ಕರ್ನಾಟಕ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸವಣೂರು ವಲಯದ ಸಭೆ

(ನ್ಯೂಸ್‌ ಕಡಬ) newskadaba.com,  ಮಾ.17 ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್(KSTA) ಸವಣೂರು ವಲಯದ ಸಾಮಾನ್ಯ ಸಭೆಯು ಸವಣೂರಿನಲ್ಲಿ ಸಮಿತಿಯ ಅಧ್ಯಕ್ಷರಾದ ಮೋಹನ್ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹೊಸ ಸದಸ್ಯರ ಸೇರ್ಪಡೆ, ರಿನೀವಲ್‌ ಹಾಗೂ ಕಾರ್ಮಿಕ ಆಯುಕ್ತರ ಮುಖಾಂತರ NPS ಪಿಂಚಣಿ ಯೋಜನೆ ಹಾಗೂ ಸ್ಮಾರ್ಟ್ ಕಾರ್ಡ್ ಮಾಡುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಗನ್ನಾಥ ಅಮೈ ಬೇಬಿ ಕುಮಾರಮಂಗಲ, ಸರಸ್ವತಿ ಶುಭಲಕ್ಷ್ಮಿ ಪ್ರಮೀಳಾ ಇಡ್ಯಾಡಿ,ಜಯಂತಿ, ಮೋಹಿನಿ,ಗೌತಮಿ ಸುನಿತಾ,ನೇತ್ರಾವತಿ, ಬೇಬಿ […]

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸವಣೂರು ವಲಯದ ಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಮಾ.17 ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

​ಗ್ರಾಮೀಣ ಭಾಗದ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್? 25 ದಿನದ ಮರು ಬುಕ್ಕಿಂಗ್ ನಿಯಮಕ್ಕೆ ಅಶ್ರಫ್ ಗುಂಡಿ ಮನವಿ.

(ನ್ಯೂಸ್‌ ಕಡಬ) newskadaba.com,  ಮಾ.16: ನಗರ ಪ್ರದೇಶದ ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ ಮರು ಬುಕ್ಕಿಂಗ್ ಅವಧಿಯನ್ನು 25 ದಿನಗಳು ನಿಗಧಿಪಡಿಸಿದಂತೆ ಗ್ರಾಮೀಣ ಪ್ರದೇಶದಲ್ಲಿಯು 45 ದಿನಗಳ ಬದಲು 25 ದಿನಗಳಿಗೆ ಸೀಮಿತಗೊಳಿಸಬೇಕೆಂದು ಸುಳ್ಯ ತಾಲೂಕು ಕೆ.ಡಿಪಿ ಸದಸ್ಯ ಅಶ್ರಫ್ ಗುಂಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಅಲ್ಲದೆ ಮುಂದೆ ಬರುವ ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ..

​ಗ್ರಾಮೀಣ ಭಾಗದ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್? 25 ದಿನದ ಮರು ಬುಕ್ಕಿಂಗ್ ನಿಯಮಕ್ಕೆ ಅಶ್ರಫ್ ಗುಂಡಿ ಮನವಿ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ಸವಾರನಿಗೆ ದಂಡ, 15 ದಿನ ಜನಜಾಗೃತಿ ಸೇವೆ

(ನ್ಯೂಸ್‌ ಕಡಬ) newskadaba.com,  ಮಾ.16 ಮಂಗಳೂರು: ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದ ಸವಾರನೊಬ್ಬನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ. ದಿನಾಂಕ 12/03/2026 ರಂದು ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬುವವರು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಸತತವಾಗಿ ಉಲ್ಲಂಘಿಸಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಐಎಂವಿ ಕಾಯ್ದೆಯಡಿ (IMV Act) ವಿವಿಧ ಕಲಂಗಳಡಿ (119

ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ಸವಾರನಿಗೆ ದಂಡ, 15 ದಿನ ಜನಜಾಗೃತಿ ಸೇವೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಮಾ.16: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 45 ರೂ. ಇಳಿಕೆಯಾಗಿ 14,590 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 49 ರೂ. ಇಳಿಕೆಯಾಗಿ 15,917 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,16,720 ರೂ. ಆದರೆ, 10 ಗ್ರಾಂಗೆ ನೀವು 1,45,900 ರೂ. ಹಾಗೂ 100 ಗ್ರಾಂ

ಇಂದು ಚಿನ್ನದ ದರದಲ್ಲಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು

 (ನ್ಯೂಸ್‌ ಕಡಬ) newskadaba.com,  ಮಾ.16: ಎಸ್ಸೆಸ್ಸೆಲ್ಸಿ ಬಳಿಕ ದೂರದ ಪ್ರದೇಶಗಳಲ್ಲಿರುವ ಕಾಲೇಜುಗಳಿಗೆ ತೆರಳಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರಿಗೆ ಸರಕಾರ ಹೊಸ ಯೋಜನೆ ಮೂಲಕ ಸಿಹಿ ಸುದ್ದಿ ನೀಡಿದೆ. ರಾಜ್ಯದ 50 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಪರಿವರ್ತಿಸಲು ಅನುಮೋದನೆ ನೀಡಿದೆ. ಈ ಬಾರಿ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣಗೊಳಿಸಿರುವ ಸರಕಾರ ಈಗ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ನೀಡಿದೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಆಯ್ದ 50 ಪ್ರೌಢಶಾಲೆಗಳಲ್ಲಿ ಮೊದಲ ಹಂತದಲ್ಲಿ ಒಂದೆರಡು

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ

 (ನ್ಯೂಸ್‌ ಕಡಬ) newskadaba.com,  ಮಾ.16: ದೇಶದಲ್ಲೇ ಪ್ರಥಮವಾಗಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಘಟಕವನ್ನು ಆರಂಭಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದ್ದು, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಉಪಯೋಗಿಸಿ ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯ ಮೂಲಕ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಪರ್ಯಾಯ ಇಂಧನ ಉತ್ಪಾದನೆಗೂ

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಡಿದ ಮತ್ತಿನಲ್ಲಿ ಹೆಂಡತಿ ಕತ್ತು ಸೀಳಿ ಕೊಂದ ಪಾಪಿ ಪತಿ

  ಮದ್ಯದ ಮತ್ತಿನಲ್ಲಿ ಪತ್ನಿ ಹತ್ಯೆ: ಆರೋಪಿ ಪತಿ ಪರಾರಿ (ನ್ಯೂಸ್‌ ಕಡಬ) newskadaba.com,  ಮಾ.16: Bengaluru: ಮದ್ಯದ ಮತ್ತಿನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ MICO Layout ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಳನ್ನು ಗೌರಮ್ಮ (45) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಬಳಿಕ ಆರೋಪಿ ಪತಿ ನಾಗರಾಜ್ ಪರಾರಿಯಾಗಿದ್ದಾನೆ. ಮೂಲತಃ Jagalur Taluk ನಿವಾಸಿಗಳಾದ ಈ ದಂಪತಿಗಳು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. ನಾಗರಾಜ್ ಖಾಸಗಿ

ಕುಡಿದ ಮತ್ತಿನಲ್ಲಿ ಹೆಂಡತಿ ಕತ್ತು ಸೀಳಿ ಕೊಂದ ಪಾಪಿ ಪತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ–ಕಡಬ ಭಾಗದಲ್ಲಿ ಮಳೆಗಾಳಿ ತೀವ್ರತೆ: ಬಾಳುಗೋಡು, ಐನೆಕಿದು ಪ್ರದೇಶದಲ್ಲಿ ಭಾರೀ ಗಾಳಿ

(ನ್ಯೂಸ್‌ ಕಡಬ) newskadaba.com,  ಮಾ.16: ನಿನ್ನೆ((ಮಾ.15) ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಸುಬ್ರಹ್ಮಣ್ಯ, ಐನೆಕಿದು ಸೇರಿದಂತೆ ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಭಾಗಗಳಲ್ಲಿ ಸಂಜೆಯ ವೇಳೆಗೆ ಮಳೆಯಾಗಿದ್ದು, ಬಾಳುಗೋಡು ಹಾಗೂ ಐನೆಕಿದು ಪರಿಸರದಲ್ಲಿ ಮಳೆಯ ಜೊತೆಗೆ ಬಾರೀ ಪ್ರಮಾಣದಲ್ಲಿ ಗಾಳಿ ಕೂಡ ಬೀಸಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ತಿಳಿದುಬಂದಿದ್ದು, ಹಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ

ಸುಳ್ಯ–ಕಡಬ ಭಾಗದಲ್ಲಿ ಮಳೆಗಾಳಿ ತೀವ್ರತೆ: ಬಾಳುಗೋಡು, ಐನೆಕಿದು ಪ್ರದೇಶದಲ್ಲಿ ಭಾರೀ ಗಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಮಾ.16:  ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ….

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top