ಕರ್ನಾಟಕ

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮನವಿಗೆ ಸ್ಪಂದಿಸಿದ ಸರ್ಕಾರ ಮಂಗಳೂರಿನಲ್ಲಿ ಪ್ಲಾಸ್ಮಾ ತೆಗೆಯಲು ಸರಕಾರದಿಂದ ಅನುಮತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳಿಂದ 28 ದಿನಗಳ ನಂತರ ಪ್ಲಾಸ್ಮಾವನ್ನು ತೆಗೆದು, ಕೋವಿಡ್ ನಿಂದ ಬಳಲುತ್ತಿರುವವರಿಗೆ ನೀಡಿದರೆ ಚೇತರಿಸಿಕೊಳ್ಳುವ ಸಾಧ್ಯತೆಗಳು ಅತೀ ಹೆಚ್ಚು. ಇದರಿಂದ ಹಲವಾರು ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಪ್ಲಾಸ್ಮಾ ದಾನಕ್ಕೆ ಬೆಂಗಳೂರಿನಲ್ಲಿ ಮಾತ್ರ ಅವಕಾಶವಿದ್ದು, ಮಂಗಳೂರಿನಲ್ಲಿ ಸರ್ಕಾರ ಅವಕಾಶ ನೀಡಿರಲಿಲ್ಲ. ಇದರ ಬಗ್ಗೆ 3 ದಿನಗಳ ಹಿಂದೆ ಪ್ರತಿಷ್ಠಿತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಪತ್ರಿಕಾಗೋಷ್ಠಿ ಕರೆದು ಮಂಗಳೂರಿನಲ್ಲಿ ಪ್ಲಾಸ್ಮಾ ತೆಗೆಯಲು ಸರಕಾರ ಅವಕಾಶ ನೀಡಬೇಕು […]

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮನವಿಗೆ ಸ್ಪಂದಿಸಿದ ಸರ್ಕಾರ ಮಂಗಳೂರಿನಲ್ಲಿ ಪ್ಲಾಸ್ಮಾ ತೆಗೆಯಲು ಸರಕಾರದಿಂದ ಅನುಮತಿ Read More »

ಕರಾವಳಿ, ಕರ್ನಾಟಕ

ಗಣೇಶ ಹಬ್ಬ ಆಚರಣೆ ಹಿನ್ನಲೆ ➤ ದುರ್ಗಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಗಣಹೋಮ ,ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ . ಆ,22: ದುರ್ಗಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಗಣಹೋಮ ಹಾಗೂ ಕಡಬ ಶ್ರೀಕಂಠ ಮಹಾ ಗಣಪತಿ ದೇವಸ್ಥಾನದಲ್ಲಿ ತೆನೆ ವಿತರಣೆ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು. ಕಳೆದ 47 ವರ್ಷಗಳಿಂದ ಕಡಬ ಧಾರ್ಮಿಕ ಉತ್ಸವ ಸಮಿತಿ ವತಿಯಿಂದ ಆಚರಿಸಿಕೊಂಡು ಬರುತ್ತಿದ್ದ ಕಡಬ ಸಾರ್ವಜನಿಕ ಗಣೇಶೋತ್ಸವವನ್ನು ಕೊರೋನ ಸಮಸ್ಯೆಯಿಂದಾಗಿ ಈ ಬಾರಿ ಸರಳ ರೀತಿಯಲ್ಲಿ ಗಣಪತಿ ಹೋಮ ಮಾಡುವ ಮೂಲಕ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಅತೀ ಕಡಿಮೆ ಸಂಖ್ಯೆಯಲ್ಲಿ ಭಕ್ತರು

ಗಣೇಶ ಹಬ್ಬ ಆಚರಣೆ ಹಿನ್ನಲೆ ➤ ದುರ್ಗಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಗಣಹೋಮ ,ವಿಶೇಷ ಪೂಜೆ Read More »

ಕರ್ನಾಟಕ

SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,22:  ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ, 10ನೇ ತರಗತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಈಗಾಗಲೇ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದೀಗ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅನುತ್ತೀರ್ಣಗೊಂಡ ಹಾಗೂ ಕೊರೊನಾ ಕಾರಣಕ್ಕೆ ಪರೀಕ್ಷೆ ಬರೆಯದಿರುವ ಅಭ್ಯರ್ಥಿಗಳಿಗಾಗಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪೂರಕ ಪರೀಕ್ಷೆ ಸೆ. 21 ರಿಂದ 29 ರವರೆಗೆ ನಡೆಯಲಿದೆ.       ಈ ಕುರಿತು ಮಾಹಿತಿ ನೀಡಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು, ಬೆಳಗ್ಗೆ 10.30

SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ ➤ ಸಂಪ್ರದಾಯದಂತೆ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ

(ನ್ಯೂಸ್‌ಕಡಬ)newskadaba.com.ಪುತ್ತೂರು. ಆ,22: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.22ರಂದು ನಡೆಯುವ ಕದಿರು ವಿನಿಯೋಗ ಕಾರ್ಯಕ್ರಮ ದೇವಸ್ಥಾನದ ಸಂಪ್ರದಾಯಕ್ಕೆ ಸೀಮೀತಗೊಂಡು ಸಾಂಕೇತಿಕವಾಗಿ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಸಂಪ್ರದಾಯದಂತೆ ಭಾದ್ರಪದ ಶುಕ್ಲ ಪಕ್ಷದ ಹಸ್ತಾ ನಕ್ಷತ್ರದ ಗೌರಿ ತದಿಗೆಯಂದು ಕದಿರು ವಿನಿಯೋಗ ನಡೆಯುತ್ತಿದ್ದು, ಈ ವರ್ಷ ಅಧಿಕ ಮಾಸದ ಕಾರಣ ಹಸ್ತಾ ನಕ್ಷತ್ರವು ಶ್ರೀ ಗಣೇಶ ಚತುರ್ಥಿಯಂದು ಬಂದ ಹಿನ್ನೆಲೆಯಲ್ಲಿ ಆ.22 ರಂದು ಶ್ರೀ ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ,

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ ➤ ಸಂಪ್ರದಾಯದಂತೆ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಸಂಪ್ರೀತ್ ಕೈಯಲ್ಲಿ ಅರಳಿದ ಕುಂಚ ➤ ಮನೆಯಲ್ಲಿ ಎದ್ದು ನಿಂತ ಬಾಲ ಗಣೇಶ

(ನ್ಯೂಸ್ ಕಡಬ) newskadaba.com ಕಡಬ. ಆ,22: ಇಂದು ದೇಶಾದದ್ಯಾಂತ ಗೌರಿ ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಬಾರಿಯ ಎಲ್ಲ ಹಬ್ಬ ಹರಿದಿನಗಳನ್ನ ಕೊರೋನಾ ಕಸಿದಿದೆ.ಆದರೂ ಸರಳವಾಗಿ ಗಣೇಶನ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.     ಬಿಳಿನಲೆಯ ಮುಂಗ್ಲಿಮಜಲು ಎಂಬಲ್ಲಿ ಬಾಲಕನೋರ್ವ ಕಳೆದೊಂದು ವಾರದಿಂದ ತನ್ನದೆ ಶೈಲಿಯಲ್ಲಿ ಪುಟ್ಟ ಗಣೇಶನನ್ನ ಮನೆಗೆ ಬರಮಾಡಿಕೊಂಡಿದ್ದಾನೆ.     ಹೌದು, ಈತನ ಹೆಸರು ಸಂಪ್ರೀತ್ ಬಿ ಎಲ್. 8 ತರಗತಿಯಲ್ಲಿ ಓದುತ್ತಿರುವ ಈತ, ಲಕ್ಷ್ಮಣ ಆಚಾರ್ಯ ಹಾಗೂ

ಸಂಪ್ರೀತ್ ಕೈಯಲ್ಲಿ ಅರಳಿದ ಕುಂಚ ➤ ಮನೆಯಲ್ಲಿ ಎದ್ದು ನಿಂತ ಬಾಲ ಗಣೇಶ Read More »

ಕರ್ನಾಟಕ, ವಿಶೇಷ ಲೇಖನಗಳು

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ➤ ಹವಾಮಾನ ಇಲಾಖೆಯಿಂದ `ಯೆಲ್ಲೊ’ ಅಲರ್ಟ್ ಘೋಷಣೆ

(ನ್ಯೂಸ್‌ಕಡಬ)newskadaba.com ಬೆಂಗಳೂರು. ಆ,22 : ಇಂದಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯು ಮುನ್ಸೂಚನೆ ನೀಡಿದೆ. ಮುಂಗಾರು ಚುರುಕುಗೊಂಡಿರುವುದರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯು ತಿಳಿಸಿದೆ. ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ➤ ಹವಾಮಾನ ಇಲಾಖೆಯಿಂದ `ಯೆಲ್ಲೊ’ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಡಾ.ಎಸ್.‌ಆರ್ ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಿ, ೫೦ ಲಕ್ಷ ರೂ.ಪರಿಹಾರ ಘೋಷಿಸಿದ ಸಿಎಂ‌

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,21 : ಮೈಸೂರಿನ ನಂಜನಗೂಡಿನ ವೈದ್ಯಾಧಿಕಾರಿ ಡಾ. ಎಸ್. ಆರ್ ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಮೃತ ವೈದ್ಯಾಧಿಕಾರಿಯ ಕುಟುಂಬಕ್ಕೆ ೫೦ ಲಕ್ಷ ರೂಪಾಯಿ ಪರಿಹಾರವನ್ನೂ ಕೂಡ ಘೋಷಿಸಿದ್ದಾರೆ. ಕರ್ನಾಟಕ ನೌಕರರ ಸಂಘದ ಮನವಿ ಮೇರೆಗೆ ವೈದ್ಯಾಧಿಕಾರಿಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು  ನಡೆಸಲು ಸಿಎಂ ಆದೇಶ ಮಾಡಿದ್ದಾರೆ. ಪ್ರಕರಣದ  ತನಿಖೆ ನಡೆಸಿ ೭ ದಿನದೊಳಗೆ ವರದಿ ನೀಡುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಸೂಚನೆ

ಡಾ.ಎಸ್.‌ಆರ್ ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಿ, ೫೦ ಲಕ್ಷ ರೂ.ಪರಿಹಾರ ಘೋಷಿಸಿದ ಸಿಎಂ‌ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪ ➤ ಪ್ರಚಾರಗಿಟ್ಟಿಸಲು ಹೋಗಿ ಜೈಲು ಸೇರಿದ ಭೂಪ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,21:  ಕಳೆದ ಬುಧವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ವಸಂತ ಕೃಷ್ಣ ಶೇರಿಗಾರ್ (33) ಎಂಬಾತನನ್ನು ಬಂಧಿಸಲಾಗಿದ್ದು, ಪ್ರಚಾರ ಪಡೆಯುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪ ➤ ಪ್ರಚಾರಗಿಟ್ಟಿಸಲು ಹೋಗಿ ಜೈಲು ಸೇರಿದ ಭೂಪ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗೌರಿ – ಗಣೇಶ ಚತುರ್ಥಿಯ ಶುಭ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,21:  ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಣೇಶ ಚತುರ್ಥಿ ಶುಭಾಷಯ ತಿಳಿಸಿದ್ದಾರೆ.   “ರಾಜ್ಯದ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ಜಗನ್ಮಾತೆ ಗೌರಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯಗಳನ್ನು ಕರುಣಿಸಲಿ, ವಿಘ್ನವಿನಾಶಕ ವಿನಾಯಕನು ಎಲ್ಲರ ಸಂಕಷ್ಟಗಳನ್ನು ಕಳೆದು ನಾಡಿಗೆ ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ” ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.ಬೆಂಗಳೂರಿನಲ್ಲಿ

ಗೌರಿ – ಗಣೇಶ ಚತುರ್ಥಿಯ ಶುಭ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಇಂದು ಗುತ್ತಿಗಾರಿನಲ್ಲಿ ಅಕ್ಷಯ ಮೊಬೈಲ್‌ ಸೆಂಟರ್ ಶುಭಾರಂಭ

‌(ನ್ಯೂಸ್ ಕಡಬ) newskadaba.com ಗುತ್ತಿಗಾರು. ಆ,21: ಗುತ್ತಿಗಾರಿನ ಅಕ್ಷಯ ಕಾಂಪ್ಲೆಕ್ಸ್‌ ನಲ್ಲಿ  ಹಾಡಿಕಲ್ಲು ಮತ್ತು ಮದನ್‌ ಕೊಲ್ಯ ರವರ ಮಾಲಕತ್ವದಲ್ಲಿ “ಅಕ್ಷಯ ಮೊಬೈಲ್‌ ಸೆಂಟರ್‌” ಇಂದು ಶುಭಾರಂಭಗೊಂಡಿದೆ. ರಾಘವ ಆರ್ನೋಜಿ, ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿವೋ ಟೀಮ್‌ ಲೀಡರ್‌ ಭುವನೇಶ್‌, ಜಯಂತ್‌ ಮಡಪ್ಪಾಡಿ, ವಿನಯ್‌ ಹಾಡಿಕಲ್ಲು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.    

ಇಂದು ಗುತ್ತಿಗಾರಿನಲ್ಲಿ ಅಕ್ಷಯ ಮೊಬೈಲ್‌ ಸೆಂಟರ್ ಶುಭಾರಂಭ Read More »

ಕರಾವಳಿ, ಕರ್ನಾಟಕ
Scroll to Top