ಕರ್ನಾಟಕ

ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಅ. 5ರಿಂದ ತೆರೆಯಲಿದೆ ಇಸ್ಕಾನ್ ದೇವಾಲಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.03: ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಭಕ್ತರ ದರ್ಶನಕ್ಕೆ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಶ್ರೀಕೃಷ್ಣನ ಭವ್ಯಸಾನಿಧ್ಯ  ಇಸ್ಕಾನ್ ದೇವಸ್ಥಾನವು ಬರೋಬ್ಬರಿ ಆರು ತಿಂಗಳ ಬಳಿಕ ಅಕ್ಟೋಬರ್ 5ರಂದು ಭಕ್ತರ ದರ್ಶನಕ್ಕೆ ಎಂದಿನಂತೆ ತೆರೆಯಲಿದೆ.     ಪೂಜ ವಿಧಿ ವಿಧಾನಗಳು ಬೆಳಗ್ಗೆ 9:30-ಮಧ್ಯಾಹ್ನ 12:30 ರತನಕ ಸಂಜೆ 4 ರಿಂದ 8ರತನಕ ಭಕ್ತರ ಪ್ರವೇಶಕ್ಕೆ ಅವಕಾಶ ವಿದ್ದು, ವಾರಾಂತ್ಯದಲ್ಲಿ ಬೆಳಗ್ಗೆ 9:30 ರಿಂದ ರಾತ್ರಿ 8 ಗಂಟೆಯವರೆಗೆ ದೇವರ […]

ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಅ. 5ರಿಂದ ತೆರೆಯಲಿದೆ ಇಸ್ಕಾನ್ ದೇವಾಲಯ Read More »

ಕರಾವಳಿ, ಕರ್ನಾಟಕ

ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಎಸ್ಕೇಪ್ ➤ ಕಾರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು

 (ನ್ಯೂಸ್ ಕಡಬ) newskadaba.com ಸುಳ್ಯ, ಅ. 03.  ಗೂನಡ್ಕ ಬಳಿ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದೆ. ತಕ್ಷಣವೇ ಸ್ಥಳೀಯರು ಕಾರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರಾ ಗಾಯವಾಗಿದೆ. ಗಾಯಗೊಂಡಿದ್ದ ಬೈಕ್ ಸವಾರನನ್ನು ತಕ್ಷಣವೇ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಸಮೀಪದ ಗೂನಡ್ಕ ಬಳಿ ಮಹೀಂದ್ರ ಕಾರೋಂದು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಎಸ್ಕೇಪ್ ಆಗಿದೆ. ಇದನ್ನ ಗಮನಿಸಿದ ಸ್ಥಳೀಯರಾದ ಲಕ್ಷ್ಮೀಶ್ ಪಾಲ್ತಾಡು ಎಂಬುವವರು ಕಾರನ್ನು ಬೆನ್ನಟ್ಟಿ

ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಎಸ್ಕೇಪ್ ➤ ಕಾರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು Read More »

ಕರಾವಳಿ, ಕರ್ನಾಟಕ

ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ

 (ನ್ಯೂಸ್ ಕಡಬ) newskadaba.com ಬಿ. ಸಿ ರೋಡ್, ಅ. 03. ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಆತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಬಿ. ಸಿ ರೋಡ್ ನಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ ಯವರ ನೇತೃತ್ವದಲ್ಲಿ ಮೊಂಬತ್ತಿ ಜಾಥಾ ಶುಕ್ರವಾರ ನಡೆಯಿತು.   ಈ ಸಂದರ್ಭದಲ್ಲಿ ಮಾತಾನಾಡಿದ ರಮಾನಾಥ್ ರೈ ರವರು” ಯೋಗಿ ಆದಿತ್ಯ ನಾಥ್ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ವಿಫಲ ಆಗಿದ್ದು ಕೂಡಲೇ ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಕೇಂದ್ರ

ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಫೇಸ್‌ಬುಕ್‌ ಲೈವ್ ನಲ್ಲಿ ಕಣ್ಣೀರಿಟ್ಟ ಅನುಶ್ರೀ..‼ಕಾರಣ ಗೊತ್ತೇ..⁉️

ಫೇಸ್‌ಬುಕ್‌ ಲೈವ್ ನಲ್ಲಿ ಕಣ್ಣೀರಿಟ್ಟ ಅನುಶ್ರೀ..‼ ಕಾರಣ ಗೊತ್ತೇ..⁉️

ಫೇಸ್‌ಬುಕ್‌ ಲೈವ್ ನಲ್ಲಿ ಕಣ್ಣೀರಿಟ್ಟ ಅನುಶ್ರೀ..‼ಕಾರಣ ಗೊತ್ತೇ..⁉️ Read More »

ಕರ್ನಾಟಕ, ಲೈಫ್‍ಸ್ಟೈಲ್

ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!!

(ನ್ಯೂಸ್ ಕಡಬ) newskadaba.com ಗೋಕರ್ಣ, ಅ.01:  ಗೋಕರ್ಣದಲ್ಲಿ  ಕಾರು‌ ಚಾಲಕನ ನಿಯಂತ್ರಣ ‌ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಗೌರವ ದೇವರಾಯ ಗೋಳಿಕಟ್ಟೆ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.     ಕಾರಿನಲ್ಲಿದ್ದ ಇನ್ನೂ ಮೂವರು ಗಾಯಗೊಂಡಿದ್ದಾರೆ. ವರುಣ, ಹನಿಶ, ಹಾಗೂ ರಜತ ನಾಯಕ ಗಾಯಗೊಂಡವರು.ಬುಧವಾರ ಮಧ್ಯರಾತ್ರಿ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದಾಗ ಚೌಡಗೇರಿ ಬಳಿ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ 10 ಅಡಿ ಎತ್ತರಕ್ಕೆ ಜಿಗಿದು ಹೊಂಡಕ್ಕೆ ಬಿದ್ದಿದರಿಂದ ಈ ಅವಘಡ ಸಂಭವಿಸಿದೆ.

ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!! Read More »

ಕರಾವಳಿ, ಕರ್ನಾಟಕ

ಉಡುಪಿ : ಸಾಲ ಬಾಧೆಯಿಂದ ಮೀನುಗಾರ ಆತ್ಮಹತ್ಯೆಗೆ ಶರಣು.!

(ನ್ಯೂಸ್ ಕಡಬ) newskadaba.com ಉಡುಪಿ, ಅ.01:  ಸಾಲ ಬಾಧೆಯಿಂದ ನೊಂದ ಮೀನುಗಾರರೊರ್ವರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಮೃತ ಮೀನುಗಾರ 42 ವರುಷದ ಕೃಷ್ಣ ಕಾಂಚನ್ ಎಂಬುವವರು ಸುಮಾರು 20 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದರು .ಕಳೆದ 7 ರಿಂದ 8 ತಿಂಗಳಿಂದ ಸಾಲದ ಹಣ ಮರು ಪಾವತಿಸಲಾಗದ ಕಾರಣ ನೊಂದಿದ್ದರು. ಖಿನ್ನತೆಗೆ ಒಳಗಾಗಿದ್ದ ಇವರು ತಮ್ಮ ಹಳೆಯ ಮನೆಯಲ್ಲಿ ಪ್ಯಾನಿಗೆ ಹಗ್ಗ ಬಿಗಿದು ನೇಣಿಗೆ ಶರಣಾಗಿದ್ದಾರೆ.

ಉಡುಪಿ : ಸಾಲ ಬಾಧೆಯಿಂದ ಮೀನುಗಾರ ಆತ್ಮಹತ್ಯೆಗೆ ಶರಣು.! Read More »

ಕರಾವಳಿ, ಕರ್ನಾಟಕ

ಪುತ್ತೂರು : ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.01: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ನೆಪದಲ್ಲಿ ಮಹಿಳೆಯರಿಗೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚಾಗುತ್ತಿದ್ದು, ಇದನ್ನು ಖಂಡಿಸಿ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.   ಪ್ರತಿಭಟನಾ ವೇಳೆ,ಕೊರೊನಾ ಹಿನ್ನಲೆಯಲ್ಲಿ ಜನರ ಕೆಲಸಕ್ಕೇ ತೊಂದರೆಯಾಗಿರುವ ಕಾರಣ ಸಾಲ ಪಡೆದ ಹಣವನ್ನು ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲೂ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳು ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಸೂಕ್ತ

ಪುತ್ತೂರು : ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಸ್ಕೂಟಿ ಸ್ಕಿಡ್ – ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಸವಾರನ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲೂಕಿನ ಹೊರವಲಯದ ಈಶ್ವರಮಂಗಲ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮೋಹಿತ್ ಗೌಡ (19 ವ ) ಎಂದು ಗುರುತಿಸಲಾಗಿದೆ. ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೇನಾಲದಿಂದ ಈಶ್ವರಮಂಗಿಲವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮೋಹಿತ್ ಚಲಾಯಿಸುತ್ತಿದ್ದ ಡಿಯೋ ಸ್ಕಿಡ್ ಆಗಿ ಉರುಳಿ ಬಿದ್ದಿದ್ದು, ತಲೆ ರಸ್ತೆಗೆ ಅಪ್ಪಳಿಸಿದ ಕಾರಣ ತಲೆಗೆ

ಸ್ಕೂಟಿ ಸ್ಕಿಡ್ – ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ

ಪುತ್ತೂರು: ಹರಳಿಂಡಿ ಸಾಗಾಟದ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಹರಳಿಂಡಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರು- ವಿಟ್ಲ ರಸ್ತೆಯ ಪೆಲತ್ತಿಂಜ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ವಿಟ್ಲ ಕಡೆಗೆ ಲಾರಿಯಲ್ಲಿ ಹರಳಿಂಡಿ ಸಾಗಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಾರಿಯಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು: ಹರಳಿಂಡಿ ಸಾಗಾಟದ ಲಾರಿ ಪಲ್ಟಿ Read More »

ಕರಾವಳಿ, ಕರ್ನಾಟಕ

ಪುತ್ತೂರು: ಅಳಕೆ ಮಜಲು ಬಳಿ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 01. ಪುತ್ತೂರು ವಿಟ್ಲ ರಸ್ತೆಯ ಅಳಕೆ ಮಜಲು ಎಂಬಲ್ಲಿ ಲಾರಿ ಪಲ್ಟಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.   ಪುತ್ತೂರಿನಿಂದ ವಿಟ್ಲ ಕಡೆಗೆ ಹರಳಿನ ಹಿಂಡಿ ಲೋಡನ್ನು ತುಂಬಿಸಿಕೊಂಡು ಬರುತ್ತಿರುವಾಗ ಅಳಕೆ ಮಜಲಿನ ಪೆಲತ್ತಿಂಜ ಎಂಬಲ್ಲಿ ಲಾರಿ ಪಲ್ಟಿಯಾಗಿದೆ.  ಘಟನೆಯಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಗಿದ್ದಾರೆ. ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಉಂಟಾಗಿತ್ತು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.  

ಪುತ್ತೂರು: ಅಳಕೆ ಮಜಲು ಬಳಿ ಲಾರಿ ಪಲ್ಟಿ Read More »

ಕರಾವಳಿ, ಕರ್ನಾಟಕ
Scroll to Top