ಭೂಕುಸಿತದ ಮೊದಲು, ನಂತರದ satellite image ಬಿಡುಗಡೆ ಮಾಡಿದ ISRO

(ನ್ಯೂಸ್ ಕಡಬ) newskadaba.com ನವದೆಹಲಿ, ಆ.02. ಕನಿಷ್ಠ 250ಕ್ಕೂ ಅಧಿಕ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವಯನಾಡ್‌ ಭೂಕುಸಿತದ ಮೊದಲು ಮತ್ತು ನಂತರದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದ್ದು, ಉಪಗ್ರಹ ಚಿತ್ರಗಳ ಪ್ರಕಾರ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದ್ದು, ಹೀಗಾಗಿ ಇಷ್ಟೂ ಪ್ರದೇಶದಲ್ಲಿ […]

ಭೂಕುಸಿತದ ಮೊದಲು, ನಂತರದ satellite image ಬಿಡುಗಡೆ ಮಾಡಿದ ISRO Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು , ಆ.02.  ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಎಂ ಶಶಿಧರ ಹೆಗ್ಡೆ ನೇತೃತ್ವದಲ್ಲಿ ಚಿಲಿಂಬಿ ಆದರ್ಶನಗರದಲ್ಲಿ ಸನ್ಮಾನ ಮಾಡಲಾಯಿತು. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತ ಬಸ್‌ನ‌‌ ಚಾಲಕ ಮತ್ತು‌ ನಿರ್ವಾಹಕ ಪ್ರಯಾಣಿಕರಿದ್ದ ಬಸ್ ಅನ್ನು ಕೇವಲ ಆರು ನಿಮಿಷದಲ್ಲಿ ಆಸ್ಪತ್ರೆ ಬಾಗಿಲಿಗೆ ತೆಗೆದುಕೊಂಡು ಹೋಗಿ ವಿದ್ಯಾರ್ಥಿಯ ಪ್ರಾಣ ರಕ್ಷಣೆ ಮಾಡಿದ ಬಸ್ ಚಾಲಕ ನಿರ್ವಾಹಕರಾದ ಗಜರಾಜ್ ಕುಂದರ್ ಪೂಜಾರಿ, ಮಹೇಶ್ ಪೂಜಾರಿ,ಸುರೇಶ್ ಬಜ್ಪೆಯವರನ್ನು

ಮಂಗಳೂರು: ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಸನ್ಮಾನ Read More »

ಕರಾವಳಿ, ಕರ್ನಾಟಕ

ಮೂವರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ

(ನ್ಯೂಸ್ ಕಡಬ) newskadaba.com ಬೆಂಗಳೂರು , ಆ.02. ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಜನರ ಸಾವಿಗೆ ಕಾರಣವಾಗಿದ್ದ ಮಕ್ನಾ ಕಾಡಾನೆಯನ್ನ ಕೊನೆಗೂ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ. ಸೆರೆಯಾದ ಕಾಡಾನೆಯು ವಿಚಿತ್ರ ಸ್ವಭಾವ ಹೊಂದಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ದುಬಾರೆ ಹಾಗೂ ಮತ್ತಿಗೋಡುವಿನಿಂದ ಕುಮ್ಕಿ ಆನೆಗಳನ್ನು ಕರೆತಂದು ಎರಡು ದಿನ ಕಾರ್ಯಾಚರಣೆ ನಡೆಸಿ ಆನೆಯನ್ನ ಸೆರೆ ಹಿಡಿಯಲಾಗಿದೆ.    

ಮೂವರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ Read More »

ಕರ್ನಾಟಕ

ನಾಲ್ವರು ಮುಸುಕುಧಾರಿಗಳಿಂದ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನ

(ನ್ಯೂಸ್ ಕಡಬ) newskadaba.com ಉಡುಪಿ, ಆ.02. ಅಪಾರ್ಟ್ ಮೆಂಟ್‌ನ ಫ್ಲಾಟ್‌ವೊಂದಕ್ಕೆ ನಾಲ್ವರು ಮುಸುಕುಧಾರಿಗಳು ನುಗ್ಗಲು ಯತ್ನಿಸಿ, ವಿಫಲರಾಗಿ ಸ್ಥಳದಿಂದ ಹಿಂತಿರುಗಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ನಾಲ್ವರು ಮುಸುಕುಧಾರಿ ವ್ಯಕ್ತಿಗಳು ರಾಡ್‌ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್‌ ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್ ಮೆಂಟ್‌ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂತಿರುಗಿರುವುದು ಕಂಡುಬಂದಿದೆ ಎನ್ನಲಾಗಿದೆ.  

ನಾಲ್ವರು ಮುಸುಕುಧಾರಿಗಳಿಂದ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಜ್ವಲ್ ರೇವಣ್ಣ ಕೇಸ್; ‘ಅಶ್ಲೀಲ ವಿಡಿಯೋಗಳು ಅಸಲಿ’ ಎಫ್ಎಸ್ಎಲ್ ವರದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿ ಬಂದಿದೆ. ಈ ವಿಡಿಯೋಗಳು ಅಸಲಿ ಎಂದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಬಂದಿರುವ ಎಫ್ಎಸ್ಎಲ್ ವರದಿ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ಬಹಿರಂಗವಾಗಿದೆ. ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ.

ಪ್ರಜ್ವಲ್ ರೇವಣ್ಣ ಕೇಸ್; ‘ಅಶ್ಲೀಲ ವಿಡಿಯೋಗಳು ಅಸಲಿ’ ಎಫ್ಎಸ್ಎಲ್ ವರದಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಗುಡ್ಡ ಕುಸಿತ     ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್  

(ನ್ಯೂಸ್ ಕಡಬ) newskadaba.com ಪುತ್ತೂರು, ಆ.02. ಗುಡ್ಡ ಕುಸಿದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಘಟನೆ ಮುಂಜಾನೆ ನಡೆದಿದೆ. ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಗುಡ್ಡ ಕುಸಿತ ಸಂಭವಿಸುವ ಸಮಯ ಯಾವುದೇ ವಾಹನ ಸಂಚಾರ ಇಲ್ಲದಿರುವುದರಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ

ಪುತ್ತೂರು: ಗುಡ್ಡ ಕುಸಿತ     ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್   Read More »

ಕರಾವಳಿ, ಕ್ರೈಮ್ ನ್ಯೂಸ್

   ದಕ್ಷಿಣ ಕನ್ನಡಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.02. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ನೆರೆ, ಸಾಕಷ್ಟು ಹಾನಿ ಉಂಟಾಗಿದೆ. ಈ ಹಿನ್ನೆಲೆ ಹಾನಿ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಳೆ ಹಾನಿ ಪ್ರದೇಶಗಳ ಭೇಟಿ ನೀಡಿದ ನಂತರ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮಳೆಹಾನಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

   ದಕ್ಷಿಣ ಕನ್ನಡಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ Read More »

ಕರಾವಳಿ

ಕರಾವಳಿಯಲ್ಲಿ ನಿಲ್ಲದ ವರುಣನ ಅಟ್ಟಹಾಸ..‼️* *?ನಾಳೆ (ಆ. 02) ದ.ಕ. ಜಿಲ್ಲಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 01. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಆಗಸ್ಟ್ 02ರ ಶುಕ್ರವಾರದಂದು ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ‌. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿ

ಕರಾವಳಿಯಲ್ಲಿ ನಿಲ್ಲದ ವರುಣನ ಅಟ್ಟಹಾಸ..‼️* *?ನಾಳೆ (ಆ. 02) ದ.ಕ. ಜಿಲ್ಲಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಏರ್‌ಪೋರ್ಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಸುಮಾರು 10 ಕೋಟಿ ರೂ. ಮೌಲ್ಯದ ಕೊಕೈನ್‌ ಡ್ರಗ್ಸ್‌ ಅನ್ನು ಗುಳಿಗೆಗಳ ರೂಪದಲ್ಲಿ ಹೊಟ್ಟೆಯಲ್ಲಿಟ್ಟುಕೊಂಡು ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನೈಜಿರಿಯಾ ಮಹಿಳೆಯೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ. ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ ವಿಚಕ್ಷಣಾ ದಳಕ್ಕೆ ಈ ಮಹಿಳೆ ಮಾದಕ ವಸ್ತುವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ವಯ ಈಕೆಯನ್ನು ಬಂಧಿಸಲಾಗಿದೆ. .  

ಏರ್‌ಪೋರ್ಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆನೇಕಲ್‌ ಪುರಸಭಾ ಸದಸ್ಯ ಸ್ಕ್ರ್ಯಾಪ್ ಹತ್ಯೆ ಪ್ರಕರಣ ಆರೋಪಿ ಕಾಲಿಗೆ ಗುಂಡೇಟು, ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಆನೇಕಲ್ ಪುರಸಭಾ ಸದಸ್ಯ ಸ್ಕ್ರ್ಯಾಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು 30 ವರ್ಷದ ರೌಡಿ ಶೀಟರ್ ಒಬ್ಬನ ಕಾಲಿಗೆ ಗುಂಡಿನ ಹಾರಿಸಿ ಬಂಧನಕ್ಕೊಳಪಡಿಸಿದ್ದಾರೆ. ಪುರಸಭಾ ಸದಸ್ಯ ಸ್ಕ್ರಾಪ್‌ ರವಿಯನ್ನು ಮಾರಕಾಸಗಳಿಂದ ಚುಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹರೀಶ್‌ ಅಲಿಯಾಸ್‌‍ ಹಂದಿ ಹರೀಶ್‌, ವಿನಯ್‌ ಅಲಿಯಾಸ್‌‍ ವಿನಿ ಎಂಬುವರು ಸ್ವಯಂ ಆಗಿ ನ್ಯಾಯಾಲಯಕ್ಕೆ ಶರಣಾಗಿದ್ದರು. ಆದರೆ ಪ್ರಮುಖ ಆರೋಪಿ ಕಾರ್ತಿಕ್‌ ತಲೆ ಮರೆಸಿಕೊಂಡಿದ್ದನು ಎನ್ನಲಾಗಿದೆ.

ಆನೇಕಲ್‌ ಪುರಸಭಾ ಸದಸ್ಯ ಸ್ಕ್ರ್ಯಾಪ್ ಹತ್ಯೆ ಪ್ರಕರಣ ಆರೋಪಿ ಕಾಲಿಗೆ ಗುಂಡೇಟು, ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top