ಕರ್ನಾಟಕ

ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ20:  ಮಳೆಯ ಅಬ್ಬರದ ನಡುವೆಯು ಸರಣಿ ಅಪಘಾತಗಳು ಬೆಳಕಿಗೆ ಬರುತ್ತಿದೆ. ಇಂದು ಹೋಂಡಾ, ಡಿಯೋ, ಟೊಯೊಟೊ ಇನ್ನೋವಾ ಕಾರು ಮತ್ತು ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ನಡೆದಿದೆ.   ಮಂಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಇನೋವಾ ಕಾರು ಅಯ್ಯಪ್ಪ ಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಸಂಚರಿಸಿ ಎದುರಿನಿಂದ ಬರುತ್ತಿದ್ದ ಸ್ಕೂಟಿಸಯ ಹಿಂಬದಿಯಲ್ಲಿ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸರಣಿ […]

ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ Read More »

ಕರಾವಳಿ, ಕರ್ನಾಟಕ

ಕಡಬ: ಸಾಕಲು ಅಶಕ್ತವಾದ ಗೋವುಗಳನ್ನು ಗೋಶಾಲೆಗೆ ಸಾಗಾಟ ➤ ವಿಶ್ವ ಹಿಂದೂ ಪರಿಷತ್ ಸಹಕಾರ

(ನ್ಯೂಸ್ ಕಡಬ) newskadaba.com ಕಡಬ, ಸೆ. 20. ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ಸಹಕಾರದಿಂದ ಸಾಕಲು ಶಕ್ತವಲ್ಲದ ಗೋವುಗಳನ್ನು ಗೋಶಾಲೆಗೆ ಸಾಗಾಟ ಮಾಡಲಾಯಿತು. ಇಲ್ಲಿನ ಹಲವು ಮನೆಗಳಿಂದ ಅಶಕ್ತ ದನಗಳನ್ನು ಮಂಡ್ಯದ ಶ್ರೇಯಸ್ ಇಂಟರ್ ನ್ಯಾಶನಲ್ ಫೌಂಡೇಶನ್ ಗೋ ಶಾಲೆಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ಕಡಬ ವಿ.ಹಿಂ.ಪ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಸುಳ್ಯ ಉದ್ಯೋಗಿ ಪ್ರಮುಖ್ ನಿತ್ಯಾನಂದ ಮೇಲ್ಮನೆ, ಸತ್ಯದೀಪು ಎಂ.ಆರ್ ಪಂಜ, ಬಜರಂಗದಳ ಸಾಪ್ತಾಹಿಕ ಮಿಲನ್

ಕಡಬ: ಸಾಕಲು ಅಶಕ್ತವಾದ ಗೋವುಗಳನ್ನು ಗೋಶಾಲೆಗೆ ಸಾಗಾಟ ➤ ವಿಶ್ವ ಹಿಂದೂ ಪರಿಷತ್ ಸಹಕಾರ Read More »

ಕರಾವಳಿ, ಕರ್ನಾಟಕ

ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ತಂಡ , ಹೆಲಿಕಾಪ್ಟರ್ ನಿಯೋಜನೆ ➤ ಸಂಸದೆ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ20:  ಉಡುಪಿ ಜೆಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳು ಆಸ್ತಿ-ಪಾಸ್ತಿ ಮುಳುಗಡೆಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗಿದೆ.ತುರ್ತು ಪರಿಹಾರ ಕಾರ್ಯಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡವನ್ನು ಕಳಿಸಿಕೊಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು ಮಂಗಳೂರಿನಿಂದ ಎನ್‌ಡಿಆರ್‌ಎಫ್‌ ತಂಡ ಕಳುಹಿಸಿದ್ದಾರೆ. 20 ಸಿಬ್ಬಂದಿಯನ್ನೊಳಗೊಂಡ ಮತ್ತೊಂದು ಎನ್‌ಡಿಆರ್‌ಎಫ್‌

ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ತಂಡ , ಹೆಲಿಕಾಪ್ಟರ್ ನಿಯೋಜನೆ ➤ ಸಂಸದೆ ಶೋಭಾ ಕರಂದ್ಲಾಜೆ Read More »

ಕರಾವಳಿ, ಕರ್ನಾಟಕ

ಮಂಗಳೂರು : ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ20:  ನಗರದ ಹೊರವಲಯದ ನೀರುಮಾರ್ಗ ಎಂಬಲ್ಲಿ ರಸ್ತೆ ಬಾಯ್ತೆರೆದರೆ, ಅದ್ಯಪಾಡಿಯಲ್ಲಿ ಗುಡ್ಡ ಕುಸಿತಗೊಂಡಿದೆ. ನಗರದ ಹೊರವಲಯದ ನೀರುಮಾರ್ಗದಲ್ಲಿ ಕಟಿಂಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತವಾಗಿದೆ. ರಸ್ತೆ ಸಂಪೂರ್ಣವಾಗಿ ಎರಡು ಭಾಗವಾಗಿದ್ದು, ಸಂಚಾರ ಸ್ಥಗಿತವಾಗಿದೆ. ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.     ಅಳಪೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮನೆಯ ಕಂಪೌಂಡ್ ಗೋಡೆಗಳು ಕುಸಿದಿದ್ದು, ಗಾಯಗೊಂಡಿರುವ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಪೆ ಸಮೀಪದ ಅದ್ಯಪಾಡಿ ಸಮೀಪದಲ್ಲಿ

ಮಂಗಳೂರು : ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ.! Read More »

ಕರಾವಳಿ, ಕರ್ನಾಟಕ

ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ20:  ಕರಾವಳಿಯಲ್ಲಿ ನಿರಂತರವಾಗಿ ಮಳೆಯು ಸುರಿಯುತ್ತಿದ್ದು, ಮಂಗಳೂರು ವಿವಿ ಪರೀಕ್ಷೆ ಮುಂದೂಡಲಾಗಿದೆ. ಮಳೆಯಿಂದಾಗಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅಡಚಣೆ ಉಂಟಾಗಿದೆ.   ಈ ಕುರಿತಂತೆ ಮಂಗಳೂರು ವಿವಿ ಪ್ರಕಟಣೆ ನೀಡಿದ್ದು, ನಾಳೆ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಲನ್ನು ಮುಂದೂಡಲಾಗಿದೆ,. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ Read More »

ಕರಾವಳಿ, ಕರ್ನಾಟಕ

ಉಡುಪಿಯಲ್ಲಿ ಮುಂದುವರಿದ ಧಾರಕಾರ ಮಳೆ ➤ ಎಲ್ಲೆಡೆ ಹಲವಾರು ಮನೆಗಳು ಜಲಾವೃತ

(ನ್ಯೂಸ್ ಕಡಬ) newskadaba.com ಉಡುಪಿ, ಸೆ20:  ಜಿಲ್ಲೆಯಲ್ಲಿ ನಿರಂತರ 24 ಗಂಟೆಗಳ ಕಾಲ ಸುರಿದ ಮಳೆಯಿಂದ ಹಲವಾರು ನದಿ ಪಾತ್ರದ ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯ ಪ್ರಾರಂಭವಾಗಿದೆ.   ನೆರೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳ ಸಂಚಾರ ಸ್ಥಗಿತವಾಗಿದೆ . ಅಂಬಲಪಾಡಿ, ಮಠದಬೆಟ್ಟು, ಗುಂಡಿಬೈಲು, ಬನ್ನಂಜೆ,‌ ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ‌ ತೀವ್ರವಾಗಿದ್ದು, ಇಲ್ಲಿವರೆಗೆ 50 ಕುಟುಂಬಗಳನ್ನು ರಕ್ಷಣೆ ಮಾಡಲಾಗಿ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ

ಉಡುಪಿಯಲ್ಲಿ ಮುಂದುವರಿದ ಧಾರಕಾರ ಮಳೆ ➤ ಎಲ್ಲೆಡೆ ಹಲವಾರು ಮನೆಗಳು ಜಲಾವೃತ Read More »

ಕರಾವಳಿ, ಕರ್ನಾಟಕ

ವಿದ್ಯುತ್ ಬಿಲ್ ಪಾವತಿ ಮಾಡದವರಿಗೆ ಕಾದಿದೆ ಶಾಕ್…‼️ ➤ ನಾಳೆಯಿಂದಲೇ ವಿದ್ಯುತ್ ಕಡಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19. ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇರುವ ಸ್ಥಾವರಗಳ ವಿದ್ಯುತ್ ಪೂರೈಕೆಯನ್ನು ನಾಳೆ( ಸೆ. 21) ಯಿಂದ ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಆದೇಶ ನೀಡಿದೆ. ಕೊರೋನಾ ಸಂಕಷ್ಟದಿಂದ ವಿದ್ಯುತ್ ಬಿಲ್ ವಸೂಲಾತಿಯು ಕುಂಠಿತವಾಗಿದ್ದರಿಂದ ಪಾವತಿಸಲು ಬಾಕಿಯಿರುವ ಬಿಲ್ ಅನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ. ಗ್ರಾಹಕರಿಂದ ವಸೂಲು ಮಾಡುವ ಕಂದಾಯ ತೆರಿಗೆ ಮೊತ್ತದಲ್ಲಿ ವಿದ್ಯುತ್ ಖರೀದಿ ಸೇರಿದಂತೆ ಎಲ್ಲ ವೆಚ್ಚಗಳನ್ನು ಭರಿಸಲಾಗುತ್ತಿದ್ದು, ಗ್ರಾಹಕರ ಬಿಲ್ ಪಾವತಿ ತಡವಾದಲ್ಲಿ, ವಿದ್ಯುತ್ ಖರೀದಿ ಬಿಲ್‌

ವಿದ್ಯುತ್ ಬಿಲ್ ಪಾವತಿ ಮಾಡದವರಿಗೆ ಕಾದಿದೆ ಶಾಕ್…‼️ ➤ ನಾಳೆಯಿಂದಲೇ ವಿದ್ಯುತ್ ಕಡಿತ Read More »

ಕರ್ನಾಟಕ

ತಡರಾತ್ರಿ ಗುಡ್ಡ ಕುಸಿದು ಮನೆ ನೆಲಸಮ ➤ ಅವಷೇಶದಡಿ ಸಿಲುಕಿದ್ದ ಆರು ಮಂದಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ20:  ಕರಾವಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇಯಿದೆ. ಈಗಾಗಲೇ ಕರಾವಳಿಯ ಕೆಲವು ಭಾಗಗಳಲ್ಲಿ ಮಳೆಯ ಅವಾಂತರಕ್ಕೆ ಅಪಾರ ಪ್ರಮಾಣದ ಹಾನಿಯು ಉಂಟಾಗಿದೆ.     ಕಳೆದ ತಡರಾತ್ರಿ ವಿಟ್ಲದ ಮಂಗಳಪದವು ಬಳಿಯ ಬಾಬುಕಟ್ಟೆ ಎಂಬಲ್ಲಿ ಗುಡ್ಡವೊಂದು ಕುಸಿದು ಮನೆಯು ಸಂಪೂರ್ಣವಾಗಿ ನೆಲಸಮಗೊಂಡ ಘಟನೆ ನಡೆದಿದೆ. ತರಕಾರಿ ವ್ಯಾಪಾರಿ ಅಬ್ದುಲ್ಲ ಎಂಬುವರ ಮನೆಯ ಪಕ್ಕದಲ್ಲಿದ್ದ ಧರೆ ಕುಸಿದು ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಮನೆಯಲ್ಲಿದ್ದ ಆರು ಮಂದಿ ಅವಷೇಶದಡಿಯಲ್ಲಿ ಸಿಲುಕಿದ್ದರು, ತಕ್ಷಣವೇ

ತಡರಾತ್ರಿ ಗುಡ್ಡ ಕುಸಿದು ಮನೆ ನೆಲಸಮ ➤ ಅವಷೇಶದಡಿ ಸಿಲುಕಿದ್ದ ಆರು ಮಂದಿಯ ರಕ್ಷಣೆ Read More »

ಕರಾವಳಿ, ಕರ್ನಾಟಕ

ಸಿದ್ದವಾಯ್ತು ಸ್ಕೂಟರ್ ನಿಂದ ಮಿನಿ ಟಿಪ್ಪರ್ ➤ ಸವಣೂರಿನ ಯುವಕನಿಂದ ವಿಭಿನ್ನ ಅವಿಷ್ಕಾರ

(ನ್ಯೂಸ್ ಕಡಬ) newskadaba.com ಸವಣೂರು, ಸೆ20:  ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಸಣ್ಣ ಟಿಪ್ಪರ್ ಒಂದನ್ನು ದಕ್ಷಿಣಕನ್ನಡದ ಹಳ್ಳಿಯ ಯುವಕನೊಬ್ಬ ತಯಾರಿಸಿ ಗಮನ ಸೆಳೆದಿದ್ದಾನೆ. ಕಡಬ ತಾಲೂಕಿನ ಸವಣೂರಿನ ಬಂಬಿಲ ನಿವಾಸಿ ಪುರುಷೋತ್ತಮ್ ಈ ಸಣ್ಣ ಟಿಪ್ಪರ್ ನ ಆವಿಷ್ಕಾರ ಮಾಡಿದ್ದು, ಸ್ಕೂಟರ್ ಒಂದನ್ನು ಮಾರ್ಪಾಡು ಮಾಡಿ ಈ ಟಿಪ್ಪರ್ ಸಿದ್ಧ ಮಾಡಲಾಗಿದೆ.   ತೋಟದ ಮಧ್ಯೆ ಕಿತ್ತ ಕಳೆಗಳನ್ನು ಸ್ಥಳಾಂತರಿಸಲು, ತೋಟಕ್ಕೆ ಮಣ್ಣು ಹಾಕಲು, ಅಡಿಕೆ ಲೋಡ್ ಮಾಡಲು ಹೀಗೆ ವಿವಿಧ ಕೆಲಸಗಳಿಗೆ ಈ ಟಿಪ್ಪರ್ ಅನ್ನು

ಸಿದ್ದವಾಯ್ತು ಸ್ಕೂಟರ್ ನಿಂದ ಮಿನಿ ಟಿಪ್ಪರ್ ➤ ಸವಣೂರಿನ ಯುವಕನಿಂದ ವಿಭಿನ್ನ ಅವಿಷ್ಕಾರ Read More »

ಕರಾವಳಿ, ಕರ್ನಾಟಕ

ನಗರದಲ್ಲಿ ಮುಂದುವರಿದ ಮಳೆರಾಯ ➤ಶಾಲಾ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com  ಕಾವೂರು, ಸೆ.19:  ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ , ಕೂಳೂರಿನ ಶಾಲೆಯ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕಾಂಪೌಂಡ್ ಗೋಡೆ ಕುಸಿದಿದೆ. ಇದ್ದಕ್ಕಿದ್ದಂತೆ ತಡೆಗೋಡೆ ಕುಸಿದ ಪರಿಣಾಮ ಉಮೇಶ್ ಅವರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಚರಣೆ ಮಾಡಿದರೂ ಕೂಡಾ ಉಮೇಶ್

ನಗರದಲ್ಲಿ ಮುಂದುವರಿದ ಮಳೆರಾಯ ➤ಶಾಲಾ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು Read More »

ಕರಾವಳಿ, ಕರ್ನಾಟಕ
Scroll to Top