ಕರ್ನಾಟಕ

ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

(ನ್ಯೂಸ್‌ ಕಡಬ) newskadaba.com,ಡಿ.29:  2026ರ ನವೆಂಬರ್‌ನಲ್ಲಿ ನಡೆಯುವ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಶಿ ಹುಲಿಕುಂಟೆಮಠ್‌, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರ್, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ಹೈಕಮಾಂಡ್‌ ನಾಯಕರಿಗೆ ಎಂಎಲ್‌ಸಿ ಪುಟ್ಟಣ್ಣ ಧನ್ಯವಾದ […]

ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿ.

(ನ್ಯೂಸ್‌ ಕಡಬ) newskadaba.com,ಡಿ.30 ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೊರಡಿಸಿರುವ ಮಹತ್ವದ ಆದೇಶವೊಂದು ಚಿನ್ನದ ಸಾಲದ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಚಿನ್ನದ ಸಾಲದ ನಿಯಮಗಳು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಬೇರೆ ಬೇರೆಯಾಗಿರುತ್ತಿದ್ದವು. ಆದರೆ, ಈ ಗೊಂದಲಗಳನ್ನು ನಿವಾರಿಸಲು ಮತ್ತು ಗ್ರಾಹಕರ ಹಿತರಕ್ಷಣೆಗೆ ಆರ್‌ಬಿಐ ಒಂದು ಕಠಿಣ ಹೆಜ್ಜೆ ಇಟ್ಟಿದೆ. ಆರ್‌ಬಿಐ ‘ಮಾಸ್ಟರ್ ಡೈರೆಕ್ಷನ್ ಆನ್ ಗೋಲ್ಡ್ ಲೋನ್’ ಎಂಬ ಹೊಸ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳನ್ನು ಜಾರಿಗೆ ತರಲು

ದೇಶದಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ….!

(ನ್ಯೂಸ್‌ ಕಡಬ) newskadaba.com,ಡಿ.30 ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜನಪ್ರಿಯಗೊಂಡಿರುವುದರೊಂದಿಗೆ, ಆಹಾರ ಧಾನ್ಯ ಸಬ್ಸಿಡಿ, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯದಂತಹ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದೆ. ಆದರೆ, ಅನರ್ಹ ಕಾರ್ಡ್‌ಗಳ ರದ್ದತಿ ಅಭಿಯಾನದಿಂದ ಹೊಸ ಅರ್ಜಿಗಳು ನಿಲ್ಲಿಸಲ್ಪಟ್ಟಿದ್ದವು. ಇದೀಗ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿಶೇಷ ವರ್ಗಗಳಿಗೆ ಮಾತ್ರ ಹೊಸ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳಿಗೆ ಅವಕಾಶ ನೀಡಿದೆ.ಈ ಯೋಜನೆಯ ಮೂಲಕ, ಅಸಂಘಟಿತ ಕಾರ್ಮಿಕರು, ಬುಡಕಟ್ಟು ಸಮುದಾಯಗಳು ಮತ್ತು ತುರ್ತು ವೈದ್ಯಕೀಯ ಅಗತ್ಯರಿಗಳು ಸಬ್ಸಿಡಿ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ….! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೈನಿಕ್ ಶಾಲೆ ನೇಮಕಾತಿ 2026: ಟೀಚರ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,ಡಿ.30:  ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವ ಪದವೀಧರರು ಅಥವಾ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿದ್ದಾರೆಯೇ? ಪ್ರತಿಷ್ಠಿತ ಸೈನಿಕ್ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಕನಸೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ವಿಜಯಪುರ ಸೈನಿಕ್ ಶಾಲೆಯು ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಕೇವಲ ಶಿಕ್ಷಕರಿಗೆ ಮಾತ್ರವಲ್ಲದೆ, ಇತರೆ ಸೇವಾ ವಿಭಾಗಗಳಿಗೂ ಆದ್ಯತೆ ನೀಡಲಾಗಿದೆ. PGT ಮತ್ತು TGT ಶಿಕ್ಷಕರು,

ಸೈನಿಕ್ ಶಾಲೆ ನೇಮಕಾತಿ 2026: ಟೀಚರ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ

(ನ್ಯೂಸ್‌ ಕಡಬ) newskadaba.com,ಡಿ.30  ಬೆಂಗಳೂರು: ರಾಜ್ಯದಲ್ಲಿರುವ ಸಮುದಾಯದ ಶ್ರಮಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಮುಂದಾಗಿರುವ ಕರ್ನಾಟಕ ಗೃಹ ಮಂಡಳಿ, ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ಪ್ರಗತಿ ಹಾಗೂ ನಗರೀಕರಣದ ಹಿನ್ನೆಲೆಯಲ್ಲಿ ವಸತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಹಲವು ವಸತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ನಡುವೆ ಗೃಹ ಮಂಡಳಿ ಕೂಡ

ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ : ಸಹೃದಯಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಮನೆಯ ಕೀಲಿ ಕೈ ಹಸ್ತಾಂತರ

(ನ್ಯೂಸ್‌ ಕಡಬ) newskadaba.com,ಡಿ.30  ಬಂಟ್ವಾಳ: ಕಡು ಬಡವರಿಗೆ ಆಶಾದೀಪವಾಗಿರುವ ಯುವ ಉದ್ಯಮಿ ರೊನಾಲ್ಡ್ ಮಾರ್ಟೀಸ್ ನೇತೃತ್ವದಲ್ಲಿ ಸಜೀಪ ದಸರಾ ಶತಮಾನೋತ್ಸವ ಸಮಿತಿಯ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶ್ರೀ ಶಾರದಾ ಪೂಜಾ ಮಹೋತ್ಸವ ಸುಭಾಷ್ ಯುವಕ ಮಂಡಲ (ರಿ.) ಸುಭಾಷ್ ನಗರ ಹಾಗೂ ಶಾರದಾ ಪೂಜಾ ಮಹೋತ್ಸವದ 100ನೇ ವರ್ಷದ ಸಜೀಪ ದಸರಾ ಮಹೋತ್ಸವದ ಅಂಗವಾಗಿ ಅಸಹಾಯಕರಿಗೆ “ಆಸರೆ ಯೋಜನೆ” ಅಡಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ

ಬಂಟ್ವಾಳ : ಸಹೃದಯಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಮನೆಯ ಕೀಲಿ ಕೈ ಹಸ್ತಾಂತರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುಷ್ಪರಥವಾಗಿ ರೂಪಾಂತರಗೊಂಡು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಬಂದ ಹಳೆರಥ

(ನ್ಯೂಸ್‌ ಕಡಬ) newskadaba.com,ಡಿ.30 :ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಕಳೆದ ವರ್ಷ ಡಾ.ಕೆ.ವಿ.ಚಿದಾನಂದರು ನೂತನ ಬ್ರಹ್ಮರಥ ಕೊಡುವವರೆಗೆ ಚಿನ್ನಕೇಶವ ದೇವರ ರಥವಾಗಿ ಜಾತ್ರೆಯ ಸಮಯದಲ್ಲಿ ಎಳೆಯಲ್ಪಡುತ್ತಿದ್ದ ಹಳೆಯ ರಥವು ಈಗ ಪುಷ್ಪರಥವಾಗಿ ರೂಪಾಂತರಗೊಂಡು ಮತ್ತೆ ಚೆನ್ನಕೇಶವ ದೇವಸ್ಥಾನಕ್ಕೆ ಬಂದಿದೆ. ಕಳೆದ ವರ್ಷ ನೂತನ ಬ್ರಹ್ಮರಥ ಸುಳ್ಯಕ್ಕೆ ಬರುವ ಮೊದಲು ಹಳಿರಥವನ್ನು ಕುಂದಾಪುರಕ್ಕೆ ಕೊಂಡೊಯ್ದು ಕೋಟೇಶ್ವರದಲ್ಲಿರುವ ರಥ ಶಿಲ್ಪಿ ರಾಜಗೋಪಾಲಾಚಾರ್ಯರ ಪಕ ನೀಡಲಾಗಿತ್ತು. ಅದನ್ನು ಕಿರಿದುಗೊಳಿಸಿ. ದೇವಸ್ಥಾನದ ಒಳಭಾಗದಲ್ಲಿ ಭಕ್ತರ ಪುಸ್ತರದ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಅದನ್ನು ಕಿರಿದುಗೊಳಿಸಿ

ಪುಷ್ಪರಥವಾಗಿ ರೂಪಾಂತರಗೊಂಡು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಬಂದ ಹಳೆರಥ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವರ್ಷಾಂತ್ಯದ ಕೊಡುಗೆಗಳು

(ನ್ಯೂಸ್‌ ಕಡಬ) newskadaba.com,ಡಿ.30 :ಸುಳ್ಯ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಗಳನ್ನು ಘೋಷಿಸಿದೆ. ಚಿನ್ನದ ಬೆಲೆ ಗಗನಮುಖಿಯಾಗುತ್ತಿರುವ ನಡುವೆ ಜಿಲ್ ಆಚಾರ್ಯ ಜ್ಯುವೆಲ್ಲರ್ಸ್ ಚಿನ್ನಾಭರಣಗಳ ತಯಾರಿಕಾ ವೆಚ್ಚದ (ಮೇಕಿಂಗ್ ಚಾರ್ಜ್) ಮೇಲೆ ಪ್ರತೀ ಗ್ರಾಂಗೆ 400 ರೂ. ವರೆಗೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ ಡಿ.25 ರಿಂದ ಪ್ರಾರಂಭವಾಗಿದ್ದು, ಡಿ.31ರ ವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9482383606 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ಗೊ ಫೆಸ್ಟ್

ಸುಳ್ಯ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವರ್ಷಾಂತ್ಯದ ಕೊಡುಗೆಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರಿನ ಪಿಜಿಯೊಂದರಲ್ಲಿ LPG ಸಿಲಿಂಡರ್ ಸ್ಫೋಟ: ಒಬ್ಬ ಯುವಕ ಸಾವು, ಮೂವರಿಗೆ ಗಾಯ

ಬೆಂಗಳೂರು: ಪಿಜಿಯೊಂದರ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡಿರು ಘಟನೆ ನಗರದ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಅರವಿಂದ್ (23) ಮೃತ ಯುವಕ. ಘಟನೆಯಲ್ಲಿ ವೆಂಕಟೇಶ್, ವಿಶಾಲ್, ಗೋಯಲ್ ಎಂಬುವವರು ಗಾಯಗೊಂಡಿದ್ದು, ಮೂವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕುಂದಲಹಳ್ಳಿಯ ಸೆವೆನ್ ಹಿಲ್ಸ್ ಶ್ರೀಸಾಯಿ ಪಿ.ಜಿ.ಯ ಎರಡನೇ ಮಹಡಿಯಲ್ಲಿ ಸಂಜೆ 6.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪಿ,ಜಿಯಲ್ಲಿ ಸುಮಾರು 52 ಮಂದಿ ವಾಸವಿದ್ದರು

ಬೆಂಗಳೂರಿನ ಪಿಜಿಯೊಂದರಲ್ಲಿ LPG ಸಿಲಿಂಡರ್ ಸ್ಫೋಟ: ಒಬ್ಬ ಯುವಕ ಸಾವು, ಮೂವರಿಗೆ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಡಿ.30:  ಮುಂದಿನ 3 ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಶೀತ ಗಾಳಿಯಿರಲಿದ್ದು, ತಾಪಮಾನದಲ್ಲಿ ಇಳಿಕೆಯಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top