ರಾತ್ರಿ ವೇಳೆ 1091 ಕ್ಕೆ ಕರೆ ಮಾಡಿದರೆ ಉಚಿತ ಡ್ರಾಪ್- ಸುದ್ದಿ ವೈರಲ್ ; ಪೊಲೀಸ್ ಇಲಾಖೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡುವ ಮಹಿಳೆಯರು 1091 ಗೆ ಕರೆ ಮಾಡಿದರೆ, ಪೊಲೀಸರು ಕರೆದೊಯ್ದು ಮನೆಗೆ ಡ್ರಾಪ್‌ ನೀಡುತ್ತಾರೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರು ಇದೊಂದು ಸುಳ್ಳು ಸಂದೇಶ ಎಂದು ಸ್ಪಷ್ಟಪಡಿಸಿದ್ದಾರೆ.   ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ಅವಧಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಯಾವುದಾದರೂ ವಾಹನ ದೊರೆಯದೇ ಇದ್ದ ಸಂದರ್ಭ ಸಹಾಯವಾಣಿ […]

ರಾತ್ರಿ ವೇಳೆ 1091 ಕ್ಕೆ ಕರೆ ಮಾಡಿದರೆ ಉಚಿತ ಡ್ರಾಪ್- ಸುದ್ದಿ ವೈರಲ್ ; ಪೊಲೀಸ್ ಇಲಾಖೆ ಸ್ಪಷ್ಟನೆ Read More »

ಕರ್ನಾಟಕ

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಪರಿಣಾಮವೋ ಎಂಬಂತೆ ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಈ  ಮೂಲಕ ಕಳೆದ ಜನವರಿಯಿಂದ ಇದುವರೆಗೂ ಒಟ್ಟು 11 ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದಂತಾಗಿದೆ. ಯಾವ ಮಸೂದೆ ಸರ್ಕಾರಕ್ಕೆ ವಾಪಸ್?  1 ಕರ್ನಾಟಕ ಸಾರ್ವಜನಿಕ ಪರೀಕ್ಷಾ(ಭ್ರಷ್ಟಾಚಾರ ತಡೆ) ವಿಧೇಯಕ 2 ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ 3

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..! Read More »

ಕರ್ನಾಟಕ

ಮೈಸೂರು:  ಹೋಟೆಲ್ ನಲ್ಲಿ ಸ್ಫೋಟಕ ಪತ್ತೆ  ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.c0m ಮೈಸೂರು, ಆ. 23.  ಸಾಂಸ್ಕೃತಿಕ ನಗರಿ ಮೈಸೂರು ವಿಶ್ವಪ್ರಸಿದ್ಧ ದಸರಾ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ​ವೊಂದರಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್​ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಸ್ಫೋಟಕ ವಸ್ತುಗಳನ್ನು ನೋಡಿದ ಹೋಟೆಲ್​ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ,

ಮೈಸೂರು:  ಹೋಟೆಲ್ ನಲ್ಲಿ ಸ್ಫೋಟಕ ಪತ್ತೆ  ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಪರಿಶೀಲನೆ Read More »

ಕರ್ನಾಟಕ

ಅನಿಲ್ ಅಂಬಾನಿ ಸೇರಿದಂತೆ 24 ಜನರ ಮೇಲೆ SEBI ಗದಾ ಪ್ರಹಾರ     624 ಕೋಟಿ ರೂ ದಂಡ- 5ವರ್ಷ ನಿಷೇಧ..!

(ನ್ಯೂಸ್ ಕಡಬ) newskadaba.c0m ಮುಂಬೈ, ಆ. 23.  ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸೇರಿದಂತೆ 24 ಜನರ ಮೇಲೆ SEBI ಗದಾ ಪ್ರಹಾರ ನಡೆಸಿದ್ದು, 624 ಕೋಟಿ ರೂ ದಂಡ ಹೇರಿ 5 ವರ್ಷ ನಿಷೇಧ ಹೇರಿದೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ, ಮೂವರು ವ್ಯಕ್ತಿಗಳು ಹಾಗೂ 22 ಕಂಪನಿಗಳ ಮೇಲೆ ಗದಾಪ್ರಹಾರ ನಡೆಸಿದೆ. ಇವರಿಗೆ ಭಾರೀ ಮೊತ್ತದ ದಂಡ ವಿಧಿಸಿದ್ದು, ಐದು

ಅನಿಲ್ ಅಂಬಾನಿ ಸೇರಿದಂತೆ 24 ಜನರ ಮೇಲೆ SEBI ಗದಾ ಪ್ರಹಾರ     624 ಕೋಟಿ ರೂ ದಂಡ- 5ವರ್ಷ ನಿಷೇಧ..! Read More »

ರಾಷ್ಟ್ರೀಯ ನ್ಯೂಸ್

ವಿಮಾನ ನಿಲ್ದಾಣಕ್ಕೆ ನೀಡಿದ ಭೂಮಿಗೆ ಸಿಗದ ಪರಿಹಾರ      ಎಸಿ ಕಚೇರಿ ಪೀಠೋಪಕರಣ ವಶಪಡಿಸಿಕೊಂಡ ರೈತರು   

(ನ್ಯೂಸ್ ಕಡಬ) newskadaba.c0m ಬೆಳಗಾವಿ, ಆ. 23.  2008 ರಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ವಿಸ್ತರಣೆಯ ಸಂದರ್ಭದಲ್ಲಿ ಜಮೀನು ಸ್ವಾಧೀನಪಡಿಸಿಕೊಂಡ ಹಲವಾರು ರೈತರು, ಸರ್ಕಾರವು ತಮ್ಮ ಬಾಕಿ ಮತ್ತು ಪರಿಹಾರವನ್ನು ಪಾವತಿಸದ ಕಾರಣ ಗುರುವಾರ ಸಹಾಯಕ ಆಯುಕ್ತರ ಕಚೇರಿಯಿಂದ ಎಲ್ಲಾ ಪೀಠೋಪಕರಣಗಳು, ಕಂಪ್ಯೂಟರ್‌ ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು. ಪ್ರತಿ ಎಕರೆ ಭೂಮಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಿದೆ. ಆದರೆ ಸಂತ್ರಸ್ತ ರೈತರು 2011ರಲ್ಲಿ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ

ವಿಮಾನ ನಿಲ್ದಾಣಕ್ಕೆ ನೀಡಿದ ಭೂಮಿಗೆ ಸಿಗದ ಪರಿಹಾರ      ಎಸಿ ಕಚೇರಿ ಪೀಠೋಪಕರಣ ವಶಪಡಿಸಿಕೊಂಡ ರೈತರು    Read More »

ಕರ್ನಾಟಕ

‘ಪಿಯುಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತವಾಗಿ ನೀಟ್ ತರಬೇತಿ’- ಸಚಿವ ಮಧು ಬಂಗಾರಪ್ಪ                              

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 23.  ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಉಚಿತವಾಗಿ ನೀಟ್ (NEET) ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರ್ಷದಿಂದಲೇ ಉಚಿವಾಗಿ ನೀಟ್​ ತರಬೇತಿ ನೀಡಲಾಗುತ್ತದೆ. ತಜ್ಞರಿಂದ ರಾಜ್ಯದ 25 ಸಾವಿರ ಬಡ ಪಿಯು ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 12 ಕೋಟಿ ರೂಪಾಯಿ

‘ಪಿಯುಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತವಾಗಿ ನೀಟ್ ತರಬೇತಿ’- ಸಚಿವ ಮಧು ಬಂಗಾರಪ್ಪ                               Read More »

ಕರ್ನಾಟಕ

ಬಸ್ ನದಿಗೆ ಉರುಳಿ ಬಿದ್ದು 14 ಮಂದಿ ಸಾವು..!

(ನ್ಯೂಸ್ ಕಡಬ) newskadaba.c0m ಕಠ್ಮಂಡು, ಆ. 23.  ಮಧ್ಯ ನೇಪಾಳದ ಮರ್ಸ್ಯಾಂಗ್ಡಿ ನದಿಗೆ ಭಾರತೀಯ-ನೋಂದಾಯಿತ ಪ್ರಯಾಣಿಕ ಬಸ್ ಉರುಳಿ ಬಿದ್ದಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿದು ಬಂದಿದೆ. ತನಾಹುನ್ ಜಿಲ್ಲೆಯ ಐನಾ ಪಹಾರಾದಲ್ಲಿ ಹೆದ್ದಾರಿ ಮೂಲಕ ರೆಸಾರ್ಟ್ ಪಟ್ಟಣವಾದ ಪೊಖರಾದಿಂದ ರಾಜಧಾನಿ ಕಠ್ಮಂಡು ಕಡೆಗೆ ಹೋಗುತ್ತಿತ್ತು. UP 53 FT 7623 ನಂಬರ್ ಪ್ಲೇಟ್ ಹೊಂದಿರುವ ಬಸ್‌ನಿಂದ ಕನಿಷ್ಠ 29 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಪಘಾತದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ

ಬಸ್ ನದಿಗೆ ಉರುಳಿ ಬಿದ್ದು 14 ಮಂದಿ ಸಾವು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

“ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ”- ಪ್ರಧಾನಿ ನರೇಂದ್ರ ಮೋದಿ   

(ನ್ಯೂಸ್ ಕಡಬ) newskadaba.c0m ಪಾರ್ಸಾ, ಆ. 23.  “ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತವು ದೃಢವಾಗಿ ನಂಬುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಅವರು ಪೋಲಿಷ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ, ಈ ಹೇಳಿಕೆ ನೀಡಿದ್ದಾರೆ. ಮತ್ತು ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕುರಿತು ಪ್ರಸ್ತಾಪಿಸಿದ್ದಾರೆ.      

“ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ”- ಪ್ರಧಾನಿ ನರೇಂದ್ರ ಮೋದಿ    Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್     ಆರೋಪಿ ಆತ್ಮಹತ್ಯೆಗೆ ಶರಣು         

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 23.  ತಮಿಳುನಾಡಿನ ನಕಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಶಿಬಿರದಲ್ಲಿ ಶಾಲಾ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿ ಇಂದು ಮುಂಜಾನೆ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. 8ನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, 12 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಶಿವರಾಮನ್ ಬಂಧನಕ್ಕೆ ಕೆಲವೇ ಗಂಟೆಗಳ ಮೊದಲು ವಿಷ ಸೇವಿಸಿದ್ದಾನೆ ಎಂದು ಪೊಲೀಸ್

ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್     ಆರೋಪಿ ಆತ್ಮಹತ್ಯೆಗೆ ಶರಣು          Read More »

ಕರಾವಳಿ, ಕ್ರೈಮ್ ನ್ಯೂಸ್

‘ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್’ ಗೆ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಆಯ್ಕೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 23.   ಡಿ.ಸಿ.ಸಿ ಕ್ಲಬ್ ನ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಅವರು ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ಹಿಮಾಚಲ ಪ್ರದೇಶದಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಅವರು, ಡಿ.ಸಿ.ಸಿ ಕ್ಲಬ್ ನ ಮುಖ್ಯ ತರಬೇತುದಾರರಾದ ಸರಸ್ವತಿ ಪುತ್ರನ್ ಹಾಗೂ ಹರೀಶ್ ಗೌಡ,

‘ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್’ ಗೆ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಆಯ್ಕೆ Read More »

ಕರಾವಳಿ
Scroll to Top