ಕರ್ನಾಟಕ

ಜ. 29ರಿಂದ ಫೆ 06ರ ವರೆಗೆ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

(ನ್ಯೂಸ್‌ ಕಡಬ) newskadaba.com,ಡಿ.24: 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 06ರ ವರೆಗೆ ನಡೆಯಲಿದೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ  ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ ನೇಮಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವ ಭಾವಿ ಸಭೆಯ ಬಳಿಕ ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮಾತನಾಡಿ, ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಬಾರಿಯ […]

ಜ. 29ರಿಂದ ಫೆ 06ರ ವರೆಗೆ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ Read More »

ಕರ್ನಾಟಕ, ಸಿನಿಮಾ

ಸ್ಕಿಲ್ ಇಂಡಿಯಾ ವತಿಯಿಂದ ಉಚಿತ ಇಂಟರ್ನ್ ಶಿಪ್ ಅವಕಾಶಗಳು

(ನ್ಯೂಸ್‌ ಕಡಬ) newskadaba.com,ಡಿ.24: ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಎಂಟರ್‌ಪ್ರಿನರ್‌ಶಿಪ್ (Skill Development and Entrepreneurship) ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನ್‌ಶಿಪ್ (internship) ಅವಕಾಶಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ವಿದೇಶಿ ಭಾಷೆಗಳು, SAP, ವೈದ್ಯಕೀಯ ಬರವಣಿಗೆ, ಡೇಟಾ ಸೈನ್ಸ್ ಮತ್ತು ಇನ್ನೂ ಹಲವು ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಪಡೆಯಬಹುದು. ಇಂಟರ್ನ್‌ಶಿಪ್ ಅವಧಿಯು 1 ತಿಂಗಳಿನಿಂದ 3 ತಿಂಗಳವರೆಗೆ ಇರುತ್ತದೆ. 10, 12ನೇ ತರಗತಿ, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್ ಅವಕಾಶಗಳನ್ನು ಪಡೆಯಬಹುದು. ಪೈಥಾನ್ ಇಂಟರ್ನ್‌ಶಿಪ್‌ನೊಂದಿಗೆ ಡೇಟಾ ಸೈನ್ಸ್: ಈ ಇಂಟರ್ನ್‌ಶಿಪ್‌ನ

ಸ್ಕಿಲ್ ಇಂಡಿಯಾ ವತಿಯಿಂದ ಉಚಿತ ಇಂಟರ್ನ್ ಶಿಪ್ ಅವಕಾಶಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು – ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್ಡಿಕೆ ಮನವಿ

(ನ್ಯೂಸ್‌ ಕಡಬ) newskadaba.com,ಡಿ.24: ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ರಾಜ್ಯದ ಕರಾವಳಿ ಭಾಗದ ಜನರಿಗೆ ಅನುಕೂಲವಾಗುವಂತೆ ಬೆಂಗಳೂರು-ಗೋವಾದ ಮಡಗಾಂವ್‌ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಸೇವೆ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಿಂದ ಹಾಸನ- ಮಂಗಳೂರು ಜಂಕ್ಷನ್‌- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್‌ ರೈಲು

ಬೆಂಗಳೂರು – ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್ಡಿಕೆ ಮನವಿ Read More »

ಕರಾವಳಿ, ಕರ್ನಾಟಕ

ಬ್ರೆಡ್‌ಲ್ಲಿ ಅಕ್ರಮ ಮಾದಕವಸ್ತು ಸಾಗಾಟ- ನೈಜೀರಿಯಾ ಮೂಲದ ಮಹಿಳೆ ಬಂಧನ

(ನ್ಯೂಸ್‌ ಕಡಬ) newskadaba.com,ಡಿ.24: ತಿನ್ನುವ ಬ್ರೆಡ್‌ಲ್ಲಿ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಕೊಕೇನ್ ಸಾಗಾಟ ಮಾಡುತ್ತಿದ್ದಳು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಬ್ರೆಡ್‌ನ ಒಳಭಾಗದ ಪೀಸ್ ಕಟ್ ಮಾಡಿ, ಅದರೊಳಗೆ

ಬ್ರೆಡ್‌ಲ್ಲಿ ಅಕ್ರಮ ಮಾದಕವಸ್ತು ಸಾಗಾಟ- ನೈಜೀರಿಯಾ ಮೂಲದ ಮಹಿಳೆ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಶೀತಗಾಳಿ ಉಲ್ಬಣ-ಇನ್ನೂ 1 ವಾರಗಳ ಕಾಲ ಮುಂದುವರೆಯಲಿದೆ ಚಳಿ

(ನ್ಯೂಸ್‌ ಕಡಬ) newskadaba.com,ಡಿ.24: ರಾಜ್ಯದಲ್ಲಿ ಶೀತದಲೆ ಪ್ರಭಾವ ಮುಂದುವರಿದಿದೆ. ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ದಾಖಲಾಗಿದೆ. ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸಿದೆ. ಇದು ಮುಂದಿನ ಒಂದು ವಾರ ಕಾಲ ಹೀಗೆಯೇ ಇರಲಿದೆ. ಕರಾವಳಿ ಭಾಗದಲ್ಲಿ ತಾಪಮಾನದಲ್ಲಿ ಬದಲಾವಣೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಕರ್ನಾಟಕ ಕೇಂದ್ರವು ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಉಷ್ಣಮಟ್ಟದಲ್ಲಿ ಉತ್ತರ ಪೂರ್ವದಿಂದ ಪೂರ್ವ ದಿಕ್ಕಿಗೆ ತೇವಭರಿತ ಗಾಳಿ

ರಾಜ್ಯದಲ್ಲಿ ಶೀತಗಾಳಿ ಉಲ್ಬಣ-ಇನ್ನೂ 1 ವಾರಗಳ ಕಾಲ ಮುಂದುವರೆಯಲಿದೆ ಚಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವೇದ ಅಕಾಡೆಮಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

(ನ್ಯೂಸ್‌ ಕಡಬ) newskadaba.com,ಡಿ.23 ವಿಜಯಪುರ::ನಗರದ ವೇದ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಗಣಿತ ಪ್ರಾತ್ಯಕ್ಷಿಕೆಗಳ ಮೂಲಕ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಭಾರತದ ಸಾರ್ವಕಾಲಿಕ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಗಣಿತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಗಣಿತ ಪ್ರಾತ್ಯಕ್ಷಿಕಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಜನ್ಮ ದಿನಾಂಕದ ಮೂಲಕ ಜನ್ಮ ದಿನವನ್ನು ಕಂಡು ಹಿಡಿಯುವ ಸೂತ್ರ, ಮನಸ್ಸಿನಲ್ಲಿ ಅಂದುಕೊAಡ ಒಂದು ಅಂಕಿಯನ್ನು ಗುರುತಿಸಿ ಹೇಳುವ ಹಾಗೂ ಒಂಭತ್ತನೆ ತರಗತಿಯಲ್ಲೇ

ವೇದ ಅಕಾಡೆಮಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ

(ನ್ಯೂಸ್‌ ಕಡಬ) newskadaba.com,ಡಿ.23: ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಶಾಸನ ಬದ್ಧ ಜವಾಬ್ದಾರಿಗಳನ್ನು ಬಲಪಡಿಸುವ ಮೂಲಕ, ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವು ಉದ್ಯೋಗ ಖಾತರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಬಲವರ್ಧಿತ ಹೊಣೆಗಾರಿಕೆ ಕಾರ್ಯವಿಧಾನಗಳು ಮತ್ತು ಸಮಯಕ್ಕೆ ಬದ್ಧವಾದ ಕುಂದುಕೊರತೆಗಳ ಪರಿಹಾರವು ಕೇವಲ ಮೇಲ್ನೋಟದ ವೈಶಿಷ್ಟ್ಯಗಳಲ್ಲ; ಅವು ಈ ಹಕ್ಕುಗಳನ್ನು ನೆಲಮಟ್ಟದಲ್ಲಿ ಅರ್ಥಪೂರ್ಣವಾಗಿಸುವ ಪ್ರಮುಖ ಅಂಶಗಳಾಗಿವೆ. ಕಲ್ಯಾಣ ಸುಧಾರಣೆಗಳ ಕುರಿತಾದ ಸಾರ್ವಜನಿಕ ಚರ್ಚೆಯು ಅಗತ್ಯ ಮತ್ತು ಆರೋಗ್ಯಕರವಾದು ದಾಗಿದೆ. ‘ವಿಕಸಿತ ಭಾರತ್-

ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನ ಈ ವರ್ಷದ ಗರಿಷ್ಠ ಬೆಲೆ ದಾಖಲು

(ನ್ಯೂಸ್‌ ಕಡಬ) newskadaba.com,ಡಿ.23 ಬೆಂಗಳೂರು: ಹಿಂದೆಂದೂ ಕಂಡರಿಯದ ರೀತಿಯಲ್ಲಿ ಚಿನ್ನದ ಬೆಲೆ ಇಂದು ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಹೆಚ್ಚಳ ಆಗಿದೆ. ಇಂದು ಚಿನ್ನದ ಗರಿಷ್ಠ ಬೆಲೆ 13,855 ರೂ ದಾಖಲಾಗಿದೆ. ಒಂದೇ ದಿನಕ್ಕೆ 2400 ರೂ ಏರಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಿಗೆ ಶಾಕ್ ನೀಡಿದೆ. ಡಿಸೆಂಬರ್ 23 ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13855 ರೂಪಾಯಿ ಇದ್ದು, ಇಂದು 240 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ

ಚಿನ್ನ ಈ ವರ್ಷದ ಗರಿಷ್ಠ ಬೆಲೆ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿಜೆಪಿ ದಾಳಿ’- ರಾಹುಲ್‌ ಆರೋಪ

(ನ್ಯೂಸ್‌ ಕಡಬ) newskadaba.com,ಡಿ.24: ಜರ್ಮನಿ ಪ್ರವಾಸದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಬರ್ಲಿನ್‌ನಲ್ಲಿರುವ ಹರ್ಟೀ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐಗಳನ್ನುಪ್ರತಿಪಕ್ಷಗಳನ್ನು ಹಳಿಯುವ ರಾಜಕೀಯ ಸಾಧನವಾಗಿ ಪರಿವರ್ತಿಸಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ. ವಾಸ್ತವಿಕವಾಗಿ ಬಿಜೆಪಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೆ ಹೆಚ್ಚಿನ ರಾಜಕೀಯ ಪ್ರಕರಣಗಳು ಆಡಳಿತ ಪಕ್ಷವನ್ನು

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿಜೆಪಿ ದಾಳಿ’- ರಾಹುಲ್‌ ಆರೋಪ Read More »

ಕರ್ನಾಟಕ

ರಾಜ್ಯದ ಸುಮಾರು 1,749 ಗ್ರಾಮಗಳು ರಸ್ತೆ ಸಂಪರ್ಕ ಜಾಲದ ಕೊರತೆಯಿಂದಾಗಿ ಕೆಂಪು ಬಸ್ಸಿಲ್ಲ! ಇದು ಪ್ರಗತಿಶೀಲ ಕರ್ನಾಟಕಕ್ಕೆ ಮುಜುಗರ ತರುವ ಸಂಗತಿ

(ನ್ಯೂಸ್‌ ಕಡಬ) newskadaba.com,ಡಿ.23  ಬೆಂಗಳೂರು: ಸಮರ್ಪಕ ರಸ್ತೆ ಕೊರತೆ ಕಾರಣಕ್ಕೆ ರಾಜ್ಯದ ಸಾವಿರಾರು ಹಳ್ಳಿಗಳು ಕೆಂಪು ಬಸ್‌ಗಳ ಮುಖವನ್ನೇ ನೋಡಿಲ್ಲ. ರಸ್ತೆ ಸಂಪರ್ಕ ಜಾಲವಿಲ್ಲದ ಕಾರಣಕ್ಕೆ ರಾಜ್ಯದ ಸುಮಾರು 1,749 ಗ್ರಾಮಗಳತ್ತ ಸರಕಾರಿ ಬಸ್‌ಗಳೇ ಸುಳಿಯುತ್ತಿಲ್ಲ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಸರಕಾರ, ರಾಜ್ಯ ವ್ಯಾಪಿ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಸಂಪರ್ಕ ಸಾಧಿಸಿದೆ. ರಾಜ್ಯದ ಸಾರ್ವಜನಿಕ ಸಾರಿಗೆಯ ಪ್ರಮುಖ ಭಾಗವಾಗಿರುವ ಕೆಎಸ್‌ಆರ್‌ಟಿಸಿ, ರಾಜ್ಯದ ಉದ್ದಗಲಕ್ಕೂ ಸೇವೆ ಒದಗಿಸುತ್ತಿದೆ. ಆದರೆ,

ರಾಜ್ಯದ ಸುಮಾರು 1,749 ಗ್ರಾಮಗಳು ರಸ್ತೆ ಸಂಪರ್ಕ ಜಾಲದ ಕೊರತೆಯಿಂದಾಗಿ ಕೆಂಪು ಬಸ್ಸಿಲ್ಲ! ಇದು ಪ್ರಗತಿಶೀಲ ಕರ್ನಾಟಕಕ್ಕೆ ಮುಜುಗರ ತರುವ ಸಂಗತಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top