ಕರ್ನಾಟಕ

6 ತಿಂಗಳ ನಂತರ ಚಿತ್ರಮಂದಿರಗಳು ನಾಳೆ ಓಪನ್

(ನ್ಯೂಸ್ ಕಡಬ) newskadaba.com ಚಿತ್ರಮಂದಿರ, ಅ.14: ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್‌ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರ ನಾಳೆಯಿಂದ ಆರಂಭವಾಗುತ್ತಿವೆ.     ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಇದಕ್ಕಾಗಿ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಡ್ಡಾಯವಾಗಿದೆ. ಸಿನೆಮಾ ಹಾಲ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೇವಲ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಅಂತರವಿರಬೇಕು ಮತ್ತು ಖಾಲಿ ಸೀಟ್ […]

6 ತಿಂಗಳ ನಂತರ ಚಿತ್ರಮಂದಿರಗಳು ನಾಳೆ ಓಪನ್ Read More »

ಕರ್ನಾಟಕ

ಶಿವಮೊಗ್ಗ: ಅಡಿಕೆಯಿಂದ ತಯಾರಾಯ್ತು ಶಾಂಪೂ….!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.14: ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆ ಇದೀಗ ಅಡಿಕೆಯಿಂದ ಶಾಂಪೂ ತಯಾರಾಗಿದೆ.     ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಯುವ ಉದ್ಯಮಿ ನಿವೇದನ್‌ ನೆಂಪೆ ರವರು ಈಗ ಅಡಕೆ ಶಾಂಪೂ ಸಂಶೋಧಿಸುವ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಚಾಲಿ ಅಡಿಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದ್ದು, ಇದು ದೇಹದಲ್ಲಿನ ಸುಕ್ಕವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಗ್ಯಾಲಿಕ್‌ ಆಸಿಡ್‌ ಎಂಬ ಆಂಟಿ ಫಂಗಲ್‌ ಇದ್ದು,

ಶಿವಮೊಗ್ಗ: ಅಡಿಕೆಯಿಂದ ತಯಾರಾಯ್ತು ಶಾಂಪೂ….! Read More »

ಕರ್ನಾಟಕ

ಸುಬ್ರಹ್ಮಣ್ಯ: ಮಳೆಯ ಅಬ್ಬರಕ್ಕೆ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ಅ. 14: ಕರಾವಳಿಯಲ್ಲಿ ಈಗಾಗಲೇ ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಅವಾಂತರಗಳು ಸೃಷ್ಟಿಯಾಗಿದೆ.ಪರಿಣಾಮ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತಗೊಂಡಿದೆ ಕಳೆದೊಂದು ವಾರದಿಂದ ಎಡೆಬಿಡದ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯ ಬಳಿಯ ಪರ್ವತಮುಖಿ ಎಂಬಲ್ಲಿ ಪುರುಷೋತ್ತಮ ಹಾಗೂ ಹೊನ್ನಪ್ಪ ಎಂಬುವರ ಮನೆಯ ಛಾವಣಿಯು ಕಳೆದ ದಿನ ಕುಸಿದು ಹಾನಿ ಸಂಭವಿಸಿದೆ. ಪರಿಣಾಮ ಮನೆಯ ಮೇಲ್ಛಾವಣಿ ಛಾವಣಿ ಸಂಪೂರ್ಣವಾಗಿ ಕುಸಿದು ಹಂಚುಗಳು ಪುಡಿ ಪುಡಿಯಾಗಿದೆ. ಸದ್ಯ ಇದನ್ನು ಸ್ಥಳಿಯರು ದುರಸ್ತಿಗೊಳಿಸಲು ಸಹಕರಿಸಿದ್ದಾರೆ.  

ಸುಬ್ರಹ್ಮಣ್ಯ: ಮಳೆಯ ಅಬ್ಬರಕ್ಕೆ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತ Read More »

ಕರಾವಳಿ, ಕರ್ನಾಟಕ

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!!

(ನ್ಯೂಸ್ ಕಡಬ) newskadaba.com ಹಾವೇರಿ ಅ. 14: ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ.   ನಾಗರಾಜ ಗೊರವರ(22) ಹತ್ಯೆಯಾದ ಅಣ್ಣ. ಈತನನ್ನು ತಮ್ಮ ದಿಳ್ಳೆಪ್ಪ ಗೊರವರ (20) ಕೊಲೆ ಮಾಡಿದ್ದಾನೆ. ನಾಗರಾಜ ದಿನನಿತ್ಯ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡ್ತಿದ್ದ. ಹೆತ್ತವರಿಗೆ ನೀಡ್ತಿದ್ದ ಅಣ್ಣನ ಕಿರಿಕಿರಿಯಿಂದ ಬೇಸತ್ತು ಕೊಡಲಿಯಿಂದ ಕೊಚ್ಚಿ ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

(ನ್ಯೂಸ್ ಕಡಬ) newskadaba.com ಮೈಸೂರು, ಅ.14: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಅ. 17ರಿಂದ ಮೈಸೂರಿನಲ್ಲಿ ದಸರಾ ಉತ್ಸವದ ಕಳೆ ತುಂಬಲಿದೆ. ಈಗಾಗಲೇ ಅಂಬಾರಿ ಹೊರುವ ಗಜಪಡೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.     ದಸರಾ ಉತ್ಸವದಲ್ಲಿ ಚಾಮುಂಡಿ ಬೆಟ್ಟದಲ್ಲೂ ಸಾಕಷ್ಟು ಸಾಂಪ್ರದಾಯಿಕ ಪೂಜೆಗಳು ನಡೆಯುವುದರಿಂದ ಇಂದು ಮಧ್ಯರಾತ್ರಿಯಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅ. 14ರ ಮಧ್ಯರಾತ್ರಿಯಿಂದ ಅ.18ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ

ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ Read More »

ಕರ್ನಾಟಕ

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 14: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ಎಡ ಪಾಶ್ರ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ.     ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿತ್ತು. ಆದರೆ ಇದೀಗಾ ಭಾರಿ ಮಳೆಗೆ ಇಂಟರ್ ಲಾಕ್ ಕಿತ್ತುಹೋಗಿದೆ.ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ಯಾವುದೇ ಹಾನಿಯಾಗಿಲ್ಲ, ತಜ್ಞನಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ Read More »

ಕರಾವಳಿ, ಕರ್ನಾಟಕ

ಸುರತ್ಕಲ್: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಬಾಲಕಿ.!

(ನ್ಯೂಸ್ ಕಡಬ) newskadaba.com ಸುರತ್ಕಲ್ ಅ. 14: ಬಾಲಕಿಯೊಬ್ಬಲಿಗೆ ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬುದ್ದಿ ಮಾತು ಹೇಳಿದಕ್ಕೆ ಆಕ್ರೋಶಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್ ಬಳಿಯ ಕುಳಾಯಿಯ ಗೋಕುಲದಲ್ಲಿ ನಡೆದಿದೆ.   ಸುಜೇತಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಇದರಿಂದ ಆಕೆಯ ತಾಯಿ ಬಾಲಕಿಗೆ ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ಮನನೊಂದ ಸುಜೇತಾ ಮನೆಯ ಕೋಣೆಯಲ್ಲಿ ಫ್ಯಾನಿಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.  

ಸುರತ್ಕಲ್: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಬಾಲಕಿ.! Read More »

ಕರಾವಳಿ, ಕರ್ನಾಟಕ

ರಾಜ್ಯ ಮಟ್ಟದ ಕೃತಿ ಪರಿಚಯ ಸ್ಪರ್ಧೆ -2020 ➤ ಕಡಬದ ಸಮ್ಯಕ್ತ್ ಜೈನ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ. 14. ಕೋವಿಡ್ 19 ನಿಂದಾಗಿ ಸಂಭವಿಸಿದ ಕೆಡುಕಿನ ಪ್ರಮಾಣಕ್ಕಿಂತ ಒಳಿತುಗಳೇ ಹೆಚ್ಚು ಎಂದರೆ ಈ ಸಂದರ್ಭದಲ್ಲಿ ತಪ್ಪಾಗಲಿಕ್ಕಿಲ್ಲ. ಹೌದು, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಅಂತರ್ ರಾಜ್ಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ಸಮ್ಯಕ್ತ್. ಜೈನ್ ಇದಕ್ಕೆ ಪ್ರತ್ಯಕ್ಷ ಸಾಕ್ಷಿ . ಇದುವರೆಗೆ ಮೂರು ಕವನಸಂಕಲನವನ್ನು ಬರೆದು, ಪ್ರಕಟಗೊಳಿಸಿ ಸಾಹಿತ್ಯಿಕ ಚಟುವಟಿಕೆಯಲ್ಲಿ ತಲ್ಲೀನರಾಗಿರುವ ಸಮ್ಯಕ್ತ್ .ಜೈನ್ ರವರಿಗೆ ಇದೀಗ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇತ್ತೀಚೆಗೆ

ರಾಜ್ಯ ಮಟ್ಟದ ಕೃತಿ ಪರಿಚಯ ಸ್ಪರ್ಧೆ -2020 ➤ ಕಡಬದ ಸಮ್ಯಕ್ತ್ ಜೈನ್ ಪ್ರಥಮ Read More »

ಕರಾವಳಿ, ಕರ್ನಾಟಕ

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 23 ಮಂದಿಗೆ ಕೊರೋನಾ ದೃಢ.!

(ನ್ಯೂಸ್ ಕಡಬ) newskadaba.com ಕಡಬ ಅ. 13: ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 23 ಮಂದಿಗೆ ಕೊರೋನಾ ದೃಢಗೊಂಡಿದೆ.   ನೆಹರೂನಗರದ 54 ವರ್ಷದ ವ್ಯಕ್ತಿ, ದರ್ಬೆ 30 ವರ್ಷದ ವ್ಯಕ್ತಿ, ಸಾಮೆತ್ತಡ್ಕದ ನಿವಾಸಿ 49 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 52 ವರ್ಷದ ವ್ಯಕ್ತಿ, ಪಡುವನ್ನೂರು 55 ವರ್ಷದ ವ್ಯಕ್ತಿ, ಉಪ್ಪಿನಂಗಡಿ 28 ವರ್ಷದ ವ್ಯಕ್ತಿ, 26 ವರ್ಷದ ವ್ಯಕ್ತಿ, ಸರ್ವೆ 43 ವರ್ಷದ ಮಹಿಳೆ, ಬಡಗನ್ನೂರು 70 ವರ್ಷದ

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 23 ಮಂದಿಗೆ ಕೊರೋನಾ ದೃಢ.! Read More »

ಕರಾವಳಿ, ಕರ್ನಾಟಕ

ದಕ್ಷಿಣಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 13: ಸಂಕಷ್ಟ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.   ಜೊತೆಗೆ ಪತ್ನಿ ಹಾಗೂ ಮಗುವಿಗೂ ಪರೀಕ್ಷೆ ನಡೆಸಿದ ಸಂದರ್ಭ ಅವರ ವರದಿಯಲ್ಲೂ ಸೋಂಕು ದೃಢಪಟ್ಟಿದೆ ಹಾಗಾಗಿ ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.    

ದಕ್ಷಿಣಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ದೃಢ Read More »

ಕರಾವಳಿ, ಕರ್ನಾಟಕ
Scroll to Top