ಕರ್ನಾಟಕ

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಗೆ ನಕ್ಸಲ್ ನಂಟು: ಸಿಎಂ ಯಡಿಯೂರಪ್ಪ

ಮೈಸೂರು, ಫೆ.21: ಸಿಎಎ ವಿರುದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿ ಬಂಧನಕ್ಕೊಳಗಾದ ಅಮೂಲ್ಯಾಗೆ ನಕ್ಸಲರ ಜೊತೆ ಸಂಬಂಧವಿರುವುದು ಈ ಹಿಂದೆ ಸಾಬೀತಾಗಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪುಮಾಡಿದವರಿಗೆ ಸರಿಯಾದ ಶಿಕ್ಷೆಯಾಗಬೇಕು. ಇದರ ಹಿಂದೆಯಿರುವ ಸಂಘಟನೆಗಳ ಮೇಲೆಯೂ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಂಘಟನೆಗಳನ್ನು ಸರಿಯಾಗಿ ತನಿಖೆಗೆ ಒಳಪಡಿಸಿದರೆ ಅವಳಿಗೆ ಈ ರೀತಿ ಪ್ರೇರಣೆ ಕೊಟ್ಟಿರುವುದು ಯಾರೆಂಬುದು ಗೊತ್ತಾಗುತ್ತದೆ. ತಪ್ಪು ಮಾಡಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು […]

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಗೆ ನಕ್ಸಲ್ ನಂಟು: ಸಿಎಂ ಯಡಿಯೂರಪ್ಪ Read More »

ಕರ್ನಾಟಕ

ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಸಿ.ಚೆನ್ನಿಗಪ್ಪ ನಿಧನ

ಬೆಂಗಳೂರು, ಫೆ.21: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ.ಚೆನ್ನಿಗಪ್ಪ (76) ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪಶುಕ್ರವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯವರಾದ ಚೆನ್ನಿಗಪ್ಪ, ಕೊರಟಗೆರೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಚೆನ್ನಿಗಪ್ಪ ಅರಣ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2019ರಲ್ಲಿ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ನಂತರ ಹುದ್ದೆಯನ್ನು ತೊರೆದಿದ್ದರು. ಸಿ.ಚೆನ್ನಿಗಪ್ಪರ ನಿಧನಕ್ಕೆ ಮಾಜಿ

ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಸಿ.ಚೆನ್ನಿಗಪ್ಪ ನಿಧನ Read More »

ಕರ್ನಾಟಕ

ಬೆಂಗಳೂರು: ಪ್ರೀ ಕಾಶ್ಮೀರ ಬಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಪೊಲೀಸ್ ವಶಕ್ಕೆ

ಬೆಂಗಳೂರು, ಫೆ.21: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಅಮೂಲ್ಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಭಿತ್ತಿಪತ್ರ ಪ್ರದರ್ಶಿಸಿ, ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮತ್ತೋರ್ವ ಯುವತಿಯನ್ನು ಎಸ್‌ಜೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಟೌನ್ ಹಾಲ್ ಬಳಿ ಹಿಂದೂಪರ ಸಂಘಟನೆ, ಕನ್ನಡ ಪರ ಹೋರಾಟಗಾರರು, ನಿನ್ನೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಅಮೂಲ್ಯ ಲಿಯೋನ್ ವಿರುದ್ಧ ಪ್ರತಿಭಟನೆ ಮಾಡುವಾಗ ಯುವತಿಯೊಬ್ಬಳು ಭಿತ್ತಿಪತ್ರವೊಂದು

ಬೆಂಗಳೂರು: ಪ್ರೀ ಕಾಶ್ಮೀರ ಬಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಪೊಲೀಸ್ ವಶಕ್ಕೆ Read More »

ಕರ್ನಾಟಕ

ತಂದೆಯಿಂದಲೇ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.com ಬಳ್ಳಾರಿ. ಫೆ.19, ಹೆತ್ತ ತಂದೆಯಿಂದಲೇ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಶವವಾಗಿ ಪತ್ತೆಯಾದ ಘಟನೆ ಆಂಧ್ರ ಪ್ರದೇಶದ ಉಂತಕಲ್ಲು ಎಂಬಲ್ಲಿ ನಡೆದಿದೆ. ನಗರದ ಬಂಡಿಹಟ್ಟಿ ನಿವಾಸಿಯಾದ ಸುರೇಶ್ ಮತ್ತು ಮಗಳು ಪಲ್ಲವಿ (22) ಇವರ ನಡುವೆ ಎರಡು ದಿನಗಳ ಹಿಂದೆ ಮನೆಯಲ್ಲಿ ಜಗಳವಾಗಿದ್ದು, ತಂದೆ ಸುರೇಶ್ ಕುಡಿಯಲು ಹಣ ನೀಡುವಂತೆ ಮಗಳನ್ನು ಪೀಡಿಸುತ್ತಿದ್ದನು. ಈ ವೇಳೆ ನನ್ನನ್ನು ಸಾಯಿಸಿಬಿಡಿ ಎಂದಿದ್ದ ಮಗಳನ್ನು ಕರೆದೊಯ್ದು ಕೈಕಾಲು ಕಟ್ಟಿ ಸಮೀಪದ ಎಚ್.ಎಲ್.ಸಿ ಕಾಲುವೆಗೆ ಎಸೆದಿದ್ದನು. ಸೋಮವಾರ ಇಡೀ

ತಂದೆಯಿಂದಲೇ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಶವವಾಗಿ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರವಾದಿ ಮಹಮ್ಮದ್ (ಸ.ಅ) ರವರ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನ ➤ ಆರೋಪಿಯ ವಿರುದ್ಧ ಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ನಿಂದ ಕಡಬ ಠಾಣೆಗೆ ದೂರು

ಕಡಬ, ಫೆ.18. ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರನ್ನು ಅವಹೇಳನಕಾರಿ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಕೆಎಸ್ಸೆಸ್ಸೆಫ್ ವತಿಯಿಂದ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತ ಹಲವಾರು ಬಾರಿ ಅನಾವಶ್ಯಕ ಆರೋಪಗಳನ್ನು ಮಾಡಿ ಮುಸ್ಲಿಂ ಧರ್ಮಕ್ಕೆ ಅವಮಾನ ಮಾಡುತ್ತಾ ಬಂದಿರುತ್ತಾನೆ. ಇದೀಗ ಮುಂದುವರಿದು ಸರ್ವಧರ್ಮಿಯರೂ ಗೌರವಿಸುವ ವಿಶ್ವಶಾಂತಿಯ ಹರಿಕಾರ

ಪ್ರವಾದಿ ಮಹಮ್ಮದ್ (ಸ.ಅ) ರವರ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನ ➤ ಆರೋಪಿಯ ವಿರುದ್ಧ ಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ನಿಂದ ಕಡಬ ಠಾಣೆಗೆ ದೂರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೆಎಸ್ಸಾರ್ಟಿಸಿ-ಕಾರು ಢಿಕ್ಕಿ: ಅಪಾಯದಿಂದ ಪಾರಾದ ಚಿತ್ರದುರ್ಗ ಡಿಸಿ

ಚಿತ್ರದುರ್ಗ, ಫೆ.18: ಚಿತ್ರದುರ್ಗ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಸರಕಾರಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಇಲ್ಲಿನ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ನಡೆದಿದೆ. ಕಾರಿನ ಏರ್‌ಬ್ಯಾಗ್ ತೆರೆದುಕೊಂಡ ಪರಿಣಾಮ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಚಾಲಕ ಮನ್ಸೂರ್ ಹಾಗೂ ಗನ್ ಮ್ಯಾನ್ ನವೀನ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಿನೋತ್ ಪ್ರಿಯಾ ಚಿತ್ರದುರ್ಗದಿಂದ ಹೊಳಲ್ಕೆರೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜಿಲ್ಲಾಧಿಕಾರಿ ವಿನೋತ್

ಕೆಎಸ್ಸಾರ್ಟಿಸಿ-ಕಾರು ಢಿಕ್ಕಿ: ಅಪಾಯದಿಂದ ಪಾರಾದ ಚಿತ್ರದುರ್ಗ ಡಿಸಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

ಬೆಂಗಳೂರು, ಫೆ.18: ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಜಯನಗರ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಸುಮಾರು 70ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದಾಗಿ ಬಳಲುತ್ತಿದ್ದ ಅವರನ್ನು ಚಿಕಿತ್ಷೆಗೆಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಶೋರಿ ಬಲ್ಲಾಳ್ ಮೂಲತಃ ದ.ಕ. ಮಂಗಳೂರಿನವರು. ಅವರು 1960ರಲ್ಲಿ ಬೆಳ್ಳಿತೆರೆಗೆ ಬಂದಿದ್ದ ‘ಇವಳೆಂಥ ಹೆಂಡತಿ’ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸುಮಾರು ಹದಿನೈದು ವರ್ಷಗಳ ಸಿನಿ ಜೀವನದಲ್ಲಿ

ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ Read More »

ಕರ್ನಾಟಕ

ಶ್ರೀನಿವಾಸ್‍ ಡೆಂಟಲ್‍ ಕಾಲೇಜಿಗೆ 16 ರ್ಯಾಂಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಸ್ತುತ ಸಾಲಿನ ಘಟಿಕೋತ್ಸವದ ಸಮಾರಂಭಕ್ಕೆ ನಗರದ ಶ್ರೀನಿವಾಸ್‍ಇನ್ಸ್ಟಿಟ್ಯೂಟ್‍ ಆಫ್‍ ಡೆಂಟಲ್ ಸೈನ್ಸ್, ಮುಕ್ಕದ ವಿದ್ಯಾರ್ಥಿಗಳು ಹಲವಾರು ರ್ಯಾಂಕ್‍ಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಡಾ. ಸಭಾ ಪೆರಿಯೊಡೊಂಟಾಲಜಿ ವಿಭಾಗದಲ್ಲಿ 6ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 9ನೇ ರ್ಯಾಂಕ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದಲ್ಲಿ 10ನೇ ರ್ಯಾಂಕ್, ಡಾ. ದುರ್ಗಾ ಹೆಚ್ ವೊರಾ ಪ್ರೊಸ್ತಾಡೊಂಟಿಕ್ ವಿಭಾಗದಲ್ಲಿ 7ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 8ನೇ ರ್ಯಾಂಕ್, ಡಾ. ಅಫ್ರಾ ಕುಡ್ಸಿಯಾ ಪೆಡೊಡೊಂಟಿಕ್

ಶ್ರೀನಿವಾಸ್‍ ಡೆಂಟಲ್‍ ಕಾಲೇಜಿಗೆ 16 ರ್ಯಾಂಕ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮೂಡಬಿದ್ರೆ : ಪೊಲೀಸ್ ಹಳೇ ಕ್ವಾಟ್ರಸ್ ವಿಲೇವಾರಿ -ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಮೂಡಬಿದ್ರೆ ಪೊಲೀಸ್ ಠಾಣೆಯ ಬ್ಲಾಕ್-1 ಮತ್ತು ಬ್ಲಾಕ್-2 ರಲ್ಲಿರುವ ಹಳೆಯ ಒಟ್ಟು 13 ವಸತಿ ಗೃಹಗಳನ್ನು ನೆಲಸಮಗೊಳಿಸಿ ಅವುಗಳಲ್ಲಿನ ಸಾಮಾಗ್ರಿಗಳನ್ನು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಬಹಿರಂಗ ಹರಾಜು ಮುಖಾಂತರ ವಿಲೇವಾರಿ ಮಾಡಲಾಗುತ್ತದೆ. ಆಸಕ್ತಿ ಉಳ್ಳವರು ಸದರಿ ಟೆಂಡರ್/ ಬಹಿರಂಗ ಹರಾಜಿನಲ್ಲಿ ನಿಬಂಧನೆಗಳನ್ವಯ ಭಾಗವಹಿಸಬಹುದು. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಶಿಥಿಲಾವಸ್ಥೆಯಲ್ಲಿರುವ 13 ಪೊಲೀಸ್ ವಸತಿ ಗೃಹ ಕಟ್ಟಡವನ್ನು ಮುಂಚಿತವಾಗಿ ವೀಕ್ಷಿಸಬಹುದು, ಯಶಸ್ವಿ ಬಿಡ್‍ದಾರರು ಕಟ್ಟಡ ತೆರವುಗೊಳಿಸುವ ಸಂಧರ್ಭದಲ್ಲಿ ಯಾವುದೇ ರೀತಿಯ ಅವಘಡಗಳು

ಮೂಡಬಿದ್ರೆ : ಪೊಲೀಸ್ ಹಳೇ ಕ್ವಾಟ್ರಸ್ ವಿಲೇವಾರಿ -ಬಹಿರಂಗ ಹರಾಜು Read More »

ಕರಾವಳಿ, ಕರ್ನಾಟಕ

ನಾಳೆಯಿಂದ ರಸ್ತೆ ಸಂಚಾರ ಗಣತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. 2020ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯು ಫೆಬ್ರವರಿ 19 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 26 ರ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 7 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ. ಗಣತಿ ಕಾರ್ಯ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಈ ಗಣತಿ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ

ನಾಳೆಯಿಂದ ರಸ್ತೆ ಸಂಚಾರ ಗಣತಿ Read More »

ಕರಾವಳಿ, ಕರ್ನಾಟಕ
Scroll to Top