ಕರ್ನಾಟಕ

ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಅ. 26. ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಸಂಪಾಜೆ ವಲಯ ಅಧ್ಯಕ್ಷ ರಾದ ಸೋಮಶೇಖರ ಕೈೂಂಗಾಜೆ ರವರ ಅಧ್ಯಕ್ಷತೆಯಲ್ಲಿ ಸಂಪಾಜೆ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಸಮನ್ವಯ ಸಭಾಭವನದಲ್ಲಆದಿತ್ಯವಾರದಂದು ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಬಗ್ಗೆ ಚರ್ಚಿಸಿ ಐದು ವಾರ್ಡ್ ಗಳಿಗೆ ಸಮಿತಿ ನೇಮಕ ಮಾಡಿ ಸಮಿತಿಯು ಪ್ರತಿ ವಾರ್ಡ್ ನಲ್ಲಿ ಅಯಾ ವಾರ್ಡ್ ಮತದಾರರ ಅಭಿಪ್ರಾಯ ಪಡೆದು ವಲಯ ಸಮಿತಿಗೆ ಸಲ್ಲಿಸುವುದು. ಅಭ್ಯರ್ಥಿಯನ್ನು […]

ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸಭೆ Read More »

ಕರಾವಳಿ, ಕರ್ನಾಟಕ

ವಿಜಯದಶಮಿಗೆ ಶುಭ ಕೋರಿದ ಸಿಎಂ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 26: ಕೊರೋನಾ ಸೋಂಕಿನ ಭಯದ ನಡುವೆಯೇ ರಾಜ್ಯಾದ್ಯಂತ ದಸರಾ ಹಬ್ಬ ಆಚರಿಸಲಾಗುತ್ತಿದೆ. ವಿಜಯ ದಶಮಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶುಭಾಶಯ ಕೋರಿದ್ದಾರೆ. “ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭ ಕಾಮನೆಗಳು, ಅಧರ್ಮದ ವಿರುದ್ಧ ಧರ್ಮದ ಸಂಕೇತವೇ ವಿಜಯದಶಮಿ, ಈ ಕೋವಿಡ್ ಮಹಾಮಾರಿ ವಿರುದ್ಧ ನಮಗೆ ನಾಡದೇವತೆ ಚಾಮುಂಡೇಶ್ವರಿ ಗೆಲುವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ” ಎಂದು ಟ್ವೀಟ್ ಮಾಡಿದ್ದಾರೆ.  

ವಿಜಯದಶಮಿಗೆ ಶುಭ ಕೋರಿದ ಸಿಎಂ ಯಡಿಯೂರಪ್ಪ Read More »

ಕರಾವಳಿ, ಕರ್ನಾಟಕ

ಮೈಸೂರು ಅರಮನೆಯಲ್ಲಿ ವಿಜಯದಶಮಿ ಆಚರಣೆ ಆರಂಭ

(ನ್ಯೂಸ್ ಕಡಬ) newskadaba.com ಮೈಸೂರು ಅ. 26: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸರಳ ವಿಜಯದಶಮಿ ಆಚರಣೆಗಳು ಆರಂಭಗೊಂಡಿದ್ದು, ಇಂದು ರಾಜವಂಶಸ್ಥರಿಂದ ಉತ್ತರ ಪೂಜೆ ನೆರವೇರಲಿದೆ. ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳು ಆನೆ ಬಾಗಿಲಿಗೆ ಆಗಮಿಸಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ವಿಜಯಯಾತ್ರೆ ಹೊರಡಲಿದ್ದಾರೆ. ಬೆಳಗ್ಗೆ 9.45ಕ್ಕೆ ಖಾಸ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದ್ದು, ನಂತರ ಅವುಗಳನ್ನು ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನಿಸಲಾಗುವುದು. ಭುವನೇಶ್ವರಿ ದೇವಾಲಯದಲ್ಲಿ ಯದುವೀರ ಅವರು ಬನ್ನಿಪೂಜೆ ನೆರವೇರಿಸಲಿದ್ದಾರೆ.

ಮೈಸೂರು ಅರಮನೆಯಲ್ಲಿ ವಿಜಯದಶಮಿ ಆಚರಣೆ ಆರಂಭ Read More »

ಕರ್ನಾಟಕ

ಕಡಬ: ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕ ತಂಗಚ್ಚನ್ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಅ. 25. ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕರಾದ ತಂಗಚ್ಚನ್ ಸರ್ ಅವರು ಇಂದು ವಿಧಿವಶರಾಗಿದ್ದಾರೆ. ಇವರ ಅಂತ್ಯಸಂಸ್ಕಾರವು ನಾಳೆ (ಅ. 26) ಸಂಜೆ 4 ಗಂಟೆಗೆ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.  

ಕಡಬ: ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕ ತಂಗಚ್ಚನ್ ವಿಧಿವಶ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಹರೀಶ ರಾಮಪ್ಪ ಅಮೀನ್ (55) ಎಂದು ಗುರುತಿಸಲಾಗಿದೆ. ಪಡುಬಿದ್ರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರ ಪತ್ನಿ, ಮಗ ಮುಂಬೈಯಲ್ಲಿ ನೆಲೆಸಿದ್ದು, ಆಗಾಗ ಬಂದುಹೋಗುತ್ತಿದ್ದರು ಎನ್ನಲಾಗಿದೆ. ಸದ್ಯ ಇವರು ಮುಲ್ಕಿ ಕೊಳಚಿಕಂಬಳ ಎಂಬಲ್ಲಿ ಸಹೋದರಿಯ ಜೊತೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಅವರ ಪತ್ನಿ ಹಾಗೂ ಮಗ ಮುಂಬೈನಿಂದ ಬಂದಿದ್ದು,

ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು ➤ ಆಸ್ಪತ್ರೆಗೆ ದಾಖಲಿಸಿದ ಯುವಕ ಎಸ್ಕೇಪ್

(ನ್ಯೂಸ್ ಕಡಬ) newskadaba.com ಉಡುಪಿ ಅ. 25: ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವತಿಯನ್ನು ಉಡುಪಿ ತಾಲೂಕು ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಪ್ರಶಾಂತ್ ಕುಂದರ್ ಎಂಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಆಟೋದಲ್ಲಿ ಕರೆದುಕೊಂಡು ಬಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ವೈದ್ಯರು ಯುವತಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಕೂಡಲೇ ಯುವಕ, ಯುವತಿಯ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಉಡುಪಿ

ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು ➤ ಆಸ್ಪತ್ರೆಗೆ ದಾಖಲಿಸಿದ ಯುವಕ ಎಸ್ಕೇಪ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ➤ ನಿರೀಕ್ಷಣಾ ಜಾಮೀನು ಪಡೆದ ಕಾಂಗ್ರೆಸ್ ಮುಖಂಡ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ. 25. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ, ಸಂಜನಾ ಸೇರಿದಂತೆ ಅನೇಕರು ಜೈಲು ಸೇರಿದ್ದಾರೆ. ಇದಿಗ ನಟಿ ರಾಗಿಣಿ ಜೊತೆಗೆ ನಂಟು ಹೊಂದಿದ ಕಾರಣದಿಂದ ಬಂಧನದ ಭೀತಿಯಲ್ಲಿರುವ ಕಾಂಗ್ರೆಸ್ ಮುಖಂಡ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.   ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಚಿವರ ಆಪ್ತರಾಗಿದ್ದ ಗಿರೀಶ್ ಗದಿಗೆಪ್ಪ ಗೌಡ ಹೀಗೆ ನಿರೀಕ್ಷಣಾ ಜಾಮೀನು ಪಡೆವರಾಗಿದ್ದಾರೆ. ರಾಗಿಣಿ ಜೊತೆಗೆ ನಂಟು ಹೊಂದಿದ್ದರಿಂದ, ಬಂಧನದ ಭೀತಿಯಲ್ಲಿದ್ದರು. ಈ ಹಿನ್ನಲೆಯಲ್ಲಿ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ➤ ನಿರೀಕ್ಷಣಾ ಜಾಮೀನು ಪಡೆದ ಕಾಂಗ್ರೆಸ್ ಮುಖಂಡ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ ➤ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನ

(ನ್ಯೂಸ್ ಕಡಬ) newskadaba.com ಉಡುಪಿ ಅ. 25: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ನವಮಿಯಂದು ನಡೆದ ಮಹಾರಥೋತ್ಸವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.  ಪುಷ್ಪಾಲಂಕೃತ ಮರದ ರಥದ ಬದಲು ಚಿನ್ನದ ರಥವನ್ನು ಉತ್ಸವಕ್ಕೆ ಬಳಸಿದ್ದು ಇದಕ್ಕೆ ಕಾರಣ.ಕೊಲ್ಲೂರಲ್ಲಿ ನವಮಿಗೆ ಪ್ರತಿವರ್ಷ ಉತ್ಸವಮೂರ್ತಿಯನ್ನು ಮರದ ಪುಷ್ಪಾಲಂಕೃತ ರಥದಲ್ಲಿಟ್ಟು ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಈ ಬಾರಿ ಚಿನ್ನದ ರಥದಲ್ಲಿಟ್ಟು ಮೂಕಾಂಬಿಕಾ ದೇವಿಯ ರಥೋತ್ಸವ ಮಾಡಲಾಗಿದೆ. ಇದು ಕೆಲ ಅರ್ಚಕರಿಗೆ ಅಸಮಾಧಾನ ತಂದಿದೆ. ಅಲ್ಲದೆ ಕೆಲ ಭಕ್ತರೂ ಇದಕ್ಕೆ ದನಿಗೂಡಿಸಿದ್ದಾರೆ.ಹತ್ತು ವರ್ಷದ ಹಿಂದೆ

ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ ➤ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನ Read More »

ಕರಾವಳಿ, ಕರ್ನಾಟಕ

ಲಿವ್ ಇನ್- ರಿಲೇಷನ್ ಶಿಪ್ ನಲ್ಲಿದ್ದ ಹುಡುಗಿ ಸಾವು ➤ ಹುಡುಗ ನಾಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ, ಅ. 25. ಅನುಮಾನಾಸ್ಪದ ರೀತಿಯಲ್ಲಿ ಯುವತಿ ಮೃತಪಟ್ಟ ಘಟನೆ ಉಡುಪಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದು,ಯುವತಿಯ ಸಾವಿನ ಕುರಿತು ಆಕೆಯ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.   ಯುವತಿಯು 24 ವರ್ಷದ ತುವಕನೊಂದಿಗೆ ಆರರಿಂದ ಏಳು ತಿಂಗಳುಗಳವರೆಗೆ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧದಲ್ಲಿದ್ದರೆನ್ನಲಾಗಿದೆ. ಯುವಕನು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಈ ಮೊದಲೇ ಮದುವೆಯಾಗಿದ್ದು ಈ ವಿಷಯವನ್ನು ಯುವತಿಯಿಂದ ಮುಚ್ಚಿಟ್ಟಿದ್ದನು. ಇದನ್ನು ತಿಳಿದುಕೊಂಡ ಈಕೆ ಖಿನ್ನತೆಗೆ ಒಳಗಾಗಿದ್ದಳು.

ಲಿವ್ ಇನ್- ರಿಲೇಷನ್ ಶಿಪ್ ನಲ್ಲಿದ್ದ ಹುಡುಗಿ ಸಾವು ➤ ಹುಡುಗ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತರಕಾರಿ ವಾಹನದಲ್ಲಿ ಅಕ್ರಮ ಗೋಸಾಗಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಬಂಟ್ವಾಳದಿಂದ ಉಳ್ಳಾಲದಲ್ಲಿರುವ ಕಸಾಯಿಖಾನೆಗೆ 12 ಗೋವುಗಳನ್ನು ತರಕಾರಿ ವಾಹನದಲ್ಲಿ ಸಾಗಿಸುತ್ತಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.   ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದುದ್ದನ್ನು ಪಂಪವೆಲ್ ಬಳಿ ಬಜರಂಗದಳದ ಕಾರ್ಯಕರ್ತರು ತಡೆದು ಕಂಕನಾಡಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ತರಕಾರಿ ವಾಹನದಲ್ಲಿ ಅಕ್ರಮ ಗೋಸಾಗಾಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top