ಮುರುಡೇಶ್ವರದಲ್ಲಿ ದೋಣಿಗಳ ಸ್ಥಳಾಂತರಕ್ಕೆ ವಿರೋಧ ➤ ಅಭಿವೃದ್ಧಿಪಡಿಸಲು ಸಹಕರಿಸುವಂತೆ ಅಧಿಕಾರಿಗಳಿಂದ ಮನವಿ
(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಪ್ರವಾಸಿ ತಾಣ ಮುರುಡೇಶ್ವರ ಸಮುದ್ರ ತೀರವನ್ನು ಅಭಿವೃದ್ಧಿ ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಧಾರಕ್ಕೆ ಇಲ್ಲಿನ ಮೀನುಗಾರರ ವಿರೋಧ ಮುಂದುವರೆದಿದೆ. ಸಮುದ್ರ ಬೇಲೆಯ ಮೇಲೆ ನಿಲ್ಲಿಸಲಾಗಿರುವ ಮೀನುಗಾರಿಕಾ ದೋಣಿಗಳನ್ನು ಬದಿಗೆ ಸರಿಸಿ, ಅಂಗಡಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾಪಕ್ಕೆ ಮೀನುಗಾರರು ಒಪ್ಪುತ್ತಲೇ ಇಲ್ಲ.ವಿಶ್ವ ಪ್ರಸಿದ್ಧ ತಾಣವಾಗಿರುವ ಮುರುಡೇಶ್ವರವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಇಳಿದಿದೆ. ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣದೊಂದಿಗೆ ಸಮುದ್ರ ತೀರದಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಮುಂದಾಗಿದೆ ಮುರುಡೇಶ್ವರ […]










