ಕರ್ನಾಟಕ

ನಾಳೆ ಸಂಭವಿಸಲಿರುವ ಚಂದ್ರಗ್ರಹಣವನ್ನು ಬರೀಗಣ್ಣಿನಿಂದ ನೋಡಬಹುದೇ..?

(ನ್ಯೂಸ್‌ ಕಡಬ) newskadaba.com,ಮಾ.02 ಬೆಂಗಳೂರು:  ನಾಳೆ ಚಂದ್ರನು ಭೂಮಿಯ ನೆರಳಿನ ಮೂಲಕ ನೇರವಾಗಿ ಹಾದುಹೋಗಲಿದ್ದು, ಸಂಪೂರ್ಣ ಚಂದ್ರಗ್ರಹಣವನ್ನು ಸೃಷ್ಟಿಸಲಿದೆ. ನಾಳೆ ಸಂಜೆ, ಪ್ರಕಾಶಮಾನವಾದ ಮತ್ತು ಸುತ್ತಿನ ಹುಣ್ಣಿಮೆಯ ಮೇಲೆ ಕಪ್ಪು ನೆರಳು ಹರಡಲು ಪ್ರಾರಂಭಿಸುತ್ತದೆ. ಚಂದ್ರನು ನೆರಳಿನಲ್ಲಿ ಸಂಪೂರ್ಣವಾಗಿ ಮುಳುಗಿದ ನಂತರ, ಅದು ಕೆಂಪು ಬಣ್ಣದ ಹೊಳಪನ್ನು ಪಡೆಯುತ್ತದೆ.ಖಗೋಳಶಾಸ್ತ್ರಜ್ಞರು ಇದನ್ನು ಸಂಪೂರ್ಣತೆ ಎಂದು ಕರೆಯುತ್ತಾರೆ. ಆದರೆ ಆಕಾಶದಲ್ಲಿ ದೊಡ್ಡದಾಗಿ ನೇತಾಡುವ ಕೆಂಪು ಚಂದ್ರನ ಅಶುಭ ನೋಟದೊಂದಿಗೆ, ಇತಿಹಾಸದಾದ್ಯಂತ ಮತ್ತು ಸಂಸ್ಕೃತಿಗಳಲ್ಲಿ ಇದನ್ನು ದುಷ್ಟತನದ ಸೂಚನೆಯಾಗಿ ನೋಡಲಾಗಿದೆ ಎಂಬುದು ಆಶ್ಚರ್ಯವೇನಿಲ್ಲ.ಇಂದಿನ […]

ನಾಳೆ ಸಂಭವಿಸಲಿರುವ ಚಂದ್ರಗ್ರಹಣವನ್ನು ಬರೀಗಣ್ಣಿನಿಂದ ನೋಡಬಹುದೇ..? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಿ: ಸರ್ಕಾರಕ್ಕೆ ಪೋಷಕರ ಮನವಿ

(ನ್ಯೂಸ್‌ ಕಡಬ) newskadaba.com,ಮಾ.02 ಬೆಂಗಳೂರು: ಒಂದನೇ ತರಗತಿಗೆ ದಾಖಲಾಗುವ 6 ವರ್ಷ ವಯಸ್ಸಿನ ಮಿತಿಯನ್ನ ಈ ವರ್ಷವೂ ಸಡಿಲ ಮಾಡಬೇಕು ಎಂದು ಮತ್ತೆ ಪೋಷಕರು ಸರ್ಕಾರವನ್ನ ಒತ್ತಾಯಿಸಿದ್ದಾರೆ. ವಯಸ್ಸಿನ ಮಿತಿ ಸಡಿಲ ಮಾಡುವಂತೆ ಒತ್ತಾಯಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ‌ಮನವಿ ಮಾಡಿದರು. ಮಕ್ಕಳು ಪೋಸ್ಟರ್ ಹಿಡಿದು ವಯಸ್ಸಿನಲ್ಲಿ ಮಿತಿ ಸಡಿಲ ಮಾಡಿ ಎಂದು ಮನವಿ ಮಾಡಿದರು.. ಈ ವೇಳೆ ಮಾತಾಡಿದ ಪೋಷಕರು, ಈ ವರ್ಷದ ದಾಖಲಾತಿಗೆ 90

ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಿ: ಸರ್ಕಾರಕ್ಕೆ ಪೋಷಕರ ಮನವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.02  ಕುಂದಾಪುರ: ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.೧ ಆದಿತ್ಯವಾರ  ನಡೆದಿದೆ. ಕುಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (೫೩) ಸಾವನ್ನಪ್ಪಿದವರು. ಕುಂದಾಪುರದಿಂದ ೮-೧೦ ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್ ಹೋಗಿದ್ದರು ಎಂದು ತಿಳಿದುಬಂದಿದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.02: : ಪೊಲೀಸ್ ಮ್ಯಾರಥಾನ್ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಎಸ್‌ಐ (SI) ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಹೃದಯವೈಫಲ್ಯದಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್ ಕುಸಿದು ಬಿದ್ದು ಸಾವನ್ನಪ್ಪಿದ ಅಧಿಕಾರಿ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಪೊಲೀಸ್ ಇಲಾಖೆ ಮ್ಯಾರಥಾನ್ ಆಯೋಜಿಸಿತ್ತು. ‘ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ ಓಟ ಆರಂಭಗೊಂಡಿತ್ತು.

ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್‌ ಕಡಬ) newskadaba.com,ಮಾ.02: :  ಮಧ್ಯಪ್ರಾಷ್ಯ ಬಿಕ್ಕಟ್ಟಿನ ಹಿನ್ನೆಲೆ ಷೇರು ಮಾರುಕಟ್ಟೆಗಳು ಭಾರು ಕುಸಿತ ಕಂಡಿವೆ. ಚಿನ್ನದ ಬೆಲೆಯಲ್ಲೂ ಆರಂಭಿಕವಾಗಿ ಇಳಿಕೆ ದಾಖಲಿಸಿದೆ. ಆದರೆ ಏರಿಕೆಯಾಗುವ ಮುನ್ಸೂಚನೆಯೂ ಇದೆ. ಬೆಳ್ಳಿ ಬೆಲೆ ಗರಿಷ್ಠ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಮಾರ್ಚ್ 2 2026, ಸೋಮವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3290 ರೂ ಇಳಿಕೆ ಆಗಿ, 1,69,800 ಕ್ಕೆ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 329 ರೂ ಇಳಿಕೆ ಕಂಡಿದ್ದು, 16980 ರೂ ದಾಖಲಾಗಿದೆ.

ಇಂದಿನ ಚಿನ್ನದ ದರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯದಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.02: ಗಡಿಭಾಗವಾದ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.28ರಂದು ಗಡಿಭಾಗವಾದ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ವರದಿಯಾಗಿದೆ.ಮಡಿಕೇರಿಯ ಸಂತ ಜೋಸೆಫ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು . ಫೆ.28ರಂದು ಸಂಜೆ 5:30ರ ವೇಳೆಗೆ ಪೂಜಾ ಬಸ್ ಮೂಲಕ ಬಂದು ಬೆಟ್ಟತ್ತೂರಿನ ತನ್ನ ಮನೆ ಸಮೀಪ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ

ಸುಳ್ಯದಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧ’ – ಭಾರತ ತಂಡಕ್ಕೆ ಸ್ಯಾಮಿ ಎಚ್ಚರಿಕೆ!

(ನ್ಯೂಸ್‌ ಕಡಬ) newskadaba.com,ಮಾ.02: ಭಾರತ ವಿರುದ್ಧದ ಮಹತ್ವದ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಸಜ್ಜಾಗಿದೆ ಎಂದು ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಿಳಿಸಿದ್ದಾರೆ. ಮಾರ್ಚ್ 1ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಮಿ, “ಟೀಮ್ ಇಂಡಿಯಾವನ್ನು ಎದುರಿಸಲು ನನ್ನ ಪಡೆ ಸಂಪೂರ್ಣ ಸಿದ್ಧವಾಗಿದೆ. ಯಾವುದೇ ಸವಾಲನ್ನೂ ಎದುರಿಸಲು ನಾವು ತಯಾರಾಗಿದ್ದೇವೆ. ಈ ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಜ್ಜಾಗಿದ್ದಾರೆ” ಎಂದು

‘ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧ’ – ಭಾರತ ತಂಡಕ್ಕೆ ಸ್ಯಾಮಿ ಎಚ್ಚರಿಕೆ! Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ : ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಮಹಿಳೆ

(ನ್ಯೂಸ್‌ ಕಡಬ) newskadaba.com,ಮಾ.02: ಈಶ್ವರಮಂಗಲ ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದಲ್ಲಿ ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63) ಅವರು ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿದ್ದ ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಇವರ ಇಬ್ಬರು ಪುತ್ರರು ಹಾಗೂ ಮತ್ತು ಪತಿ ಈ ಮೊದಲೇ ಮೃತಪಟ್ಟಿದ್ದು,

ಸುಳ್ಯ : ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಮಹಿಳೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳ ದರ್ಶನ ಸಮಯದಲ್ಲಿ ಕೊಂಚ ಬದಲಾವಣೆ

(ನ್ಯೂಸ್‌ ಕಡಬ) newskadaba.com,ಮಾ.02: ಯುಗಾದಿ ಹಬ್ಬಕ್ಕೂ ಮುನ್ನವೇ ಅಂದರೆ ಮಾರ್ಚ್ 3ರಂದು ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಪ್ರಮುಖ ದೇವಾಲಯಗಳ ವಿವರ: ಬನಶಂಕರಿ ದೇವಾಲಯ: ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳ ದರ್ಶನ ಸಮಯದಲ್ಲಿ ಕೊಂಚ ಬದಲಾವಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಮಾ.02: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಒಣಹವೆ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top