ಕರ್ನಾಟಕ

ಆಂಧ್ರ ಪ್ರದೇಶದ ಸಿಎಂ ಪರಿಹಾರ ನಿಧಿ ಹೆಸರಿನಲ್ಲಿ ವಂಚನೆ ➤ ದ. ಕನ್ನಡ ಜಿಲ್ಲೆಯ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 06: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂಚಿಸಲು ಯೋಜನೆ ರೂಪಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಎಸಿಬಿ ಪೊಲೀಸರ ತಂಡ ದ.ಕ ಜಿಲ್ಲೆಗೆ ಬಂದು ಆರು ಮಂದಿಯನ್ನು ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಗಳಾದ ಯೋಗೀಶ್ ಆಚಾರ್ಯ (40) ಉದಯ ಶೆಟ್ಟಿ ಕಾಂತಾವಾರ (35), ಮಂಗಳೂರಿನ ಬ್ರಿಜೇಶ್ ರೈ(35) ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆಂಧ್ರ ಪ್ರದೇಶದ […]

ಆಂಧ್ರ ಪ್ರದೇಶದ ಸಿಎಂ ಪರಿಹಾರ ನಿಧಿ ಹೆಸರಿನಲ್ಲಿ ವಂಚನೆ ➤ ದ. ಕನ್ನಡ ಜಿಲ್ಲೆಯ ಆರು ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಳಿಂಗ ಸರ್ಪದ ಹಣೆಗೆ ಮುತ್ತಿಟ್ಟ ಅರ್ಜುನ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.06: ಕಾಳಿಂಗ ಸರ್ಪವನ್ನು ಕಂಡರೆ ಜನ ಬೆಚ್ಚಿಬೀಳುತ್ತಾರೆ. ಕಾಳಿಂಗ ಸರ್ಪ ಕಂಡ ಕೂಡಲೇ ಎದ್ನೋ ಬಿದ್ನೋ ಎಂದು ಓಡುತ್ತಾರೆ. ಆದರೆ, ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಅದರ ಹೆಣೆಗೆ ಮುತ್ತಿಡುವುದು ಬಹುಶಃ ಕನಸಲ್ಲೂ ಆಗದ ಮಾತು. ಆದರೆ, ಇಲ್ಲೊಬ್ಬ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸ್ನೇಕ್ ಅರ್ಜುನ್ ನೋಡುವವರಿಗೆ ಎದೆಯಲ್ಲಿ ಭಯ ಹುಟ್ಟುವಂತೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಸುಗೂಸಿನಂತೆ ಆಡಿಸಿ, ಅದರ ಹಣೆಗೆ ಮುತ್ತಿಟ್ಟಿದ್ದಾರೆ.    

ಕಾಳಿಂಗ ಸರ್ಪದ ಹಣೆಗೆ ಮುತ್ತಿಟ್ಟ ಅರ್ಜುನ್ ➤ ವಿಡಿಯೋ ವೈರಲ್ Read More »

ಕರ್ನಾಟಕ

ಕಾರವಾರ : ಮೀನುಗಾರರ ಬಲೆಗೆ ಬಿದ್ದ “ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್”

(ನ್ಯೂಸ್ ಕಡಬ) newskadaba.com ಕಾರವಾರ, ಅ. 06: ಸಮುದ್ರದಲ್ಲಿ ಅತಿ ವೇಗವಾಗಿ ಈಜುವ ಮೀನುಗಳಲ್ಲಿ ಒಂದಾದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನೊಂದು ಅಂಕೋಲಾ ತಾಲೂಕಿನ ಗಾಭೀತಕೇಣಿಯ ಮೀನುಗಾರರ ಬಲೆಗೆ ಬಿದ್ದಿದೆ. ಸಾಮಾನ್ಯವಾಗಿ ಬಿಲ್ ಫಿಶ್ ಎಂಧು ಕರೆಯುವ ಚೂಪಾದ ಮುಖ , ಬೆನ್ನ ಮೇಲೆ ರೆಕ್ಕೆ ಹೊಂದಿರುವ ಸುಮಾರು ಐದು ಅಡಿ ಉದ್ದ ಅಪರೂಪದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನು ನಿಕ್ಕಿದೆ.  ಈ ಮೀನು ಅತಿದೊಡ್ಡ ಮೀನುಗಳಲ್ಲಿ ಇದು ಕೂಡಾ ಒಂದಾಗಿದ್ದು, ಅತ್ಯಂತ ವೇಗವಾಗಿ

ಕಾರವಾರ : ಮೀನುಗಾರರ ಬಲೆಗೆ ಬಿದ್ದ “ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್” Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ : ಮರೆವಿನ ಕಾರಣದಿಂದ 3 ದಿನ ಕಾಡಿನಲ್ಲೆ ಉಳಿದ ವೃದ್ದ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 06. ಮರೆವಿನ ಕಾರಣದಿಂದ ಮನೆಗೆ ಬರುವ ವೇಳೆ ದಾರಿ ತಪ್ಪಿದ್ದ ವಯೋವೃದ್ಧರೊಬ್ಬರು ದಾರಿ ತಪ್ಪಿ ಕಾಡು ಸೇರಿ ಪವಾಡ ಅನ್ನುವಂತೆ ಬದುಕಿ ಬಂದ ಘಟನೆ ಬೆಳ್ತಂಗಡಿಯ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಕಾಡುಮನೆ ನಿವಾಸಿ ಅಣ್ಣು ಪೂಜಾರಿ(88) ಅಕ್ಟೋಬರ್‌ 1ರಂದು ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಿ ಮನೆಗೆ ಬಂದಿರಲಿಲ್ಲ.   ತಂದೆ ಮನೆಗೆ ಬಂದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಮಕ್ಕಳು ಅವರು ಓಡಾಡುವ ಜಾಗಗಳಲ್ಲಿ ಹುಡುಕಾಡಿದ್ದಾರೆ.

ಬೆಳ್ತಂಗಡಿ : ಮರೆವಿನ ಕಾರಣದಿಂದ 3 ದಿನ ಕಾಡಿನಲ್ಲೆ ಉಳಿದ ವೃದ್ದ Read More »

ಕರಾವಳಿ, ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಸದ್ಯದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್‍ಗಳು ➤ ಏನಿದರ ವಿಶೇಷತೆ….?

(ನ್ಯೂಸ್ ಕಡಬ) newskadaba.com ಬೆಂಳೂರು, ಅ.05: ಬಿಎಂಟಿಸಿಯ ಬಹು ವರ್ಷಗಳ ನಿರೀಕ್ಷಿತ ಯೋಜನೆಗಳಲ್ಲಿ ನಗರಕ್ಕೆ ಎಲೆಕ್ಟ್ರಿಕ್ ಐಷಾರಾಮಿ​ ಬಸ್​ಗಳನ್ನ ಇಳಿಸುವುದೂ ಒಂದಾಗಿದೆ.  ಆ ಯೋಜನೆಯ ಐಷಾರಾಮಿ ಬಸ್ಸುಗಳು ರಸ್ತೆಗೆ ಈಗ ಇಳಿಯುತ್ತೆ, ಆಗ ಇಳಿಯುತ್ತೆ ಅಂತ ಜನ ಕಾಯುತ್ತಲೇ ಇದ್ರು. ಆದ್ರೆ ಇದೀಗ ಆ ಟೈಮ್ ಕೂಡಿ ಬರೋ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಯಾಕಂದ್ರೆ ಇಂದು ಯೋಜನೆಯ ಮೊದಲ ಹೆಜ್ಜೆ ಎಂಬಂತೆ ಐಷಾರಾಮಿ ಎಲೆಕ್ಟ್ರಿಕ್ ಬಸ್ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದೆ.     ಬೆಂಗಳೂರು ದಿನ

ಸಿಲಿಕಾನ್ ಸಿಟಿಯಲ್ಲಿ ಸದ್ಯದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್‍ಗಳು ➤ ಏನಿದರ ವಿಶೇಷತೆ….? Read More »

ಕರಾವಳಿ, ಕರ್ನಾಟಕ

ಪುಣಚದಲ್ಲಿ ರಸ್ತೆ ಅತಿಕ್ರಮಣ ಪ್ರಕರಣ ➤ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುಣಚ, ಅ. 05. ಪುಣಚ ಗ್ರಾಮ ಪಂಚಾಯತಿ ಸುಪರ್ದಿಯಲ್ಲಿರುವ ಪದವು ಕೊಪ್ಪಳ ಸಾರ್ವಜನಿಕ ರಸ್ತೆಯನ್ನು ಜಯಂತಿ ಹಾಗೂ ಬಬಿತ ಎಂಬುವರು ಅತಿಕ್ರಮಿಸಿ ಬಲವಂತವಾಗಿ ಬೇಲಿ ನಿರ್ಮಿಸಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿರುವುದರ ವಿರುದ್ಧ ದ. ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಇಂದು (ಅ.05) ಪುನಾಚ ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೂಡಲೇ ರಸ್ತೆ ಸರ್ವೇ ನಡೆಸಿ ಸಮಸ್ಯೆ ಇತ್ಯಾರ್ಥಗೊಳಿಸಬೇಕು . ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ದಲಿತ್ ಸೇವಾ

ಪುಣಚದಲ್ಲಿ ರಸ್ತೆ ಅತಿಕ್ರಮಣ ಪ್ರಕರಣ ➤ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಿ.ಸಿ ರೋಡು, ಅ. 05.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಪ್ರಕರಣ ವನ್ನು ಖಂಡಿಸಿ ಬಿ.ಸಿ ರೋಡಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.     ಪ್ರತಿಭಟನೆಯನೆಯನ್ನು ಉದ್ದೇಶಿಸಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ನಿವೃತ್ತರಾಗಿರು ಪ್ರೊ. ನಾರಾಯಣ ಭಂಡಾರಿ ಮಾತನಾಡಿ”ಸಮಾಜದ ಯುವ ಜನರು ಸಂಸ್ಕಾರವಂತ ಶಿಕ್ಷಣ ಪಡೆದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತದೆ. ಹಾಗೂ

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಅಂತರ್ ರಾಜ್ಯ ಮಟ್ಟದ ಲೇಖನ ಸ್ಪರ್ಧೆ ➤ ಪ್ರಥಮ ಸ್ಥಾನಿಯಾದ ಕಡಬದ ಸಮ್ಯಕ್ತ್ ಜೈನ್

(ನ್ಯೂಸ್ ಕಡಬ) newskadaba.com ಕಡಬ, ಅ. 05. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಮಹಿಳಾ ಘಟಕ ಧಾರವಾಡ ಇದರ ವತಿಯಿಂದ ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ನಡೆಸಲಾದ ರಾಜ್ಯ ಮತ್ತು ಅಂತರ್ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ”ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವದೇಶಿ ಆಂದೋಲನದ ಪ್ರಸ್ತುತತೆ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗವಹಿಸಿದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಹುಮುಖ ಪ್ರತಿಭೆ ಸಮ್ಯಕ್ತ್ ಜೈನ್ ರವರು ಪ್ರಥಮ ಸ್ಥಾನವನ್ನು

ಅಂತರ್ ರಾಜ್ಯ ಮಟ್ಟದ ಲೇಖನ ಸ್ಪರ್ಧೆ ➤ ಪ್ರಥಮ ಸ್ಥಾನಿಯಾದ ಕಡಬದ ಸಮ್ಯಕ್ತ್ ಜೈನ್ Read More »

ಕರಾವಳಿ, ಕರ್ನಾಟಕ

ಅಡಿಕೆ, ತೆಂಗು, ಕಾಳುಮೆಣಸು ಖರೀದಿ ಕೇಂದ್ರ ‘ಹಿಂದುಸ್ಥಾನ್ ಸುಪಾರಿ ಟ್ರೇಡರ್ಸ್’ ಕಡಬದಲ್ಲಿ ಶುಭಾರಂಭ ➤ ಕಡಬದ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ಅ.05. ಕಳೆದ ಹಲವು ವರ್ಷಗಳಿಂದ ಕಡಬದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸಿ ರಬ್ಬರ್ ಕೃಷಿಕರ ವಿಶ್ವಾಸಾರ್ಹತೆಯನ್ನು ಹೊಂದಿ ಪ್ರಸ್ತುತ ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ ಹಿಂದುಸ್ತಾನ್ ಸುಪಾರಿ ಟ್ರೇಡರ್ಸ್ ಸೋಮವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯಲ್ಲಿ ಅಡಿಕೆ, ರಬ್ಬರ್, ತೆಂಗಿನಕಾಯಿ, ಕಾಳುಮೆಣಸು ಸೇರಿದಂತೆ ಎಲ್ಲಾ ವಿಧದ ಕಾಡುತ್ಪತ್ತಿಗಳನ್ನು ಗರಿಷ್ಠ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ

ಅಡಿಕೆ, ತೆಂಗು, ಕಾಳುಮೆಣಸು ಖರೀದಿ ಕೇಂದ್ರ ‘ಹಿಂದುಸ್ಥಾನ್ ಸುಪಾರಿ ಟ್ರೇಡರ್ಸ್’ ಕಡಬದಲ್ಲಿ ಶುಭಾರಂಭ ➤ ಕಡಬದ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ Read More »

ಕರ್ನಾಟಕ

ಎರಡು ಕಾರುಗಳ ನಡುವೆ ಅಪಘಾತ ➤ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 05: ವಿಟ್ಲದಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಎಲ್ಲಾ ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆ ವಿಟ್ಲದ ಕಾಸರಗೋಡು ರಸ್ತೆಯ ಕಾಶಿಮಠದಲ್ಲಿ ನಡೆದಿದೆ. ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದೆ ಬರುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿದ್ದವೆ. ಪರಿಣಾಮ ಅಪಘಾತದ ತೀವ್ರತೆಗೆ ಸೊಂಧು ಕಾರು ಪಕ್ಕದಲ್ಲಿದ್ದ ಚರಂಡಿಗೆ ಉರುಳಿ ಬಿದ್ದಿದೆ. ಮತ್ತೊಂದು ಕಾರು ರಸ್ತೆಯಲ್ಲಿಯೇ ಅಡ್ಡವಾಗಿ ಬಿದ್ದಿದ್ದೆ. ಕಾರುಗಳ ಮುಂಭಾಗವು ಸಂಪೂರ್ಣವಾಗಿ

ಎರಡು ಕಾರುಗಳ ನಡುವೆ ಅಪಘಾತ ➤ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು Read More »

ಕರಾವಳಿ, ಕರ್ನಾಟಕ
Scroll to Top