ಕರ್ನಾಟಕ

ಮುಂಬೈ ಕರಾವಳಿಗರಿಗೆ ಶುಭಸುದ್ದಿ ➤ ತಾಯ್ನಾಡಿಗೆ ಬರುವವರಿಗೆ ಹೋಂ ಕ್ವಾರಂಟೈನ್ ಮಾತ್ರ

(ನ್ಯೂಸ್ ಕಡಬ) newskadaba.com ಉಡುಪಿ,ಜೂ.8: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವರಾದ ಶ್ರೀರಾಮುಲು ಇಂದು ಉಡುಪಿಗೆ ಅಗಮಿಸಿ ತುರ್ತು ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಜನಪ್ರತಿನಿಧಿಗಳು ,ಆರೋಗ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.ಸಭೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ಸ್ಥಿತಿಗತಿ ,ಅನುಸರಿಸಬೇಕಾದ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಾಯಿತು.   ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ದಿಂದ ಬಂದವರಿಗೆ ಇನ್ಮುಂದೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ ಹೋಂ ಕ್ವಾರಂಟೈನ್ ಮಾತ್ರ ಇರುತ್ತೆ.ಈ ಸಮಯದಲ್ಲಿ ವ್ಯಕ್ತಿಯ […]

ಮುಂಬೈ ಕರಾವಳಿಗರಿಗೆ ಶುಭಸುದ್ದಿ ➤ ತಾಯ್ನಾಡಿಗೆ ಬರುವವರಿಗೆ ಹೋಂ ಕ್ವಾರಂಟೈನ್ ಮಾತ್ರ Read More »

ಕರಾವಳಿ, ಕರ್ನಾಟಕ

ತಮಿಳುನಾಡು, ತೆಲಂಗಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು! ➤ ಕರ್ನಾಟಕದಲ್ಲೂ ರದ್ದಾಗುತ್ತಾ ಪರೀಕ್ಷೆ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 9, ಕೊರೋನಾ ಭೀತಿಯಿಂದಾಗಿ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು, ತೆಲಂಗಾಣದಲ್ಲಿ ಹಾಗೂ ತಮಿಳುನಾಡಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತದೆಯೇ? ರದ್ದಾಗುತ್ತದೆಯೇ? ಎಂಬ ಪ್ರಶ್ನೆಯಂತೂ ಎದುರಾಗಿದೆ. ಈ ಪ್ರಶ್ನೆಗೆ ಖುದ್ದಾಗಿ ಉತ್ತರಿಸಿದ ಶಿಕ್ಷಣ ಸಚಿವರಾದ ಎಸ್‌. ಸುರೇಶ್‌ ಕುಮಾರ್‌ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಮಾಡಲಾಗದು ಎಂದು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಪರೀಕ್ಷಾ ದಿನಾಂಕ ನಿಗದಿಯಾಗಿದ್ದು, ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ. ನಿರ್ಧಾರ ಬದಲಾಯಿಸುವ

ತಮಿಳುನಾಡು, ತೆಲಂಗಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು! ➤ ಕರ್ನಾಟಕದಲ್ಲೂ ರದ್ದಾಗುತ್ತಾ ಪರೀಕ್ಷೆ? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳ ಹತ್ಯೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು,ಜೂ.6: ಇತ್ತೀಚೆಗಷ್ಟೇ ದೇವರ ನಾಡು ಕೇರಳದಲ್ಲಿ ಅನಾನಸ್ ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತದ ನಡುವೆಯೇ ರಾಜ್ಯದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಕೊಂದಿರುವ ಅಮಾನೀಯ ಘಟನೆ ವರದಿಯಾಗಿದೆ.  ಹಲಸಿನ ಹಣ್ಣಿಗೆ ವಿಷ ಬೇರೆಸಿ ಮೂರು ದನಗಳನ್ನು ಕೊಂದಿರುವ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.   ತೋಟಕ್ಕೆ ದನಗಳು ಬೇಕಾಬಿಟ್ಟಿ ನುಗ್ಗುತ್ತಿವೆ ಎಂಬ ಕಾರಣಕ್ಕೆ

ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳ ಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶ್ರೀರಂಗಪಟ್ಟಣ: ಸಾರ್ವಜನಿಕರ ಮೇಲೆ ರಂಪಾಟ ನಡೆಸಿದ ನಟ ‘ಹುಚ್ಚ ವೆಂಕಟ್’

(ನ್ಯೂಸ್ ಕಡಬ)newskadaba.com ಶ್ರೀರಂಗಪಟ್ಟಣ. ಜೂ. 9, ಕಾವೇರಿ ಸಂಗಮ ಬಳಿ ಕಾಣಿಸಿಕೊಂಡ ನಟ ‘ಹುಚ್ಚ ವೆಂಕಟ್’ ರವರು ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ರಂಪಾಟ ನಡೆಸಿದ್ದಾರೆ. ಅಲ್ಲದೇ ‘ಕಾರಿಗೆ ಪೆಟ್ರೋಲ್‌ ಹಾಕಿಸಿಕೊಡಿ, ಅಲ್ಲಿಯವರೆಗೆ ಇಲ್ಲೇ ಠಿಕಾಣಿ ಹೂಡುತ್ತೇನೆ’ ಎಂದೂ ಪಟ್ಟು ಹಿಡಿದಿದ್ದಾರೆ. ಸ್ಥಳೀಯರು ಪೆಟ್ರೋಲ್‌ ತರಿಸಿಕೊಟ್ಟು, ಹಣವನ್ನೂ ನೀಡಿದ್ದಾರೆ. ಆದರೂ ಇವರು ರಹಮತ್‌ಉಲ್ಲಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳೀಯರು ಪೊಲೀಸರನ್ನು ಕರೆಸಿ ಕಳುಹಿಸಿದ್ದಾರೆ. ಸೋಮವಾರ ಮುಂಜಾನೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಕಾಣಿಸಿಕೊಂಡ ವೆಂಕಟ್‌, ಇಬ್ಬರ

ಶ್ರೀರಂಗಪಟ್ಟಣ: ಸಾರ್ವಜನಿಕರ ಮೇಲೆ ರಂಪಾಟ ನಡೆಸಿದ ನಟ ‘ಹುಚ್ಚ ವೆಂಕಟ್’ Read More »

ಕರ್ನಾಟಕ

ಪ್ರವಾಸಿಗರಿಗೆ ಸಿಹಿ ಸುದ್ದಿ ➤ ಮೈಸೂರು ಮೃಗಾಲಯ ಹಾಗೂ ಅರಮನೆ ಪ್ರವೇಶ ಪುನರಾರಂಭ

(ನ್ಯೂಸ್ ಕಡಬ)newskadaba.com ಮೈಸೂರು: ಸೋಮವಾರದಿಂದ ಮೈಸೂರು ಮೃಗಾಲಯವು ಪುನರಾರಂಭಗೊಂಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಬಂದ್ ಆಗಿದ್ದ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯವು ಸೋಮವಾರ (ಜೂ.8)ರಂದು ಪುನಾರಂಭಗೊಂಡಿದೆ. ಪ್ರಾಣಿಗಳ ಆಹಾರಕ್ಕೆ ಈವರೆಗೆ 3 ಕೋಟಿ ರೂಪಾಯಿ 4 ಲಕ್ಷ ರೂ ಗಳನ್ನು ದಾನಿಗಳ ನೆರವಿನಿಂದ ಸಂಗ್ರಹ ಮಾಡಲಾಗಿದೆ. ಅದೇ ರೀತಿ, ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಲಾಕ್ ಡೌನ್ ಕಾರಣದಿಂದ ಪ್ರವೇಶ ನಿಷೇಧಿಸಲಾಗಿತ್ತು. ಅರಮನೆ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ 3500

ಪ್ರವಾಸಿಗರಿಗೆ ಸಿಹಿ ಸುದ್ದಿ ➤ ಮೈಸೂರು ಮೃಗಾಲಯ ಹಾಗೂ ಅರಮನೆ ಪ್ರವೇಶ ಪುನರಾರಂಭ Read More »

ಕರ್ನಾಟಕ

ಡ್ರೈನೇಜ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಉಸಿರುಗಟ್ಟಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 9, ಡ್ರೈನೇಜ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಜೇಮ್ಸ್(26 ವರ್ಷ) ಮತ್ತು ಆನಂದ(32 ವರ್ಷ) ಎಂದು ಗುರುತಿಸಲಾಗಿದೆ. ಇವರ ಪೈಕಿ ಜೇಮ್ಸ್ ತಮಿಳುನಾಡಿನ ಹೊಸೂರು ಮೂಲದವರಾಗಿದ್ದು, ಇವರು ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು ಹಾಗೆಯೇ ಆನಂದ್ ಆನೇಕಲ್ ತಾಲೂಕಿನ ಮಂಚನಹಳ್ಳಿ ನಿವಾಸಿಯಾಗಿದ್ದು, ಪಲೋಮಾ

ಡ್ರೈನೇಜ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಉಸಿರುಗಟ್ಟಿ ಇಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭಾವುಕ ಭಕ್ತರಿಂದ ದೇವರ ದರ್ಶನ ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.8: ಕೊರೊನಾ ಲಾಕ್ಡೌನ್ ಹಿನ್ನಲೆ ಮಾರ್ಚ್ ನಿಂದ ದೇವಾಲಯ, ಮಸೀದಿ, ಚರ್ಚ್ ಗಳನ್ನು ಮುಚ್ಚಲಾಗಿದ್ದು ಸೋಮವಾರದಂದು ಕೆಲವೊಂದು ದೇವಾಲಯ, ಚರ್ಚು, ಮಸೀದಿಗಳನ್ನು ಪುನಃ ತೆರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದು ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಇಂದು ನಮಗೆ ಸಂತಸದ ದಿನ. ಬಾವುಕ ಭಕ್ತರು ದರ್ಶನ

ಭಾವುಕ ಭಕ್ತರಿಂದ ದೇವರ ದರ್ಶನ ➤ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸದ್ಯಕ್ಕಿಲ್ಲ

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ ,ಜೂ.8: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಜೂನ್ 8 ರಿಂದ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳಿಗೆ ಸರ್ಕಾರದ ಮುಂದಿನ ಆದೇಶದ ತನಕ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ ಅಪರ ಜಿಲ್ಲಾಧಿಕಾರಿ ಎಂ.ಜೇ ರೂಪಾ ತಿಳಿಸಿದ್ದಾರೆ. ದೇವಾಲಯ ತೆರೆದಿದ್ದು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಆದಿ ಸುಬ್ರಹ್ಮಣ್ಯ ದೇವರ ದರ್ಶನವನ್ನು ನೂರಾರು ಭಕ್ತರು ಪಡೆಯುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸದ್ಯಕ್ಕಿಲ್ಲ Read More »

ಕರಾವಳಿ, ಕರ್ನಾಟಕ

ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ➤ಜಿಲ್ಲಾಧಿಕಾರಿ ಜಿ. ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ,ಜೂ.8: ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ನಲ್ಲಿ ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸ ದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.   ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವ ಸಾಧ್ಯತೆೆಗಳಿದ್ದು,

ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ➤ಜಿಲ್ಲಾಧಿಕಾರಿ ಜಿ. ಜಗದೀಶ್ Read More »

ಕರಾವಳಿ, ಕರ್ನಾಟಕ

ಜೂ.15ರಿಂದ ಪದವಿ ಉಪನ್ಯಾಸಕರಿಗೆ ರಜೆ ➤ ಉನ್ನತ ಶಿಕ್ಷಣ ಇಲಾಖೆ

(ನ್ಯೂಸ್ ಕಡಬ)newskadaba.com ಜೂ. 8, ಲಾಕ್ ಡೌನ್ ಹಿನ್ನೆಲೆಯಿಂದಾಗಿ ಜೂನ್ 16ರಿಂದ 30 ರವರೆಗೆ ಪದವಿ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ರಜೆ ಘೋಷಿಸಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಜೊತೆಗೆ ಜೂ.15ರೊಳಗೆ ಆನ್ಲೈನ್ ಕ್ಲಾಸ್ ಗಳ ಮೂಲಕ ಸಿಲೆಬಸ್ ಮುಗಿಸುವಂತೆಯೂ ಸೂಚಿಸಲಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಕಳೆದೆರಡು ತಿಂಗಳಿಗೂ ಅಧಿಕ ಕಾಲದಿಂದಲೂ ಶಾಲಾ, ಕಾಲೇಜುಗಳು ಬಂದ್ ಆಗಿವೆ, ಆದರೆ ಪದವಿ ತರಗತಿಗಳಿಗೆ ಈ ಹಿಂದೆ ಜೂನ್

ಜೂ.15ರಿಂದ ಪದವಿ ಉಪನ್ಯಾಸಕರಿಗೆ ರಜೆ ➤ ಉನ್ನತ ಶಿಕ್ಷಣ ಇಲಾಖೆ Read More »

ಕರ್ನಾಟಕ
Scroll to Top