ಕರ್ನಾಟಕ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲ್ಲ➤ ಮುಂದಿನ ದಿನದಲ್ಲಿ ಮತ್ತಷ್ಟು ಸಡಿಲಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.15:  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ವಾರದಲ್ಲಿ ಎರಡು ದಿನಗಳ ಕಾಲ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಯಾವುದೇ ಯೋಜನೆಯೂ ಸರ್ಕಾರದ ಮುಂದೆ ಇಲ್ಲ ಎಂದರು.   ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆಯಲಿರುವ ವಿಡಿಯೋ ಸಂವಾದಲ್ಲೂ ಈ ಮನವಿಯನ್ನು ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಕೊರೊನಾ ಸೋಂಕು […]

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲ್ಲ➤ ಮುಂದಿನ ದಿನದಲ್ಲಿ ಮತ್ತಷ್ಟು ಸಡಿಲಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊವಿಡ್-19 ನಕಲಿ ಸುದ್ದಿ ಪತ್ತೆ ಹಚ್ಚುವ ಚಾಟ್ ಬಾಟ್ ಕಂಡುಹಿಡಿದ ಬೆಂಗಳೂರು ಯುವಕ!

(ನ್ಯೂಸ್ ಕಡಬ) newskadaba.com ಬೆಂಗಳೂರು ,ಜೂ.15: ಹೊಸ-ಯುಗದ ಅಂತರ್ಜಾಲ ವ್ಯಾಪಕ ಪ್ರಮಾಣದ ಮಾಹಿತಿ ಪ್ರಸಾರಕ್ಕೆ ಸಾಕ್ಷಿಯಾಗಿದ್ದರೂ, ಕೆಲವು ನಕಲಿ ಸುದ್ದಿಗಳು ಮತ್ತು ಪರಿಶೀಲಿಸದ ಮೂಲಗಳಿಂದ ಬರುವ ಮಾಹಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಯುವಕ ಯಶ್ ಜೈಸ್ವಾಲ್ ಅವರು ಚಾಟ್ ಬಾಟ್ ಎಂಬ ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.   20 ವರ್ಷದ ಯಶ್ ಜೈಸ್ವಾಲ್ ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ

ಕೊವಿಡ್-19 ನಕಲಿ ಸುದ್ದಿ ಪತ್ತೆ ಹಚ್ಚುವ ಚಾಟ್ ಬಾಟ್ ಕಂಡುಹಿಡಿದ ಬೆಂಗಳೂರು ಯುವಕ! Read More »

ಕರ್ನಾಟಕ, ಲೈಫ್‍ಸ್ಟೈಲ್

ಕರ್ನಾಟಕದಲ್ಲಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.15:ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾದಿಂದಾಗಿ ತಳೆಕೆಡಿಸಿಕೊಂಡಿರುವ ಸರಕಾರ ಇದರಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಮಾಡಿದೆ ಆದರೆ ಇದು ಎಲ್ಲಾ ಕಡೆಗಳಲ್ಲಿ ಆಗುತ್ತಿಲ್ಲಾ ಹಾಗಾಗಿ ಅರಿವು ಮೂಡಿಸುವ ಸಲುವಾಗಿ ಗುರುವಾರ ಮಾಸ್ಕ್ ಡೇ ಆಚರಿಸಲು ಸರಕಾರ ನಿರ್ಧರಿಸಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿಅಧಿಕಾರಿಗಳ ಜೊತೆಗೆ ಸೋಮವಾರ ಸಿಎಂ ಬಿಎಸ್‍ವೈ ಚರ್ಚೆ ನಡೆಸಿ ನಂತರ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.ಕೊರೊನಾದಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಒಂದು

ಕರ್ನಾಟಕದಲ್ಲಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಸಿದ್ಧತೆ Read More »

ಕರ್ನಾಟಕ

ಹರ್ಷ ಸಂಸ್ಥೆಯ ಸಂಸ್ಥಾಪಕರ ಪತ್ನಿ ಶ್ರೀ ಮತಿ ಯಶೋಧ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.15:   ಕರಾವಳಿಯಲ್ಲಿ ಮನೆಮಾತಾಗಿರುವ ಗೃಹಪಯೋಪಯೋಗಿ ವಸ್ತುಗಳ ಮಳಿಗೆ ಹರ್ಷ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಬೋಳ ಪೂಜಾರಿ ಅವರ ಪತ್ನಿ ಶ್ರೀಮತಿ ಯಶೋಧಾ ಅವರು ನಿನ್ನೆ ನಿಧನರಾಗಿದ್ದಾರೆ.     ಅವರಿಗೆ 90 ವರ್ಷ ವಯಸ್ಸಾಗಿತ್ತು. ಉಡುಪಿ ಜಿಲ್ಲೆಯ ಕಪ್ಪೆಟ್ಟುವಿನ ತಮ್ಮ ಸ್ವಗೃಹದಲ್ಲಿ ನಿನ್ನೆ ಸ್ವರ್ಗಸ್ಥರಾಗಿದ್ದಾರೆ. ಮೃತರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  

ಹರ್ಷ ಸಂಸ್ಥೆಯ ಸಂಸ್ಥಾಪಕರ ಪತ್ನಿ ಶ್ರೀ ಮತಿ ಯಶೋಧ ನಿಧನ Read More »

ಕರಾವಳಿ, ಕರ್ನಾಟಕ

ಇಂದಿನಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಕರಾವಳಿ,ಜೂ.15: ಇಂದಿನಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆಯಾಗಿದೆ. ಈ ಬಾರಿ 46 ದಿನಗಳ ಕಾಲ ಕರಾವಳಿಯಲ್ಲಿ ಮೀನುಗಾರಿಕೆ ಬಂದ್ ಇರಲಿದೆ. ಮುಂಗಾರು ಪ್ರಾರಂಭವಾದ ಹಿನ್ನಲೆಯಲ್ಲಿ ಜೂನ್ 1 ರಿಂದ ಬಂದ್ ಆಗಬೇಕಾಗಿದ್ದ ಆಳಸಮುದ್ರ ಮೀನುಗಾರಿಕೆಯನ್ನ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಕೊರೊನಾ ಸೊಂಕು ಹರಡುವಿಕೆಯ ಭೀತಿ ಹಾಗೂ ಚಂಡಮಾರುತದಿಂದಾಗಿ ಮೀನುಗಾರರಿಗೆ, ಮೀನುಗಾರಿಕೆ ನಡೆಸುವುದಕ್ಕೆ ಅವಕಾಶ ಸಿಗದಂತಾಗಿದ್ದು, ಈ ಅತಂತ್ರ ಪರಿಸ್ಥಿತಿ ಮೀನುಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

ಇಂದಿನಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆ Read More »

ಕರಾವಳಿ, ಕರ್ನಾಟಕ

ಶಾಲೆ ಆರಂಭಕ್ಕೂ ಮುನ್ನವೇ ರಾಜ್ಯದ ಜನತೆಗೆ ಆಘಾತಕಾರಿ ಸುದ್ದಿ ➤ 8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ

(ನ್ಯೂಸ್ ಕಡಬ)newskadaba.com ಧಾರವಾಡ, ಜೂ.15, ಶಾಲೆ ಆರಂಭಕ್ಕೂ ಮುನ್ನವೇ ಆಘಾತಕಾರಿ ಸುದ್ದಿಯೊಂದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. 8 ಮಂದಿ ಶಾಲಾ ಶಿಕ್ಷಕರಲ್ಲಿ ಮಹಾಮಾರಿ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತರು ಧಾರವಾಡದ ಪ್ರತಿಷ್ಠಿತ ಶಾಲೆಯ ಶಿಕ್ಷಕರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಭಾನುವಾರ ಬಂದ 10 ಜನರಲ್ಲಿ 7 ಮಂದಿ ಶಿಕ್ಷಕರಿಗೆ ಸೋಂಕು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು ದೃಢಪಟ್ಟಿತ್ತು.

ಶಾಲೆ ಆರಂಭಕ್ಕೂ ಮುನ್ನವೇ ರಾಜ್ಯದ ಜನತೆಗೆ ಆಘಾತಕಾರಿ ಸುದ್ದಿ ➤ 8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ Read More »

ಕರ್ನಾಟಕ

ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಈ ದಿನದ ರಾಶಿ ಫಲ ತಿಳಿಯೋಣ

ಶ್ರೀ ಮಲೈಮಹದೇಶ್ವರ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ. ಗಿರಿಧರ

ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಈ ದಿನದ ರಾಶಿ ಫಲ ತಿಳಿಯೋಣ Read More »

ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ದೇವರ ದರ್ಶನಕ್ಕೆ ಮಾತ್ರ ಅವಕಾಶ: ಸಚಿವ ಕೋಟ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ,ಜೂ.14:  ರಾಜ್ಯದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶನಿವಾರ ಸುಬ್ರಹ್ಮಣ್ಯದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಫಲಿತಾಂಶ ಭಿನ್ನವಾಗಿ ಲಭಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ವ್ಯಕ್ತಿಗಳು ದೂರದೂರುಗಳಿಂದ ಬಂದು ತುಂಬಾ

ದೇವರ ದರ್ಶನಕ್ಕೆ ಮಾತ್ರ ಅವಕಾಶ: ಸಚಿವ ಕೋಟ Read More »

ಕರಾವಳಿ, ಕರ್ನಾಟಕ

ಮೃತ ಮೀನುಗಾರ ಭಾಗ್ಯರಾಜ್ ಮನೆಗೆ ಸಚಿವ ಕೋಟ ಭೇಟಿ ➤ ಸಂಕಷ್ಟ ಪರಿಹಾರ ನಿಧಿಯಿಂದ ರೂ 2 ಲಕ್ಷ ವಿತರಣೆ

(ನ್ಯೂಸ್ ಕಡಬ) newskadaba.com ಉಡುಪಿ,ಜೂ.14: ಇತ್ತೀಚೆಗೆ ಮೃತಪಟ್ಟ ಮಲ್ಪೆ ಬಡಾನಿಡಿಯೂರು ಗ್ರಾಮದ ಮೀನುಗಾರರಾದ ಭಾಗ್ಯರಾಜ್ ರವರ ಮನೆಗೆ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಭೇಟಿ ನೀಡಿ ಮೀನುಗಾರರ ಸಂಕಷ್ಟ ನಿಧಿಯಿಂದ 2 ಲಕ್ಷ ಮೊತ್ತದ ಚೆಕ್ ವಿತರಿಸಿ ಮೃತರ ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ ರಘುಪತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಬಡಾನಿಡಿಯೂರು

ಮೃತ ಮೀನುಗಾರ ಭಾಗ್ಯರಾಜ್ ಮನೆಗೆ ಸಚಿವ ಕೋಟ ಭೇಟಿ ➤ ಸಂಕಷ್ಟ ಪರಿಹಾರ ನಿಧಿಯಿಂದ ರೂ 2 ಲಕ್ಷ ವಿತರಣೆ Read More »

ಕರಾವಳಿ, ಕರ್ನಾಟಕ

ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ ➤ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ. 14, ರಾಜ್ಯದಾದ್ಯಂತ ಕಳೆದೆರಡು ದಿನಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಉತ್ತರ

ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ ➤ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top