ಕರ್ನಾಟಕ

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ರಾಜ್ಯ ರಾಜಕಾರಣದ ಹೊಸ ಮುಖ, ಚಿತ್ರರಂಗದ ದಿಗ್ಗಜ ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಕೊನೆಗೂ ಅಂತಿಮವಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಮಾಧ್ಯಮಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಎಂದು ಬಿತ್ತರವಾಗಿತ್ತು. ಆದರೆ ಕೊನೆಗೆ ಪಕ್ಷದ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ಅಂತಿಮಗೊಂಡಿದೆ ಎನ್ನಲಾಗಿದೆ. ಸದಸ್ಯತ್ವ ನೋಂದಣಿಯ ಅರ್ಜಿಯಲ್ಲಿ ಉಪೇಂದ್ರರ ನೂತನ ಪಕ್ಷದ ಹೆಸರು ಬಹಿರಂಗವಾಗಿದೆ. ಈಗಾಗಲೇ […]

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…? Read More »

ಕರ್ನಾಟಕ

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .21, ಚಲಿಸುತ್ತಿದ್ದ ಕಾರ್‍ಗೆ ಬಿಎಂಟಿಸಿ ಬಸ್ಸೊಂದು ಡಿಕ್ಕಿ ಹೊಡೆದುದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೈಸೂರು ರಸ್ತೆ ಕಡೆಗೆ ತೆರಳುತಿದ್ದ ಕಾರಿಗೆ ಬಿಎಂಟಿಸಿ ಬಸ್ ನಾಯಂಡನಹಳ್ಳಿ ಜಂಕ್ಷನ್ ಬಳಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಕಾರ್ ಚಾಲಕ ಕೀರ್ತಿ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ Read More »

ಕರ್ನಾಟಕ

‘ಸಿ ಫೋರ್’ ಚುನಾವಣಾ ಪೂರ್ವ ಸಮೀಕ್ಷೆ ► ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.20. ಖಾಸಗಿ ಸಂಸ್ಥೆಯೊಂದು ಕರ್ನಾಟಕದಲ್ಲಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದ್ದು 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ತಿಳಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ‘ಸಿ ಫೋರ್’ ಸಂಸ್ಥೆಯು 2017ರ ಜುಲೈ 19 ರಿಂದ ಆಗಸ್ಟ್ 10 ರವರೆಗೆ ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ 340 ನಗರ ಹಾಗೂ 550

‘ಸಿ ಫೋರ್’ ಚುನಾವಣಾ ಪೂರ್ವ ಸಮೀಕ್ಷೆ ► ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ Read More »

ಕರ್ನಾಟಕ

ಕಲ್ಲಡ್ಕ ಭಟ್ಟರನ್ನು ಸರಕಾರ ಕೂಡಲೇ ಬಂಧಿಸಲಿ: ದೇವೇಗೌಡ ► ದೇವಸ್ಥಾನದ ಅನುದಾನ ಕಡತವನ್ನು ಸಮರ್ಥಿಸಿದ ಮಾಜಿ ಪ್ರಧಾನಿ

(ನ್ಯೂಸ್ ಕಡಬ) newskadaba.com ವಿಜಯಪುರ, ಆ.20. ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಸರಕಾರವು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದರು. ಅವರು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಾ. ಪ್ರಭಾಕರ ಭಟ್ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಅನುದಾನವನ್ನು ರಾಜ್ಯ ಸರಕಾರ ಕಡಿತ ಮಾಡಿದ ಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಮರ್ಥಿಸಿಕೊಂಡರು. ಡಾ.ಕಲ್ಲಡ್ಕ

ಕಲ್ಲಡ್ಕ ಭಟ್ಟರನ್ನು ಸರಕಾರ ಕೂಡಲೇ ಬಂಧಿಸಲಿ: ದೇವೇಗೌಡ ► ದೇವಸ್ಥಾನದ ಅನುದಾನ ಕಡತವನ್ನು ಸಮರ್ಥಿಸಿದ ಮಾಜಿ ಪ್ರಧಾನಿ Read More »

ಕರ್ನಾಟಕ

ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲು ► ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲು ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ (ನ್ಯೂಸ್ ಕಡಬ) newskadaba.com ಉಡುಪಿ, ಆ.20. ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಭಾನುವಾರ ಹರ್ನಿಯ ಶಸ್ತ್ರಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ವಿಶೇಷವೆಂದರೆ ಆಸ್ಪತ್ರೆಯ ಹೊರಗೆ ಪೇಜಾವರ ಬ್ಲಿಡ್ ಡೊನೇಟ್ ತಂಡದ ಮುಸ್ಲಿಂ ಸದಸ್ಯರು ಶ್ರೀಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಎಂದು ವಿಶೇಷ ಪ್ರಾರ್ಥನೆ ನಡೆಸಿದ್ದಾರೆ. ವಾರದ ಕಾಲ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಕಿರಿಯ ಶ್ರೀಗಳು ನೆರವೇರಿಸಲಿದ್ದಾರೆ. ಇದುವರೆಗೆ ಆರೋಗ್ಯ

ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲು ► ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ Read More »

ಕರ್ನಾಟಕ

ತಡರಾತ್ರಿ ಎಟಿಎಂಗೆ ನುಗ್ಗಿದ ಕಳ್ಳರು ► 5 ಲಕ್ಷ ಹಣದೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ದಾವಣಗೆರೆ, ಆ.20. ಇಲ್ಲಿನ ಮುಖ್ಯ ರಸ್ತೆಯಲ್ಲಿನ ಎಟಿಎಂಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷ ರೂ.ಗಳನ್ನು ದೋಚಿ ಪರಾರಿಯಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ನಗರದ ಜಯದೇವ ವೃತ್ತದ ಬಳಿಯ ಆಕ್ಸಿಸ್​ ಬ್ಯಾಂಕ್​ ಎಟಿಎಂಗೆ ನುಗ್ಗಿದ ಕಳ್ಳರು ಗ್ಯಾಸ್​ ಕಟರ್​ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಹಣ ಕಳ್ಳತನ ಮಾಡಿದ್ದಾರೆ. ಕಳ್ಳರು ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದ್ದು, ಸೆಕ್ಯುರಿಟಿ ಗಾರ್ಡ್ ಇಲ್ಲದ ವೇಳೆ ಹಣವನ್ನು ದೋಚಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ

ತಡರಾತ್ರಿ ಎಟಿಎಂಗೆ ನುಗ್ಗಿದ ಕಳ್ಳರು ► 5 ಲಕ್ಷ ಹಣದೊಂದಿಗೆ ಪರಾರಿ Read More »

ಕರ್ನಾಟಕ

ಇಂದು ಪೇಜಾವರ ಶ್ರೀಗೆ ಹರ್ನಿಯಾ ಶಸ್ತ್ರಚಿಕಿತ್ಸೆ

(ನ್ಯೂಸ್ ಕಡಬ) newskadaba.com ಉಡುಪಿ, ಆ.19. ಉಡುಪಿ ಕೃಷ್ಣಮಠದ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹರ್ನಿಯಾದ ಶಸ್ತ್ರಚಿಕಿತ್ಸೆ ನಡೆಯಲಿದೆ. ಪೇಜಾವರ ಶ್ರೀಗಳು ಪ್ರಸ್ತುತ 2016 ರ ಜ.18 ರಿಂದ 2 ವರ್ಷಗಳ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ ನಡೆಸುತ್ತಿದ್ದು, ಸಂಪ್ರದಾಯದಂತೆ 2 ವರ್ಷಗಳ ಕಾಲ ಪರ್ಯಾಯ ಶ್ರೀಗಳು ಕೃಷ್ಣ ಮಠವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ. ಆದರೆ ಇದು ತೀವ್ರ ಆರೋಗ್ಯದ ಸಮಸ್ಯೆಯಾದ್ದರಿಂದ ಪೇಜಾವರ ಶ್ರೀಗಳು ಆಸ್ಪತ್ರೆಗೆ ಹೋಗಲೇಬೇಕಾಗಿದೆ.

ಇಂದು ಪೇಜಾವರ ಶ್ರೀಗೆ ಹರ್ನಿಯಾ ಶಸ್ತ್ರಚಿಕಿತ್ಸೆ Read More »

ಕರ್ನಾಟಕ

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಆ.19. ಠಾಣಾ ವ್ಯಾಪ್ತಿಯ ಎರ್ಮಾಳು ರಾಷ್ಟ್ರೀಯ ಹೆದ್ದಾರಿಯ ಸಮೀಪದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ ಮೀನು ಸಾಗಾಟದ ಟೆಂಪೊ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ‌. ಮಂಗಳೂರಿನಿಂದ ಉಡುಪಿ ಕಡೆಗೆ ಮೀನು ಸಾಗಿಸುತ್ತಿದ್ದ ಈಚರ್ ಟೆಂಪೊ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿದ್ದ ಇನ್ನೊಂದು ಲಾರಿಯ ಚಾಲಕ ಮೃತಪಟ್ಟಿದ್ದು, ಟೆಂಪೊ ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ

ಮದುಮಗಳು ಚೆನ್ನಾಗಿದ್ರೆ ಗಂಡ್ಮಕ್ಳು ಜಾಸ್ತಿ ಬರ್ತಾರೆ ► ಜೆಡಿಎಸ್ ಗಾಳ ಹಾಕಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಿಎಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.19. ಮೇಲ್ಮನೆಯ ಒಂದು ಸ್ಥಾನಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಘಟನೆ ಶನಿವಾರದಂದು ನಡೆದಿದೆ. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರವನ್ನು ಸಮರ್ಪಿಸಿದ್ದೇನೆ. ಸೋಮವಾರದಂದು ಮೇಲ್ಮನೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದು, ಈ ಸಂಬಂಧ ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದೇನೆ ಎಂದರು. ಜೆಡಿಎಸ್ ಸೇರುವ

ಮದುಮಗಳು ಚೆನ್ನಾಗಿದ್ರೆ ಗಂಡ್ಮಕ್ಳು ಜಾಸ್ತಿ ಬರ್ತಾರೆ ► ಜೆಡಿಎಸ್ ಗಾಳ ಹಾಕಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಿಎಂ Read More »

ಕರ್ನಾಟಕ

ಒಂದು ಗ್ಲಾಸ್ ಬಿಸಿ ನೀರಿಲ್ಲದೆ 2ಗಂಟೆ ತಡವಾಗಿ ಔಷಧಿ ಸೇವಿಸಿದ ಮಾಜಿ ಪ್ರಧಾನಿ!

(ನ್ಯೂಸ್ ಕಡಬ) newskadaba.com ಬೆಳಗಾವಿ, ಆ .19, ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಔಷಧಿ ತಗೆದುಕೊಳ್ಳಲು ಪ್ರವಾಸಿ ಮಂದಿರದ ಸಿಬ್ಬಂದಿಯಲ್ಲಿ ಬಿಸಿನೀರು ಕೇಳಿದರೆ ಅವರು ನೀರು ಕೊಡಲು ನಿರಾಕರಿಸಿದರು. ಸುಮಾರು 2 ಗಂಟೆಗಳ ಕಾಲ ಮಾಜಿ ಪ್ರಧಾನಿ ಬಿಸಿ

ಒಂದು ಗ್ಲಾಸ್ ಬಿಸಿ ನೀರಿಲ್ಲದೆ 2ಗಂಟೆ ತಡವಾಗಿ ಔಷಧಿ ಸೇವಿಸಿದ ಮಾಜಿ ಪ್ರಧಾನಿ! Read More »

ಕರ್ನಾಟಕ
Scroll to Top