ಕರ್ನಾಟಕ

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.10. ಚರಿತ್ರೆ ಪ್ರಸಿದ್ದವಾದ ಬದ್ರಿಯಾ ಜುಮಾ ಮಸ್ಜಿದ್ ಪೆರುವಾಯಿ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಅಸ್ಸಯ್ಯಿದ್ ಅಬೂಬಕ್ಕರ್ ಹೈದ್ರೋಸ್ ಅಲ್ ಹಾದಿ ತಂಙಳ್(ಖ.ಸಿ)ರವರ ಮಖಾಂ ದರ್ಬಾರಿನ ಉರೂಸ್ ಮಹಾ ಸಂಭ್ರಮವು ಮಾರ್ಚ್ 11 ರಿಂದ 15 ರವರೆಗೆ ನಡೆಯಲಿದೆ. ಬದುಕಿನ ಭವ್ಯತೆಗೆ ತಿಲಾಂಜಲಿ ನೀಡಿ ಪಾರತ್ರಿಕ ಮೋಕ್ಷವನ್ನು ಗುರಿಯಾಗಿಸಿ ಭೌತಿಕ ಜಂಜಾಟದಿಂದ ಮುಕ್ತಿ ಪಡೆದು ತನು – ಮನ – ಧನವನ್ನು ಇಲಾಹೀ ಮಾರ್ಗದಲ್ಲಿ ವ್ಯಯಿಸುತ್ತಾ ತ್ಯಾಗದ ದೃಷ್ಟಿಯಿಂದ ತನುವನ್ನು ಕರಗಿಸಿ, […]

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ Read More »

ಕರ್ನಾಟಕ

ಕರ್ನಾಟಕದಲ್ಲಿ ‘ಕೊರೋನಾ’ ಹಿನ್ನೆಲೆ ➤ 3 ಜಿಲ್ಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.09. ಚೀನಾದಿಂದ ಆರಂಭಗೊಂಡ ಮಹಾಮಾರಿ ಕೊರೋನಾ ವೈರಸ್ ರಾಜ್ಯಕ್ಕೂ ಕಾಲಿಟ್ಟ ಭೀತಿಯಲ್ಲಿ ರಾಜ್ಯದ ಕೆಲವೆಡೆ ನರ್ಸರಿ, ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಇಂದಿನಿಂದ ಮುಂದಿನ ಆದೇಶದವರೆಗೆ ರಜೆ ಘೋಷಿಸಿ ಸರ್ಕಾರ ಆದೇಶಿಸಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನರ್ಸರಿ, ಎಲ್‌ಕೆಜಿ, ಹಾಗೂ ಯುಕೆಜಿ ತರಗತಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ರಜಾ ಗೋಷಣೆ ಮಾಡಲಾಗಿದೆ. ಆರೋಗ್ಯ ಆಯುಕ್ತರ ಸಲಹೆಯ ಮೇರೆಗೆ ಬೆಂಗಳೂರು

ಕರ್ನಾಟಕದಲ್ಲಿ ‘ಕೊರೋನಾ’ ಹಿನ್ನೆಲೆ ➤ 3 ಜಿಲ್ಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಪೊಲೀಸ್ ಇಲಾಖೆಯ ಬೊಲೆರೋ ಹೆದ್ದಾರಿಯಲ್ಲೇ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.08. ಕಾರು ಹಾಗೂ ಪೊಲೀಸ್ ಇಲಾಖೆಯ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೊಲೆರೋ ಪಲ್ಟಿಯಾದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಕೌಡಿಚ್ಚಾರ್ ಸಮೀಪದ ಮಡ್ಯಂಗಳ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸೆನ್ ವಿಭಾಗಕ್ಕೆ ಸೇರಿದ ಬೊಲೆರೋ ಸುಳ್ಯ ಕಡೆಗೆ ತೆರಳುತ್ತಿದ್ದ ವೇಳೆ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಬೊಲೆರೋ ಹೆದ್ದಾರಿಯಲ್ಲೇ ಪಲ್ಟಿಯಾಗಿ ಬಿದ್ದಿದ್ದು, ಬೊಲೆರೋದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು

ಪುತ್ತೂರು: ಪೊಲೀಸ್ ಇಲಾಖೆಯ ಬೊಲೆರೋ ಹೆದ್ದಾರಿಯಲ್ಲೇ ಪಲ್ಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

‘ಶಾದಿ ಭಾಗ್ಯ’ ಯೋಜನೆಗೆ ಬಿಜೆಪಿ ಸರಕಾರ ತಡೆ

ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ ಬೆಂಗಳೂರು, ಮಾ.8: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ‘ಶಾದಿ ಭಾಗ್ಯ’ ಯೋಜನೆ ನಿಲ್ಲಿಸಲು ರಾಜ್ಯದ ಯಡಿಯೂರಪ್ಪಸರಕಾರ ತೀರ್ಮಾನಿಸಿದೆ. ಅಲ್ಪಸಂಖ್ಯಾತರ ವಿವಾಹಕ್ಕಾಗಿ ಜಾರಿಗೆ ತರಲಾಗಿದ್ದ ‘ಶಾದಿ ಭಾಗ್ಯ’ ಯೋಜನೆಗಾಗಿ ಹೊಸ ಅರ್ಜಿ ಸ್ವೀಕರಿಸಬೇಡಿ ಎಂದು ಸರಕಾರ ಆದೇಶ ಹೊರಡಿಸಿದೆ. ಈ ಸಾಲಿನ ಬಜೆಟ್‌ನಲ್ಲಿ ‘ಶಾದಿ ಬಾಗ್ಯ’ಕ್ಕೆ ಹಣ ಮೀಸಲಿಟ್ಟಿರಲಿಲ್ಲ. ಇದೀಗ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ ಹೊರಬಿದ್ದಿದೆ. ಬಿದಾಯಿ ಯೋಜನೆಯಡಿ ಮದುವೆ ಖರ್ಚು, ಜೀವನಾವಶ್ಯಕ ಸಾಮಗ್ರಿ ಖರೀದಿಗೆ

‘ಶಾದಿ ಭಾಗ್ಯ’ ಯೋಜನೆಗೆ ಬಿಜೆಪಿ ಸರಕಾರ ತಡೆ Read More »

ಕರ್ನಾಟಕ

ಬೆಂಗಳೂರು: ನಿಗೂಢ ಸ್ಫೋಟಕ್ಕೆ ವ್ಯಕ್ತಿಯ ಕಾಲಿಗೆ ಗಂಭೀರ ಗಾಯ

ಬೆಂಗಳೂರು, ಮಾ.8: ನಗರದ ಆಡುಗೋಡಿಯ ಬಳಿ ಸ್ಫೋಟ ಸಂಭವಿಸಿದ ವ್ಯಕ್ತಿಯೊಬ್ಬರ ಎಡಗಾಲು ತುಂಡಾದ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ನರಸಿಂಹಯ್ಯ(50) ಎಂದು ಗುರುತಿಸಲಾಗಿದೆ. ಕಸದ ರಾಶಿಯ ನಡುವೆ ಈ ಸ್ಫೋಟ ಸಂಭವಿಸಿರುವುದು ಅಚ್ಚರಿ, ಆತಂಕ ಮೂಡಿಸಿದೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಗ್ರಾನೈಟ್ ಕತ್ತರಿಸುವ ಕೆಮಿಕಲ್ ಎಸೆದಿದ್ದು, ಕೆಮಿಕಲ್ ರಿಯಾಕ್ಷನ್‌ನ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ನಿಗೂಢ ಸ್ಫೋಟಕ್ಕೆ ವ್ಯಕ್ತಿಯ ಕಾಲಿಗೆ ಗಂಭೀರ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತುಮಕೂರು: ಭೀಕರ ಅಪಘಾತ; 12 ಮಂದಿ ಮೃತ್ಯು

ತುಮಕೂರು, ಮಾ.6: ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಕುಣಿಗಲ್ ಸಮೀಪ ನಡೆದಿದೆ. ಮೃತರನ್ನು ಮಂಜುನಾಥ್ (35), ತನುಜ (25), ಗೌರಮ್ಮ (60), ರತ್ನಮ್ಮ (52), ಸುಂದರರಾಜ್ (48), ರಾಜೇಂದ್ರ (27), ಸರಳ (32), ಪ್ರಶನ್ಯಾ (14), ಬೆಂಗಳೂರಿನ ದೊಡ್ಡ ಆಲದಮರ ಮೂಲದ ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರು: ಭೀಕರ ಅಪಘಾತ; 12 ಮಂದಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಜೆಟ್: ಇಲಾಖಾವಾರು ಅನುದಾನ ಮಾಹಿತಿ

ಬೆಂಗಳೂರು, ಮಾ.6: ಸಿಎಂ ಬಿಎಸ್ ಯಡಿಯೂರಪ್ಪ ಅವರು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಪ್ರತೀ ಇಲಾಖೆಗೆ ಸಿಕ್ಕ ಅನುದಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಬಜೆಟ್ ನ ಒಟ್ಟು ಗಾತ್ರ 2,37,893 ಕೋಟಿ ರೂ ಆಗಿದ್ದು, 2020–21ನೇ ಸಾಲಿನಲ್ಲಿ ಒಟ್ಟು ₹ 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4759 ಅಂತರವಿದೆ. ಇಲಾಖಾವಾರು ಅನುದಾನ ಮಾಹಿತಿ 1.ಶಿಕ್ಷಣ ಇಲಾಖೆ- 29,768 ಕೋಟಿ – ಶೇ. 11 2.ನಗರಾಭಿವೃದ್ಧಿ

ಬಜೆಟ್: ಇಲಾಖಾವಾರು ಅನುದಾನ ಮಾಹಿತಿ Read More »

ಕರ್ನಾಟಕ

ಅಪರಿಚಿತ ವಾಹನ ಢಿಕ್ಕಿ: ಮೂವರು ಮೃತ್ಯು

ಕೋಲಾರ, ಮಾ.5: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತಿಂಡ್ಲಿ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಗಾಂಧಿನಗರ ನಿವಾಸಿ ಯಲ್ಲಯ್ಯ(25), ವೆಂಕಟೇಶಯ್ಯ(24) ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನ ಢಿಕ್ಕಿ: ಮೂವರು ಮೃತ್ಯು Read More »

ಕರ್ನಾಟಕ

ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ➤ 23 ಲಕ್ಷದ ಗಾಂಜಾ ಸಹಿತ 6 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು. ಮಾ. 04, ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು 23 ಲಕ್ಷ ರೂ. ವೌಲ್ಯದ 43 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಸಹಿತ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದಾರೆ. ಬಂಧಿತರನ್ನು ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಂಧ್ರಪ್ರದೇಶ ಮೂಲದವರಾದ ಕವಿತಾ(23), ಕಿಲ್ಲೊ ಧನುರಾಜೈ (25), ಪಂಗೈ ಮತ್ಯರಾಜು (26) ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಲಪಟ್ಟಿ ಸುಬ್ಬಾರೆಡ್ಡಿ (42),

ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ➤ 23 ಲಕ್ಷದ ಗಾಂಜಾ ಸಹಿತ 6 ಮಂದಿ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

ಬೆಂಗಳೂರು, ಮಾ.4: ರಾಜ್ಯಾದ್ಯಂತ ಇಂದಿನಿಂದ ರಾಜ್ಯದ 1,016 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದ 2,01,445, ವಾಣಿಜ್ಯ ವಿಭಾಗದ 2,61,674 ಹಾಗೂ ವಿಜ್ಞಾನ ವಿಭಾಗದ ಒಟ್ಟು 2,16,930 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗಳು ಬರೆಯಲಿದ್ದಾರೆ. ಇಂದಿನಿಂದ ಆರಂಭವಾಗುವ ಪರೀಕ್ಷೆಯು ಮಾ.23ರವರೆಗೂ ನಡೆಯಲಿದೆ. ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ 40 ಪುಟಗಳ ಉತ್ತರ ಬುಕ್‌ಲೆಟ್‌ನ್ನು ನೀಡಲಾಗುತ್ತದೆ. ಇದರಲ್ಲೇ ಆತ ತನ್ನ ಉತ್ತರಗಳನ್ನು ಬರೆದು ಪರೀಕ್ಷೆಯನ್ನು ಮುಗಿಸಬಹುದು. ಯಾರಿಗಾದರೂ

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ Read More »

ಕರಾವಳಿ, ಕರ್ನಾಟಕ
Scroll to Top