ಕಡಬ: ಕಾರುಗಳ ನಡುವೆ ಢಿಕ್ಕಿ – ಓರ್ವ ಮೃತ್ಯು, ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.23. ಓಮ್ನಿ ಹಾಗೂ ಕ್ರೆಟಾ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಶನಿವಾರ ಮಧ್ಯಾಹ್ನ ನಡೆದಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಓರ್ವ ಮೃತಪಟ್ಟಿದ್ದಾರೆ‌. ಹಲವರು ಗಾಯಗೊಂಡಿದ್ದು, ಕಡಬ ಸಮುದಾಯ […]

ಕಡಬ: ಕಾರುಗಳ ನಡುವೆ ಢಿಕ್ಕಿ – ಓರ್ವ ಮೃತ್ಯು, ಹಲವರು ಗಂಭೀರ Read More »

ಕರ್ನಾಟಕ

ಆಲಂಕಾರು: ಎಂಡೋಸಲ್ಫಾನ್ ಸಂತ್ರಸ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಡಿ. 20. ದ.ಕ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಹಾಗೂ ಆಲಂಕಾರು ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ಎಂಡೋ ಸಲ್ಫಾನ್ ಸಂತ್ರಸ್ಥರ ಮತ್ತು ವಿಕಲಚೇತನರ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಂಗಳವಾರದಂದು ಆಲಂಕಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ

ಆಲಂಕಾರು: ಎಂಡೋಸಲ್ಫಾನ್ ಸಂತ್ರಸ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಕರಾವಳಿ, ಕರ್ನಾಟಕ

ಎಸ್ಸೆಸ್ಸೆಫ್ ‌ಮಾಣಿ ಸೆಕ್ಟರ್ “ಸಾಹಿತ್ಯೋತ್ಸವ” ಕಾರ್ಯಕ್ರಮ – ಪಾಟ್ರಕೋಡಿ ಯುನಿಟ್ ಚಾಂಪಿಯನ್, ಸೂರಿಕುಮೇರು ಯುನಿಟ್ ರನ್ನರ್ಸ್

(ನ್ಯೂಸ್ ಕಡಬ) newskadaba.com ಮಾಣಿ, ಡಿ. 20. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಧ್ಯೇಯ ವಾಕ್ಯದಡಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮವು ಬಡೋಳಿ ಶೇರಾ ಖಿಳ್ರ್ ಜುಮ್ಮಾ ಮಸೀದಿ ವಠಾರದಲ್ಲಿ ಡಿಸೆಂಬರ್ 17 ರಂದು ನಡೆಯಿತು. ಗೈಬಾನ್ ಷಾ ಫೀರ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಬ್ರಾಹಿಂ ಹಾಜಿ ಶೇರಾ ಧ್ವಜಾರೋಹಣಗೈದರು. ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ

ಎಸ್ಸೆಸ್ಸೆಫ್ ‌ಮಾಣಿ ಸೆಕ್ಟರ್ “ಸಾಹಿತ್ಯೋತ್ಸವ” ಕಾರ್ಯಕ್ರಮ – ಪಾಟ್ರಕೋಡಿ ಯುನಿಟ್ ಚಾಂಪಿಯನ್, ಸೂರಿಕುಮೇರು ಯುನಿಟ್ ರನ್ನರ್ಸ್ Read More »

ಕರಾವಳಿ

ದೇಶದಲ್ಲಿ ಕೊರೋನಾ ಆತಂಕ – ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಕರ್ನಾಟಕ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 19. ನೆರೆರಾಜ್ಯವಾದ ಕೇರಳದಲ್ಲಿ ಕೊರೋನಾ ವೈರಸ್​​ನ ಜೆಎನ್​​1 ರೂಪಾಂತರಿ ತಳಿಯಿಂದಾಗಿ ಸೋಂಕು ಹರಡುತ್ತಿದ್ದು, ರಾಜ್ಯದಲ್ಲಿಯೂ ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದ್ದು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಕಾರ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲು ಉಲ್ಲೇಖಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲು ಸೂಚಿಸಲಾಗಿದೆ. ತೀವ್ರ

ದೇಶದಲ್ಲಿ ಕೊರೋನಾ ಆತಂಕ – ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಕರ್ನಾಟಕ ಸರಕಾರ Read More »

ಕರಾವಳಿ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ|ದೇವಿ ಪ್ರಸಾದ್ ಕಾನತ್ತೂರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 17. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಕಾನತ್ತೂರು ರವರು ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಪಂಜ ನಾಡಕಚೇರಿಯ ಉಪತಹಶೀಲ್ದಾರ ಚಂದ್ರಕಾಂತರು ಹಾಗೂ ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ ವಹಿಸಿದ್ದರು. ಉತ್ಸವ ಸಮಿತಿ ಸದಸ್ಯರಾದ ಬಾಲಕೃಷ್ಣ ಕುದ್ವ, ಕುಶಾಲಪ್ಪ ದೊಡ್ಡಮನೆ, ಮಾಯಿಲಪ್ಪ ಗೌಡ ಎನ್, ಧರ್ಮಣ್ಣ ನಾಯಕ್ ಗರಡಿ, ಧರ್ಮಪಾಲ ಕಾಚಿಲ, ಕೇಶವ ಕುದ್ವ, ಸಂತೋಷ್ ಕುಮಾರ್

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ|ದೇವಿ ಪ್ರಸಾದ್ ಕಾನತ್ತೂರು ಆಯ್ಕೆ Read More »

ಕರಾವಳಿ, ಕರ್ನಾಟಕ

ಯುವಕವಿಗೋಷ್ಠಿ- ಎಸ್.ಡಿ.ಎಂ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 17. ಈ ಬಾರಿಯ ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಯುವಕವಿಗೋಷ್ಠಿಗೆ ತಾಲೂಕಿನ ಸ್ನಾತಕೋತ್ತರ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಅವರು ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ವಾಣಿ ಕಾಲೇಜಿನ ಆವರಣದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ 18ನೇ ತಾಲೂಕು ಸಾಹಿತ್ಯ ಸಮ್ಮೇಳನವು ಡಿ.17ರಂದು ಆಯೋಜನೆಗೊಂಡಿದ್ದು, ವಿವಿಧ ಸಾಹಿತ್ಯಪೂರ್ಣ ಕಾರ್ಯಕ್ರಮಗಳಿಂದ ಕಂಗೊಳಿಸಲಿದೆ. ಸಾಹಿತ್ಯ ಭಾಗಗಳಲ್ಲಿ ಒಂದಾದ ‘ಯುವ ಕವಿಗೋಷ್ಠಿ’ಗೆ ಬೆಳ್ತಂಗಡಿ ತಾಲೂಕಿನ ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿನ

ಯುವಕವಿಗೋಷ್ಠಿ- ಎಸ್.ಡಿ.ಎಂ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಆಯ್ಕೆ Read More »

ಕರಾವಳಿ, ಕರ್ನಾಟಕ

Viral Video – ತಮ್ಮ ಮದುವೆಯ ಫರ್ಸ್ಟ್ ನೈಟ್ ವೀಡಿಯೋವನ್ನೇ ಹಂಚಿಕೊಂಡ ದಂಪತಿ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.17. ಮದುವೆ ಅನ್ನುವುದು ಜೀವನದ ಪ್ರಮುಖ ಘಟ್ಟವಾಗಿದ್ದು, ಕೆಲವು ಕ್ಷಣಗಳು ಖಾಸಗಿಯಾಗಿ ಉಳಿಯಬೇಕಾಗಿ ಇರುವಂತಹದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಜೀವನದ ಪ್ರತೀ ಆಗುಹೋಗುಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವವರು ಕೆಲವರಿದ್ದಾರೆ. ಅಂತಹದೇ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೋರ್ವ ತನ್ನ ಫರ್ಸ್ ನೈಟ್ ದೃಶ್ಯಗಳನ್ನು ತಾನೇ ವೀಡಿಯೋ ಮಾಡಿ ಹಂಚಿಕೊಂಡಿದ್ದಾನೆ. ನವದಂಪತಿಯು ಖಾಸಗಿಯಾಗಿ ಇರಬೇಕಾಗಿದ್ದ ಪ್ರೀತಿಯ ಕ್ಷಣಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ಕ್ಯಾಮರಾ ಮುಂದೆ ಪ್ರಸ್ತುತಪಡಿಸಿದ್ದಾರೆ. ತಬ್ಬಿಕೊಂಡು ಮುದ್ದಾಡಿದ

Viral Video – ತಮ್ಮ ಮದುವೆಯ ಫರ್ಸ್ಟ್ ನೈಟ್ ವೀಡಿಯೋವನ್ನೇ ಹಂಚಿಕೊಂಡ ದಂಪತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಳೆ (ಡಿ.17) ಮರ್ಧಾಳದಲ್ಲಿ ಎನ್’ಡಿಎಸ್ ಬಿರಿಯಾನಿ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಬೆಳೆಯುತ್ತಿರುವ ಮರ್ಧಾಳ ಪೇಟೆಯ ಮಸೀದಿ ಬಿಲ್ಡಿಂಗ್ ನಲ್ಲಿ ಎನ್’ಡಿಎಸ್ ಬಿರಿಯಾನಿ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಜ್ಯೂಸ್ ಕೌಂಟರ್ ನಾಳೆ (ಡಿ.17 ಭಾನುವಾರ) ಶುಭಾರಂಭಗೊಳ್ಳಲಿದೆ. ಬಿರಿಯಾನಿ, ಚೈನೀಸ್ ಫಾಸ್ಟ್ ಫುಡ್, ಚಿಕನ್ ತಂದೂರಿ, ಚಿಕನ್ ಟಿಕ್ಕಾ, ಶವರ್ಮಾ, ಫ್ರೆಶ್ ಜ್ಯೂಸ್, ಐಸ್ ಕ್ರೀಮ್ ಗಳು ದೊರೆಯಲಿದ್ದು, ಶುಭಾರಂಭದ ಪ್ರಯುಕ್ತ ಭಾನುವಾರದಂದು 100 ರೂ.ಗೆ 2 ಶವರ್ಮಾ ಆಫರ್ ಇರಲಿದೆ.‌ 300 ರೂ ಮೇಲ್ಪಟ್ಟ ಖರೀದಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಹೋಮ್

ನಾಳೆ (ಡಿ.17) ಮರ್ಧಾಳದಲ್ಲಿ ಎನ್’ಡಿಎಸ್ ಬಿರಿಯಾನಿ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ Read More »

ಕರಾವಳಿ

ಕಬಕ: ಬಸ್ – ಸ್ಕೂಟರ್ ನಡುವೆ ಢಿಕ್ಕಿ – ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.16. ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ‌ ನಗರದ ಹೊರವಲಯದ ಕಬಕ‌ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ ಆಶಿಕ್ ಎಂದು ಗುರುತಿಸಲಾಗಿದೆ. ಕಬಕ ಕೂವೆಹಿತ್ತಿಲು ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಬಕ: ಬಸ್ – ಸ್ಕೂಟರ್ ನಡುವೆ ಢಿಕ್ಕಿ – ಸವಾರ ಮೃತ್ಯು Read More »

ಕರಾವಳಿ

ಮತ್ತೆ ಕಾಡುತ್ತಿರುವ ಕಿಲ್ಲರ್ ಕೊರೋನಾ – ದ.ಕ ಜಿಲ್ಲೆಯಲ್ಲಿ ವಿಶೇಷ ನಿಗಾ

(ನ್ಯೂಸ್ ಕಡಬ) newskadaba.com ‌ಮಂಗಳೂರು, ಡಿ. 16. ಮೂರು ವರ್ಷಗಳ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ಇದೀಗ ಕೇರಳದಲ್ಲಿ ಮತ್ತೆ ಏರಿಕೆ ಕಂಡಿರುವ ಕುರಿತು ವರದಿಯಾಗಿದೆ. ಸಿಂಗಾಪುರ, ಇಂಡೋನೇಷ್ಯಾ ಹಾಗೂ ಮಲೇಷ್ಯಾ ದೇಶಗಳ ಬಳಿಕ ಇದೀಗ ಕೇರಳದಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣಗಳು ದೃಢಪಡುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತಾಗಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಕಳೆದೆರಡು ದಿನಗಳಿಂದ ತಾಲೂಕಿನ ವೈದ್ಯರ ಸಭೆ ನಡೆಯುತ್ತಿದ್ದು, ಬೆಳ್ತಂಗಡಿ,

ಮತ್ತೆ ಕಾಡುತ್ತಿರುವ ಕಿಲ್ಲರ್ ಕೊರೋನಾ – ದ.ಕ ಜಿಲ್ಲೆಯಲ್ಲಿ ವಿಶೇಷ ನಿಗಾ Read More »

ಕರಾವಳಿ
Scroll to Top