ಎಂದೂ ಹೇಳಬಹುದು. ಪಪ್ಪಾಯಿ ಹಣ್ಣು,

ಮುಖದ ಸೌಂದರ್ಯ ಹೆಚ್ಚಿಸಬೇಕೇ..?- ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ ನೋಡಿ Read More »

ಅಡುಗೆ, ಆರೋಗ್ಯ ಮಾಹಿತಿ

ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ ಬಂಟ್ವಾಳ ಪೊಲೀಸರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 14. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಟ್ವಾಳ ‌ಗ್ರಾಮಾಂತರ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಕುರಿತು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಬಬುಲು ಸಹಾನಿ, ರಾಮ್ ಗೋವಿಂದ ಸಹಾನಿ, ಅಮಿತ್ ಕುಮಾರ್, ಸತ್ಯೇಂದ್ರ ಸಹಾನಿ, ಸೈದಾನ್ ಸಹಾನಿ ಹಾಗೂ ಅಭಯ್ ನಾರಾಯಣ್ ಎಂದು ಗುರುತಿಸಲಾಗಿದೆ. ಪರಂಗಿಪೇಟೆಯಲ್ಲಿ ಅಕ್ರಮ ಮರಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ

ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ ಬಂಟ್ವಾಳ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಸಿಡಿಲು ಬಡಿದು ಮನೆಗೆ ಹಾನಿ- ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 14. ಸಿಡಿಲು ಬಡಿದ ಪರಿಣಾಮ ಮನೆಯೊಂದು ಬಾಗಶ. ಬಿರುಕು ಬಿಟ್ಟಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರು ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಲ್ಲಿನ ತೆಕ್ಕಾರು ಕಾಪಿಗುಡ್ಡೆ ನಿವಾಸಿ ತಾಹಿರ ಎಂಬವರ ಮನೆಗೆ ಸಿಡಿಲು ಬಡಿದು ಸುಮಾರು 2ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಮನೆಯ ವಯರಿಂಗ್ ಗಳು ಸಂಪೂರ್ಣ ಹಾನಿಯಾಗಿದೆ. ಮನೆಯ

ಉಪ್ಪಿನಂಗಡಿ: ಸಿಡಿಲು ಬಡಿದು ಮನೆಗೆ ಹಾನಿ- ಅಪಾರ ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಬಿಎಂಟಿಸಿ ಬಸ್ ಢಿಕ್ಕಿ- ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 14. ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಇಂಜಿನಿಯರ್ ವಿದ್ಯಾರ್ಥಿ ಮೃತಪಟ್ಟ ಘಟನೆ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 10 ದಿನಗಳಲ್ಲಿ ಬಿಎಂಟಿಸಿ ಬಸ್​ ಅಪಘಾತದಲ್ಲಿ ಮೂರನೇ ಬಲಿ ಇದಾಗಿದೆ. ಮೃತ ವಿದ್ಯಾರ್ಥಿಯನ್ನು ಗಂಗಾಧರ್ (21) ಎಂದು ಗುರುತಿಸಲಾಗಿದೆ. ಈತ ಇಂಟರ್ನಿಶಿಫ್ ಸರ್ಟಿಫಿಕೇಟ್ ತರಲೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಹೂವಿನ ಮಾರ್ಕೆಟ್ ಸಮೀಪ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ

ಬಿಎಂಟಿಸಿ ಬಸ್ ಢಿಕ್ಕಿ- ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…!

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 13. ಭಾರತ ದೇಶದಲ್ಲೇ ಮೊದಲ ಬಾರಿಗೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಸಿಸ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಯಾವುದೇ CVV, ಅಂತಿಮ ದಿನಾಂಕ ಅಥವಾ ವಾರ್ಷಿಕ ಶುಲ್ಕವಿಲ್ಲದೇ ಭಾರತದ ಮೊದಲ ಸಂಖ್ಯೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಪರಿಚಯಿಸಿದೆ. ಆಕ್ಸಿಸ್ ಬ್ಯಾಂಕ್, ದೇಶದಲ್ಲಿನ ಅತೀದೊಡ್ಡ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಭಾರತದ ಮೊದಲ ಸಂಖ್ಯೆಯಿಲ್ಲದ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಹೊಂದಿದೆ. ಈ

ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಗಾಂಧಿ ಪುರಸ್ಕಾರವಾದ ಕೊಯಿಲ ಗ್ರಾಮದಲ್ಲಿ ಅಭಿವೃದ್ಧಿಯಾಗದೇ ಇರುವುದು ಖೇದಕರ – ಮುನೀರ್ ಆತೂರು

(ನ್ಯೂಸ್ ಕಡಬ) newskadaba.com ಆತೂರು, ಅ. 13. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗು ಕಡಬ ತಾಲೂಕಿನ ಗಡಿಭಾಗವಾದ ಕೊಯಿಲ ಪ್ರದೇಶ ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದಿರುವುದು ಖೇದಕರ ಎಂದು ಮುನೀರ್ ಆತೂರು ವ್ಯಕ್ತಪಡಿಸಿದರು. ಕೊಯಿಲವು ಗಾಂಧಿ ಪುರಸ್ಕಾರವಾದರೂ ರಸ್ತೆ ಹಾಗೂ ದಾರಿದೀಪ ವಿಷಯದಲ್ಲಿ ಅಭಿವೃದ್ಧಿಯಾಗಿಲ್ಲ. ಕೇವಲ ಒಂದು ವಿಷಯದಲ್ಲಿ ಅಭಿವೃದ್ಧಿಯಾದರೆ ಸರಕಾರದಿಂದ ಗಾಂಧಿ ಪುರಸ್ಕಾರ ನೀಡಲಾಗುವುದೆಂದು ಅನಿಸುತ್ತದೆ. ಕೊಯಿಲ ಗ್ರಾಮದಲ್ಲಿ 5 ವಾರ್ಡ್ ಗಳಿದ್ದು, 5 ವಾರ್ಡ್ ನಲ್ಲಿ ಮಸೀದಿ, ದೇವಸ್ಥಾನ, ಶಾಲೆ, ಅಂಗನವಾಡಿ ಹಾಗೂ ಮದರಸಗಳಿದ್ದು

ಗಾಂಧಿ ಪುರಸ್ಕಾರವಾದ ಕೊಯಿಲ ಗ್ರಾಮದಲ್ಲಿ ಅಭಿವೃದ್ಧಿಯಾಗದೇ ಇರುವುದು ಖೇದಕರ – ಮುನೀರ್ ಆತೂರು Read More »

ಕರಾವಳಿ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ- ‘ರಿಂಗ್ ಆಫ್ ಪೈರ್’

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 13. ನಾಳೆ(ಅ. 14) ಆಕಾಶದಲ್ಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಕುರಿತು ನಾಸಾ ಮಾಹಿತಿ ನೀಡಿದ್ದು, ಅಕ್ಟೋಬರ್ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. 2012 ರ ನಂತರ ನೀವು ಇಂತಹ ಸೂರ್ಯಗ್ರಹಣವನ್ನು ನೋಡುತ್ತೀರಿ ಎಂದು ಹೇಳಿಕೊಂಡಿದೆ. ಇನ್ನೊಂದು ವರದಿ ಪ್ರಕಾರ, ಈ ದಿನದಂದು ಚಂದ್ರನು ಸೂರ್ಯನ ಮುಂದೆ ಇರುತ್ತಾನೆ, ಇದು ಸೂರ್ಯನ ಹೆಚ್ಚಿನ ಭಾಗವನ್ನು ಮರೆ ಮಾಡುತ್ತದೆ ಮತ್ತು ಭವ್ಯವಾದ ಉಂಗುರದಂತಹ ಅಪರೂಪದ ನೋಟವು ಆಕಾಶದಲ್ಲಿ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ- ‘ರಿಂಗ್ ಆಫ್ ಪೈರ್’ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಕಾರು ಢಿಕ್ಕಿಯಾಗಿ ಪಾದಚಾರಿ ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 13. ಕಾರು ಢಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ. ಮೃತ ಯುವತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಪಾವನ, ಗುರುವಾರದಂದು ಸಂಜೆ ಕೆಲಸ ಬಿಟ್ಟು ಮಂಗಳೂರಿನಿಂದ ಬಸ್ ಮೂಲಕ ಊರಿಗೆ ತೆರಳಿದ್ದಳು. ಯುವತಿ

ಕಾರು ಢಿಕ್ಕಿಯಾಗಿ ಪಾದಚಾರಿ ಯುವತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top