ಕರ್ನಾಟಕ

ಮರ್ಕಂಜ: ಮದ್ಯದ ಅಮಲಿನಲ್ಲಿ ಮರವೇರಿ ಕುಳಿತು ಕುತೂಹಲ ಮೂಡಿಸಿದ ಭೂಪ ➤ ಅಗ್ನಿಶಾಮಕ‌ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 05. ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವರು ಮರವೇರಿತ ಕುಳಿತ ಘಟನೆ ಮರ್ಕಂಜದಲ್ಲಿ ವರದಿಯಾಗಿದೆ‌. ಕೇರಳ ಮೂಲದ ಅಪರಿಚಿತ ವ್ಯಕ್ತಿಯೋರ್ವ ಮರ್ಕಂಜದ ಅಂಬೆಕಲ್ಲು ಎಂಬಲ್ಲಿರುವ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಮರವೇರಿ ಕುಳಿತು ಬೊಬ್ಬೆ ಹೊಡೆಯತೊಡಗಿದ್ದು, ಸ್ಥಳೀಯರು ಬಂದು ವಿಚಾರಿಸಿದರೂ ಆತ ಕೆಳಗಿಳಿಯದೇ ಕೋತಿಯ ಹಾಗೆ ವರ್ತಿಸುತ್ತಿದ್ದನು ಎನ್ನಲಾಗಿದೆ. ಮಧ್ಯಾಹ್ನ ಮರವೇರಿ ಕುಳಿತವನನ್ನು ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದಿಂದ ಇಳಿದು ಬಂದಿದ್ದಾನೆ.

ಮರ್ಕಂಜ: ಮದ್ಯದ ಅಮಲಿನಲ್ಲಿ ಮರವೇರಿ ಕುಳಿತು ಕುತೂಹಲ ಮೂಡಿಸಿದ ಭೂಪ ➤ ಅಗ್ನಿಶಾಮಕ‌ ದಳದಿಂದ ರಕ್ಷಣೆ Read More »

ಕರ್ನಾಟಕ

ಗುರುವಾಯನೆಕೆರೆ: ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಗುರುವಾಯನಕೆರೆ, ಜ. 05. ಇಂದು ಬೆಳಗ್ಗೆ ಗುರುವಾಯನಕೆರೆಯಲ್ಲಿ ಅಪರಿಚಿತ ಮೃತದೇಹವೊಂದು ತೇಲುತ್ತಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮೃತ ಯುವಕ ಧರಿಸಿದ್ದ ಬಟ್ಟೆಯಲ್ಲಿ ಚೀಟಿಯೊಂದು ದೊರೆತಿದ್ದು, ಉಡುಪಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಗುರುವಾಯನೆಕೆರೆ: ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಶಾಲೆಯಲ್ಲಿ ಬೆಳೆದ ಸಸಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05.  ದಕ್ಷಿಣ ಕನ್ನಡ ಉನ್ನತ ಪ್ರಾಥಮಿಕ ಶಾಲೆಯ ನಾರ್ಲಾ ಪಡೀಲ್‌ನ ಶಾಲೆಯಲ್ಲಿ ಮಕ್ಕಳು ಹಲವಾರು ವರ್ಷಗಳಿಂದ ಮಕ್ಕಳು ನೆಟ್ಟು ಬೆಳೆಸಿದ ಹಣ್ಣುಗಳು ಮತ್ತು ತೆಂಗಿನಕಾಯಿಯ ಸಸಿಗಳನ್ನು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಗೈದ ಘಟನೆ ನಡೆದಿದೆ. ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಇಲ್ಲಿನ ದುರ್ಗಾ ಸೇವಾ ಸಮಿತಿ ಸದಸ್ಯರು ಈ ಹಿಂದೆ ಸಸಿಗಳು ಇರುವ ಪ್ರದೇಶಕ್ಕೆ ಕಾಂಪೌಂಡ್ ಹಾಕುವಂತೆ ಮನವಿ ಮಾಡಿದ್ದು, ಸೂಕ್ತ ವ್ಯವಸ್ಥೆ ಮಾಡುವುದಾಗಿ

ಮಂಗಳೂರು: ಶಾಲೆಯಲ್ಲಿ ಬೆಳೆದ ಸಸಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜ.7ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಾದ ಹಿನ್ನೆಲೆ ರಾಜ್ಯದ ವಿವಿಧೆಡೆ ತುಂತುರು ಮಳೆಯಾಗುತ್ತಿದ್ದು , ಜ.9ರ ವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜ. 7ಕ್ಕೆ 64.5 ಮಿ.ಮೀನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ಘೋಷಿಸಲಾಗಿದೆ. ಸೋಮವಾರದ ವರದಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ

ಜ.7ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಉಡುಪಿ: ವೃತ್ತನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್-ಬುಕ್ ಖಾತೆ ➤ ಹಣ ಕಳುಹಿಸುವಂತೆ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಉಡುಪಿ, ಜ. 05. ಅಪರಿಚಿತ ವ್ಯಕ್ತಿಯೋರ್ವ ಉಡುಪಿ ವೃತ್ತ ನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್‌ ಬುಕ್ ಖಾತೆಯನ್ನು ರಚಿಸಿ ಅವರ ಸ್ನೇಹಿತರಲ್ಲಿ ಹಣ ಕಳುಹಿಸುವಂತೆ ಸಂದೇಶ ರವಾನೆ ಮಾಡಿದ ಘಟನೆ ನಡೆದಿದೆ.   ಈ ಕುರಿತು ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಮಂಜುನಾಥ್ ಅವರು ಉಡುಪಿಯ ಸಿಇಎನ್, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ: ವೃತ್ತನಿರೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್-ಬುಕ್ ಖಾತೆ ➤ ಹಣ ಕಳುಹಿಸುವಂತೆ ಸಂದೇಶ ರವಾನೆ Read More »

ಕರಾವಳಿ, ಕರ್ನಾಟಕ

ರಂಗಸ್ಥಳದಲ್ಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ➤ ಮಂದಾರ್ತಿ ಮೇಳದ ಸಾಧು ಕೊಠಾರಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಜ.05. ಯಕ್ಷಗಾನ ಕಲಾವಿದರೋರ್ವರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ಬ್ರಹ್ಮಾವರದಲ್ಲಿ ಮಂಗಳವಾರದಂದು ನಡೆದಿದೆ. ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಯವರು ಮಂಗಳವಾರ ಬೆಳಗ್ಗಿನ ಜಾವ ಬ್ರಹ್ಮಾವರದ ಶಿರಿಯಾರ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎಂಬಲ್ಲಿ ‘ಮಹಾಕಲಿ‌ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು.

ರಂಗಸ್ಥಳದಲ್ಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ➤ ಮಂದಾರ್ತಿ ಮೇಳದ ಸಾಧು ಕೊಠಾರಿ ಇನ್ನಿಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಕೆಜಿಎಫ್ 2 ಪತ್ರಿಕೆ ➤ ಪ್ರೇಕ್ಷಕರ ಮನಗೆದ್ದ ಆ ಪತ್ರಿಕೆಯಲ್ಲಿ ಏನಿದೆ ಎಂಬ ಕುತೂಹಲವೇ..⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.05. ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಯಶಸ್ಸಿನ ಮುಂದುವರಿದ ಭಾಗವಾಗಿ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗಿದ್ದು, ಟೀಸರ್ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮನಗೆಲ್ಲಲು ಚಿತ್ರದ ಕೆಲವೊಂದು ಅಂಶಗಳನ್ನು ಚಿತ್ರತಂಡವು ಹೊರಬಿಡುತ್ತಿದೆ‌. ಸೋಮವಾರದಂದು ಚಿತ್ರದ ನಾಯಕನ ಹೊಸ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡವು ಸಂಜೆ ವೇಳೆಗೆ ಕೆಜಿಎಫ್ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಚಿತ್ರದ ಪ್ರಮೋಷನ್ ಗೆ ವಿಭಿನ್ನವಾಗಿ ನ್ಯೂಸ್ ಪೇಪರ್ ಬಿಡುಗಡೆಗೊಳಿಸಿದ್ದು, ಕೆಜಿಎಫ್ ಟೈಮ್ಸ್ ಹೆಸರಿನಲ್ಲಿ ಹಳೆಕಾಲದ ಪತ್ರಿಕೆಯನ್ನು ಹೋಲುವ

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಕೆಜಿಎಫ್ 2 ಪತ್ರಿಕೆ ➤ ಪ್ರೇಕ್ಷಕರ ಮನಗೆದ್ದ ಆ ಪತ್ರಿಕೆಯಲ್ಲಿ ಏನಿದೆ ಎಂಬ ಕುತೂಹಲವೇ..⁉️ Read More »

ಕರ್ನಾಟಕ

ಇಂದಿನ (ಜ.05) ರಾಶಿ ಭವಿಷ್ಯ ✍? ಪಂಡಿತ್ ದಾಮೋದರ್ ಭಟ್

ಶುಭೋದಯ….ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:ನಿಮ್ಮ ಸಮಸ್ಯೆಗಳಿಗೆ ಏನೇ ಇದ್ದರೂ ಗುರೂಜಿಯವರನ್ನು ಕರೆಮಾಡಿ 9008993001 ಶ್ರೀ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ ಮೇಷರಾಶಿ ಮಾನಸಿಕವಾಗಿ ತೊಂದರೆ ಅನುಭವಿಸುತ್ತೀರಿ. ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತವೆ.

ಇಂದಿನ (ಜ.05) ರಾಶಿ ಭವಿಷ್ಯ ✍? ಪಂಡಿತ್ ದಾಮೋದರ್ ಭಟ್ Read More »

ಕರ್ನಾಟಕ, ಭವಿಷ್ಯ

ಆತೂರು: ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಎಸ್‌.ಡಿಪಿಐ ಆತೂರು ವಲಯದ ವತಿಯಿಂದ ಮೆಸ್ಕಾಂ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಜ. 04. ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಹಲವಾರು ಹಳ್ಳಿ ಪ್ರದೇಶಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಉದ್ಭವಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯದ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್‌.ಡಿಪಿಐ ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಮಾತನಾಡಿ ಲೋ ವೋಲ್ಟೇಜ್ ಸಮಸ್ಯೆ ಇವತ್ತು ನಿನ್ನೆಯದಲ್ಲ, ಹಲವಾರು ವರ್ಷಗಳಿಂದ ಮೆಸ್ಕಾಂ ಗೆ ಎಸ್‌.ಡಿಪಿಐ ಸೇರಿದಂತೆ ಹಲವಾರು ನಾಗರಿಕರು

ಆತೂರು: ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಎಸ್‌.ಡಿಪಿಐ ಆತೂರು ವಲಯದ ವತಿಯಿಂದ ಮೆಸ್ಕಾಂ ಗೆ ಮನವಿ Read More »

ಕರಾವಳಿ, ಕರ್ನಾಟಕ

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 04. ಉದ್ಯಪಿಯೋರ್ವರ ಮೃತದೇಹವು ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಉಮಾಶಂಕರ್ (45) ಎಂದು ಗುರುತಿಸಲಾಗಿದೆ. ಇವರ ಜೊತೆ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಮೃತದೇಹದ ಬಳಿಯಲ್ಲಿ ಇನ್ಸುಲಿನ್ ಹಾಗೂ ಔಷಧಿಗಳ ಬಾಟಲ್ ಹಾಗೂ ಡೆತ್ ನೋಟ್ ಲಭ್ಯವಾಗಿದೆ. ಸಾಲ ಹಿಂತಿರುಗಿಸುವಂತೆ ಸಾಲಗಾರರು ಪೀಡಿಸುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ. ಕಾಣೆಯಾಗಿರುವ ಇವರ ಪತ್ನಿಯ ಹುಡುಕಾಟ ಮುಂದುವರೆದಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top