ಕರ್ನಾಟಕ

ಮಾರಕಾಸ್ತ್ರಗಳಿಂದ ಯುವಕನ ಕೊಲೆ ಮಾಡಿದ ನಾಲ್ವರು ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಆಗಸ್ಟ್.7.ಮಳವಳ್ಳಿ ತಾಲೂಕಿನ ಸಾತನೂರು ಬಳಿಯ ಕಾಳೇಗೌಡನದೊಡ್ಡಿಯ ಚಿಕ್ಕದೇವಯ್ಯ ಎಂಬುವರ ಪುತ್ರ ರಾಮು ಎಂಬಾತನನ್ನು ಹಾಡಹಗಲಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ರಾಮು(30) ಕೊಲೆಯಾದವ.ರಾಮು ಹಲಗೂರಿನಲ್ಲಿ ಬಿ.ಕೆ. ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದ. ಇಂದು ರಾಮು ಅಂಗಡಿಯಲ್ಲಿದ್ದಿದ್ದನ್ನು ನೋಡಿ ಬೆಳಗ್ಗೆ 10.10ಕ್ಕೆ ಮಾರಕಾಸ್ತ್ರಗಳನ್ನು ಹಿಡಿದು ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿ ಧೈರ್ಯದಿಂದಲೇ ಹೊರಗೆ ಮಚ್ಚು ಬೀಸುತ್ತ ಬಂದಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕನನ್ನು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ […]

ಮಾರಕಾಸ್ತ್ರಗಳಿಂದ ಯುವಕನ ಕೊಲೆ ಮಾಡಿದ ನಾಲ್ವರು ದುಷ್ಕರ್ಮಿಗಳು Read More »

ಕರ್ನಾಟಕ

ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಸಾವು

(ನ್ಯೂಸ್ ಕಡಬ) newskadaba.com ವಿಜಯಾಪುರ, ಆಗಸ್ಟ್.3.ಶಾಲಾ ಬಸ್ಸಿನಲ್ಲಿ ಬಂದ ಸೋದರಿಯರನ್ನು ಇಳಿಸಿಕೊಳ್ಳಲು ತಂದೆಯ ಜತೆಗೆ ತೆರಳಿದ್ದ ಬಾಲಕಿ ಮೇಲೆ ಶಾಲಾ ಬಸ್‌ ಹರಿದಿದೆ. ಪರಿಣಾಮವಾಗಿ ಸ್ಥಳದಲ್ಲೇ ಭಕ್ತಿ ಗಿರಿಮಲ ನಿಡೋಣಿ(3) ಎಂಬಾಕೆ ಮೃತಪಟ್ಟಿದ್ದಾಳೆ. ಅಕ್ಕ ಇಳಿದು ಬಂದಾಗ ಹಿಂದಿನಿಂದ ಬಾಲಕಿ ಬರುತ್ತಿದ್ದ ವೇಳೆ ಬಾಲಕಿಯನ್ನು ಗಮನಿಸದೆ ಚಾಲಕ ಬಸ್‌ ಚಲಾಯಿಸಿದ್ದಾನೆ. ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಈ ಘಟನೆ ವಿಜಯಪುರ ನಗರದ ಕೆಐಡಿಬಿ ಕೈಗಾರಿಕೆ ಪ್ರದೇಶದಲ್ಲಿ ನಡೆದಿದೆ. ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ

ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಸಾವು Read More »

ಕರ್ನಾಟಕ

ಕಾಫಿಡೇ ಮಾಲಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಸೋಮವಾರ ರಾತ್ರಿ ಮಂಗಳೂರಿನ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕೆಫೆ ಕಾಫಿಡೇ ಮಾಲಕ ಸಿದ್ದಾರ್ಥ್‌ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ. ಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಯಿಗೆ ಬಜಾರ್‌ನ ಅಳಿವೆ ಬಾಗಿಲು ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್‌ ಅವರ ದೇಹ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡುಬಂದಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರವರ

ಕಾಫಿಡೇ ಮಾಲಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಕರ್ನಾಟಕ

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.30.ಬಿಜೆಪಿ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್​ ಸ್ಥಾನಕ್ಕೆ ಆಯ್ಕೆ ಮಾಡಿದೆ. ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ನೀಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ನಂತರ ಇವತ್ತು

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ Read More »

ಕರ್ನಾಟಕ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ದಿಢೀರ್ ನಾಪತ್ತೆ…! ➤ ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.30. ಮಾಜಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್‌ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದು, ತೀವ್ರ ಶೊಧ ಕಾರ್ಯ ಮುಂದುವರಿದಿದೆ. ವಿ.ಜಿ. ಸಿದ್ದಾರ್ಥ್‌ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅವರು ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್‌ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದು, ಬಳಿಕ ಮಾಲಕನ ಸೂಚನೆಯಂತೆ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ದಿಢೀರ್ ನಾಪತ್ತೆ…! ➤ ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ Read More »

ಕರ್ನಾಟಕ

ಪ್ರತಿಪಕ್ಷಗಳ ಯಾವುದೇ ಆಮಿಷಕ್ಕೆ ಒಳಗಾಗದಂತೆ ಸೂಚನೆ ➤ಬಿಎಸ್ ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.29.ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಮವಾರ ಸದನದಲ್ಲಿ ಬಹುಮತ ಸಾಬೀತು ವೇಳೆ ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಪರ ಮತ ಚಲಾಯಿಸುವಂತೆ ನೂತನ ಶಾಸಕರಿಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗಬೇಡಿ ಎಂದು ತಾಕೀತು ಮಾಡಿದ್ದಾರೆ. ಸೋಮವಾರ ಅಧಿವೇಶನದಲ್ಲಿ ಶಾಸಕರು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ತೀರ್ಮಾನ ಸಂವಿಧಾನಬಾಹಿರ. ಆದರೆ ಸದ್ಯದಮಟ್ಟಿಗೆ ನಮಗೆ

ಪ್ರತಿಪಕ್ಷಗಳ ಯಾವುದೇ ಆಮಿಷಕ್ಕೆ ಒಳಗಾಗದಂತೆ ಸೂಚನೆ ➤ಬಿಎಸ್ ವೈ Read More »

ಕರ್ನಾಟಕ

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.29.ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿಯು ಹೊಸ ಮಾದರಿಯ   ಇಲೆಕ್ಟ್ರಿಕಲ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಕಾರಿಗೆ ಕಂಪನಿಯು ಹ್ಯುಂಡೈ ಕೋನಾ ಎಂಬ ಹೆಸರನ್ನು ನೀಡಿ ಬಿಡುಗಡೆ ಗೊಳಿಸಿದೆ. ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್‌ ಕಾರನ್ನು ಪರಿಚಯಿಸಿದ ಹೆಗ್ಗಳಿಕೆಗೆ ಹ್ಯುಂಡೈ ಕಂಪನಿ ಭಾಜನವಾಗಿದೆ. ಇಲೆಕ್ಟ್ರಿಕಲ್‌ ಕಾರುಗಳ ಓಡಾಟಕ್ಕೆ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆಗಳು ಭಾರತದಲ್ಲಿ ಇಲ್ಲದಿರುವ ನಡುವೆಯೂ ಕಂಪೆನಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಧೈರ್ಯ ಪ್ರದರ್ಶಿಸಿದೆ. 136ಬಿಎಚ್‌ಪಿ ಅಥವಾ 100 ಕೆ.ವಿ. ಎಲೆಕ್ಟ್ರಿಕಲ್‌ ಮೋಟಾರ್‌ ಮತ್ತು 39.2ಕೆಡಬ್ಲ್ಯುಎಚ್‌

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ Read More »

ಕರ್ನಾಟಕ, ತಂತ್ರಜ್ಞಾನ

ಚಲಿಸುತ್ತಿರುವ ಉಗಿಬಂಡಿಯಿಂದ ಕೆಳಕ್ಕೆ ಧುಮುಕಿ ಗಾಯಗೊಂಡ ಮಹಿಳೆ

(ನ್ಯೂಸ್ ಕಡಬ) newskadaba.com ಉಡುಪಿ, ಜುಲೈ.29.ತಿರುವನಂತಪುರ – ನಿಜಾಮುದ್ದೀನ್‌ ರೈಲಿನಲ್ಲಿ (22655) ಸಂಚರಿಸುತ್ತಿದ್ದ ಮಹಿಳೆ ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ಧುಮುಕಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ವೇಳೆ ಬೈಂದೂರು ರೈಲು ನಿಲ್ದಾಣದಲ್ಲಿ ವರದಿಯಾಗಿದೆ. ಕೂಡಲೇ ರಿಕ್ಷಾ ಚಾಲಕ ಮಹೇಶ್‌ ಅವರು ಗಾಯಾಳನ್ನು ಬೈಂದೂರಿನ ಅಂಜಲಿ ಆಸ್ಪತ್ರೆಗೆ ದಾಖಲಿಸಿದರು.“ಇವರು ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದು ಉಡುಪಿ ರೈಲು ನಿಲ್ದಾಣದಲ್ಲಿ ಬೈಂದೂರಿಗೆ ಹೋಗಲು ಜನರಲ್‌ ಟಿಕೆಟ್‌ ಪಡೆದಿದ್ದರು. ಅವರು ತಪ್ಪಾಗಿ ತಿಳಿದು ದಿಲ್ಲಿಗೆ ತೆರಳುವ ಈ ರೈಲನ್ನು ಹತ್ತಿದ್ದರು. ಈ ರೈಲಿಗೆ

ಚಲಿಸುತ್ತಿರುವ ಉಗಿಬಂಡಿಯಿಂದ ಕೆಳಕ್ಕೆ ಧುಮುಕಿ ಗಾಯಗೊಂಡ ಮಹಿಳೆ Read More »

ಕರ್ನಾಟಕ

ಕಡಿಮೆ ವೇತನವನ್ನು ವಿರೋಧಿಸಿ ಗಾರ್ಮೆಂಟ್ಸ್ ನೌಕರರ ಮುಷ್ಕರ

(ನ್ಯೂಸ್ ಕಡಬ) newskadaba.com ಹಾಸನ, ಜು.24.ಹಾಸನದ ಹಿಮತ್ ಸಿಂಕಾ ಗಾರ್ಮೆಂಟ್ಸ್ ನೌಕರರು ಕಡಿಮೆ ವೇತನ ನೀಡುತ್ತಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ಘಟನೆ ಹಾಸನದಲ್ಲಿ  ನಡೆದಿದೆ. ತಮಗೆ ಕೊಡಬೇಕಾಗಿರುವ ಬಾಕಿ ಹಣ ಪಾವತಿ ಮಾಡುವಂತೆ ನೌಕರರು ಒತ್ತಾಯಿಸಿದ್ದು, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಎಲ್ಲಾ ಬೇರೆ ರಾಜ್ಯಗಳ ಜನರೇ ತುಂಬಿಕೊಂಡಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ. ಪ್ರತಿಭಟನಾ ನಿರತ ನೌಕರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿಚಾರ್ಜ್ ನಡೆಸಿದ್ದು, ಇದರಿಂದ

ಕಡಿಮೆ ವೇತನವನ್ನು ವಿರೋಧಿಸಿ ಗಾರ್ಮೆಂಟ್ಸ್ ನೌಕರರ ಮುಷ್ಕರ Read More »

ಕರ್ನಾಟಕ

ಶಿರಾಡಿ ಘಾಟ್ ರೈಲ್ವೇ ಹಳಿಯಲ್ಲಿನ ಅಪಾಯಕಾರಿ ಬಂಡೆ ತೆರವು ಹಿನ್ನೆಲೆ ➤ ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ರೈಲು ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.20. ಶಿರಾಡಿ ಘಾಟ್‌ ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪದ ಮಣಿಭಾಂಡ ಬಳಿ ರೈಲು ಹಳಿಗೆ ಹೊಂದಿಕೊಂಡಿದ್ದ ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನಗಳ ಕಾಲ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಿರಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳಿ ಬಿಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ರೈಲ್ವೇ ಇಲಾಖೆಯು ಬಂಡೆ ತೆರವು ಕಾರ್ಯ ಆರಂಭಿಸಿದ್ದು, ಅದರಂತೆ ಶನಿವಾರ

ಶಿರಾಡಿ ಘಾಟ್ ರೈಲ್ವೇ ಹಳಿಯಲ್ಲಿನ ಅಪಾಯಕಾರಿ ಬಂಡೆ ತೆರವು ಹಿನ್ನೆಲೆ ➤ ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ರೈಲು ಸಂಚಾರ ಸ್ಥಗಿತ Read More »

ಕರ್ನಾಟಕ
Scroll to Top