ಕರ್ನಾಟಕ

ನೂಜಿಬಾಳ್ತಿಲ: ಉಚಿತ ಆಯುಷ್ಮಾನ್ ನೋಂದಣಿ ಅಭಿಯಾನ

(ನ್ಯೂಸ್ ಕಡಬ) newsksadaba.com ಕಲ್ಲುಗುಡ್ಡೆ, ಆ. 29. ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾದ ವತಿಯಿಂದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸಿ.ಎ. ಬ್ಯಾಂಕ್‍ನಲ್ಲಿ ಶನಿವಾರ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು. ಕಡಬ ತಾ.ಪಂ. ನೂತನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಳ ಅವರು  ಕಾರ್ಯಕ್ರಮ ಉದ್ಘಾಟಿಸಿ, ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದ ಆಯುಷ್ಮಾನ್ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸೋಣ ಎಂದರು. ಕಡಬ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರಿ ಸಂಘದ ಅದ್ಯಕ್ಷ […]

ನೂಜಿಬಾಳ್ತಿಲ: ಉಚಿತ ಆಯುಷ್ಮಾನ್ ನೋಂದಣಿ ಅಭಿಯಾನ Read More »

ಕರಾವಳಿ, ಕರ್ನಾಟಕ

ಸೆ. 1 ರಿಂದ ದೇವಾಲಯಗಳ ಕೆಲವು ಸೇವೆಗಳಿಗೆ ಅವಕಾಶ ➤ ಸಚಿವ ಕೋಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29: “ರಾಜ್ಯದ ಕೆಲವು ದೇವಾಲಯಗಳಲ್ಲಿ ಸೆಪ್ಟೆಂಬರ್ 1 ರಿಂದ ಕೆಲ ಸೇವೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ” ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು,”ಸೆಪ್ಟೆಂಬರ್ 1 ರಿಂದ ದೇವಾಲಯಗಳಲ್ಲಿ ಕೆಲವು ಸೇವೆಗಳಿಗೆ ಅವಕಾಶ ನೀಡುವ ಬಗ್ಗೆ ಮುಜರಾಯಿ ಇಲಾಖೆಯು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದು ಆರೋಗ್ಯ ಇಲಾಖೆ ಶಿಫಾರಸು ಮಾಡಿದರೆ ಮಾತ್ರ ದೇವಾಲಯಗಳಲ್ಲಿ ಕೆಲವು ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ.

ಸೆ. 1 ರಿಂದ ದೇವಾಲಯಗಳ ಕೆಲವು ಸೇವೆಗಳಿಗೆ ಅವಕಾಶ ➤ ಸಚಿವ ಕೋಟ Read More »

ಕರಾವಳಿ, ಕರ್ನಾಟಕ

ಮರ್ಧಾಳ: ಅಡ್ಡ ಬಂದ ಕಾರನ್ನು ತಪ್ಪಿಸುವ ಯತ್ನ ➤ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಟೆಂಪೋ

(ನ್ಯೂಸ್ ಕಡಬ) newskadaba.com ಕಡಬ, ಆ.29. ಅಡ್ಡ ಬಂದ ಕಾರನ್ನು ತಪ್ಪಿಸಲು ಯತ್ನಿಸಿದ ಮಿನಿಬಸ್ಸೊಂದು ಬಸ್ಸು ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಘಟನೆ ಮರ್ಧಾಳ ಜಂಕ್ಷನ್ ನಲ್ಲಿ ನಡೆದಿದೆ. ಚಿತ್ರದುರ್ಗ ಮೂಲದವರಿದ್ದ ಮಿನಿಬಸ್ ಗೆ ಮರ್ಧಾಳ ಜಂಕ್ಷನ್ ನಲ್ಲಿ ಅಡ್ಡ ಬಂದ ಕಾರನ್ನು ಚಾಲಕ ತಪ್ಪಿಸಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರ್ಧಾಳ: ಅಡ್ಡ ಬಂದ ಕಾರನ್ನು ತಪ್ಪಿಸುವ ಯತ್ನ ➤ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಟೆಂಪೋ Read More »

ಕರ್ನಾಟಕ

ಹಾಡಹಗಲೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 29.  ರಸ್ತೆ ಬದಿಯಲ್ಲಿ ಆಡು ಮೇಯಿಸಲೆಂದು ತೆರಳುತ್ತಿದ್ದ ಯುವತಿಯ ಮೇಲೆ ಕೈ ಹಾಕಿ ಎಳೆದುಕೊಂಡು ಹೋಗಲೆತ್ನಿಸಿದ ಘಟನೆ ಮಲೆಬೆಟ್ಟುವಿನಲ್ಲಿ ಹಾಡಹಗಲೇ ನಡೆದಿದೆ. ಮಲೆ ಬೆಟ್ಟುವಿನಲ್ಲಿ ಕಲ್ಲಿನ ಕೆಲಸ ಮಾಡುವ ಸಾದಿಕ್ ಎಂಬಾತ ನಿನ್ನಿಕಲ್ಲು ಪರಿಸರದ ಯುವತಿಯು ಆಡು ಮೇಯಿಸುತ್ತಿದ್ದ ವೇಳೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.  ಅಪಾಯ ಅರಿತ ಯುವತಿಯು ಜೋರಾಗಿ ಕಿರುಚಿದ ಬೊಬ್ಬೆ ಕೇಳಿ ಆಕೆಯ ಅಣ್ಣ ಸ್ಥಳಕ್ಕೆ ಧಾವಿಸಿ, ಸಾದಿಕ್ ನನ್ನು ಹಿಡಿದುಕೊಂಡು ಬಲವಾಗಿ ಥಳಿಸಿದ್ದಾರೆ.‌‌ ನಂತರ

ಹಾಡಹಗಲೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಊರಿನವರ ಸಹಕಾರದಿಂದ ಮೃತ್ಯುಂಜಯ ನದಿಗೆ ಕಾಲುಸಂಕ ನಿರ್ಮಾಣ

(ನ್ಯೂಸ್ ಕಡಬ) newskadaba.com ಚಾರ್ಮಾಡಿ, ಆ. 29. ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಟಿಗೆಯಿಂದ ಮುಗುಳಿತಡ್ಕಕ್ಕೆ ಸಂಪರ್ಕ ಕಲ್ಪಿಸುವ ಕೊಳಂಬೆ ಎಂಬಲ್ಲಿ ಮೃತ್ಯುಂಜಯ ನದಿಗೆ ಊರವರೇ ಒಟ್ಟುಗೂಡಿ ಕಾಲುಸಂಕ ನಿರ್ಮಿಸಿದರು. ಮಳೆಗಾಲದಲ್ಲಿ ಮುಗುಳಿತಡ್ಕದ ಸುಮಾರು 50 ರಷ್ಟು ಕುಟುಂಬಗಳು ಚಾರ್ಮಾಡಿ, ಕಕ್ಕಿಂಜೆ ಪೇಟೆ, ಗ್ರಾಮ ಪಂಚಾಯತ್ ಕಛೇರಿ, ಗ್ರಾಮ ಕರಣಿ ಕಛೇರಿ, ಬ್ಯಾಂಕ್ ವ್ಯವಹಾರಗಳು, ಹಾಲಿನ ಸೊಸೈಟಿ, ಆಸ್ಪತ್ರೆ ಇತ್ಯಾದಿ ನಿತ್ಯ ವ್ಯವಹಾರಕ್ಕೆ ಬರಬೇಕಾದರೆ ಈ ಕಾಲು ಸಂಕವನ್ನೇ ಅವಲಂಬಿಸಬೇಕಾಗಿದೆ. ಸುತ್ತು ಬಳಿದು ಬರುವುದಾದರೆ ಅರಣೆ ಪಾದೆ

ಬೆಳ್ತಂಗಡಿ: ಊರಿನವರ ಸಹಕಾರದಿಂದ ಮೃತ್ಯುಂಜಯ ನದಿಗೆ ಕಾಲುಸಂಕ ನಿರ್ಮಾಣ Read More »

ಕರಾವಳಿ, ಕರ್ನಾಟಕ

ಕೊರೋನಾಗೆ ಕೊಂಬೆಟ್ಟು ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29: ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಂಬೆಟ್ಟು ನಿವಾಸಿಯೊಬ್ಬರು ಕೋವಿಡ್-19ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ತಮಿಳು ಮೂಲದವರಾದ ಇವರು ಕೊಂಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  

ಕೊರೋನಾಗೆ ಕೊಂಬೆಟ್ಟು ನಿವಾಸಿ ಮೃತ್ಯು Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಎರಡನೇ ದಿನವು ಮುಂದುವರಿದ ಅಂಗಡಿ ತೆರವು ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 29.  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಸ್ಟರ್ ಪ್ಲಾನ್ ಯೋಜನೆಯಡಿ ರಸ್ತೆ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಕೆಲ ಅಂಗಡಿಗಳ ತೆರವು ಕಾರ್ಯ ಆಗಸ್ಟ್ 27ರಂದು ನಡೆದಿದ್ದು, ಇನ್ನು ಕೆಲವು ಅಂಗಡಿಗಲ ತೆರವು ಕಾರ್ಯ ಇಂದು ನಡೆಯಿತು.

ಸುಬ್ರಹ್ಮಣ್ಯ: ಎರಡನೇ ದಿನವು ಮುಂದುವರಿದ ಅಂಗಡಿ ತೆರವು ಕಾರ್ಯಾಚರಣೆ Read More »

ಕರಾವಳಿ, ಕರ್ನಾಟಕ

2 ವರ್ಷದ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ ಪಾಪಿ ತಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29: ಮಗು ಅಳುವುದನ್ನು ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಅಜ್ಜಿ ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದೆ. ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ 4 ಮಕ್ಕಳಿದ್ದು, 5ನೇ ಮಗುವಿನ ಹೆರಿಗೆಂದು ತಾಯಿ ತವರು ಮನೆಗೆ ಬಂದಿದ್ದಾಳೆ. ಆ ವೇಳೆ 2 ವರ್ಷದ ನಾಲ್ಕನೇ ಮಗು ಅಪ್ಪ ಬೇಕೆಂದು ಹಠ ಹಿಡಿದಿದೆ. ಇದರಿಂದ ಕೋಪಗೊಂಡ ತಾಯಿ ಮತ್ತು ಅಜ್ಜಿ ಮಗುವಿನ ಹೊಟ್ಟೆ, ಮುಖಕ್ಕೆ ಮನಬಂದಂತೆ

2 ವರ್ಷದ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ ಪಾಪಿ ತಾಯಿ Read More »

ಕರಾವಳಿ, ಕರ್ನಾಟಕ

ಮಳೆಗೆ ಮನೆ ಕುಸಿತ ➤ ಸಂಪೂರ್ಣ ಹಾನಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 29. ಗ್ರಾಮದ ಚೀಮುಳ್ಳು ಎಂಬಲ್ಲಿ ಕೇಲಪ್ಪ ಎಂಬವರ ಮನೆಯು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಹಲವು ವರ್ಷಗಳಿಂದ ಚಿಕ್ಕ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದ ಇವರು ಮನೆ ಕುಸಿದು ಬಿದ್ದ ದಿನ ಮನೆಯಲ್ಲಿ ಇರಲಿಲ್ಲ. ಪತ್ನಿ ಮನೆಗೆ ಹೋಗಿದ್ದ ಇವರು ವಾಪಾಸು ಮನೆಗೆ ಬರುವಾಗ ಮನೆ ಕುಸಿದು ಬಿದ್ದು ಮನೆಯೊಳಗಿದ್ದ ಬಟ್ಟೆ, ಆಹಾರ ವಸ್ತುಗಳು ಹಾಗು ಇನ್ನಿತರ ಮನೆ ಸಾಮಾನುಗಳು ಮಣ್ಣಿನಡಿಗೆ ಬಿದ್ದು ಹಾಳಾಗಿವೆ. ವಿದ್ಯುತ್

ಮಳೆಗೆ ಮನೆ ಕುಸಿತ ➤ ಸಂಪೂರ್ಣ ಹಾನಿ Read More »

ಕರಾವಳಿ, ಕರ್ನಾಟಕ

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29: ಕಳೆದ ದಿನ ಕೊರೋನಾ ಪಾಸಿಟಿವ್ ಬಂದಿದ್ದ ಸುಳ್ಯ ಶಾಸಕ ಎಸ್.ಅಂಗಾರ ಅವರ ಪತ್ನಿಗೂ ಇಂದು ಕೊರೋನಾ ದೃಢಪಟ್ಟಿದೆ. ಅಂಗಾರರಿಗೆ ಹಾಗೂ ಅವರ ಕಾರು ಚಾಲಕ ಮುರಳಿಯವರಿಗೆ ಪಾಸಿಟಿವ್ ಬಂದಿತ್ತು. ಅವರಿಬ್ಬರೂ ಕ್ವಾರಂಟೈನ್‍ನಲ್ಲಿದ್ದಾರೆ. ಇಂದು ಇವರಿಬ್ಬರ ಮನೆಯವರಿಗೆ ಕೊರೋನಾ ಆಂಟಿಜೆನ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಅಂಗಾರರ ಪತ್ನಿಗೆ, ಅವರ ಮನೆಯಲ್ಲಿರುವ ಇಬ್ಬರು ಬಂಧುಗಳಿಗೆ ಪಾಸಿಟಿವ್ ಪತೆಯಾಗಿದೆ.ಮುರಳಿಯವರ ಮನೆಯವರಿಗೆ ನೆಗೆಟಿವ್ ಬಂದಿದೆ.

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ Read More »

ಕರಾವಳಿ, ಕರ್ನಾಟಕ
Scroll to Top