ಈ ಸಲದ ದೀಪಾವಳಿಗೆ ಪಟಾಕಿ ಅಂಗಡಿ ಮಾಡಬೇಕೆಂದಿರುವಿರಾ..? ➤ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.14.ಸ್ಪೋಟಕ ಕಾಯಿದೆ ಮತ್ತು ನಿಯಮದಡಿಯಲ್ಲಿ ಹಾಗೂ ಮೈದಾನದಲ್ಲಿ/ತೆರೆದ ಪ್ರದೇಶದಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರಾವಾಣಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದ್ದು, ಪೊಲೀಸ್ ಆಯುಕ್ತರ ವ್ಯಾಪ್ತಿಯನ್ನು ಹೊರತು ಪಡಿಸಿ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ(ನಾಲ್ಕು) ಬ್ಲೂ ಪ್ರಿಂಟ್ ಮತ್ತು (ಎರಡು) ಫೋಟೋ, (ನಾಲ್ಕು) ಪ್ರಸ್ತಾವಿಕ ಜಮೀನಿನ ಪಹಣಿ, (ನಾಲ್ಕು) ಸರ್ಕಾರಿ ಜಮೀನು ಅಲ್ಲದೇ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (ರೂ.20) ಸ್ಟಾಂಪ್ ಪೇಪರ್‍ನೊಂದಿಗೆ […]








