ಕರ್ನಾಟಕ

ಮಂಗಳೂರು : ಮನೆಗೆ ಸಿಡಿಲು ಬಡಿತ – ಮೂವರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಅ.20 ಮಂಗಳೂರು: ಹೊರವಲಯದ ಸುರತ್ಕಲ್, ಕೊಡಿಪಾಡಿ ಮಾಧವ ನಗರದಲ್ಲಿ ಚಂದ್ರಹಾಸ್ ಎಂಬವರ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ನಡೆದಿದೆ. ಶನಿವಾರ(ಅ.18) ರಾತ್ರಿ 7.30 ರ ಸುಮಾರಿಗೆ ಸಿಡಿಲು ಬಡಿದಿದೆ.ಮನೆಯೊಳಗಿನ ಕೋಣೆಯೊಂದರಲ್ಲಿ ಓದಿಕೊಳ್ಳುತ್ತಿದ್ದ ಲಾವಣ್ಯ ಹಾಗೂ ಸೌಜನ್ಯ ಅವರ ತಲೆಯ ಭಾಗಕ್ಕೆ ಸಿಡಿಲೇಟು ಬಿದ್ದಿದ್ದರೆ, ಅಜ್ಜಿ ಬೇಬಿ ಅವರಿಗೆ ಕೈ ಭಾಗಕ್ಕೆ ತರಚಿದ ಗಾಯವಾಗಿದೆ. ಮನೆಯ ವಿದ್ಯುತ್ ಲೈನ್ ಗಳು ಸುಟ್ಟು ಹೋಗಿ ಹೊರಬಂದಿದ್ದು, ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯ ಮಹಾನಗರ […]

ಮಂಗಳೂರು : ಮನೆಗೆ ಸಿಡಿಲು ಬಡಿತ – ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ; ಯೆಲ್ಲೋ ಅಲರ್ಟ್ ಘೋಷಣೆ

(ನ್ಯೂಸ್‌ ಕಡಬ) newskadaba.com,  ಅ.20 ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಅಕ್ಟೋಬರ್ 21 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 55 ಕಿ.ಮೀ.ವರೆಗೆ ಗಾಳಿಯ ವೇಗ ತಲುಪುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಪರಿಸ್ಥಿತಿ ಸುಧಾರಿಸುವವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.

ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ; ಯೆಲ್ಲೋ ಅಲರ್ಟ್ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಯುವತಿಯರ ವೀಡಿಯೋ ಬಳಸಿ ಹನಿಟ್ರ್ಯಾಪ್ ಆರೋಪ – ನಿರೀಕ್ಷಾ ಆರೆಸ್ಟ್

(ನ್ಯೂಸ್‌ ಕಡಬ) newskadaba.com,  ಅ.20 ಮಂಗಳೂರು: ಯುವತಿ ಬಟ್ಟೆ ಬದಲಾಯಿಸುವ ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪದಡಿಯಲ್ಲಿ ಯುವತಿಯೊಬ್ಬಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ, ಮಂಗಳೂರಿನ ಕಂಕನಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿರೀಕ್ಷಾ ಎಂಬಾಕೆ ಬಂಧಿತ ಆರೋಪಿ. ಇತ್ತೀಚೆಗೆ ಕಾರ್ಕಳದ ನಿಟ್ಟೆಯ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣದಲ್ಲಿಯೂ ನಿರೀಕ್ಷಾ ವಿರುದ್ಧ ಹನಿ ಟ್ರ್ಯಾಪ್ ಆರೋಪದ ಕೇಳಿ ಬಂದಿತ್ತು. ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ನಿರೀಕ್ಷಾಳನ್ನು ಭಾನುವಾರ (ಅ.19) ಬಂಧಿಸಿರುವ ಪೊಲೀಸರು

ಮಂಗಳೂರಿನಲ್ಲಿ ಯುವತಿಯರ ವೀಡಿಯೋ ಬಳಸಿ ಹನಿಟ್ರ್ಯಾಪ್ ಆರೋಪ – ನಿರೀಕ್ಷಾ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ಟೋಬರ್ 31ರವರೆಗೆ ‘ಜಾತಿ ಗಣತಿ’ ಸಮೀಕ್ಷೆ ವಿಸ್ತರಣೆ

(ನ್ಯೂಸ್‌ ಕಡಬ) newskadaba.com,  ಅ.20 ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೆ ವಿಸ್ತರಿಸಲಾಗಿದೆ. ಇದೀಗ ರಾಜ್ಯಾದ್ಯಂತ ಅಕ್ಟೋಬರ್ 31 ರವರೆಗೆ ಸಮೀಕ್ಷೆ ನಡೆಯಲಿದೆ.ಇದುವರೆಗೆ ಮನೆ-ಮನೆ ಸಮೀಕ್ಷೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶಿಕ್ಷಕರು, ತಮ್ಮ ಶೈಕ್ಷಣಿಕ ಜವಾಬ್ದಾರಿಗಳಿಗೆ ಮರಳಲಿದ್ದಾರೆ. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಲಾಯಿತು. ಇದೀಗ ಮತ್ತೆ ವಿಸ್ತರಿಸಲಾಗಿದೆ.ಭಾನುವಾರ ಸಂಜೆಯ ವೇಳೆಗೆ, ಗ್ರೇಟರ್ ಬೆಂಗಳೂರು

ಅಕ್ಟೋಬರ್ 31ರವರೆಗೆ ‘ಜಾತಿ ಗಣತಿ’ ಸಮೀಕ್ಷೆ ವಿಸ್ತರಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೇತ್ರವನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ KSRTC ಬಸ್‌‍ ಚಾಲಕ

(ನ್ಯೂಸ್‌ ಕಡಬ) newskadaba.com,  ಅ.18 ಕನಕಪುರ: ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯ ಸಾರಿಗೆ ಬಸ್‌‍ ಚಾಲಕನೊಬ್ಬ ಸಾವನ್ನಪ್ಪಿದ್ದು, ತನ್ನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಸಬಾ ಹೋಬಳಿ, ತೆಂಗಿನಮರದೊಡ್ಡಿ ಗ್ರಾಮದ ಎಸ್‌‍.ಸುರೇಶ್‌ (36) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ನಗರದ ರಾಜ್ಯ ಸಾರಿಗೆ ಡಿಪೋನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ ಕಳೆದ ಮೂರು ದಿನಗಳ ಹಿಂದೆ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ದುಃಖದ ಸಂದರ್ಭದಲ್ಲೂ ಮೃತನ ಕುಟುಂಬಸ್ಥರ

ನೇತ್ರವನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ KSRTC ಬಸ್‌‍ ಚಾಲಕ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಾಮರಾಜನಗರದಲ್ಲಿ 27 ತಿಂಗಳಿನಿಂದ ವೇತನ ಸಿಗದ್ದಕ್ಕೆ ವಾಟರ್‌ಮೆನ್‌ ಆತ್ಮಹತ್ಯೆ, PDO ಅಮಾನತು..!

(ನ್ಯೂಸ್‌ ಕಡಬ) newskadaba.com,  ಅ.18 ಚಾಮರಾಜನಗರ: 27 ತಿಂಗಳುಗಳಿಂದ ವೇತನ ಸಿಗದ್ದಕ್ಕೆ ಬೇಸತ್ತು ನೀರುಗಂಟಿ (ವಾಟರ್​​​ಮ್ಯಾನ್) ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿತನದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ)ಯನ್ನು ಅಮಾನತುಗೊಳಿಸಲಾಗಿದೆ. .ಹೊಂಗನೂರು ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಪಂಚಾಯತ್ ಉದ್ಯೋಗಿ ಚಿಕ್ಕುಸನಾಯಕ ಅವರು ಪಂಚಾಯತ್ ಕಟ್ಟಡದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಡೆತ್ ನೋಟ್ ವೇತನ ನೀಡದೇ ನನಗೆ ರಜೆ ಕೊಡದೇ ಸತಾಯಿಸಿದ್ದಾರೆ. ವೇತನಕ್ಕೆ ಪಿಡಿಒ ರಾಮೇಗೌಡ

ಚಾಮರಾಜನಗರದಲ್ಲಿ 27 ತಿಂಗಳಿನಿಂದ ವೇತನ ಸಿಗದ್ದಕ್ಕೆ ವಾಟರ್‌ಮೆನ್‌ ಆತ್ಮಹತ್ಯೆ, PDO ಅಮಾನತು..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ’- ಮುಖ್ಯಮಂತ್ರಿ ಸಿದ್ದರಾಮಯ್ಯ

(ನ್ಯೂಸ್‌ ಕಡಬ) newskadaba.com,  ಅ.18: ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ಜನರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿ ಪಡೆಯುವಂತೆ ಆದೇಶ ನೀಡಲಾಗಿದ್ದು, ಇದರಲ್ಲಿ ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಗೊಂದಲ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದಂತೆ , ನಮ್ಮ ಸರ್ಕಾರವೂ

‘ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ’- ಮುಖ್ಯಮಂತ್ರಿ ಸಿದ್ದರಾಮಯ್ಯ Read More »

ಕರ್ನಾಟಕ

ಜಾತಿ ಸಮೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಊಟ–ಪಾಠ ಇಲ್ಲದಾಗಿದೆ- ಎಚ್. ವಿಶ್ವನಾಥ್

(ನ್ಯೂಸ್‌ ಕಡಬ) newskadaba.com,  ಅ.18 ಮೈಸೂರು: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರವು “ಕೆಳಮಟ್ಟಕ್ಕೆ” ತಲುಪಿದ್ದು, ಜಾತಿ ಸಮೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಊಟ–ಪಾಠ ಇಲ್ಲದಾಗಿದೆ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್ ಅವರು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿದರು, ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ದಸರಾ ರಜೆಯನ್ನು ವಿಸ್ತರಿಸಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಲಾ ಶಿಕ್ಷಣ ಅಧೋಗತಿಗೆ ಹೋಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 2010 ರಲ್ಲಿ ಆಹಾರ ಹಕ್ಕು ಕಾಯ್ದೆಯನ್ನು

ಜಾತಿ ಸಮೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಊಟ–ಪಾಠ ಇಲ್ಲದಾಗಿದೆ- ಎಚ್. ವಿಶ್ವನಾಥ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ

(ನ್ಯೂಸ್‌ ಕಡಬ) newskadaba.com,  ಅ.18 ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ  ನಡೆಸಿ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿ, ಅವರ ಚಿನ್ನದ ಸರಗಳನ್ನು ದರೋಡೆ  ಮಾಡಿದ ಇಬ್ಬರು ಪಾತಕಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯ ಭಯಾನಕತೆಯನ್ನು ತೋರಿಸಿದ್ದವು. ಆರೋಪಿಗಳನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಸೆಪ್ಟೆಂಬರ್ 13ರಂದು ರಾತ್ರಿ ಗಣೇಶ

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಲಿಕುಳ: ಅಕ್ಟೋಬರ್ 20 ರಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ

(ನ್ಯೂಸ್‌ ಕಡಬ) newskadaba.com,  ಅ.18 ಮಂಗಳೂರು:  ಶಾಲಾ ಮಕ್ಕಳ ದಸರಾ ರಜೆಯ ಪ್ರಯುಕ್ತ ಅಕ್ಟೋಬರ್ 20 ರಂದು (ಸೋಮವಾರ) ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ಪಿಲಿಕುಳ: ಅಕ್ಟೋಬರ್ 20 ರಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top