ಕರ್ನಾಟಕ

ನಿರೂಪಕಿ ಅನುಶ್ರೀ ಬಗ್ಗೆ ಬಾಯ್ಬಿಟ್ಟ ನೈಜೀರಿಯಾ ಪ್ರಜೆ ➤ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಿರೂಪಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 01. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನೈಜೀರಿಯಾ ಪ್ರಜೆಗೂ ನಟಿ, ನಿರೂಪಕಿ ಅನುಶ್ರೀ ಪರಿಚಯ ಇದೆ. ಬೆಂಗಳೂರಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಈತ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.   ಈಗಾಗಲೇ ಬಂಧಿತಳಾಗಿರುವ ಕಿಶೋರ್ ಗೆಳತಿ ಆಸ್ಕಾಳಿಗೂ ಅನುಶ್ರೀ ಪರಿಚಯವಿದೆ. ಅಲ್ಲದೇ ತರುಣ್‌ ರಾಜ್‌ ಕೂಡ ಅನುಶ್ರೀ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಕಂಡು […]

ನಿರೂಪಕಿ ಅನುಶ್ರೀ ಬಗ್ಗೆ ಬಾಯ್ಬಿಟ್ಟ ನೈಜೀರಿಯಾ ಪ್ರಜೆ ➤ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಿರೂಪಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅ. 02 ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 30. ಎಸ್ ಕೆಎಸ್ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಅಭಿಯಾನದ ಸಮಾರೋಪ ಸಮಾರಂಭವು ಆಕ್ಟೋಬರ್ 2 ಗಾಂಧಿ ಜಯಂತಿಯಂದು ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಲಿದೆ ಎಂದು ದ.ಕ ಜಿಲ್ಲಾ ಎಸ್್ಕೆ್ಕೆಎಸ್ಸೆಸ್ಸೆಫ್ ವಿಖಾಯ ಸಮಿತಿ ತಿಳಿಸಿದೆ. ಬೆಳಿಗ್ಗೆ 9 ಗಂಟೆಗೆ ಪ್ಲಾಸ್ಮಾ ಹಾಗೂ ರಕ್ತದಾನಿಗಳ ಸಂಗಮ ನಡೆಯಲಿದ್ದು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಯೇನೆಪೊಯ ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ರಕ್ತದಾನ

ಮಂಗಳೂರು: ಅ. 02 ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ Read More »

ಕರಾವಳಿ, ಕರ್ನಾಟಕ

ಕಡಬ: ಅ. 01 ಹಾಗೂ ಅ. 03ರಂದು ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 30. 33 ಕೆ.ವಿ ಪುತ್ತೂರು- ಕಡಬ ಹಾಗೂ ಮಾಡಾವು ಕಟ್ಟೆ – ಬೆಳ್ಳಾರೆ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿಯು ನಡೆಯತ್ತಿರುವುದರಿಂದ ಅ. 1 ರ ಗುರುವಾರ ಹಾಗೂ ಅ.3 ರ ಶನಿವಾರದಂದು ವಿದ್ಯುತ್ ಸ್ಥಗಿತಗೊಳ್ಳಲಿದೆ. ಅ.1 ಹಾಗೂ 3ರಂದು ಬೆಳಗ್ಗೆ ಗಂಟೆ 10 ರಿಂದ ಸಂಜೆ 6 ಗಂಟೆಯ ತನಕ 33ಕೆ.ವಿ ಪುತ್ತೂರು- ಕಡಬ ದ್ವಿಮಾರ್ಗಗೊಳಿಸುವ ಹಿನ್ನೆಲೆಯಲ್ಲಿ ಮಾಡಾವು ಕಟ್ಟೆ- ಬೆಳ್ಳಾರೆ ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯು ನಡೆಯಲಿರುವುದರಿಂದ ವಿದ್ಯುತ್‌‌  ನಿಲುಗಡೆಯಾಗಲಿದೆ. ಹಾಗಾಗಿ

ಕಡಬ: ಅ. 01 ಹಾಗೂ ಅ. 03ರಂದು ವಿದ್ಯುತ್ ನಿಲುಗಡೆ Read More »

ಕರಾವಳಿ, ಕರ್ನಾಟಕ

ಜಿ. ಪಂ. ಸದಸ್ಯನಿಂದ ಬಾಕ್ಸೈಟ್ ಸಾಗಾಟ ➤ ಪೊಲೀಸರ ದಾಳಿ, ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೈಂದೂರು, ಸೆ. 30. ಬೈಂದೂರು ಒತ್ತಿನೆಣೆಯ ಸೆಳ್ಳೆಕುಳ್ಳಿ ಎಂಬ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಜಾಗದಲ್ಲಿ ಅಕ್ರಮವಾಗಿ ಬಾಕ್ಸೈಟ್ ಅಗೆದು ಸಾಗಾಟ ಮಾಡುತ್ತಿದ್ದ ಪ್ರದೇಶಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಿಷೇಧಿತ ಬಾಕ್ಸೈಟ್ ಅದಿರನ್ನು ಅಗೆಸು ಅಕ್ರಮವಾಗಿ ಸಾಗಿಸಲಗುತ್ತಿತ್ತು ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಬಟ್ಟಾಡಿ ಅವರ ಜಾಗದಲ್ಲಿ ಈ ಬಾಕ್ಸೈಟ್‍ನ್ನು ಶ್ರೀ ಕಾಮತ್ ಶೆಟ್ಟಿ ಕಳೆದ ಒಂದು ತಿಂಗಳಿನಿಂದ ಅಗೆದು ಆಂದ್ರಪ್ರದೇಶದ ಸಿಮೆಂಟ್ ಕಂಪನಿಗೆ

ಜಿ. ಪಂ. ಸದಸ್ಯನಿಂದ ಬಾಕ್ಸೈಟ್ ಸಾಗಾಟ ➤ ಪೊಲೀಸರ ದಾಳಿ, ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾತ್ರೋ ರಾತ್ರಿ ಅಡಿಕೆ ಕಳ್ಳತನ ಗೈದ ಖದೀಮರು..!!

(ನ್ಯೂಸ್ ಕಡಬ) newskadaba.com ಕಾಯರ್ತಡ್ಕ, ಸೆ. 30. ಕಾಯರ್ತಡ್ಕದಲ್ಲಿ ಸುಮಾರು 12 ವರ್ಷಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಪುತ್ತೂರಿನ ಸಿದ್ದೀಕ್ ಆಲಿಯವರ ಕಾರುಣ್ಯ ಟ್ರೇಡರ್ಸ್ ಗೆ ತಡ ರಾತ್ರಿ ನುಗ್ಗಿದ್ದ ಕಳ್ಳರ ತಂಡವೊಂದು ಸುಮಾರು 65 ಕೆಜಿಯಂತೆ ತುಂಬಿಸಿದ್ದ 9 ಗೋಣಿ ಅಡಿಕೆಯನ್ನು ಹೊತೊಯ್ದ ಘಟನೆ ನಡೆದಿದೆ. ಎಂದಿನಂತೆ ಅಂಗಡಿಯಲ್ಲಿ ಕೆಲಸಕ್ಕಿರುವವರು ಬಂದು ಬಾಗಿಲು ತೆರೆಯಲೆಂದು ಬಂದಾಗ ಬೀಜ ಮುರಿದಿರುವುದು ಕಂಡು ಬಂದಿದೆ.ಒಳ ಹೋಗಿ ನೋಡಿದ ವೇಳೆ ಅಡಿಕೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ

ರಾತ್ರೋ ರಾತ್ರಿ ಅಡಿಕೆ ಕಳ್ಳತನ ಗೈದ ಖದೀಮರು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಡ್ರಗ್ಸ್ ಪ್ರಕರಣ : ಕಿಶೋರ್​ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ.

(ನ್ಯೂಸ್ ಕಡಬ) newskadaba.com ಬೆಂಗಳೂರು , ಸೆ. 30. ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್​ ಡ್ಯಾನ್ಸರ್​ ಕಿಶೋರ್​ ಅಮನ್​ ಶೆಟ್ಟಿಯ ಬಂಧನವಾಗಿದ್ದು, ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದೆ. ಇದೀಗ ಕಿಶೋರ್​ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.   ಕಿಶೋರ್​ ಸ್ನೇಹಿತೆಯಾಗಿರುವ ಆಸ್ಕಾ ಸಹ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿದ್ದಾಳೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ವಾಸವಿದ್ದಳು.ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ

ಡ್ರಗ್ಸ್ ಪ್ರಕರಣ : ಕಿಶೋರ್​ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ಆಯ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 29. 2019-20ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಹಾಗೂ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗಳು ಆಯ್ಕೆಯಾಗಿದೆ. 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಪಂಚಾಯಿತಿಗಳ ಆಯ್ಕೆಯ ಕುರಿತು ಉಲ್ಲೇಖ ಪತ್ರದಲ್ಲಿ ಸೂಚಿಸಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ನೀಡಿದ ಮಾಹಿತಿಯಂತೆ, ಆಯುಕ್ತರು ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್

ಕಡಬ: 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ಆಯ್ಕೆ Read More »

ಕರಾವಳಿ, ಕರ್ನಾಟಕ

ಬೆಳ್ಳಾರೆ: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 29. ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. 2019 ರಲ್ಲಿ ಆಶಾ ತಿಮ್ಮಪ್ಪರವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದ ಸಂದರ್ಭ ಜಿ.ಪಂ. ನಿಂದ ನಿರ್ಣಯವನ್ನು ಕಳುಹಿಸಿ ಕೊಡಲಾಗಿತ್ತು. ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಬೆಳ್ಳಾರೆಯಲ್ಲಿ 24×7 ಸೇವೆ ವ್ಯವಸ್ಥೆಯ ಆರೋಗ್ಯ ಕೇಂದ್ರವಿದ್ದರೂ, ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಇಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಜೆಯ

ಬೆಳ್ಳಾರೆ: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಶಾಸಕರಿಗೆ ಮನವಿ Read More »

ಕರಾವಳಿ, ಕರ್ನಾಟಕ

ಮಂಗಳೂರು ಡ್ರಗ್ಸ್‌ ಪ್ರಕರಣ ➤ ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಸಿಬಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.29: ಮುಂಬೈನಿಂದ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾದ ಆರೋಪಿಯನ್ನು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರಿನ ಬಂದರು ಮೂಲದ ನಿವಾಸಿ ಪೆಡ್ಲರ್ ಶಾ ನವಾಜ್ ನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದು, ಆ ದಿನವೇ ಬೆಂಗಳೂರಿನಲ್ಲಿ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ಮಂಗಳೂರು ಡ್ರಗ್ಸ್‌ ಪ್ರಕರಣ ➤ ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಸಿಬಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗುಂಡ್ಯ : ಅಪರಿಚಿತ ಶವ ಪತ್ತೆ..!!

(ನ್ಯೂಸ್ ಕಡಬ) newskadaba.com ಗುಂಡ್ಯ, ಸೆ. 29. ಕಡಬ ತಾಲೂಕಿನ ಗುಂಡ್ಯದಲ್ಲಿ ಶವವೊಂದು ಪತ್ತೆಯಾಗಿದೆ.ಸುಬ್ರಹ್ಮಣ್ಯ ಮಾರ್ಗವಾಗಿ ಹೋಗುವ ಗುಂಡ್ಯ ಸೇತುವೆಯ ಅಡಿಯಲ್ಲಿ ಇಂದು ಮುಂಜಾನೆ ಅಪಚರಿತ ಶವವೊಂದು ಕಂಡು ಬಂದಿದೆ. ಯಾರೋ ಕೊಲೆಗೈದು ಶವ ಬೀಸಾಡಿರುವುದು ಮೇಲ್ನೊಟಕ್ಕೆ ವ್ಯಕ್ತವಾಗಿದೆ.   ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಸೇತುವೆಯ ಅಡಿಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ಪ್ರವಾಸಿಗರು ಸ್ಥಳೀಯರಿಗೆ ಮಾಗಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತದ್ದು, ಬಳಿಕ

ಗುಂಡ್ಯ : ಅಪರಿಚಿತ ಶವ ಪತ್ತೆ..!! Read More »

ಕರಾವಳಿ, ಕರ್ನಾಟಕ
Scroll to Top